ವಂಚಕರು, ಸ್ಕ್ಯಾಮರ್‌ಗಳು ಜನರ ಹಣವನ್ನು ಎಗರಿಸಲು, ವಂಚನೆಯನ್ನು ಮಾಡಲು ದಿನದಿಂದ ದಿನಕ್ಕೆ ಹೊಸ ಹೊಸ ಮಾರ್ಗವನ್ನು ಹುಡುಕುತ್ತಾ ಬರುತ್ತಿದ್ದಾರೆ. ಇತ್ತೀಚಿಗೆ ಅಪಾಯಕಾರಿ ಮಾರ್ಗವನ್ನು ವಂಚಕರು ಕಂಡುಕೊಂಡಿದ್ದಾರೆ. ನಕಲಿ ವಿದ್ಯುತ್ ಬಿಲ್‌ಗಳನ್ನು ಪಾವತಿಸುವಂತೆ ಹೇಳಿ, ಜನರನ್ನು ಮೋಸಗೊಳಿಸಲಾಗುತ್ತಿದೆ.
ವಿದ್ಯುತ್ ಇಲಾಖೆಯವರೆಂದು ತಮ್ಮನ್ನು ತಾವು ಹೇಳಿಕೊಂಡು ಫೋನ್ ಹ್ಯಾಕ್ ಮಾಡಿ ಸಂದೇಶ ಕಳುಹಿಸುತ್ತಾರೆ. ಈ ಸಂದೇಶಗಳು ನೀವು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಹೇಳುತ್ತವೆ. ಹಾಗೆಯೇ ತಕ್ಷಣ ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ, ನಿಮ್ಮ ವಿದ್ಯುತ್ ಕಡಿತಗೊಳಿಸಲಾಗುವುದು ಕೂಡಾ ಈ ಸಂದೇಶದಲ್ಲಿ ತಿಳಿಸಲಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಈ ಸ್ಕ್ಯಾಮರ್‌ಗಳಿಂದ ಸುರಕ್ಷಿತವಾಗಿರುವುದು ಹೇಗೆ?
1. ಮೂಲವನ್ನು ಪರಿಶೀಲಿಸಿ: ಆನ್‌ಲೈನ್ ಬಿಲ್ ಪಾವತಿಗಳಿಗಾಗಿ ನಿಜವಾದ ವಿದ್ಯುತ್ ಪೂರೈಕೆದಾರರು ಒದಗಿಸಿದ ಅಧಿಕೃತ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಿ.
2. ಯುಆರ್‌ಎಲ್‌ಗಳನ್ನು ಪರಿಶೀಲಿಸಿ: ಯಾವುದೇ ಆನ್‌ಲೈನ್ ಪಾವತಿ ಮಾಡುವ ಮೊದಲು, ವೆಬ್‌ಸೈಟ್‌ನ ಯುಆರ್‌ಎಲ್ https://” ರಿಂದ ಆರಂಭವಾಗುತ್ತದೆಯೇ ಎಂದುನೋಡಿಕೊಳ್ಳಿ. ಹಾಗೆಯೇ ಪ್ಯಾಡ್‌ಲಾಕ್ ಚಿಹ್ನೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ಸುರಕ್ಷಿತ ಸಂಪರ್ಕವನ್ನು ಸೂಚಿಸುತ್ತದೆ.
3. ಪಾವತಿ ವಿನಂತಿಗಳನ್ನು ಪರಿಶೀಲಿಸಿ: ಪಾವತಿ ವಿನಂತಿಗಳು ಮತ್ತು ಕಳುಹಿಸುವವರ ಮಾಹಿತಿಯನ್ನು ಎರಡು ಬಾರಿ ಪರಿಶೀಲಿಸಿ. ತುರ್ತು ಪಾವತಿ ಬೇಡಿಕೆಗಳು ಅಥವಾ ಅನುಮಾನಾಸ್ಪದ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ.
4. ಅಧಿಕೃತ ಅಪ್ಲಿಕೇಶನ್‌ಗಳನ್ನು ಬಳಸಿ: ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳಂತಹ ವಿಶ್ವಾಸಾರ್ಹ ಮೂಲಗಳಿಂದ ಯುಪಿಐ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
ವಂಚನೆಗೆ ಒಳಗಾದರೆ ಏನು ಮಾಡುವುದು?
