High FD Rates for Senior Citizens: ನಾವು ದುಡಿಯುವ ಹಣ ಇತ್ತೀಚಿನ ಖರ್ಚು-ವೆಚ್ಚಗಳನ್ನು ಹೋಲಿಸಿದರೆ ಯಾವುದಕ್ಕೂ ಸಾಲುವುದೇ ಇಲ್ಲ. ಇನ್ನೂ ಕೆಲಸ ಬಿಟ್ಟು ಮನೆಯಲ್ಲಿ ಕೂತರೆ ಮುಂದೇನು ಕಥೆ ಎಂದು ಚಿಂತೆಯನ್ನು ಮಾಡುತ್ತಿದ್ಧೀರಾ...? ಹಾಗಿದ್ದರೆ ನೀವು ಭಯಪಡಯವಂತಹ ಅಗತ್ಯವಿಲ್ಲ. ಯಾಕೆಂದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾ ಆಗಿರುವ ಹಿರಿಯನಾಗರಿಕರಿಗಾಗಿ ವಿವಿಧ ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುವ ಎಫ್‌ಡಿಗಳನ್ನು ಜಾರಿಗೆ ತಂದಿದೆ. ನೀವು ದುಡಿಯುವ ಸಮಯದಲ್ಲೇ ಉಳಿತಾಯ ಮಾಡಿ ಈ ಬ್ಯಾಂಕ್‌ಗಳಲ್ಲಿ ಹಣವನ್ನು ಇಟ್ರೆ ಸುರಕ್ಷಿತ ಹೂಡಿಕೆಯ ಜೊತೆಗೆ ಹೆಚ್ಚಿನ ಆದಾಯ ಸಿಗುತ್ತದೆ.ಯಾವ ಬ್ಯಂಕ್‌ಗಳಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ..? ನಿಮ್ಮ ಬದುಕನ್ನು ಆರ್ಥೀಕವಾಗಿ ಭದ್ರ ಮಾಡಿಕೊಳ್ಳವುದು ಹೇಗೆ ಎಂಬುವುದನ್ನು ಈ ಲೇಖನದಲ್ಲಿ ಪೂರ್ತಿ ತಿಳಿಯಿರಿ.

ಹೌದು, ಫಿಕ್ಸಡ್ ಡೆಪಾಸಿಟ್ ಎಂಬುವುದು ಎಂದೆಂದಿಗೂ ಸಹಾಯಕವಾಗುವ ಆರ್ಥಿಕ ನಿಧಿ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೋ ದರವನ್ನು ಕಡಿತದ ನಂತರ ಕೆಲವು ಬ್ಯಾಂಕ್‌ಗಳು ತಮ್ಮ ಫಿಕ್ಸಡ್ ಡೆಪಾಸಿಟ್‌ಗಳ ಬಡ್ಡಿದರದವನ್ನು ಇಳಿಕೆ ಮಾಡಿವೆ. ನೀವು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಮತ್ತು ನಿಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸಿದರೆ, ನಿಮ್ಮಗೆ ಈ ಮಾಹಿತಿ ಹೆಚ್ಚಿನ ಉಪಯೋಹವಾಗುತ್ತದೆ ಯಾಕೆಂದರೆ ದೇಶದ ಕೆಲವು ಸಣ್ಣ ಹಣಕಾಸು ಬ್ಯಾಂಕುಗಳು (SFB ಗಳು) ಇನ್ನೂ ಸ್ಥಿರ ಠೇವಣಿ (FD) ಮೇಲೆ ಶೇ. 8ಕ್ಕಿಂತ ಹೆಚ್ಚಿನ ಬಡ್ಡಿದರವನ್ನು ನೀಡುತ್ತಿವೆ, ಇದು ಯಾವುದೇ ಸಾಂಪ್ರದಾಯಿಕ ಬ್ಯಾಂಕ್‌ಗಿಂತ ಹೆಚ್ಚಿನದಾಗಿದೆ.
ಸೂರ್ಯೋದಯ ಸಣ್ಣ ಹಣಕಾಸು ಬ್ಯಾಂಕ್
ಸೂರ್ಯೋದಯ ಸಣ್ಣ ಹಣಕಾಸು ಬ್ಯಾಂಕ್ ನಿಮ್ಮಗೆ ಅತಿ ಹೆಚ್ಚು ಲಾಭವನ್ನು ನೀಡುತ್ತಿದೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 3 ವರ್ಷಗಳ ಎಫ್‌ಡಿಗಳ ಮೇಲೆ ಶೇ. 8.80 ಬಡ್ಡಿಯನ್ನು ನೀಡುತ್ತಿರುವ ಕೆಲವೇ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಈ ದರವು 3 ಕೋಟಿ ರೂ.ಗಳವರೆಗಿನ ಎಫ್‌ಡಿಗಳಿಗೂ ಅನ್ವಯವಾಗುತ್ತದೆ,
ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್
ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್ ಕೂಡ ದೊಡ್ಡ ಪ್ರಯೋಜನಗಳನ್ನು ನೀಡುತ್ತಿದೆ. ನೀವು ಉತ್ತರ ಭಾರತದಲ್ಲಿ ವಾಸಿಸುತ್ತಿದ್ದರೆ, ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ಉತ್ತಮ ಆಯ್ಕೆಯಾಗಿರಬಹುದು. ಈ ಬ್ಯಾಂಕ್ 3 ವರ್ಷಗಳ ಅವಧಿಗೆ ಶೇ. 8.75 ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ ಇದು ಹಿರಿಯ ನಾಗರಿಕರಿಗೆ ಸ್ಥಿರ ಮತ್ತು ಸುರಕ್ಷಿತ ಹೂಡಿಕೆ ಆಯ್ಕೆಯಾಗಿರಬಹುದು.
