For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಬಂಪರ್ ಗಿಫ್ಟ್; ನಿಮ್ಮ ಹಣಕ್ಕೆ ಸಿಗುವ ಬಡ್ಡಿಯಲ್ಲಿ ಭಾರೀ ಹೆಚ್ಚಳ

|

ನವದೆಹಲಿ, ಅ. 23: ಸ್ಟೇಟ್ ಬ್ಯಾಂಕ್ ಇಂಡಿಯಾ ತನ್ನ ಟರ್ಮ್ ಡೆಪಾಸಿಟ್‌ಗಳಿಗೆ ನೀಡುವ ವಾರ್ಷಿಕ ಬಡ್ಡಿಯ ದರದಲ್ಲಿ 80 ಮೂಲಾಂಕಗಳಷ್ಟು ಏರಿಕೆ ಮಾಡಿದೆ. ಆರ್‌ಡಿ, ಎಫ್‌ಡಿಯಂತಹ ಅವಧಿ ಠೇವಣಿಗಳನ್ನು ಇಡುವ ಎಸ್‌ಬಿಐ ಗ್ರಾಹಕರಿಗೆ ಉತ್ತಮ ಬಡ್ಡಿ ಸಿಗಲಿದೆ.

 

ಠೇವಣಿ ಅವಧಿ ಮೇಲೆ ಬಡ್ಡಿ ದರಗಳು ಅವಲಂಬಿತವಾಗಿರುತ್ತವೆ. 211 ದಿನಗಳಿಂದ 1 ವರ್ಷದ ಅವಧಿಯವರೆಗಿನ ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಶೇ. 0.80ರಷ್ಟು ಬಡ್ಡಿ ಏರಿಕೆ ಮಾಡಲಾಗಿದೆ. ಶೇ. 4.70 ಇದ್ದ ಬಡ್ಡಿ ದರವನ್ನು ಶೇ. 5.50ಕ್ಕೆ ಏರಿಕೆ ಮಾಡಲಾಗಿದೆ. ಹಿರಿಯ ನಾಗರಿಕರ ಠೇವಣಿಗೂ ಶೇ. 0.80ರಷ್ಟು ಬಡ್ಡಿ ಏರಿಕೆ ಮಾಡಲಾಗಿದೆ.

Attractive FD Offer: ಸರ್ಕಾರಿ ಸ್ವಾಮ್ಯದ ಕೆಟಿಡಿಎಫ್‌ಸಿಯಲ್ಲಿ ಫಿಕ್ಸೆಡ್ ಡೆಪಾಸಿಟ್: ಭರ್ಜರಿ ರಿಟರ್ನ್Attractive FD Offer: ಸರ್ಕಾರಿ ಸ್ವಾಮ್ಯದ ಕೆಟಿಡಿಎಫ್‌ಸಿಯಲ್ಲಿ ಫಿಕ್ಸೆಡ್ ಡೆಪಾಸಿಟ್: ಭರ್ಜರಿ ರಿಟರ್ನ್

45 ದಿನಳವರೆಗಿನ ಠೇವಣಿಗಳಿಗೆ ಬಡ್ಡಿಯಲ್ಲಿ ವ್ಯತ್ಯಾಸವಾಗಿಲ್ಲ. ಇನ್ನುಳಿದ ಟರ್ಮ್ ಡೆಪಾಸಿಟ್‌ಗಳಿಗೆ ಬೇರೆ ಬೇರೆ ಪ್ರಮಾಣದಷ್ಟು ಬಡ್ಡಿ ಏರಿಕೆ ಮಾಡಲಾಗಿದೆ. 2022 ಅಕ್ಟೋಬರ್ 22ರಿಂದ ಈ ಪರಿಷ್ಕೃತ ಬಡ್ಡಿ ದರಗಳು ಅನ್ವಯ ಆಗುತ್ತವೆ.

