For Quick Alerts
ALLOW NOTIFICATIONS  
For Daily Alerts

SBI ಯೋನೋ ಆಪ್ ಮೂಲಕ 35 ಲಕ್ಷ ರೂ ಸಾಲ ಪಡೆಯಿರಿ!

|

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಯಾಲರಿ ಅಕೌಂಟ್ ಅನ್ನು ಹೊಂದಿದ್ದರೆ, ನಿಮಗೆ ಯೋನೋ ಆಪ್ ಮೂಲಕ ಸಾಲವನ್ನು ಪಡೆಯುವ ಅವಕಾಶವನ್ನು ಹೊಂದಿದ್ದೀರಿ. ಈ ಆಪ್ ಮೂಲಕ ಸುಮಾರು 35 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯುವ ಅವಕಾಶವಿದೆ.

 

ಎಸ್‌ಬಿಐ ಯೋನೋ ಆಪ್‌ನಲ್ಲಿ ರಿಯಲ್-ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ (ಆರ್‌ಟಿಎಕ್ಸ್‌ಸಿ) ಅನ್ನು ಪರಿಚಯಿಸಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಡಿಜಿಟಲ್ ಮೂಲಕ ಸಾಲವನ್ನು ಪಡೆಯಲು ಸಹಾಯಕವಾಗಲಿದೆ ಎಂದು ಈ ಆಪ್ ಮೂಲಕ ಸಾಲವನ್ನು ಪಡೆಯುವ ಅವಕಾಶವನ್ನು ಎಸ್‌ಬಿಐ ನೀಡಿದೆ.

ರಿಯಲ್-ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ (ಆರ್‌ಟಿಎಕ್ಸ್‌ಸಿ) ಸಾಲವು ಸಂಪೂರ್ಣವಾಗಿ ಡಿಜಿಟಲ್ ಸಾಲ ವ್ಯವಸ್ಥೆಯಾಗಿದೆ. ಈ ಆಪ್ ಮೂಲಕ 35 ಲಕ್ಷ ರೂಪಾಯಿ ಸಾಲವನ್ನು ಪಡೆಯುವುದು ಹೇಗೆ, ಇಲ್ಲಿದೆ ವಿವರ ಮುಂದೆ ಓದಿ....

SBI ಯೋನೋ ಆಪ್ ಮೂಲಕ 35 ಲಕ್ಷ ರೂ ಸಾಲ ಪಡೆಯಿರಿ!

ಎಕ್ಸ್‌ಪ್ರೆಸ್ ಕ್ರೆಡಿಟ್ ವೇತನವನ್ನು ಪಡೆಯುವವರಿಗೆ ನೀಡುವ ಸಾಲವಾಗಿದೆ. ಡಿಜಿಟಲ್ ಆಪ್ ಮೂಲಕ ಈ ಸಾಲವನ್ನು ಪಡೆಯಬಹುದು. ಇದು ಸಂಪೂರ್ಣವಾಗಿ ಕಾಗದರಹಿತವಾಗಿದೆ. ನೀವು ಮನೆಯಲ್ಲೇ ಕುಳಿತು ಈ ಸಾಲವನ್ನು ಸಲ್ಲಿಸಬಹುದು. ಇದು ಕೇವಲ 8 ಹಂತಗಳ ಪ್ರಕ್ರಿಯೆಯಾಗಿದೆ.

ಕೇಂದ್ರ, ರಾಜ್ಯ ಸರ್ಕಾರ ಹಾಗೂ ಡಿಫೆನ್ಸ್‌ನಲ್ಲಿರುವ ವೇತನ ಪಡೆಯುವ ಗ್ರಾಹಕರು ಈ ಸಾಲವನ್ನು ಪಡೆಯಬೇಕಾದರೆ ಎಸ್‌ಬಿಐ ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿಲ್ಲ. ಕ್ರೆಡಿಟ್ ಚೆಕ್, ಸಾಲ ಪಡೆಯುವ ಅರ್ಹತೆ ಚೆಕ್ ಮಾಡುವುದು, ಶುಲ್ಕ, ದಾಖಲೆ ಎಲ್ಲವು ಕೂಡಾ ಆನ್‌ಲೈನ್ ಮೂಲಕ ನಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಬಿಐ ಚೇರ್‌ಮನ್ ದಿನೇಶ್ ಖಾರಾ, "ನಮ್ಮ ಕ್ವಾಲಿಫೈಡ್ ಗ್ರಾಹಕರಿಗೆ ನಾವು ಯೋನೋ ಆಪ್ ಮೂಲಕ ರಿಯಲ್-ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ (ಆರ್‌ಟಿಎಕ್ಸ್‌ಸಿ) ಸಾಲವನ್ನು ಪಡೆಯಬಹುದು. ಡಿಜಿಟಲ್ ರೂಪದಲ್ಲಿ ಸಾಲವನ್ನು ಪಡೆಯಬಹುದು. ಯಾವುದೇ ತೊಂದರೆ ಇಲ್ಲದೆ, ಯಾವುದೇ ಕಾಗದ ದಾಖಲೆಯನ್ನು ಸಲ್ಲಿಸದೆ ಸಾಲವನ್ನು ಪಡೆಯಬಹುದು," ಎಂದು ತಿಳಿಸಿದ್ದಾರೆ.

English summary

SBI Offers Personal Loans Up to Rs 35 Lakh on YONO App, Details in Kannada

Are you an SBI salary account holder?, SBI Offers Personal Loans Up to Rs 35 Lakh on YONO App, Details in Kannada.
Story first published: Sunday, November 20, 2022, 13:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X