ಇತರ ಸಣ್ಣ ಹಣಕಾಸು ಬ್ಯಾಂಕುಗಳು
ಹಿರಿಯ ನಾಗರಿಕರಿಗೆ ಆದ್ಯತೆಯ ಎಫ್‌ಡಿ ದರಗಳನ್ನು ನೀಡುತ್ತಿವೆ.
ಬ್ಯಾಂಕ್ ಹೆಸರು ಮತ್ತು ಬಡ್ಡಿ ದರ (3 ವರ್ಷಗಳು) ವಿವರ ಈ ಕೆಳಗಿನಂತೆ ಇದೆ.
- ಸೂರ್ಯೋದಯ ಸಣ್ಣ ಹಣಕಾಸು ಬ್ಯಾಂಕ್ : ಶೇ. 8.80ರಷ್ಟು ಬಡ್ಡಿ
- ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್: ಶೇ. 8.75ರಷ್ಟು ಬಡ್ಡಿ
- ಯೂನಿಟಿ ಸಣ್ಣ ಹಣಕಾಸು ಬ್ಯಾಂಕ್: ಶೇ. 8.50ರಷ್ಟು ಬಡ್ಡಿ
- ಸ್ಲೈಸ್ ಸಣ್ಣ ಹಣಕಾಸು ಬ್ಯಾಂಕ್: ಶೇ.8.25ರಷ್ಟು ಬಡ್ಡಿ
- ಜನ ಸಣ್ಣ ಹಣಕಾಸು ಬ್ಯಾಂಕ್: ಶೇ. 8.25ರಷ್ಟು ಬಡ್ಡಿ
ಹೂಡಿಕೆ ಮಾಡುವ ಮೊದಲು ಈ ವಿಷಯಗಳನ್ನು ಪರಿಗಣಿಸಲು ಮರೆಯದಿರಿ ಈ FD ದರಗಳು ಉತ್ತಮವಾಗಿದ್ದರೂ, ಯಾವುದೇ ಬ್ಯಾಂಕಿನಲ್ಲಿ ಹೂಡಿಕೆ ಮಾಡುವ ಮೊದಲು ಕೆಲವು ಅಂಶಗಳನ್ನು ಪರಿಗಣಿಸುವುದು ಮುಖ್ಯ.
ಬ್ಯಾಂಕಿನ ಕ್ರೆಡಿಟ್ ರೇಟಿಂಗ್ ಏನು?
ಆ ಬ್ಯಾಂಕಿನಲ್ಲಿರುವ ನಿಮ್ಮ ಹಣವು DICGC ವಿಮೆಯಿಂದ ರಕ್ಷಿಸಲ್ಪಟ್ಟಿದೆಯೇ?
ಅಗತ್ಯವಿದ್ದರೆ ಅವಧಿಪೂರ್ವ ಹಿಂಪಡೆಯುವಿಕೆಯ ಸೌಲಭ್ಯ ಹೇಗೆ?
ಬ್ಯಾಂಕಿನ ದ್ರವ್ಯತೆ ಅಂದರೆ ಸಮಯಕ್ಕೆ ಸರಿಯಾಗಿ ಹಣವನ್ನು ಪಾವತಿಸುವ ಸಾಮರ್ಥ್ಯ ಹೇಗಿದೆ?
ಸ್ಥಿರ ಆದಾಯಕ್ಕೆ ಉತ್ತಮ ಆಯ್ಕೆ
ಷೇರು ಮಾರುಕಟ್ಟೆ ಯಾವಾಗ ಏನೋ ಬೇಕಾದರೂ ಆಗಬಹುದು.ಇತರ ಯೋಜನೆಗಳಲ್ಲಿ ಅಪಾಯ ಹೆಚ್ಚಿರುವ ಇಂದಿನ ಕಾಲದಲ್ಲಿ, ಹಿರಿಯ ನಾಗರಿಕರಿಗೆ ಎಫ್ ಡಿ ಸುರಕ್ಷಿತ ಆದಾಯದ ಮೂಲವಾಗಿವಾಗಿದೆ. ವಿಶೇಷವಾಗಿ ನೀವು ನಿವೃತ್ತರಾಗಿ ಮಾಸಿಕ ಆದಾಯದ ಮೂಲವನ್ನು ಹೊಂದಿಲ್ಲದಿದ್ದರೆ, ಅಂತಹ ಎಫ್ ಡಿ ಆಯ್ಕೆಗಳು ನಿಮ್ಮ ಆರ್ಥಿಕ ಜೀವನಕ್ಕೆ ಸ್ಥಿರತೆಯನ್ನು ಒದಗಿಸುತ್ತದೆ.


Click it and Unblock the Notifications