ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಏರಿಕೆ ಮಾಡಿದೆ. ಎಸ್‌ಬಿಐ ಎಂಸಿಎಲ್‌ಆರ್ ಅನ್ನು ಹತ್ತು ಮೂಲಾಂಕ ಹೆಚ್ಚಳ ಮಾಡಿದೆ. ಈ ಪರಿಷ್ಕೃತ ದರವು ಜುಲೈ 15ರಿಂದಲೇ ಜಾರಿಗೆ ಬರುತ್ತದೆ.
ಇನ್ನು ಬಾಹ್ಯ ಬೆಂಚ್‌ಮಾರ್ಕ್ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೆಬ್‌ಸೈಟ್ ಪ್ರಕಾರ ಒಂದು ವರ್ಷದ ಎಂಸಿಎಲ್‌ಆರ್ ಅನ್ನು ಶೇಕಡ 7.40ರಿಂದ ಶೇಕಡ 7.50ಕ್ಕೆ ಏರಿಕೆ ಮಾಡಲಾಗಿದೆ. ಓವರ್‌ನೈಟ್, ಒಂದು ತಿಂಗಳು, ಮೂರು ತಿಂಗಳ ಬಡ್ಡಿದರವು ಶೇಕಡ 7.05ರಿಂದ ಶೇಕಡ 7.15ಕ್ಕೆ ಏರಿಕೆ ಮಾಡಲಾಗಿದೆ.
ಆರು ತಿಂಗಳ ಅವಧಿಯ ಎಂಸಿಎಲ್‌ಆರ್ ಶೇಕಡ 7.35ರಿಂದ ಶೇಕಡ 7.45ಕ್ಕೆ ಏರಿಕೆಯಾಗಿದೆ. ಎರಡು ವರ್ಷ ಮತ್ತು ಮೂರು ವರ್ಷದ ಎಂಸಿಎಲ್‌ಆರ್ ಶೇಕಡ 7.7ರಿಂದ ಶೇಕಡ 7.8ಕ್ಕೆ ಏರಿಕೆಯಾಗಿದೆ. ನೂತನ ಬಡ್ಡಿದರ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ......

ಈ ಹಿಂದಿನ ಬಡ್ಡಿದರ, ನೂತನ ಬಡ್ಡಿದರ?
ಓವರ್‌ನೈಟ್: ಈ ಹಿಂದಿನ ಬಡ್ಡಿದರ ಶೇಕಡ 7.05, ನೂತನ ಬಡ್ಡಿದರ ಶೇಕಡ 7.15
ಒಂದು ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.05, ನೂತನ ಬಡ್ಡಿದರ ಶೇಕಡ 7.15
ಮೂರು ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.05, ನೂತನ ಬಡ್ಡಿದರ ಶೇಕಡ 7.15
ಆರು ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.35, ನೂತನ ಬಡ್ಡಿದರ ಶೇಕಡ 7.45
ಒಂದು ವರ್ಷ: ಈ ಹಿಂದಿನ ಬಡ್ಡಿದರ ಶೇಕಡ 7.40, ನೂತನ ಬಡ್ಡಿದರ ಶೇಕಡ 7.50
ಎರಡು ವರ್ಷ: ಈ ಹಿಂದಿನ ಬಡ್ಡಿದರ ಶೇಕಡ 7.60, ನೂತನ ಬಡ್ಡಿದರ ಶೇಕಡ 7.70
ಮೂರು ವರ್ಷ: ಈ ಹಿಂದಿನ ಬಡ್ಡಿದರ ಶೇಕಡ 7.70, ನೂತನ ಬಡ್ಡಿದರ ಶೇಕಡ 7.80
ಆರ್‌ಬಿಐ ಈ ಹಣದುಬ್ಬರದ ನಡುವೆ ರೆಪೋ ದರವನ್ನು ಹೆಚ್ಚಳ ಮಾಡಿದ ಬಳಿಕ 2022ರ ಏಪ್ರಿಲ್‌ನಿಂದ ಎಂಸಿಎಲ್‌ಆರ್ ಅನ್ನು ಏರಿಕೆ ಮಾಡಲಾಗಿದೆ. ಈ ಹಿಂದೆ 2022ರ ಜೂನ್ 15ರಿಂದ ಜಾರಿಗೆ ಬರುವಂತೆ ಎಂಸಿಎಲ್‌ಆರ್ ಅನ್ನು ಶೇಕಡ 0.20ರಷ್ಟು ಏರಿಕೆ ಮಾಡಿತ್ತು.
ಕಳೆದ ವರ್ಷ ಬಾಹ್ಯ ಬೆಂಚ್‌ಮಾರ್ಕ್ ಆಧಾರಿತ ಸಾಲದ ಬಡ್ಡಿದರವು ಜೂನ್ 2022ರಿಂದ ಏರಿಕೆ ಮಾಡಲಾಗಿದೆ. ಜೂನ್ 15ರಿಂದ ಜಾರಿಗೆ ಬರುವಂತೆ ಬ್ಯಾಂಕ್‌ನ ಇಬಿಎಲ್‌ಆರ್ ಶೇಕಡ 7.55 ಹಾಗೂ ಸಿಆರ್‌ಪಿ ಆಗಿದೆ. ಆರ್‌ಎಲ್‌ಎಲ್‌ಆರ್ ಶೇಕಡ 7.15 ಮತ್ತು ಸಿಆರ್‌ಪಿ ಆಗಿದೆ.
ಆದರೂ ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ನಿಮ್ಮ ಸಾಲದ ಬಡ್ಡಿದರವು ನಿರ್ಧರಿತವಾಗಲಿದೆ. ಇನ್ನು ಸದ್ಯ ಬಡ್ಡಿದರ ಏರಿಕೆ ಹಿನ್ನೆಲೆಯಿಂದಾಗಿ ಕ್ರೆಡಿಟ್ ಸ್ಕೋರ್ 800ಕ್ಕಿಂತ ಅಧಿಕವಿರುವಾಗ ಗೃಹ ಸಾಲದ ಮೇಲೆ ಕನಿಷ್ಠ ಶೇಕಡ 7.55 ಬಡ್ಡಿದರ ಪಾವತಿಸಬೇಕಾಗುತ್ತದೆ.


Click it and Unblock the Notifications