ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಯೋಜನೆಯನ್ನು ಮತ್ತೆ ಆರಂಭ ಮಾಡಿದೆ. ಸ್ಥಳೀಯ ಹಾಗೂ ಎನ್‌ಆರ್‌ಐ ಗ್ರಾಹಕರಿಗಾಗಿ ಈ ಹಿಂದೆ ಜಾರಿಯಲ್ಲಿದ್ದ ಯೋಜನೆಯನ್ನು ಎಸ್‌ಬಿಐ ಮರು ಜಾರಿಗೆ ತಂದಿದೆ. ಅದುವೇ ಎಸ್‌ಬಿಐ ಅಮೃತ ಕಳಶ ಡೆಪಾಸಿಟ್ ಎಫ್‌ಡಿ ಯೋಜನೆಯಾಗಿದೆ.
ಎಸ್‌ಬಿಐ ಅಮೃತ ಕಳಶ ಡೆಪಾಸಿಟ್ ಎಫ್‌ಡಿ ಯೋಜನೆಯು ಸ್ಥಳೀಯ ಹಾಗೂ ಎನ್‌ಆರ್‌ಐ ಗ್ರಾಹಕರಿಗಾಗಿ ಇರುವ ವಿಶೇಷ ಎಫ್‌ಡಿ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ವಿಶೇಷ ಬಡ್ಡಿದರವನ್ನು ನೀಡಲಾಗುತ್ತದೆ. 400 ದಿನಗಳ ಅವಧಿಯ ಎಫ್‌ಡಿ ಯೋಜನೆ ಇದಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ.

"ಬ್ಯಾಂಕ್ ರಿಟೇಲ್ ಟರ್ಮ್ ಡೆಪಾಸಿಟ್ ಅಮೃತ ಕಳಶ ಯೋಜನೆಯನ್ನು ಮತ್ತೆ ಆರಂಭಿಸಲು ಎಸ್‌ಬಿಐ ನಿರ್ಧಾರ ಮಾಡಿದೆ. ಈ ಯೋಜನೆಯಲ್ಲಿ 400 ದಿನಗಳ ಅವಧಿಗೆ ವಿಶೇಷ ಎಫ್‌ಡಿಗೆ ವಾರ್ಷಿಕವಾಗಿ ಶೇಕಡ 7.10ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ," ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೆಖಿಸಿದೆ.
ಎಸ್‌ಬಿಐ ಅಮೃತ ಕಳಶ ಯೋಜನೆಗಳ ಬಗ್ಗೆ ಈ ಮಾಹಿತಿ ತಿಳಿದಿರಿ
* ಎಸ್‌ಬಿಐ ಅಮೃತ ಕಳಶ ಡೆಪಾಸಿಟ್ ಏಪ್ರಿಲ್ 12, 2023ರಿಂದ ಜೂನ್ 30, 2023ರವರೆಗೆ ಜಾರಿಯಲ್ಲಿ ಇರಲಿದೆ.
* ಎಸ್‌ಬಿಐ ಅಮೃತ ಕಳಶ ಡೆಪಾಸಿಟ್ ಎಫ್‌ಡಿ ಯೋಜನೆಯ ಅವಧಿ 400 ದಿನಗಳಾಗಿದೆ.
* ಸಾಮಾನ್ಯ ಜನರಿಗೆ ಈ ಯೋಜನೆಯಲ್ಲಿ ವಾರ್ಷಿಕವಾಗಿ ಶೇಕಡ 7.10ರಷ್ಟು ಬಡ್ಡಿದರ ನೀಡಲಾಗುತ್ತದೆ, ಆದರೆ ಹಿರಿಯ ನಾಗರಿಕರಿಗೆ ಈ ಯೋಜನೆಯಡಿಯಲ್ಲಿ ಶೇಕಡ 7.60ರಷ್ಟು ಬಡ್ಡಿದರ ನೀಡಲಾಗುತ್ತದೆ.