1. ಯುಪಿಐ ಪಾವತಿ ಅಪ್ಲಿಕೇಶನ್‌ಗಳು: ನೀವು ವಂಚನೆಗೆ ಒಳಗಾದ ಅನುಮಾನ ಬಂದರೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮತ್ತು ಇತರ ಯುಪಿಐ ಪಾವತಿ ಅಪ್ಲಿಕೇಶನ್‌ಗಳ ಸಹಾಯ ವಿಭಾಗಕ್ಕೆ ಹೋಗಿ. "ವ್ಯವಹಾರದಲ್ಲಿ ಸಮಸ್ಯೆ ಇದೆ" (have an issue with the transaction) ಎಂಬುವುದರಡಿಯಲ್ಲಿ ವರದಿ ಮಾಡಿ.
2. ಗ್ರಾಹಕ ಸೇವಾ ಸಂಖ್ಯೆ: ಸಮಸ್ಯೆಯನ್ನು ವರದಿ ಮಾಡಲು ಯುಪಿಐ ಪಾವತಿ ಅಪ್ಲಿಕೇಶನ್‌ಗಳ ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಿ. ಗ್ರಾಹಕ ಸೇವೆಯು ಟಿಕೆಟ್ ಅನ್ನು ಸಂಗ್ರಹಿಸಲು ಮತ್ತು ಸಮಸ್ಯೆಯನ್ನು ಪರಿಹರಿಸಲು ನಿಮಗೆ ಸಹಾಯ ಮಾಡುತ್ತದೆ.
3. ವೆಬ್‌ಫಾರ್ಮ್ ಸಲ್ಲಿಕೆ: ಹಗರಣವನ್ನು ವರದಿ ಮಾಡಲು ಮತ್ತು ಟಿಕೆಟ್ ಸಂಗ್ರಹಿಸಲು ಫೋನ್‌ಪೇನ ವೆಬ್‌ಫಾರ್ಮ್ ಅನ್ನು ಬಳಸಿ.
4. ಸಾಮಾಜಿಕ ಮಾಧ್ಯಮ ರಿಪೋರ್ಟಿಂಗ್: ಫೋನ್‌ಪೇನ ಅಧಿಕೃತ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಹ್ಯಾಂಡಲ್‌ಗಳ ಮೂಲಕ ಮೋಸದ ಬಗ್ಗೆ ವರದಿಯನ್ನು ಮಾಡಿ.
5. ಕುಂದುಕೊರತೆ ವರದಿ: ನೀವು ಹಿಂದಿನ ದೂರನ್ನು ಹೊಂದಿದ್ದರೆ, ಲಾಗ್ ಇನ್ ಮಾಡಿ ಮತ್ತು ಕುಂದುಕೊರತೆಯನ್ನು ವರದಿ ಮಾಡಲು ಟಿಕೆಟ್ ಐಡಿಯನ್ನು ಹಂಚಿಕೊಳ್ಳಿ.
6. ಸೈಬರ್ ಕ್ರೈಮ್ ಸೆಲ್: ಉಳಿದೆಲ್ಲವೂ ವಿಫಲವಾದರೆ, ವಂಚನೆಯನ್ನು ಹತ್ತಿರದ ಸೈಬರ್ ಕ್ರೈಮ್ ಸೆಲ್‌ಗೆ ರಿಪೋರ್ಟ್ ಮಾಡಿ ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ದೂರು ಸಲ್ಲಿಸಿ. ಸಹಾಯಕ್ಕಾಗಿ ನೀವು ಸೈಬರ್ ಕ್ರೈಮ್ ಸೆಲ್ ಸಹಾಯವಾಣಿ 1930 ಗೆ ಕರೆ ಮಾಡಬಹುದು.
ನೆನಪಿಡಿ, ಜಾಗರೂಕರಾಗಿರಿ ಮತ್ತು ವಂಚನೆಗಳಿಗೆ ಬಲಿಯಾಗದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು, ಈ ಮೇಲಿನ ಹಂತಗಳನ್ನು ಅನುಸರಿಸಿ. ನಿಮ್ಮ ವಿದ್ಯುತ್ ಬಿಲ್‌ಗಳನ್ನು ಆನ್‌ಲೈನ್‌ನಲ್ಲಿ ಪಾವತಿಸುವಾಗ ಸುರಕ್ಷಿತವಾಗಿರಿ!


Click it and Unblock the Notifications