For Quick Alerts
ALLOW NOTIFICATIONS  
For Daily Alerts

SBI ಗ್ರಾಹಕರೇ ಗಮನಿಸಿ: ಜುಲೈ 1ರಿಂದ ಈ ಸೇವಾ ಶುಲ್ಕ ಹೆಚ್ಚಾಗಲಿದೆ!

|

ಎಸ್‌ಬಿಐ ಇತ್ತೀಚೆಗಷ್ಟೇ ತನ್ನ ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆದಾರರಿಗೆ ಸೇವಾ ಶುಲ್ಕ ಪರಿಷ್ಕರಣೆ ಘೋಷಿಸಿದೆ. ಈ ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳು ಜುಲೈ 1, 2021 ರಿಂದ ಜಾರಿಗೆ ಬರಲಿವೆ.

 

ಎಸ್‌ಬಿಐ ಶುಲ್ಕಗಳು ಶಾಖೆಗಳಲ್ಲಿ ಮತ್ತು ಎಟಿಎಂಗಳಲ್ಲಿ ಹಣ ವಿತ್‌ಡ್ರಾ, ಚೆಕ್ ಬುಕ್, ಖಾತೆ ವರ್ಗಾವಣೆ ಮತ್ತು ಇತರ ಹಣಕಾಸೇತರ ವಹಿವಾಟುಗಳಿಗೆ ಸಂಬಂಧಿಸಿದ ಶುಲ್ಕಗಳಾಗಿವೆ.
ಇದು ಮುಂದಿನ ವಾರದಿಂದ (ಜುಲೈ 1) ಪ್ರಾರಂಭವಾಗಲಿದೆ.

ಹಣ ವಿತ್‌ಡ್ರಾ ನಿಯಮವು 4 ಉಚಿತ ನಗದು ಹಿಂತೆಗೆದುಕೊಳ್ಳುವ ವಹಿವಾಟುಗಳನ್ನು ಮೀರಿದ ಬಳಿಕ ಈ ಸೇವಾ ಶುಲ್ಕ ಅನ್ವಯವಾಗುವುದು. ಎಟಿಎಂ ಶುಲ್ಕಗಳಲ್ಲಿ 4 ಉಚಿತ ನಗದು ಹಿಂಪಡೆಯುವ ವಹಿವಾಟುಗಳನ್ನು ಮೀರಿ (ಎಟಿಎಂ ಮತ್ತು ಶಾಖೆಯನ್ನು ಒಳಗೊಂಡಂತೆ) ಮರುಪಡೆಯಲಾಗುತ್ತದೆ.

ಎಷ್ಟು ಶುಲ್ಕ ವಿಧಿಸಲಾಗುವುದು?

ಎಷ್ಟು ಶುಲ್ಕ ವಿಧಿಸಲಾಗುವುದು?

ಶಾಖೆ ಸೇರಿದಂತೆ ಎಟಿಎಂಗಳಲ್ಲಿ ಹಣ ವಿತ್‌ಡ್ರಾಗಳಿಗಾಗಿ 4 ಉಚಿತ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ವಹಿವಾಟುಗಳನ್ನು ಮೀರಿದಂತೆ ಶುಲ್ಕ ವಿಧಿಸಲಾಗುತ್ತದೆ. ಶಾಖೆ ಅಥವಾ ಎಟಿಎಂನಲ್ಲಿ ನಿಗದಿತಕ್ಕಿತ ಹೆಚ್ಚುವರಿ ಹಣ ವಿತ್‌ಡ್ರಾ ವಹಿವಾಟಿಗೆ 15 ರೂಪಾಯಿ ಜೊತೆಗೆ ಜಿಎಸ್‌ಟಿ ಇರುತ್ತದೆ. ಇತರೆ ಬ್ಯಾಂಕ್‌ಗಳಲ್ಲೂ ಕೂಡ 15 ರೂಪಾಯಿ ಜೊತೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ.

ಚೆಕ್‌ ಬುಕ್‌ ಪಡೆಯಲು ಹೆಚ್ಚುವರಿ ಶುಲ್ಕ

ಚೆಕ್‌ ಬುಕ್‌ ಪಡೆಯಲು ಹೆಚ್ಚುವರಿ ಶುಲ್ಕ

ಎಸ್‌ಬಿಐ ಬಿಎಸ್‌ಬಿಡಿ ಖಾತೆದಾರರಿಗೆ ಹಣಕಾಸು ವರ್ಷದಲ್ಲಿ 10 ಚೆಕ್ ಇರುವ ಪುಸ್ತಕವನ್ನು ಉಚಿತವಾಗಿ ನೀಡುತ್ತದೆ. ನಂತರದಲ್ಲಿ ಬೇಕಾದಲ್ಲಿ 10 ಚೆಕ್‌ ಇರುವ ಬುಕ್‌ಗೆ 40 ರೂಪಾಯಿ ಮತ್ತು ಜಿಎಸ್‌ಟಿ, 25 ಚೆಕ್‌ ಇರುವ ಬುಕ್‌ಗೆ 75 ರೂಪಾಯಿ ಪ್ಲಸ್ ಜಿಎಸ್‌ಟಿ, ತುರ್ತಾಗಿ ಚೆಕ್‌ ಬುಕ್‌ಗೆ 50 ರೂಪಾಯಿ ಪ್ಲಸ್‌ ಜಿಎಸ್‌ಟಿ ವಿಧಿಸಿದೆ.

