For Quick Alerts
ALLOW NOTIFICATIONS  
For Daily Alerts

ಮತ್ತೆ ಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ, ಪರಿಣಾಮವೇನು?

|

ದೇಶದ ಪ್ರಮುಖ ಸಾರ್ವಜನಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಮತ್ತೆ ಹೆಚ್ಚಳ ಮಾಡಿದೆ. ಇದರಿಂದಾಗಿ ಜನರಿಗೆ ಸಾಲದ ಹೊರೆ ಇನ್ನಷ್ಟು ಹೆಚ್ಚಳವಾಗಲಿದೆ.

ಎಸ್‌ಬಿಐ ನವೆಂಬರ್ 15, 2022ರಿಂದಲೇ ಜಾರಿಗೆ ಬರುವಂತೆ ಎಲ್ಲ ಅವಧಿಯ ಹೂಡಿಕೆ ಮೇಲಿನ ಎಂಸಿಎಲ್‌ಆರ್ ಅನ್ನು 15 ಮೂಲಾಂಕ ಏರಿಸಿದೆ. ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಾಲ್ಕು ಬಾರಿ ರೆಪೋ ದರವನ್ನು ಹೆಚ್ಚಿಸಿದ ಕಾರಣ ಬ್ಯಾಂಕ್‌ಗಳು ಎಫ್‌ಡಿ ಹಾಗೂ ಸಾಲದ ಬಡ್ಡಿದರವನ್ನು ಏರಿಸಿದೆ.

ಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ: ನೂತನ ಬಡ್ಡಿದರ ಎಷ್ಟಿದೆ ನೋಡಿಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ: ನೂತನ ಬಡ್ಡಿದರ ಎಷ್ಟಿದೆ ನೋಡಿ

ಒಂದು ವರ್ಷದ ಎಂಸಿಎಲ್‌ಆರ್ ಅನ್ನು ಗೃಹ, ಆಟೋ, ವೈಯಕ್ತಿಕ ಸಾಲ ಮೊದಲಾದವುಗಳ ಬಡ್ಡಿದರವನ್ನು ನಿರ್ಧಾರ ಮಾಡುವಲ್ಲಿ ಪರಿಣಾಮ ಉಂಟು ಮಾಡುತ್ತದೆ. ಬಡ್ಡಿದರವು ಸುಮಾರು 10 ಮೂಲಾಂಕ ಹೆಚ್ಚಾಗಿ ಶೇಕಡ 8.05ಕ್ಕೆ ತಲುಪಿದೆ. ಈ ಹಿಂದೆ ಶೇಕಡ 7.95ರಷ್ಟಿತ್ತು.

 ಮತ್ತೆ ಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ, ಪರಿಣಾಮವೇನು?

ಎಂಸಿಎಲ್‌ಆರ್ ಎಷ್ಟಿದೆ ನೋಡಿ

ಎರಡು ವರ್ಷದ ಹಾಗೂ ಮೂರು ವರ್ಷದ ಎಂಸಿಎಲ್‌ಆರ್ ಕೂಡಾ ಹೆಚ್ಚಳವಾಗಿದೆ. ದರವು 10 ಮೂಲಾಂಕ ಏರಿಕೆಯಾಗಿದ್ದು ಕ್ರಮವಾಗಿ ಶೇಕಡ 8.25 ಹಾಗೂ ಶೇಕಡ 8.35 ಆಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ನೀವು ಎಸ್‌ಬಿಐ ಗ್ರಾಹಕರೇ? ಮೊಬೈಲ್‌ನಲ್ಲಿ ಈ ಮೆಸೇಜ್ ಬಂದರೆ ಜೋಪಾನನೀವು ಎಸ್‌ಬಿಐ ಗ್ರಾಹಕರೇ? ಮೊಬೈಲ್‌ನಲ್ಲಿ ಈ ಮೆಸೇಜ್ ಬಂದರೆ ಜೋಪಾನ

ಇನ್ನು ಒಂದು ತಿಂಗಳು ಹಾಗೂ ಮೂರು ತಿಂಗಳ ಎಂಸಿಎಲ್‌ಆರ್ ಸುಮಾರು 15 ಮೂಲಾಂಕ ಹೆಚ್ಚಳವಾಗಿದೆ. ಸುಮಾರು ಶೇಕಡ 7.75ಕ್ಕೆ ಹೆಚ್ಚಳವಾಗಿದೆ. ಇನ್ನು ಆರು ತಿಂಗಳ ಎಂಸಿಎಲ್‌ಆರ್ ಕೂಡಾ 15 ಮೂಲಾಂಕ ಏರಿಕೆಯಾಗಿದೆ. ಆರು ತಿಂಗಳ ಎಂಸಿಎಲ್‌ಆರ್ 15 ಮೂಲಾಂಕ ಹೆಚ್ಚಾಗಿ ಶೇಕಡ 8.05ಕ್ಕೆ ತಲುಪಿದೆ. ಓವರ್‌ನೈಟ್ ದರ ಹತ್ತು ಮೂಲಾಂಕ ಹೆಚ್ಚಿಸಿದ್ದು ಶೇಕಡ 7.60ಕ್ಕೆ ತಲುಪಿದೆ.

ಎಂಸಿಎಲ್‌ಆರ್ ಏರಿಕೆಯಾದರೆ ಪರಿಣಾಮವೇನು?

ಯಾವುದೇ ಬ್ಯಾಂಕ್‌ನ ಎಂಸಿಎಲ್‌ಆರ್ ಏರಿಕೆಯಾಗುವುದರಿಂದಾಗಿ ಆ ಬ್ಯಾಂಕ್‌ನಲ್ಲಿ ಸಾಲವನ್ನು ಪಡೆದವರಿಗೆ ಹೊರೆ ಹೆಚ್ಚಾಗಲಿದೆ. ಇಎಂಐ ಹೆಚ್ಚಾಗಲಿದೆ. ಈಗಾಗಲೇ ಹಣದುಬ್ಬರ ಏರಿಕೆ, ಅದರ ನಿಯಂತ್ರಣಕ್ಕಾಗಿ ರೆಪೋ ದರ ಹೆಚ್ಚಳ ಎಲ್ಲವೂ ಜನರ ಜೇಬಿನ ಮೇಲೆ ಕತ್ತರಿ ಹಾಕಿದೆ. ಈ ನಡುವೆ ಎಂಸಿಎಲ್‌ಆರ್ ಏರಿಕೆ ಸಾಲದ ಹೊರೆಯನ್ನು ಅಧಿಕ ಮಾಡುತ್ತದೆ.

English summary

SBI Hikes MCLR, Check Latest Interest Rates, Details in Kannada

State Bank of India has raised its marginal cost of lending rate (MCLR) by up to 15 bps across tenors. Check Latest Interest Rates, Read on.
Story first published: Tuesday, November 15, 2022, 16:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X