For Quick Alerts
ALLOW NOTIFICATIONS  
For Daily Alerts

ಈ ಸೇವೆಗೆ ಶುಲ್ಕ ಮನ್ನಾ ಮಾಡಿದ ಎಸ್‌ಬಿಐ: ಇಲ್ಲಿದೆ ವಿವರ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೊಬೈಲ್ ಫಂಡ್ ವರ್ಗಾವಣೆಗೆ ಎಸ್‌ಎಂಎಸ್ ಶುಲ್ಕವನ್ನು ಮನ್ನಾ ಮಾಡಿದೆ. ಇನ್ಮುಂದೆ ಎಸ್‌ಎಂಎಸ್ ಶುಲ್ಕ ಇರುವುದಿಲ್ಲ ಎಂದು ಘೋಷಣೆ ಮಾಡಿದೆ. ಸರಳವಾಗಿ ನಾವು ಹೇಳುವುದಾದರೆ ಇನ್ಮುಂದೆ ಎಸ್‌ಬಿಐ ಗ್ರಾಹಕರು ಈ ಹೆಚ್ಚುವರಿ ಶುಲ್ಕವನ್ನು ಪಾವತಿಸದೆಯೇ ವಹಿವಾಟು ನಡೆಸಬಹುದು.

"ಮೊಬೈಲ್ ಫಂಡ್ ವರ್ಗಾವಣೆಯಲ್ಲಿ ಎಸ್‌ಎಂಎಸ್ ಶುಲ್ಕಗಳನ್ನು ಈಗ ಮನ್ನಾ ಮಾಡಲಾಗಿದೆ. ಯುಎಸ್‌ಎಸ್‌ಡಿ ಸೇವೆಗಳನ್ನು ಬಳಸಿಕೊಂಡು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಬಳಕೆದಾರರು ಈಗ ಅನುಕೂಲಕರವಾಗಿ ವಹಿವಾಟು ನಡೆಸಬಹುದು," ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್‌ಬಿಐ ಬ್ಯಾಂಕ್ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.

ಎಸ್‌ಬಿಐ, ಪಿಎನ್‌ಬಿಯಲ್ಲಿ ವಾರ್ಷಿಕ ಎಟಿಎಂ ನಿರ್ವಹಣಾ ಶುಲ್ಕವೆಷ್ಟು?ಎಸ್‌ಬಿಐ, ಪಿಎನ್‌ಬಿಯಲ್ಲಿ ವಾರ್ಷಿಕ ಎಟಿಎಂ ನಿರ್ವಹಣಾ ಶುಲ್ಕವೆಷ್ಟು?

ಹಾಗಾದರೆ ಏನಿದು ಯುಎಸ್‌ಎಸ್‌ಡಿ, ಯುಎಸ್‌ಎಸ್‌ಡಿ ನೋಂದಣಿಯನ್ನು ಹೇಗೆ ಮಾಡುವುದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂಟರ್‌ನೆಟ್ ಬ್ಯಾಂಕಿಂಗ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಈ ಸೇವೆಗೆ ಶುಲ್ಕ ಮನ್ನಾ ಮಾಡಿದ ಎಸ್‌ಬಿಐ: ಇಲ್ಲಿದೆ ವಿವರ

ಯುಎಸ್‌ಎಸ್‌ಡಿ ಎಂದರೇನು?

ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ ಅಥವಾ ಯುಎಸ್‌ಎಸ್‌ಡಿ ಎಸ್‌ಎಂಎಸ್‌ ಫೀಚರ್ ಅನ್ನು ಹೊಂದಿರುವ ಎಲ್ಲಾ ಮೊಬೈಲ್ ಸಾಧನಗಳಲ್ಲಿ ಇರುವ ತಂತ್ರಜ್ಞಾನವಾಗಿದೆ. ಇದನ್ನು ಸಾಮಾನ್ಯವಾಗಿ ಇತರ ಮೊಬೈಲ್ ಬ್ಯಾಂಕಿಂಗ್ ವಹಿವಾಟುಗಳಿಗೆ ಹಾಗೂ ಟಾಕ್ ಟೈಮ್ ಅಥವಾ ಖಾತೆಯ ಮಾಹಿತಿಯನ್ನು ಪರಿಶೀಲನೆ ಮಾಡಲು ಬಳಕೆ ಮಾಡಲಾಗುತ್ತದೆ.