ಹಿರಿಯ ನಾಗರಿಕರಿಗೆ ಈ ಪರಿಷ್ಕೃತ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

 

ಬಿಎಸ್‌ಬಿಡಿ ಖಾತೆದಾರರಿಗೆ ಹಣಕಾಸಿನೇತರ ವಹಿವಾಟು ಉಚಿತ
 

ಬಿಎಸ್‌ಬಿಡಿ ಖಾತೆದಾರರಿಗೆ ಹಣಕಾಸಿನೇತರ ವಹಿವಾಟು ಉಚಿತ

ಎಸ್‌ಬಿಐ ಮತ್ತು ಇತರ ಬ್ಯಾಂಕುಗಳಲ್ಲಿನ ಬಿಎಸ್‌ಬಿಡಿ ಖಾತೆದಾರರಿಗೆ ಬ್ರಾಂಚ್ ಚಾನೆಲ್ / ಎಟಿಎಂ / ಸಿಡಿಎಂ / ನಲ್ಲಿನ ಹಣಕಾಸಿನೇತರ ವಹಿವಾಟುಗಳು ಉಚಿತವಾಗಿರುತ್ತದೆ. ಶಾಖೆ ಮತ್ತು ಪರ್ಯಾಯ ಚಾನಲ್‌ಗಳಿಗೆ ಬಿಎಸ್‌ಬಿಡಿ ಖಾತೆದಾರರ ವರ್ಗಾವಣೆ ವ್ಯವಹಾರಗಳು ಉಚಿತವಾಗಿರುತ್ತದೆ.

ಡೆಬಿಟ್‌ ಕಾರ್ಡ್‌ ಪಿನ್ ಜನರೇಟ್ ಮಾಡುವುದು ಹೇಗೆ?

ಡೆಬಿಟ್‌ ಕಾರ್ಡ್‌ ಪಿನ್ ಜನರೇಟ್ ಮಾಡುವುದು ಹೇಗೆ?

1. ಎಸ್‌ಬಿಐ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮೀಸಲಾದ 1800-11-22-11 / 1800-425-3800 ಗೆ ಕರೆ ಮಾಡಬೇಕಾಗುತ್ತದೆ.
2. ಎಟಿಎಂ ಅಥವಾ ಡೆಬಿಟ್ ಕಾರ್ಡ್ ಸಂಬಂಧಿತ ಸೇವೆಗಳಿಗಾಗಿ 2 ಒತ್ತಿರಿ
3. ಪಿನ್ ಜನರೇಟ್‌ ಮಾಡಲು 1 ಒತ್ತಿರಿ
4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ನೀವು ಕರೆ ಮಾಡುತ್ತಿದ್ದರೆ 1 ಒತ್ತಿರಿ ಅಥವಾ ಕಸ್ಟಮರ್ ಕೇರ್‌ನೊಂದಿಗೆ ಮಾತನಾಡಲು 2 ಒತ್ತಿರಿ
5. ನೀವು ಗ್ರೀನ್ ಪಿನ್ ಜನರೇಟ್‌ ಮಾಡಲು ನಿಮ್ಮ ಎಟಿಎಂ ಕಾರ್ಡ್‌ನ ಕೊನೆಯ 5 ಅಂಕಿಗಳನ್ನು ನಮೂದಿಸಿ.
6. ಕೊನೆಯ 5 ಅಂಕಿಗಳನ್ನು ಖಚಿತಪಡಿಸಲು 1 ಒತ್ತಿರಿ
7. ಎಟಿಎಂ ಕಾರ್ಡ್‌ನ ಕೊನೆಯ 5 ಅಂಕಿಗಳನ್ನು ಮರು ನಮೂದಿಸಲು 2 ಒತ್ತಿರಿ
8. ಎಸ್‌ಬಿಐ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ 5 ಅಂಕಿಗಳನ್ನು ನಮೂದಿಸಿ. ಖಚಿತಪಡಿಸಲು 1 ಒತ್ತಿ, ಇಲ್ಲದಿದ್ದರೆ ಖಾತೆಯ ಕೊನೆಯ 5 ಅಂಕಿಗಳನ್ನು ಮರು ನಮೂದಿಸಲು 2 ಒತ್ತಿರಿ.
9. ನಿಮ್ಮ ಜನ್ಮ ವರ್ಷವನ್ನು ನಮೂದಿಸಿ
10. ನಿಮ್ಮ ಗ್ರೀನ್ ಪಿನ್ ಅನ್ನು ರಚಿಸಲಾಗಿದೆ ಮತ್ತು ತ್ವರಿತ ಪ್ರವೇಶಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
11. ನಂತರ 24 ಗಂಟೆಗಳ ಒಳಗೆ, ನೀವು ಯಾವುದೇ ಎಸ್‌ಬಿಐ ಎಟಿಎಂಗೆ ಭೇಟಿ ನೀಡುವ ಮೂಲಕ ಪಿನ್ ಬದಲಾಯಿಸಬಹುದು.

English summary

SBI new charges on cash withdrawal, cheque book from July 1 Check other details in kannada

State Bank of India (SBI) has announced revision in service charges for its Basic Savings Bank Deposit (BSBD) Account holders that will kick in from next week (July 1)
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X