ಹಿರಿಯ ನಾಗರಿಕರಿಗೆ ಹಲವಾರು ಹೂಡಿಕೆ ಆಯ್ಕೆಗಳು ಇದೆ. ಆ ಪೈಕಿ ಕೆಲವು ಹೂಡಿಕೆಗಳು ಪ್ರಸಿದ್ಧ ಹೂಡಿಕೆಗಳಾಗಿದೆ. ಅದರಲ್ಲಿ ಪ್ರಮುಖವಾದುದ್ದು ಫಿಕ್ಸಿಡ್ ಡೆಪಾಸಿಟ್ ಹೂಡಿಕೆಯಾಗಿದೆ. ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಹಿರಿಯ ನಾಗರಿಕರಿಗೆ ಸುರಕ್ಷಿತ ಆಯ್ಕೆಯಾಗಿದೆ. ಷೇರು ಮಾರುಕಟ್ಟೆಯು ಏರಿಳಿತ ಕಾಣುತ್ತಿರುವಾಗ, ಹೂಡಿಕೆ ವಿಚಾರದಲ್ಲಿ ಹಲವಾರು ಅಪಾಯಗಳು ಇದೆ. ಹಾಗಿರುವಾಗ ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಉತ್ತಮ ಆಯ್ಕೆಯಾಗಿದೆ. ತುರ್ತು ಫಂಡ್ ಅನ್ನು ನಿರ್ವಹಣೆ ಮಾಡಲು ಬಯಸುವವರಿಗೆ ಈ ಎಫ್‌ಡಿ ಉತ್ತಮ ಹೂಡಿಕೆ ಆಯ್ಕೆ ಆಗಿದೆ.
ಬ್ಯಾಂಕ್‌ನ ಎಫ್‌ಡಿಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆದರೂ ಹಿರಿಯ ನಾಗರಿಕರಿಗೆ ಅತೀ ಕಡಿಮೆ ತೆರಿಗೆ ವಿಧಿಸಲಾಗುತ್ತದೆ. ಇದು ತೆರಿಗೆ ಹೊರೆ ಕಡಿಮೆಯಾಗಿಸುತ್ತದೆ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಸಿದೆ. ಇದಾದ ಬಳಿಕ ಕೆಲವು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರವನ್ನು ಹೆಚ್ಚಿಸುತ್ತಿದೆ. ಹಾಗೆಯೇ ಸಾಲದ ಬಡ್ಡಿದರವನ್ನು ಕೂಡಾ ಏರಿಸುತ್ತಿದೆ. ಹಾಗಿರುವಾಗ ಎಫ್‌ಡಿ ಬಡ್ಡಿದರ ಉತ್ತಮ ಆಯ್ಕೆಯಾಗಿದೆ.
ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತದೆ. ಸಾಮಾನ್ಯ ನಾಗರಿಕರಿಗಿಂತ 50 ಮೂಲಾಂಕ ಅಧಿಕ ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿದರವನ್ನು ನೀಡುವ ಬ್ಯಾಂಕ್‌ಗಳ ಪಟ್ಟಿಯನ್ನು ನಾವು ಆನ್‌ಲೈನ್‌ನಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಎಫ್‌ಡಿಯಲ್ಲಿ ಡೆಪಾಸಿಟ್ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ 5 ಲಕ್ಷ ರೂಪಾಯಿ ಆಗಿದೆ.
ಬಂಧನ್ ಬ್ಯಾಂಕ್, ಇತರೆ
ಬಂಧನ್ ಬ್ಯಾಂಕ್ 600 ದಿನಗಳ (1 ವರ್ಷ, 7 ತಿಂಗಳು, 22 ದಿನಗಳ) ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಶೇಕಡ 8.50ರಷ್ಟು ಬಡ್ಡಿದರವನ್ನು ನೀಡುತ್ತದೆ. ಯೆಸ್ ಬ್ಯಾಂಕ್ 35 ತಿಂಗಳ ಮತ್ತು 25 ತಿಂಗಳ ಎಫ್‌ಡಿ ಮೇಲೆ ಕ್ರಮವಾಗಿ ಶೇಕಡ 8.25 ಮತ್ತು ಶೇಕಡ 8.00ರಷ್ಟು ಬಡ್ಡಿದರವನ್ನು ನೀಡುತ್ತದೆ. ಆಕ್ಸಿಸ್ ಬ್ಯಾಂಕ್ 2 ವರ್ಷ < 30 ತಿಂಗಳ ಎಫ್‌ಡಿ ಮೇಲೆ ಶೇಕಡ 8.01ರಷ್ಟು ಬಡ್ಡಿದರ ನೀಡುತ್ತದೆ. ಈ ಸಂದರ್ಭದಲ್ಲೇ ಐಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 18 ತಿಂಗಳು 1 ದಿನ-3 ವರ್ಷ (549ದಿನದಿಂದ 3 ವರ್ಷ) ಎಫ್‌ಡಿ ಮೇಲೆ ಶೇಕಡ 8.00ರಷ್ಟು ಬಡ್ಡಿದರ ನೀಡುತ್ತದೆ.