ಪರಿಷ್ಕೃತ ಬಡ್ಡಿ ದರಗಳು

ಎಸ್‌ಬಿಐ ಹೊಸ ಎಫ್‌ಡಿ ದರಗಳು (ವಾರ್ಷಿಕ)
ಅವಧಿ: 7-45 ದಿನಗಳು
ಹಳೆಯ ಬಡ್ಡಿ: ಶೇ. 3
ಪರಿಷ್ಕೃತ ಬಡ್ಡಿ: ಶೇ. 3
ಹಿರಿಯ ನಾಗರಿಕರಿಗೆ: ಶೇ. 3.5

ಅವಧಿ: 46-179 ದಿನಗಳು
ಹಳೆಯ ಬಡ್ಡಿ: ಶೇ. 4
ಪರಿಷ್ಕೃತ ಬಡ್ಡಿ: ಶೇ. 4.50
ಹಿರಿಯ ನಾಗರಿಕರಿಗೆ: ಶೇ. 5

ಅವಧಿ: 180-210 ದಿನಗಳು
ಹಳೆಯ ಬಡ್ಡಿ: ಶೇ. 4.65
ಪರಿಷ್ಕೃತ ಬಡ್ಡಿ: ಶೇ. 5.25
ಹಿರಿಯ ನಾಗರಿಕರಿಗೆ: ಶೇ. 5.75

ಅವಧಿ: 211 ದಿನಗಳಿಂದ 1 ವರ್ಷದೊಳಗಿನ ಅವಧಿ
ಹಳೆಯ ಬಡ್ಡಿ: ಶೇ. 4.70
ಪರಿಷ್ಕೃತ ಬಡ್ಡಿ: 5.50
ಹಿರಿಯ ನಾಗರಿಕರಿಗೆ: ಶೇ. 6

ಅವಧಿ: 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿ
ಹಳೆಯ ಬಡ್ಡಿ: ಶೇ. 5.60
ಪರಿಷ್ಕೃತ ಬಡ್ಡಿ: ಶೇ. 6.10
ಹಿರಿಯ ನಾಗರಿಕರಿಗೆ: ಶೇ. 6.60

ಅವಧಿ: 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ
ಹಳೆಯ ಬಡ್ಡಿ: ಶೇ. 5.65
ಪರಿಷ್ಕೃತ ಬಡ್ಡಿ: ಶೇ. 6.25
ಹಿರಿಯ ನಾಗರಿಕರಿಗೆ: ಶೇ. 6.75

ಅವಧಿ: 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿ
ಹಳೆಯ ಬಡ್ಡಿ: ಶೇ. 5.80
ಪರಿಷ್ಕೃತ ಬಡ್ಡಿ: ಶೇ. 6.10
ಹಿರಿಯ ನಾಗರಿಕರಿಗೆ: ಶೇ. 6.60

ಅವಧಿ: 5 ವರ್ಷದಿಂದ 10 ವರ್ಷಗಳವರೆಗೆ
ಹಳೆಯ ಬಡ್ಡಿ: ಶೇ. 5.85
ಪರಿಷ್ಕೃತ ಬಡ್ಡಿ: ಶೇ. 6.10
ಹಿರಿಯ ನಾಗರಿಕರಿಗೆ: ಶೇ. 6.90

ಎಸ್‌ಬಿಐ ಹೊಸ ಎಫ್‌ಡಿ ದರಗಳು (ವಾರ್ಷಿಕ)

ಎಸ್‌ಬಿಐ ಹೊಸ ಎಫ್‌ಡಿ ದರಗಳು (ವಾರ್ಷಿಕ)

ಅವಧಿ: 7-45 ದಿನಗಳು
ಹಳೆಯ ಬಡ್ಡಿ: ಶೇ. 3
ಪರಿಷ್ಕೃತ ಬಡ್ಡಿ: ಶೇ. 3
ಹಿರಿಯ ನಾಗರಿಕರಿಗೆ: ಶೇ. 3.5

ಅವಧಿ: 46-179 ದಿನಗಳು
ಹಳೆಯ ಬಡ್ಡಿ: ಶೇ. 4
ಪರಿಷ್ಕೃತ ಬಡ್ಡಿ: ಶೇ. 4.50
ಹಿರಿಯ ನಾಗರಿಕರಿಗೆ: ಶೇ. 5