* ಬಡ್ಡಿದರವನ್ನು ಮಾಸಿಕ, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಲೆಕ್ಕಾಚಾರದಲ್ಲಿ ಜಮೆ ಮಾಡಲಾಗುತ್ತದೆ.
* ಮೆಚ್ಯೂರಿಟಿ ವೇಳೆ ಈ ವಿಶೇಷ ಎಫ್‌ಡಿ ಮೇಲಿನ ಬಡ್ಡಿದರವು ಟಿಡಿಎಸ್ ಕಡಿತದ ಬಳಿಕ ಗ್ರಾಹಕರ ಖಾತೆಗೆ ಜಮೆ ಮಾಡಲಾಗುತ್ತದೆ.
* ಆದಾಯ ತೆರಿಗೆ ಕಾಯ್ದೆಯ ಪ್ರಕಾರವಾಗಿ ಟಿಡಿಎಸ್ ಇರಲಿದೆ.
* ರಿಟೇಲ್ ಟರ್ಮ್ ಡೆಪಾಸಿಟ್ ಆದ ಕಾರಣ ಮೆಚ್ಯೂರಿಟಿಗೂ ಮುನ್ನ ಹಣ ವಿತ್‌ಡ್ರಾ ಮಾಡುವ ಅವಕಾಶವಿದೆ.
* ಎಫ್‌ಡಿ ಮಪತ್ತದ ಮೇಲೆ ಸಾಲವನ್ನು ಪಡೆಯುವ ಅವಕಾಶವೂ ಇದೆ.
* ಅರ್ಹ ಡೆಪಾಸಿಟ್‌ಗಳು: i) ಎನ್‌ಆರ್‌ಐ ರುಪೀ ಟರ್ಮ್ ಡೆಪಾಸಿಟ್ ಸೇರಿದಂತೆ ಸ್ಥಳೀಯ ರಿಟೇಲ್ ಟರ್ಮ್ ಡೆಪಾಸಿಟ್, ii) ನ್ಯೂ ಆಂಡ್ ರಿನಿವೇಬಲ್ ಡೆಪಾಸಿಟ್ iii) ಟರ್ಮ್ ಡೆಪಾಸಿಟ್ ಆಂಡ್ ಸ್ಪೆಷಲ್ ಟರ್ಮ್ ಡೆಪಾಸಿಟ್
* ಬ್ರ್ಯಾಂಚ್, ಐಎನ್‌ಬಿ, ಯೋನೋ ಮೂಲಕ ಈ ಎಫ್‌ಡಿಯನ್ನು ಆರಂಭ ಮಾಡಬಹುದು.
* ಯಾವುದೇ ಬೇರೆ ಪ್ರೊಡೆಕ್ಟ್ ಕೋಡ್ ಅಮೃತ ಕಳಶ ಡೆಪಾಸಿಟ್‌ಗೆ ಇಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೊಸ ಯೋಜನೆಯಾದ ಎಸ್‌ಬಿಐ ಅಮೃತ ಕಳಶ ಡೆಪಾಸಿಟ್ ಎಫ್‌ಡಿ ಯೋಜನೆಯನ್ನು ಫೆಬ್ರವರಿಯಲ್ಲಿ ಜಾರಿ ಮಾಡಿದೆ. ಮಾರ್ಚ್ 2023, 31ರವರೆಗೆ ಮಾತ್ರ ಈ ಯೋಜನೆಯ ಅವಧಿ ಇತ್ತು. ಅದಾದ ಬಳಿಕ ಈಗ ಮತ್ತೆ ಎಸ್‌ಬಿಐ ಅದೇ ಯೋಜನೆಯನ್ನು ಜಾರಿ ಮಾಡಿದೆ. ಯೋಜನೆಯಲ್ಲಿ ಎಲ್ಲ ಫೀಚರ್‌ಗಳು ಈ ಹಿಂದಿನಂತೆಯೇ ಇದೆ. ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಪ್ರಸ್ತುತ ಕೊನೆಯ ದಿನಾಂಕ ಜೂನ್ 30 ಆಗಿದೆ.


Click it and Unblock the Notifications