ಬ್ಯಾಂಕ್ ಖಾತೆದಾರರು ತಮ್ಮ ಬ್ಯಾಂಕ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿರುವುದು ಅತೀ ಮುಖ್ಯವಾಗಿದೆ. ಅಂದರೆ ನಮ್ಮ ಉಳಿಯಾ ಖಾತೆಯಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ (ಎಎಂಬಿ) ಹೊಂದಿರುವುದು ಮುಖ್ಯವಾಗಿದೆ. ಈ ಕನಿಷ್ಠ ಮೊತ್ತ ಇಲ್ಲದಿದ್ದರೆ ನಮ್ಮ ಖಾತೆಯಿಂದ ಬ್ಯಾಂಕ್ ಶುಲ್ಕವನ್ನು ಕಡಿತಗೊಳಿಸುತ್ತದೆ.
ಬಹುತೇಕ ಎಲ್ಲ ಬ್ಯಾಂಕ್‌ಗಳು ಜಿರೋ ಬ್ಯಾಲೆನ್ಸ್ ಅಕೌಂಟ್ ಅನ್ನು ಹೊಂದಿದೆ. ಆದರೆ ಇದು ಎಲ್ಲ ಗ್ರಾಹಕರಿಗೆ ಲಭ್ಯವಿರುವುದಿಲ್ಲ. ಕೆಲವು ಬ್ಯಾಂಕ್ ಗ್ರಾಹಕರಿಗೆ ಮಾತ್ರ ಈ ವಿಶೇಷ ಅಕೌಂಟ್ ಮಾಡಲು ಸಾಧ್ಯವಾಗುತ್ತದೆ. ಎಲ್ಲ ಬ್ಯಾಂಕ್‌ಗಳು ಬೇರೆ ಬೇರೆ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೊಂದಿದೆ.
ಬ್ಯಾಂಕ್ ನಮ್ಮ ಉಳಿತಾಯ ಖಾತೆಯ ಮೇಲೆ ದಂಡ ವಿಧಿಸುವುದನ್ನು ತಪ್ಪಿಸಬೇಕಾದರೆ, ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಹೊಂದಿರುವುದು ಮುಖ್ಯವಾಗಿದೆ. ಈ ಕನಿಷ್ಠ ಬ್ಯಾಲೆನ್ಸ್ ಹಾಗೂ ದಂಡ ಬೇರೆ ಬೇರೆಯೇ ಆಗಿರುತ್ತದೆ. ನಗರ, ಮೆಟ್ರೋ, ಗ್ರಾಮೀಣ ನಗರಗಳ ಆಧಾರದಲ್ಲಿ ಈ ಕನಿಷ್ಠ ಬ್ಯಾಲೆನ್ಸ್ ನಿರ್ಧಾರವಾಗುತ್ತದೆ. ಟಾಪ್ ಬ್ಯಾಂಕ್‌ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ...
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಮಾರ್ಚ್ 2020ರಲ್ಲಿ ಎಸ್‌ಬಿಐ ಬೇಸಿಕ್ ಸೇವಿಂಗ್ಸ್ ಅಕೌಂಟ್ ಕನಿಷ್ಠ ಬ್ಯಾಲೆನ್ಸ್ ಅನ್ನು ರದ್ದು ಮಾಡಿದೆ. ಅದಕ್ಕೂ ಮುನ್ನ ಎಸ್‌ಬಿಐನಲ್ಲಿ ಮಾಸಿಕ ಕನಿಷ್ಠ ಮೊತ್ತ ಮೆಟ್ರೋ ನಗರ, ಸೆಮಿ ಅರ್ಬನ್ ಏರಿಕಾ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕ್ರಮವಾಗಿ 3,000 ರೂಪಾಯಿ, 2,000 ರೂಪಾಯಿ ಮತ್ತು 1,000 ರೂಪಾಯಿ ಆಗಿದೆ. ಕನಿಷ್ಠ ಮೊತ್ತಕ್ಕಿಂತ ಕಡಿಮೆ ಮೊತ್ತ ಇದ್ದಾಗ 5ರಿಂದ 15 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವವರು ಅರ್ಬನ್ ಏರಿಯಾ ಮತ್ತು ಮೆಟ್ರೋ ನಗರಗಳಲ್ಲಿ 10,000 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ಆಗಿದೆ. ಸೆಮಿ ಅರ್ಬನ್ ಪ್ರದೇಶದಲ್ಲಿ ಮಾಸಿಕ ಕನಿಷ್ಠ ಬ್ಯಾಲೆನ್ಸ್ 5 ಸಾವಿರ ರೂಪಾಯಿ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರು 2,500 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕಾಗುತ್ತದೆ. ಕನಿಷ್ಠ ಮೊತ್ತ ಇಲ್ಲದಿದ್ದರೆ, ಬ್ಯಾಂಕ್ ದಂಡವನ್ನು ವಿಧಿಸುತ್ತದೆ.
ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್‌ನಲ್ಲಿ ಮೆಟ್ರೋ ಮತ್ತು ಅರ್ಬನ್ ಏರಿಯಾದಲ್ಲಿ ಮಾಸಿಕ ಕನಿಷ್ಠ ಬ್ಯಾಲೆನ್ಸ್ 10 ಸಾವಿರ ರೂಪಾಯಿ ಆಗಿದೆ. ಸೆಮಿ ಅರ್ಬನ್ ಪ್ರದೇಶದಲ್ಲಿ ಮಾಸಿಕ ಕನಿಷ್ಠ ಬ್ಯಾಲೆನ್ಸ್ 5 ಸಾವಿರ ರೂಪಾಯಿ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಾಸಿಕ ಕನಿಷ್ಠ ಬ್ಯಾಲೆನ್ಸ್ 2 ಸಾವಿರ ರೂಪಾಯಿ ಆಗಿದೆ. ಕನಿಷ್ಠ ಮೊತ್ತ ಇಲ್ಲದಿದ್ದರೆ ಐಸಿಐಸಿಐ ಬ್ಯಾಂಕ್‌ನಲ್ಲಿ ಶೇಕಡ 6ರಷ್ಟು ಅಥವಾ 500 ರೂಪಾಯಿಯಷ್ಟು (ಯಾವುದು ಕಡಿಮೆ ಅದರ ಪರಿಗಣನೆ) ದಂಡವನ್ನು ವಿಧಿಸುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಗರ ಮತ್ತು ಉಪನಗರಗಳಲ್ಲಿ ಉಳಿತಾಯ ಯೋಜನೆಯಲ್ಲಿ ತ್ರೈಮಾಸಿಕವಾಗಿ 20 ಸಾವಿರ ರೂಪಾಯಿ ಕನಿಷ್ಠ ಬ್ಯಾಲೆನ್ಸ್ ಇರುವುದು ಮುಖ್ಯವಾಗಿದೆ. ಸೆಮಿ ಅರ್ಬನ್ ಪ್ರದೇಶದಲ್ಲಿ ತ್ರೈಮಾಸಿಕವಾಗಿ ಕನಿಷ್ಠ ಬ್ಯಾಲೆನ್ಸ್ 1 ಸಾವಿರ ರೂಪಾಯಿ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ಆಗಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್
ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡಾ ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿದೆ. ಮೆಟ್ರೋ ನಗರಗಳಲ್ಲಿ ಕನಿಷ್ಠ ಬ್ಯಾಲೆನ್ಸ್ 10,000 ರೂಪಾಯಿ ಆಗಿದೆ. ಮೆಟ್ರೋಯೇತರ ಪ್ರದೇಶಗಳಲ್ಲಿ ಕನಿಷ್ಠ ಮೊತ್ತ 5,000 ರೂಪಾಯಿ ಆಗಿದೆ. ಕನಿಷ್ಠ ಮೊತ್ತ ಇಲ್ಲದಿದ್ದರೆ ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಶೇಕಡ 6ರಷ್ಟು ದಂಡವನ್ನು ವಿಧಿಸುತ್ತದೆ.


Click it and Unblock the Notifications