ಅವಧಿ: 180-210 ದಿನಗಳು
ಹಳೆಯ ಬಡ್ಡಿ: ಶೇ. 4.65
ಪರಿಷ್ಕೃತ ಬಡ್ಡಿ: ಶೇ. 5.25
ಹಿರಿಯ ನಾಗರಿಕರಿಗೆ: ಶೇ. 5.75

ಅವಧಿ: 211 ದಿನಗಳಿಂದ 1 ವರ್ಷದೊಳಗಿನ ಅವಧಿ
ಹಳೆಯ ಬಡ್ಡಿ: ಶೇ. 4.70
ಪರಿಷ್ಕೃತ ಬಡ್ಡಿ: 5.50
ಹಿರಿಯ ನಾಗರಿಕರಿಗೆ: ಶೇ. 6

ಅವಧಿ: 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿ
ಹಳೆಯ ಬಡ್ಡಿ: ಶೇ. 5.60
ಪರಿಷ್ಕೃತ ಬಡ್ಡಿ: ಶೇ. 6.10
ಹಿರಿಯ ನಾಗರಿಕರಿಗೆ: ಶೇ. 6.60

ಅವಧಿ: 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ
ಹಳೆಯ ಬಡ್ಡಿ: ಶೇ. 5.65
ಪರಿಷ್ಕೃತ ಬಡ್ಡಿ: ಶೇ. 6.25
ಹಿರಿಯ ನಾಗರಿಕರಿಗೆ: ಶೇ. 6.75

ಅವಧಿ: 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿ
ಹಳೆಯ ಬಡ್ಡಿ: ಶೇ. 5.80
ಪರಿಷ್ಕೃತ ಬಡ್ಡಿ: ಶೇ. 6.10
ಹಿರಿಯ ನಾಗರಿಕರಿಗೆ: ಶೇ. 6.60

ಅವಧಿ: 5 ವರ್ಷದಿಂದ 10 ವರ್ಷಗಳವರೆಗೆ
ಹಳೆಯ ಬಡ್ಡಿ: ಶೇ. 5.85
ಪರಿಷ್ಕೃತ ಬಡ್ಡಿ: ಶೇ. 6.10
ಹಿರಿಯ ನಾಗರಿಕರಿಗೆ: ಶೇ. 6.90

ಹಬ್ಬದ ಸೀಸನ್‌: ಎಚ್‌ಡಿಎಫ್‌ಸಿ, ಎಸ್‌ಬಿಐಗಿಂತ ಕಡಿಮೆ ದರದಲ್ಲಿ ಸಾಲ ನೀಡುತ್ತೆ ಈ ಬ್ಯಾಂಕುಗಳು!ಹಬ್ಬದ ಸೀಸನ್‌: ಎಚ್‌ಡಿಎಫ್‌ಸಿ, ಎಸ್‌ಬಿಐಗಿಂತ ಕಡಿಮೆ ದರದಲ್ಲಿ ಸಾಲ ನೀಡುತ್ತೆ ಈ ಬ್ಯಾಂಕುಗಳು!

ಉಳಿತಾಯ ಖಾತೆಯ ಹಣಕ್ಕೆ
 

ಉಳಿತಾಯ ಖಾತೆಯ ಹಣಕ್ಕೆ

ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ 2 ವರ್ಷದಿಂದ 3 ವರ್ಷಗಳ ನಡುವಿನ ಅವಧಿಗೆ ಇಡುವ ಎಫ್‌ಡಿಗಳಿಗೆ ಅತಿ ಹೆಚ್ಚು ಬಡ್ಡಿ ಸಿಗುತ್ತದೆ. 10 ವರ್ಷಗಳ ಎಫ್‌ಡಿಗಿಂತಲೂ 15 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುವುದು ವಿಶೇಷ. ಇದು ಬಿಟ್ಟರೆ ಎಫ್‌ಡಿಯಲ್ಲಿ ಠೇವಣಿ ಕಾಲಾವಧಿ ಹೆಚ್ಚಿದಷ್ಟೂ ಬಡ್ಡಿ ಹೆಚ್ಚೆಚ್ಚು ಸಿಗುತ್ತದೆ.

