ಇದು ಡಿಜಿಟಲ್ ಯುಗವಾಗಿದೆ. ನಮ್ಮ ಎಲ್ಲ ಹಣಕಾಸು ಎಷ್ಟು ಸುಲಭ ಹಾಗೂ ಸರಳವಾಗಿದೆ ಎಂದರೆ ನಾವು ಬರೀ ಒಂದು ಕ್ಲಿಕ್‌ನಲ್ಲೇ ನಮ್ಮ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾವಣೆ ಮಾಡಬಹುದಾಗಿದೆ. ಆದರೆ ಇದರಿಂದಾಗಿ ರಿಸ್ಕ್ ಕೂಡಾ ಹೆಚ್ಚಾಗುತ್ತಿದೆ. ದಿನ ಕಳೆದಂತೆ ಡಿಜಿಟಲ್/ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಾ ಸಾಗಗುತ್ತಿದೆ. ಈ ವಂಚನೆಗೆ ಒಳಗಾಗುವುದಕ್ಕೂ ಮುನ್ನ ನೀವು ಈ ಸುದ್ದಿಯನ್ನು ಓದಿ.
ನೀವು ನಂಬಿಕಾರ್ಹವಲ್ಲದ ವೆಬ್‌ಸೈಟ್‌ಗಳಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತೀರಾ ಅಥವಾ ಎಲ್ಲೆದ್ದರಲ್ಲಿ ನಿಮ್ಮ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಸಲ್ಲಿಸುತ್ತೀರಾ?. ಹಾಗಿದ್ದಲ್ಲಿ ನೀವು ಖಂಡಿತವಾಗಿಯೂ ಈ ಸುದ್ದಿಯನ್ನು ಓದಲೇ ಬೇಕಾಗುತ್ತದೆ. ಇತ್ತೀಚೆಗೆ ಹೆಚ್ಚಾಗಿ ಆನ್‌ಲೈನ್ ವಂಚನೆಗಳು ನಡೆಯುತ್ತದೆ. ಹಾಗಿರುವಾಗ ನೀವು ಹಣವನ್ನು ಉಳಿತಾಯ ಮಾಡುವುದು ಹೇಗೆ ಎಂಬ ಟಿಪ್ಸ್ ಇಲ್ಲಿದೆ ಮುಂದೆ ಓದಿ....

ಸ್ಟೋರ್ ವೆರಿಫೈ ಆದ ಆಪ್‌ಗಳನ್ನು ಮಾತ್ರ ಬಳಸಿ
ನಾವು ಎಂದಿಗೂ ಕೂಡಾ ಯಾವುದೇ ಆಪ್‌ಗಳನ್ನು ಡೌನ್‌ಲೋಡ್ ಮಾಡುವಾಗ ಪ್ಲೇಸ್ಟೋರ್‌ನಿಂದ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಮಾಡಿಕೊಳ್ಳಿ. ನೀವು ಅನಧಿಕೃತ ವೆಬ್‌ಸೈಟ್‌ನಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಅಪಾಯ ತಪ್ಪಿಪ್ಪಲ್ಲ. ಅನಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿದರೆ ಅದು ಎಂದಿಗೂ ಕೂಡಾ ಸುರಕ್ಷಿತವಲ್ಲ. ಯಾವುದೇ ಅನಧಿಕೃತ ವೆಬ್‌ಸೈಟ್‌ನಿಂದ ತಪ್ಪಿ ಆಪ್ ಡೌನ್‌ಲೋಡ್ ಆದರೆ ಕೂಡಲೇ ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ.
ಅತೀ ಅಧಿಕ ಲಾಭವನ್ನು ನೀಡುವ ಆಫರ್‌ಗಳ ಬಗ್ಗೆ ಜಾಗರೂಕರಾಗಿರಿ!
