ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಆರು ಬಾರಿ ರೆಪೋ ದರವನ್ನು ಏರಿಸಿದೆ. ಕಳೆದ ವರ್ಷದ ಮೇ ತಿಂಗಳಿನಿಂದ ಆರಂಭವಾದ ದರ ಏರಿಕೆ ಫೆಬ್ರವರಿವರೆಗೂ ಮುಂದುವರಿದಿದೆ. ಪ್ರತಿ ಬಾರಿ ರೆಪೋ ದರ ಏರಿಸಿದಾಗಲೂ ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಬಡ್ಡಿದರವನ್ನು ಏರಿಸಿದೆ. ಹೀಗಾಗಿ ಪ್ರಸ್ತುತ ಹಲವಾರು ಬ್ಯಾಂಕುಗಳು ಎಫ್‌ಡಿ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಬಂಪರ್ ಆಫರ್. ಕೆಲವು ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಶೇ. 9.50ರವರೆಗೆ ಬಡ್ಡಿದರ ನೀಡುತ್ತದೆ.
ದೇಶದಲ್ಲಿ ಹೆಚ್ಚಿನ ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 3.50ರಿಂದ ಶೇಕಡ 8ರವರೆಗೆ ಬಡ್ಡಿದರವನ್ನು ನೀಡುತ್ತದೆ. ಆದರೆ ಕೆಲವು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಇದಕ್ಕಿಂತಲೂ ಅಧಿಕ ಬಡ್ಡಿದರವನ್ನು ಎಫ್‌ಡಿ ಮೇಲೆ ನೀಡುತ್ತದೆ. ಉದಾಹರಣೆಗೆ ಉತ್ಕೃಷ್ಟ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಂದೆ ಇಟ್ಟುಕೊಳ್ಳಿ. ಸಣ್ಣ ಹಣಕಾಸು ಬ್ಯಾಂಕ್ ಅಧಿಕ ಬಡ್ಡಿದರವನ್ನು ಹೊಂದಿದೆ. ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 9ರವರೆಗೂ ಬಡ್ಡಿದರ ನೀಡುತ್ತದೆ. ಈ ಬಗ್ಗೆ ಅಧಿಕ ಮಾಹಿತಿ ಕೆಳಗಿದೆ.

ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿದರ ನೀಡುವ ಬ್ಯಾಂಕ್
ಉತ್ಕೃಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡ 9ರವರೆಗೆ ಬಡ್ಡಿದರ ನೀಡುತ್ತದೆ. ಈ ಬಡ್ಡಿದರವು 700 ದಿನಗಳ ಎಫ್‌ಡಿ ಮೇಲೆ ನೀಡಲಾಗುತ್ತದೆ. ಅದುವೇ ಸಾಮಾನ್ಯ ಜನರಿಗಾದಲ್ಲಿ ಈ ಬ್ಯಾಂಕ್ ಅದೇ ಅವಧಿಯ ಎಫ್‌ಡಿ ಮೇಲೆ ಶೇಕಡ 8.25ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಜನರಿಗೆ ಶೇಕಡ 9ರಷ್ಟು ಎಫ್‌ಡಿ ಬಡ್ಡಿದರ ನೀಡಿದರೆ, ಹಿರಿಯ ನಾಗರಿಕರಿಗೆ ಶೇಕಡ 9.50ರಷ್ಟು ಬಡ್ಡಿದರ ನೀಡುತ್ತದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 1001 ದಿನಗಳ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಶೇಕಡ 9.50ರಷ್ಟು ಬಡ್ಡಿದರ ನೀಡುತ್ತದೆ. ಇನ್ನು 501 ದಿನಗಳ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಶೇಕಡ 9.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಸಾಮಾನ್ಯವಾಗಿಯೇ ಹಲವಾರು ಬ್ಯಾಂಕುಗಳು ಸಾಮಾನ್ಯ ಜನರಿಗಿಂತ ಅಧಿಕ ಎಫ್‌ಡಿ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡುತ್ತದೆ. ಸೂರ್ಯೋದಯ ಬ್ಯಾಂಕ್ 1 ವರ್ಷ 6 ತಿಂಗಳಿನಿಂದ 2 ವರ್ಷದ ಎಫ್‌ಡಿ ಮೇಲೆ ಶೇಕಡ 8.51ರಷ್ಟು ಬಡ್ಡಿದರವಾಗಿದೆ. 2 ವರ್ಷದಿಂದ 998 ದಿನಗಳ ಎಫ್‌ಡಿ ಮೇಲೆ ಶೇಕಡ 8.01ರಷ್ಟು ಬಡ್ಡಿದರ, 999 ದಿನಗಳ ಎಫ್‌ಡಿ ಮೇಲೆ ಶೇಕಡ 8.76ರಷ್ಟು ಬಡ್ಡಿದರವಿದೆ.
ಯಾವುದೇ ಬ್ಯಾಂಕ್‌ನ ಫಿಕ್ಸಿಡ್ ಡೆಪಾಸಿಟ್ ಮೇಲೆ ನಾವು ಹೂಡಿಕೆ ಮಾಡುವುದಕ್ಕೂ ಮುನ್ನ ಆ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸುರಕ್ಷಿತ ಮತ್ತು ಅಪಾಯ ಇದೆ ಎಂದು ನೋಡಿಕೊಳ್ಳಬೇಕು. ಸಾಮಾನ್ಯವಾಗಿ ನಾವು ಫಿಕ್ಸಿಡ್ ಡೆಪಾಸಿಟ್ ಹೂಡಿಕೆ ಸುರಕ್ಷಿತ ಹೂಡಿಕೆ ಎಂದು ಹೇಳುತ್ತೇವೆ. ಆದರೆ ಅದು ಎಂದಿಗೂ ಕೂಡಾ ನಾವು ಆಯ್ಕೆಮಾಡಿಕೊಳ್ಳುವ ಬ್ಯಾಂಕ್ ಮೇಲೆ ಅವಲಂಭಿತವಾಗಿರುತ್ತದೆ. ಆದ್ದರಿಂದಾಗಿ ಹೂಡಿಕೆ ಮಾಡುವ ಮುನ್ನ ಸರಿಯಾಗಿ ಪರಿಶೀಲನೆ ಮಾಡಿ ಹೂಡಿಕೆ ಮಾಡಿ.


Click it and Unblock the Notifications