SBI Positive Pay: ಎಸ್‌ಬಿಐ ನೆಟ್‌ ಬ್ಯಾಂಕಿಂಗ್‌ನಲ್ಲಿ ಅಧಿಕ ಮೊತ್ತದ ಚೆಕ್ ಸಲ್ಲಿಸುವುದು ಹೇಗೆ?SBI Positive Pay: ಎಸ್‌ಬಿಐ ನೆಟ್‌ ಬ್ಯಾಂಕಿಂಗ್‌ನಲ್ಲಿ ಅಧಿಕ ಮೊತ್ತದ ಚೆಕ್ ಸಲ್ಲಿಸುವುದು ಹೇಗೆ?

ಫೀಚರ್ ಫೋನ್‌ಗಳನ್ನು ಬಳಸುವವರಿಗೆ, ಯುಎಸ್‌ಎಸ್‌ಡಿ ತುಂಬಾ ಉಪಯುಕ್ತ ಫೀಚರ್ ಆಗಿದೆ. ರಾಷ್ಟ್ರದಲ್ಲಿ ಸುಮಾರು ಶೇಕಡ 65ರಷ್ಟು ಮಂದಿ ಮೊಬೈಲ್ ಫೋನ್‌ ಅನ್ನು ಬಳಕೆ ಮಾಡುತ್ತಾರೆ ಎಂಬುವುದು ಗಮನಾರ್ಹ ವಿಚಾರವಾಗಿದೆ. ಸೇವೆಯನ್ನು ಪಡೆಯಲು, ಎಸ್‌ಬಿಐ ಗ್ರಾಹಕರು ಕೇವಲ *99# ಅನ್ನು ಡಯಲ್ ಮಾಡಬೇಕಾಗುತ್ತದೆ. ಸೇವೆಯು ಸಂಪೂರ್ಣವಾಗಿ ಉಚಿತವಾಗಿದೆ.

ಯುಎಸ್‌ಎಸ್‌ಡಿ ನೋಂದಣಿ ಪ್ರಕ್ರಿಯೆ

ಹಂತ 1: ಎಸ್‌ಬಿಐ ಗ್ರಾಹಕರು 9223440000 ಸಂಖ್ಯೆಗೆ hi ಎಂದು ಕಳುಹಿಸಬೇಕು
ಹಂತ 2: ಯೂಸರ್ ಐಡಿ ಡೀಫಾಲ್ಟ್ MPIN ಅನ್ನು ಶೀಘ್ರದಲ್ಲೇ ಕಳುಹಿಸಲಾಗುತ್ತದೆ
ಹಂತ 3: *595# ಅನ್ನು ಡಯಲ್ ಮಾಡುವ ಮೂಲಕ ಡೀಫಾಲ್ಟ್ MPIN ಅನ್ನು ಬದಲಾಯಿಸಿ

ನೀವು ಎಟಿಎಂನಲ್ಲಿಯೂ ಯುಎಸ್‌ಎಸ್‌ಡಿ ನೋಂದಣಿ ಮಾಡಬಹುದು. ಅದಕ್ಕಾಗಿ ಎಟಿಎಂಗೆ ಭೇಟಿ ನೀಡಬೇಕು. ನಿಮ್ಮ ಡೆಬಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿ. mobile registration > mobile banking > Registration > ಅನ್ನು ಆಯ್ಕೆ ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ದೃಢೀಕರಿಸಿ.

ಇಂಟರ್ನೆಟ್ ಬ್ಯಾಂಕಿಂಗ್: ನಿಮ್ಮ ಎಸ್‌ಬಿಐ ಖಾತೆಗೆ ಲಾಗ್ ಇನ್ ಮಾಡಿ eServices ಆಯ್ಕೆ ಮಾಡಿ. ಬಳಿಕ Registration ಆಯ್ಕೆ ಮಾಡಿ. ಯೂಸರ್ ಐಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಸಕ್ರಿಯಗೊಳಿಸಲು ಖಾತೆಯನ್ನು (ಕೇವಲ SB/ CA) ಆಯ್ಕೆಮಾಡಿ submit ಮೇಲೆ ಕ್ಲಿಕ್ ಮಾಡಿ

English summary

SBI waives SMS charges on mobile fund transfers, Here's Details in Kannada

The State Bank of India (SBI) has announced that SMS fees for mobile fund transfers will no longer apply. Here's Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X