ನಿಮ್ಮಗೆ ವಯಸ್ಸು 60 ವರ್ಷ ಆಗಿದ್ದೀಯಾ..? ಮುಂದಿನ ಜೀವನ ಏನು ಆಗುತ್ತದೆ ಎಮವ ಚಿಂತೆ ನಿಮ್ಮ ಕಾಡುತ್ತಿದ್ದರೆ ಈ ಕೂಡಲೇ ತೆಗೆದು ಹಾಕಿ ಯಾಕೆಂದರೆ ಹಿರಿಯ ನಾಗರಿಕರಿಗೆ ವಿವಿಧ ಬ್ಯಾಕಿನಲ್ಲಿ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ.

ಹೌದು, ಹಿರಿಯ ನಾಗರಿಕರಿಕರಿಗೆ ವಯಸ್ಸು ಆದ ನಂತರ ಸ್ಥಿರ ಆದಾಯವನ್ನು ನೀಡಲು ದೇಶದ ವಿವಿಧ ಎಫ್‌ಡಿ ಯೋಜನೆಗಳು ತಮ್ಮ ಬಡ್ಡಿದರಗಳನ್ನು ಪರಿಷ್ಕರಿಸಿವೆ.60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ. ಭಾರತದ ಪ್ರಮುಖ ಬ್ಯಾಂಕುಗಳಾದ SBI, PNB, HDFC, ಮತ್ತು ICICI ಗಳು ನೀಡುವ FD ಗಳನ್ನು ಮತ್ತು ಹಿರಿಯ ನಾಗರಿಕರಿಗೆ ನೀಡುವ ಬಡ್ಡಿದರಗಳು ಎಷ್ಟು..? ಈ ಬ್ಯಾಂಕುಗಳಲ್ಲಿ ಒಂದರಿಂದ ಐದು ವರ್ಷಗಳ ಅವಧಿಗೆ FD ಯಲ್ಲಿ11,50,000 ರೂ ಠೇವಣಿ ಇಡುವ ಮೂಲಕ ಪಡೆಯಬಹುದಾದ ಮೆಚ್ಯೂರಿಟಿ ಮೊತ್ತವನ್ನು ಎಷ್ಟಾಗಬಹುದು ಎಂಬ ಹೆಚ್ಚಿನ ವಿವರ ಇಲ್ಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)
1 ವರ್ಷದ ಎಫ್‌ಡಿ: ಶೇ 6.75 ಬಡ್ಡಿ ದರ
3 ವರ್ಷದ ಎಫ್‌ಡಿ: ಶೇ. 6.80 ಬಡ್ಡಿ ದರ
5 ವರ್ಷದ ಎಫ್‌ಡಿ: ಶೇ. 7.05% ಬಡ್ಡಿ ದರ
ಹಿರಿಯ ನಾಗರಿಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಂದು ವರ್ಷದ ಎಫ್‌ಡಿಯಲ್ಲಿ 11,50,000 ರೂ.ಗಳನ್ನು ಹೂಡಿಕೆ ಮಾಡಿದರೆ, ಅವರಿಗೆ ಎಫ್‌ಡಿ ಮುಕ್ತಾಯದ ವೇಳೆಯಲ್ಲಿ 12,29,612 ರೂ.ಗಳು. ಸಿಗುತ್ತದೆ. ಅದೇ ಎಫ್‌ಡಿ ಹೂಡಿಕೆಯನ್ನು 3 ವರ್ಷಗಳವರೆಗೂ ಮುಂದುವರೆಸಿದ್ದರೆ ಅದು 14,07,826 ರೂ.ಗಳು ಮತ್ತು 5 ವರ್ಷಗಳಳವರೆಹೂ ಇಟ್ಟರೆ ಅದು 16,30,997 ರೂ.ಗಳಷ್ಟು ಲಾಭವನ್ನು ತಂದುಕೊಂಡುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
1 ವರ್ಷದ ಎಫ್‌ಡಿ: ಶೇ.6.90 ಬಡ್ಡಿ ದರ
3 ವರ್ಷದ ಎಫ್‌ಡಿ: ಶೇ.6.90 ಬಡ್ಡಿ ದರ
5 ವರ್ಷದ ಎಫ್‌ಡಿ: ಶೇ 7 ಬಡ್ಡಿ ದರ
ಹಿರಿಯ ನಾಗರಿಕರು ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಒಂದು ವರ್ಷದ ಎಫ್‌ಡಿಯಲ್ಲಿ 11,50,000 ರೂ.ಗಳನ್ನು ಠೇವಣಿ ಮಾಡಿದರೆ, ಅವರಿಗೆ ಅವಧಿ ಮುಕ್ತಾಯದ ಸಮಯದಲ್ಲಿ 12,31,426 ರೂ.ಗಳು ಸಿಗುತ್ತವೆ. ಆದರೆ, ಅವರು ಅದೇ ಮೊತ್ತವನ್ನು 3 ವರ್ಷಗಳವರೆಗೆ ಠೇವಣಿ ಇಟ್ಟರೆ, ಅವರಿಗೆ 14,11,985 ರೂ.ಗಳು ಮತ್ತು 5 ವರ್ಷಗಳವರೆಗೆ ಠೇವಣಿ ಇಟ್ಟರೆ, ಅವಧಿ ಮುಕ್ತಾಯದ ಸಮಯದಲ್ಲಿ 16,26,994 ರೂ.ಗಳು ಸಿಗುತ್ತವೆ.
