ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿ ಗ್ರಾಹಕರ ಖಾತೆಯಲ್ಲಿರುವ ಹಣಕ್ಕೆ ನೀಡಲಾಗುವ ಬಡ್ಡಿಯನ್ನು ಹೆಚ್ಚಿಸಿದೆ. ಆದರೆ, ಕನಿಷ್ಠ 10 ಕೋಟಿ ರೂ ಇದ್ದರೆ ಮಾತ್ರ ಹೆಚ್ಚು ಬಡ್ಡಿ ಸಿಗುತ್ತದೆ.
ಗ್ರಾಹಕರ ಉಳಿತಾಯ ಖಾತೆಯಲ್ಲಿ 10 ಕೋಟಿಗೂ ಹೆಚ್ಚು ಇರುವ ಹಣಕ್ಕೆ ನೀಡಲಾಗುವ ಬಡ್ಡಿ ಶೇ. 2.7ರಿಂದ ಶೇ. 3ಕ್ಕೆ ಏರಿಸಲಾಗಿದೆ. ಅದಕ್ಕಿಂತ ಕಡಿಮೆ ಮೊತ್ತದ ಹಣಕ್ಕೆ ನೀಡಲಾಗುವ ಶೇ. 2.7ರ ಬಡ್ಡಿಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಈ ಪರಿಷ್ಕರತ ದರ ಅಕ್ಟೋಬರ್ 15ರಿಂದಲೇ ಅನ್ವಯಕ್ಕೆ ಬರುತ್ತದೆ.
ನಿಶ್ಚಿತ ಠೇವಣಿ ದರಗಳು
ಇನ್ನು ಆರ್‌ಬಿಐನಿಂದ ರೆಪೋ ದರಗಳು ಸತತವಾಗಿ ಏರಿಕೆ ಕಂಡ ಬೆನ್ನಲ್ಲೇ ಹಲವು ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಏರಿವೆ. ಸಾಲದ ಮೇಲಿನ ಬಡ್ಡಿ ಮತ್ತು ಠೇವಣಿ ಮೇಲಿನ ಬಡ್ಡಿ ದರಗಳು ಹೆಚ್ಚಿವೆ. ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಸೇರಿದಂತೆ ವಿವಿಧ ಬ್ಯಾಂಕ್‌ಗಳು ಫಿಕ್ಸೆಡ್ ಡೆಪಾಸಿಟ್‌ಗೆ ನೀಡುವ ಬಡ್ಡಿ ಎಷ್ಟು ಎಂಬ ವಿವರ ಇಲ್ಲಿದೆ:

ಎಕ್ಸಿಸ್ ಬ್ಯಾಂಕ್:
ಒಂದು ವರ್ಷ ಅವಧಿಯ ಎಫ್‌ಡಿ: ಜನಸಾಮಾನ್ಯರಿಗೆ ಶೇ. 5.1, ಹಿರಿಯ ನಾಗರಿಕರಿಗೆ ಶೇ. 5.85
ಎಚ್‌ಡಿಎಫ್‌ಸಿ ಬ್ಯಾಂಕ್
ಒಂದು ವರ್ಷ ಅವಧಿಯ ಎಫ್‌ಡಿ: ಜನಸಾಮಾನ್ಯರಿಗೆ ಶೇ. 5.70, ಹಿರಿಯ ನಾಗರಿಕರಿಗೆ ಶೇ. 6.20
ಐಸಿಐಸಿಐ ಬ್ಯಾಂಕ್
ಒಂದು ವರ್ಷ ಅವಧಿಯ ಎಫ್‌ಡಿ: ಜನಸಾಮಾನ್ಯರಿಗೆ ಶೇ. 5.70, ಹಿರಿಯ ನಾಗರಿಕರಿಗೆ ಶೇ. 5.20
ಇವೆಲ್ಲವೂ ವಾರ್ಷಿಕ ಬಡ್ಡಿ ದರಗಳು. ಇನ್ನು ಸಾಲದ ಮೇಲೆ ವಿವಿಧ ಬ್ಯಾಂಕುಗಳು ವಿಧಿಸುವ ಬಡ್ಡಿ ದರಗಳು ಇಲ್ಲಿವೆ:
ಎಚ್‌ಡಿಎಫ್‌ಸಿ ಬ್ಯಾಂಕ್: ಶೇ. 10.5ರಿಂದ ಶೇ. 21ರವರೆಗೆ
ಕೋಟಕ್ ಮಹೀಂದ್ರ ಬ್ಯಾಂಕ್: ಶೇ. 10.25ರಿಂದ ಆರಂಭ
ಎಕ್ಸಿಸ್ ಬ್ಯಾಂಕ್: ಶೇ. 12ರಿಂದ ಶೇ. 21ರವರೆಗೆ
ಎಚ್‌ಎಸ್‌ಬಿಸಿ: ಶೇ. 9.5ರಿಂದ ಶೇ. 15.25ರವರೆಗೆ
ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ: ಶೇ. 9.6ರಿಂದ ಶೇ. 15.65ರವರೆಗೆ
ಕರ್ನಾಟಕ ಬ್ಯಾಂಕ್: ಶೇ. 12ರಿಂದ ಶೇ. 17ರವರೆಗೆ
ಬ್ಯಾಂಕ್ ಆಫ್ ಬರೋಡಾ: ಶೇ. 10.50ರಿಂದ ಶೇ. 12.50ರವರೆಗೆ
ಐಡಿಬಿಐ ಬ್ಯಾಂಕ್: ಶೇ. 8.15ರಿಂದ ಶೇ. 10.90ರವೆಗೆ
ಕರೂರ್ ವೈಶ್ಯಾ ಬ್ಯಾಂಕ್: ಶೇ. 9.40ಯಿಂದ ಶೇ. 19ರವರೆಗೆ
ಇಂಡಿಯನ್ ಓವರ್‌ಸೀಸ್ ಬ್ಯಾಂಕ್: ಶೇ. 9.30ರಿಂದ ಶೇ. 10.80ರವರೆಗೆ
ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ. 7.90 ಇಂದ ಆರಂಭ
ಬ್ಯಾಂಕ್ ಆಫ್ ಮಹಾರಾಷ್ಟ್ರ: ಶೇ. 9.45ರಿಂದ ಶೇ. 12.80ರವರೆಗೆ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ. 9.85ರಿಂದ ಬಡ್ಡಿದರ ಆರಂಭ.
ಯೆಸ್ ಬ್ಯಾಂಕ್: ಶೇ. 10.99ರಂದ ಶೇ. 16.99ರವರೆಗೆ