ನಿಮಗೆ ಲಕ್ಷ ರೂಪಾಯಿ ಕೋಟಿ ರೂಪಾಯಿ ಬಹುಮಾನವಾಗಿ ಲಭ್ಯವಾಗಿದೆ ಎಂದು ಯಾವುದೇ ಸಂದೇಶಗಳು ಬಂದರೆ ಅದು ನಿಜವೆಂದು ಎಂದಿಗೂ ನಂಬಬೇಡಿ. ಇಂತಹ ಸುದ್ದಿಗಳು ಎಂದಿಗೂ ಕೂಡಾ ಸುಳ್ಳು ಸುದ್ದಿಗಳಾಗಿರುತ್ತದೆ. ನಿಮಗೆ ಲಾಭವಿಲ್ಲದೆ ಸುಖಾಸುಮ್ಮನೆ ಹಣವನ್ನು ಯಾರು ನೀಡಲು ಬಯಸುತ್ತಾರೆ ಎಂದು ಒಮ್ಮೆ ಆಲೋಚನೆ ಮಾಡಿ. ಇಂತಹ ಮೆಜೇಸ್‌ಗಳು ವಂಚನೆ ಆಗಿರಬಹುದು. ನೀವು ಇಂತಹ ಮೆಸೇಜ್‌ಗಳು, ಇಮೇಲ್‌ಗಳು ಅಧಿಕೃತವೇ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ನಿಮಗೆ ಮಾಹಿತಿ ಇಲ್ಲದೆಯೇ ಹೂಡಿಕೆ ಮಾಡದಿರಿ
ನಾವು ನಮ್ಮ ಭವಿಷ್ಯದ ಸುರಕ್ಷತೆಗಾಗಿ ಈಗಲೇ ಹೂಡಿಕೆ ಮಾಡುವುದು ಸಾಮಾನ್ಯ. ಆದರೆ ಹೂಡಿಕೆ ಮಾಡುವಾಗ ನಾವು ಮಾಡುವ ಹೂಡಿಕೆ ಎಷ್ಟು ಸುರಕ್ಷಿತವಾಗಿರುತ್ತದೆ ಎಂದು ನೋಡುವುದು ಮುಖ್ಯವಾಗುತ್ತದೆ. ನಿಮಗೆ ಹೂಡಿಕೆ ಆಯ್ಕೆಯ ಬಗ್ಗೆ ಇಮೇಲ್ ಅಥವಾ ಮಸೇಜ್ ಬಂದರೆ, ಜಾಗರೂಕರಾಗಿರುವುದು ಅತೀ ಮುಖ್ಯವಾಗುತ್ತದೆ. ಅದರು ವಂಚನೆಯ ಕರೆ ಅಥವಾ ಮೆಸೇಜ್ ಆಗಿರಬಹುದು. ನೀವು ಅಧಿಕೃತವೆಂದು ತಿಳಿದಿರುವ ಸ್ಥಳಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು.
ಯಾರೊಂದಿಗೂ ನಿಮ್ಮ ಖಾಸಗಿ ಡೇಟಾ ಹಂಚದಿರಿ
ಆನ್‌ಲೈನ್‌ನಲ್ಲಿ ಆಗಲಿ ಅಥವಾ ಆಫ್‌ಲೈನ್‌ನಲ್ಲಿ ಆಗಲಿ ಎಂದಿಗೂ ಕೂಡಾ ನಿಮ್ಮ ಖಾಗಿ ಮಾಹಿತಿಯನ್ನು ನೀವು ಹಂಚಬೇಡಿ. ಕರೆ ಮಾಡಿ ನಿಮ್ಮಲ್ಲಿ ಒಟಿಪಿ, ಇತರೆ ಮಾಹಿತಿಯನ್ನು ಕೇಳಿದಾಗ ಅದನ್ನು ಹಂಚಿಕೊಳ್ಳಬೇಡಿ. ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯಲ್ಲಿ ಕಾರ್ಯನಿರ್ವಾಹಕರಾಗಿ ಇರುವವರು ಎಂದಿಗೂ ಕೂಡಾ ಕರೆ ಮಾಡಿ ನಿಮ್ಮಲ್ಲಿ ಮಾಹಿತಿಯನ್ನು ಕೇಳುವುದಿಲ್ಲ. ಯಾರ ಗುರುತನ್ನು ಕೂಡಾ ಪರಿಶೀಲನೆ ಮಾಡಿ ನಿಮ್ಮ ಹಣಕಾಸಿನ ಮಾಹಿತಿಯನ್ನು ನೀಡಬೇಡಿ.
ಸುರಕ್ಷಿತ ವೈಫೈ ಕನೆಕ್ಷನ್ ಅನ್ನು ಬಳಸಿಕೊಳ್ಳಿ
ನೀವು ಎಂದಿಗೂ ಕೂಡಾ ಹೊರಗಿನ ವೈಫೈ ಅನ್ನು ಬಳಸುವಾಗ ಜಾಗರೂಕರಾಗಿರುವುದು ಅತೀ ಮುಖ್ಯವಾಗಿದೆ. ಕೆಫೆ, ಹೋಟೆಲ್ ಲಾಬಿ ಅಥವಾ ವಿಮಾನ ನಿಲ್ದಾಣದಲ್ಲಿ ಉಚಿತ ವೈಫೈ ಅನ್ನು ಬಳಸಿಕೊಳ್ಳುವ ಬಯಕೆಯಿಂದ ವಂಚನೆಗೆ ಒಳಗಾಗಬೇಡಿ. ಹಣಕಾಸಿನ ವಹಿವಾಟುಗಳನ್ನು ನಡೆಸುವಾಗ ಎಂದಿಗೂ ಸಾರ್ವಜನಿಕ ಹಾಟ್‌ಸ್ಪಾಟ್‌ಗಳನ್ನು ಬಳಕೆ ಮಾಡಬೇಡಿ.


Click it and Unblock the Notifications