ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರಗಳನ್ನು ಮತ್ತೆ ಕಡಿತಗೊಳಿಸಿದೆ. ಮಾರ್ಚ್ ತಿಂಗಳಲ್ಲಿ ಎರಡನೇ ಬಾರಿಗೆ FD ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡಿದ್ದು, 2020ರಲ್ಲಿ ನಾಲ್ಕು ಬಾರಿ ಬಡ್ಡಿ ಕಡಿತಗೊಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲ ನಿರ್ದಿಷ್ಟ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರಗಳನ್ನು 20 ರಿಂದ 50 ಬೇಸಿಸ್ ಪಾಯಿಂಟ್ಸ್ ಕಡಿಮೆ ಮಾಡಿದೆ. ಈ ಹೊಸ ಬಡ್ಡಿ ದರಗಳು ಮಾರ್ಚ್ 28ರಿಂದ ಅನ್ವಯವಾಗಲಿವೆ.
ಆರ್‌ಬಿಐ ಶುಕ್ರವಾರವಷ್ಟೇ(ಮಾರ್ಚ್ 27) ರೆಪೋ ರೇಟ್ 0.75 ಬೇಸಿಸ್ ಪಾಯಿಂಟ್ಸ್ ಕಡಿತಗೊಳಿಸಿದೆ. ಕಳೆದ 15 ವರ್ಷಗಳಲ್ಲಿ ಇದು ಅತಿ ಹೆಚ್ಚು ಬಡ್ಡಿದರ ಕಡಿತವಾಗಿದೆ. ಈ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಎಸ್‌ಬಿಐ ಕೂಡ ಬಡ್ಡಿ ದರ ಇಳಿಕೆ ಮಾಡಿದೆ.
2020ರಲ್ಲಿ ನಾಲ್ಕನೇ ಬಾರಿ ಬಡ್ಡಿ ದರ ಕಡಿತ
ಎಸ್‌ಬಿಐ ಇದೇ ವರ್ಷ ಜನವರಿಯಲ್ಲಿ ಬಡ್ಡಿದರವನ್ನು 0.15 ಪರ್ಸೆಂಟ್ ಕಡಿಮೆ ಮಾಡಿತ್ತು. ನಂತರ ಫೆಬ್ರವರಿಯಲ್ಲೂ 0.50 ಪರ್ಸೆಂಟ್ ವರೆಗೂ ತಗ್ಗಿಸಿತ್ತು. ಮಾರ್ಚ್‌ನ ಆರಂಭದಲ್ಲಿ ಇದೀಗ 45 ದಿನಗಳವರೆಗಿನ ಡೆಪಾಸಿಟ್‌ಗೆ 0.50 ಬೇಸಿಸ್ ಪಾಯಿಂಟ್‌ಗಳನ್ನು ಕಡಿಗೊಳಿಸಿದೆ. ಇದರ ಬೆನ್ನಲ್ಲೇ ಮತ್ತೊಮ್ಮೆ ಬಡ್ಡಿ ದರ ಇಳಿಸಿದೆ.
ಮಾರ್ಚ್ 28ರಿಂದ ಅನ್ವಯವಾಗುವ FD ಮೇಲಿನ ಬಡ್ದಿ ದರಗಳು:
7 ರಿಂದ 45 ದಿನಗಳಿಗೆ 3.5% ( 0.50% ಇಳಿಕೆ)
46 ರಿಂದ 179 ದಿನಗಳವರೆಗೆ 4.5% ( 0.50% ಇಳಿಕೆ) -
180 ದಿನಗಳಿಂದ 210 ದಿನಗಳವರೆಗೆ 5% ( 0.50% ಇಳಿಕೆ)
211 ದಿನಗಳಿಂದ 1 ವರ್ಷದವರೆಗೆ 5% ( 0.50% ಇಳಿಕೆ)
1 ರಿಂದ 10 ವರ್ಷದವರೆಗಿನ ಎಫ್‌ಡಿ ಮೇಲಿನ ಹೊಸ ಬಡ್ಡಿ ದರಗಳು
1 ವರ್ಷದಿಂದ 2 ವರ್ಷದವರೆಗೆ 5.7% (0.20% ಇಳಿಕೆ)
2 ವರ್ಷದಿಂದ 3 ವರ್ಷದೊಳಗೆ 5.7% (0.20% ಇಳಿಕೆ)
3 ವರ್ಷದಿಂದ 5 ವರ್ಷದೊಳಗೆ 5.7% (0.20% ಇಳಿಕೆ)
5 ವರ್ಷದಿಂದ 10 ವರ್ಷದೊಳಗೆ 5.7% (0.20% ಇಳಿಕೆ)
ಹಿರಿಯ ನಾಗರೀಕರಿಗೆ ನೀಡುವ ಹೊಸ ಬಡ್ಡಿ ದರಗಳು
ಹಿರಿಯ ನಾಗರೀಕರಿಗೆ 7 ದಿನಗಳಿಂದ 10 ವರ್ಷದೊಳಗಿನ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರಗಳು ಇಳಿಕೆಯಾಗಿದ್ದು, 4 ರಿಂದ 6 ಪರ್ಸೆಂಟ್‌ವರೆಗೂ ಬಡ್ಡಿ ನೀಡಲಾಗುವುದು. ಸಾಮಾನ್ಯ ನಾಗರೀಕರಿಗಿಂತಲೂ 0.50 ಪರ್ಸೆಂಟ್ ಹೆಚ್ಚಿಗೆ ನೀಡಲಾಗುತ್ತದೆ.


Click it and Unblock the Notifications