ಐಸಿಐಸಿಐ ಬ್ಯಾಂಕ್
1 ವರ್ಷದ ಎಫ್‌ಡಿ: ಶೇ. 6.75 ಬಡ್ಡಿ ದರ
3 ವರ್ಷದ ಎಫ್‌ಡಿ: ಶೇ.7.10 ಬಡ್ಡಿ ದರ
5 ವರ್ಷದ ಎಫ್‌ಡಿ: ಶೇ .7.10 ಬಡ್ಡಿ ದರ
ಹಿರಿಯ ನಾಗರಿಕರು ಐಸಿಐಸಿಐ ಬ್ಯಾಂಕ್ ಎಫ್‌ಡಿಯಲ್ಲಿ 11,50,000 ರೂ. ಹೂಡಿಕೆ ಮಾಡಿದರೆ, ಒಂದು ವರ್ಷದ ನಂತರ ಅವರಿಗೆ 12,29,612 ರೂ. ಮೆಚ್ಯೂರಿಟಿ ಮೊತ್ತ ಸಿಗುತ್ತದೆ. ಆದಾಗ್ಯೂ, ಈ ಹೂಡಿಕೆಯನ್ನು 3 ವರ್ಷಗಳವರೆಗೆ ಮುಂದುವರಿಸಿದರೆ, ಮೆಚ್ಯೂರಿಟಿ ಮೊತ್ತವು 14,20,336 ರೂ. ಆಗಿರುತ್ತದೆ ಮತ್ತು ಐದು ವರ್ಷಗಳಲ್ಲಿ, ನಿಮ್ಮ ಹೂಡಿಕೆಯು 16,35,008 ರೂ. ನಿಮ್ಮಹೆ ಸಿಗುತ್ತದೆ.
HDFC ಬ್ಯಾಂಕ್
1 ವರ್ಷದ ಎಫ್‌ಡಿ: ಶೇ. 6.75 ಬಡ್ಡಿ ದರ
3 ವರ್ಷದ ಎಫ್‌ಡಿ: ಶೇ. 6.95 ಬಡ್ಡಿ ದರ
5 ವರ್ಷದ ಎಫ್‌ಡಿ: ಶೇ.6.90 ಬಡ್ಡಿ ದರ
ಹಿರಿಯ ನಾಗರಿಕರು HDFC ಬ್ಯಾಂಕಿನ 1 ವರ್ಷದ FD ಯಲ್ಲಿ 11,50,000 ರೂ.ಗಳನ್ನು ಹೂಡಿಕೆ ಮಾಡಿದರೆ, ಅವರಿಗೆ ಅವಧಿ ಮುಗಿದಾಗ 12,29,612 ರೂ.ಗಳು ಸಿಗುತ್ತವೆ. ಅದೇ ಮೊತ್ತವನ್ನು 3 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಅದು 14,14,069 ರೂ.ಗಳಿಗೆ ಬೆಳೆಯುತ್ತದೆ ಮತ್ತು ಐದು ವರ್ಷಗಳಲ್ಲಿ ಅದು 16,19,019 ರೂ.ಗಳಿಗೆ ಲಾಭವನ್ನು ನೀಡುತ್ತದೆ.
ಈ 4 ಬ್ಯಾಂಕುಗಳಲ್ಲಿ, ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕರಿಗೆ ಎಫ್‌ಡಿಗಳ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ.


Click it and Unblock the Notifications