ಇಂಡಸ್‌ಇಂಡ್ ಬ್ಯಾಂಕ್, ಇತರೆ
ಇಂಡಸ್‌ಇಂಡ್ ಬ್ಯಾಂಕ್ ಹಿರಿಯ ನಾಗರಿಕರಿಗೆ ನೀಡುವ ಬಡ್ಡಿದರವು ಹೂಡಿಕೆಯ ಅವಧಿಯ ಮೇಲೆ ನಿರ್ಧರಿತವಾಗಿದೆ. ಶೇಕಡ 8.25ರಿಂದ ಶೇಕಡ 8.00ರವರೆಗೆ ಬಡ್ಡಿದರವನ್ನು ನೀಡುತ್ತದೆ. ಆರ್‌ಬಿಎಲ್ ಬ್ಯಾಂಕ್ 453 ದಿನದಿಂದ 459 ದಿನಗಳ (15 ತಿಂಗಳ) ಎಫ್‌ಡಿ ಮೇಲೆ ಶೇಕಡ 8.30ರಷ್ಟು ಬಡ್ಡಿದರ ನೀಡುತ್ತದೆ. 460ದಿನದಿಂದ 724 ದಿನಗಳ (15 ತಿಂಗಳು 1 ದಿನದಿಂದ 725 ದಿನಕ್ಕಿಂತ ಕಡಿಮೆ) 725 ದಿನಗಳ ಎಫ್‌ಡಿ ಮೇಲೆ ಶೇಕಡ 8.30ರಷ್ಟು ಬಡ್ಡಿದರ ನೀಡುತ್ತದೆ. ಸೂರ್ಯೋದಯ ಬ್ಯಾಂಕ್ 1 ವರ್ಷ 6 ತಿಂಗಳಿನಿಂದ 2 ವರ್ಷದ ಎಫ್‌ಡಿ ಮೇಲೆ ಶೇಕಡ 8.51ರಷ್ಟು ಬಡ್ಡಿದರವಾಗಿದೆ. 2 ವರ್ಷದಿಂದ 998 ದಿನಗಳ ಎಫ್‌ಡಿ ಮೇಲೆ ಶೇಕಡ 8.01ರಷ್ಟು ಬಡ್ಡಿದರ, 999 ದಿನಗಳ ಎಫ್‌ಡಿ ಮೇಲೆ ಶೇಕಡ 8.76ರಷ್ಟು ಬಡ್ಡಿದರವಿದೆ.
ಡಿಸಿಬಿ ಬ್ಯಾಂಕ್, ಇತರೆ
ಡಿಸಿಬಿ ಬ್ಯಾಂಕ್ ಹಿರಿಯ ನಾಗರಿಕರಿಗೆ ಅವಧಿ ಆಧಾರದಲ್ಲಿ ಎಫ್‌ಡಿ ಬಡ್ಡಿದರ ನೀಡುತ್ತದೆ. 18 ತಿಂಗಳಿನಿಂದ 120 ತಿಂಗಳ ಎಫ್‌ಡಿ ಮೇಲೆ ಶೇಕಡ 8.00ರಿಂದ ಶೇಕಡ 8.35ರಷ್ಟು ಬಡ್ಡಿದರ ನೀಡುತ್ತದೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 80 ವಾರಗಳ ಎಫ್‌ಡಿ ಮೇಲೆ ಶೇಕಡ 8.75ರಷ್ಟು ಬಡ್ಡಿದರ ನೀಡುತ್ತದೆ. ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 888 ದಿನಗಳ ಎಫ್‌ಡಿ ಮೇಲೆ ಶೇಕಡ 8.5ರಷ್ಟು ಬಡ್ಡಿದರ ನೀಡುತ್ತದೆ.


Click it and Unblock the Notifications