ಕೆಲ ದಿನಗಳ ಹಿಂದೆ ಸೇವಿಂಗ್ ಅಕೌಂಟ್‌ಗಳಲ್ಲಿನ ದೊಡ್ಡ ಮೊತ್ತದ ಹಣಕ್ಕೆ ನೀಡುವ ಬಡ್ಡಿ ದರವನ್ನು ಎಸ್‌ಬಿಐ ಪರಿಷ್ಕರಿಸಿತ್ತು. ಎಸ್‌ಬಿ ಅಕೌಂಟ್‌ಗಳಲ್ಲಿ ಇಡಲಾಗುವ 10 ಕೋಟಿ ರೂಗೂ ಹೆಚ್ಚು ಹಣಕ್ಕೆ 30 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಳ ಮಾಡಿತ್ತು. ಇಂಥ ಹಣಕ್ಕೆ ಶೇ. 3.05 ಬಡ್ಡಿ ಸಿಗುತ್ತದೆ. ಆದರೆ, 10 ಕೋಟಿ ರೂಗಿಂತ ಕಡಿಮೆ ಮೊತ್ತವಾದರೆ ಬಡ್ಡಿದರ 5 ಮೂಲಾಂಕಗಳಷ್ಟು ಕಡಿಮೆಯಾಗಿ ಶೇ. 2.70 ಬಡ್ಡಿ ಪ್ರಾಪ್ತವಾಗುತ್ತದೆ.

ಬ್ಯಾಂಕ್‌ಗಳಿಗೆ ಬೇಕು ಹಣ

ಬ್ಯಾಂಕ್‌ಗಳಿಗೆ ಬೇಕು ಹಣ

ಜನರಿಂದ ಬಂಡವಾಳ ಆಕರ್ಷಿಸಲು ವಿವಿಧ ಬ್ಯಾಂಕುಗಳು ಕಸರತ್ತು ನಡೆಸುತ್ತಿವೆ. ಹಣದುಬ್ಬರ ಏರಿಕೆಯನ್ನು ನಿಯಂತ್ರಿಸಲು ಆರ್‌ಬಿಐ ವಿವಿಧ ದರಗಳನ್ನು ಸತತವಾಗಿ ಏರಿಕೆ ಮಾಡುತ್ತಾ ಬಂದಿದೆ. ಬ್ಯಾಂಕುಗಳೂ ಕೂಡ ಬಡ್ಡಿ ದರಗಳನ್ನು ಏರಿಸುತ್ತಿವೆ. ಸಾಲದ ಮೇಲಿನ ಬಡ್ಡಿಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಇದೇ ವೇಳೆ, ಬ್ಯಾಂಕುಗಳಲ್ಲಿ ಜನರು ಹೆಚ್ಚೆಚ್ಚು ಹಣ ಇರಿಸಲು ಉತ್ತೇಜಿಸಲು ಟರ್ಮ್ ಡೆಪಾಸಿಟ್‌ಗಳ ಮೇಲಿನ ಬಡ್ಡಿಯನ್ನು ಬ್ಯಾಂಕುಗಳು ಏರಿಕೆ ಮಾಡುತ್ತಿವೆ. ಕೆನರಾ ಬ್ಯಾಂಕ್, ಎಸ್‌ಬಿಐ ಮೊದಲಾದ ಹಲವು ಬ್ಯಾಂಕುಗಳು ಠೇವಣಿಗಳಿಗೆ ಉತ್ತಮ ಬಡ್ಡಿಯನ್ನು ನೀಡುತ್ತವೆ.

English summary

SBI Raises FD and RD Interest Upto 80 bps, Know The Revised Rates

State Bank of India has revised its interest for various term deposits. The maximum hike is given to deposit of 211 days to less than 1 year.
Story first published: Sunday, October 23, 2022, 10:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X