ಇವೆಲ್ಲವೂ ಕೂಡ ವಾರ್ಷಿಕ ಬಡ್ಡಿ ದರಗಳೇ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಅತೀ ಕಡಿಮೆ ಬಡ್ಡಿ ದರ ಇದೆ. ಸಿಟಿ ಬ್ಯಾಂಕ್, ಎಚ್‌ಎಸ್‌ಬಿಸಿ, ಐಡಿಬಿಐ, ಐಒಬಿ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಎಸ್‌ಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಲ್ಲಿ ಬಡ್ಡಿ ದರ ಕಡಿಮೆ ಇದೆ.
ಹೋಮ್ ಕ್ರೆಡಿಟ್ ಕ್ಯಾಷ್ ಲೋನ್ ಕಂಪನಿಯಲ್ಲಿ ಅತಿಹೆಚ್ಚು ಬಡ್ಡಿ ಇದೆ. ಇಂಡಸ್‌ಇಂಡ್ ಬ್ಯಾಂಕ್, ಆದಿತ್ಯ ಬಿರ್ಲಾ ಕ್ಯಾಪಿಟಲ್ ಬ್ಯಾಂಕುಗಳಲ್ಲೂ ಸಾಲಗಳ ಮೇಲೆ ಹೆಚ್ಚು ಬಡ್ಡಿ ದರಗಳನ್ನು ವಿಧಿಸಲಾಗುತ್ತದೆ.
ಆರ್‌ಬಿಐ ಸತತ ಮೂರು ಬಾರಿ ಬಡ್ಡಿ ದರಗಳನ್ನು ಏರಿಕೆ ಮಾಡಿದೆ. ಸದ್ಯ ರೆಪೋ ದರ ಶೇ. 5.9ರಷ್ಟಿದೆ. ರೆಪೋ ದರ ಎಂದರೆ ಆರ್‌ಬಿಐನಿಂದ ವಾಣಿಜ್ಯ ಬ್ಯಾಂಕುಗಳು ಪಡೆಯುವ ಸಾಲಕ್ಕೆ ವಿಧಿಸಲಾಗುವ ಬಡ್ಡಿ ದರವಾಗಿದೆ. ಈ ದರದ ಆಧಾರದ ಮೇಲೆ ಬ್ಯಾಂಕುಗಳು ಸಾಮಾನ್ಯವಾಗಿ ಬಡ್ಡಿ ದರಗಳನ್ನು ಪರಿಷ್ಕರಿಸುತ್ತವೆ. ರೆಪೋ ದರ ಹೆಚ್ಚಾದರೆ ಬ್ಯಾಂಕುಗಳ ಬಡ್ಡಿ ದರವೂ ಹೆಚ್ಚುತ್ತದೆ.


Click it and Unblock the Notifications