For Quick Alerts
ALLOW NOTIFICATIONS  
For Daily Alerts

LIC Jeevan Shiromani Policy : ಕೇವಲ 4 ವರ್ಷದಲ್ಲಿ 1 ಕೋಟಿ ರಿಟರ್ನ್ ಕೊಡುತ್ತದೆ ಈ ಸ್ಕೀಮ್

|

ಎಲ್‌ಐಸಿ ಬಳಿ ನಾನಾ ರೀತಿಯ ಸ್ಕೀಮ್‌ಗಳಿವೆ. ಹಲವು ಅಗತ್ಯಗಳಿಗೆ ತಕ್ಕಂತೆ ರಿಟರ್ನ್ ನೀಡುವ ಪಾಲಿಸಿಗಳಿವೆ. ಕನಿಷ್ಠ 1 ಕೋಟಿ ರೂ ರಿಟರ್ನ್ ನೀಡುವ ಒಂದು ಸೇವಿಂಗ್ ಸ್ಕೀಮ್ ಎಲ್‌ಐಸಿ ಬಳಿ ಇದೆ. ಇದು ಎಲ್‌ಐಸಿಯ ಜೀವನ್ ಶಿರೋಮಣಿ ಪ್ಲಾನ್.

ಇದು ಸಾಮಾನ್ಯ ವರ್ಗದವರಿಗೆ ರೂಪಿಸಿದ ಸ್ಕೀಮ್ ಅಲ್ಲ ಎಂದು ಆರಂಭದಲ್ಲೇ ಸ್ಪಷ್ಟಪಡಿಸುತ್ತಿದ್ದೇವೆ. ಅಧಿಕ ವರಮಾನ ಇರುವ ಜನರ ಉಳಿತಾಯಕ್ಕಾಗಿ ಎಲ್‌ಐಸಿ ಜೀವನ್ ಶಿರೋಮಣಿ ಪಾಲಿಸಿ ಬಿಟ್ಟಿದೆ. ಇದು ನಾನ್-ಲಿಂಕ್ಡ್ ಸ್ಕೀಮ್ ಆಗಿದೆ. ನಾನ್-ಲಿಂಕ್ಡ್ ಎಂದರೆ ಷೇರು ಇತ್ಯಾದಿ ಬೆಲೆಗೆ ಜೋಡಿತವಾಗದ, ನಿಗದಿತ ಬಡ್ಡಿ ದರ ಇರುವ ಮನಿ ಬ್ಯಾಕ್ ಪಾಲಿಸಿಯಾಗಿದೆ.

Post Office PPF Scheme 2022 : ದಿನಕ್ಕೆ 417 ರೂ ವ್ಯಯಿಸಿ, 1 ಕೋಟಿ ಪಡೆಯಿರಿPost Office PPF Scheme 2022 : ದಿನಕ್ಕೆ 417 ರೂ ವ್ಯಯಿಸಿ, 1 ಕೋಟಿ ಪಡೆಯಿರಿ

ಪ್ರತೀ ತಿಂಗಳು ನೀವು 91 ಸಾವಿರ ರೂ ಕಟ್ಟುವಿರಾದರೆ ಬೇಸಿಕ್ ಮೊತ್ತ 1 ಕೋಟಿ ನಿಮಗೆ ಸಿಗುವುದು ಖಾತ್ರಿ. ವರ್ಷಕ್ಕೆ ಸುಮಾರು 11 ಲಕ್ಷ ರೂ ಪ್ರೀಮಿಯಂ ಕಟ್ಟಬೇಕು. ತಿಂಗಳಿಗೊಮ್ಮೆಯೋ ಅಥವಾ ಮೂರು ತಿಂಗಳಿಗೊಮ್ಮೆಯೋ, ಆರು ತಿಂಗಳಿಗೊಮ್ಮೆಯೋ ಅಥವಾ ವರ್ಷಕ್ಕೊಮ್ಮೆಯೋ ಪ್ರೀಮಿಯಂ ಕಟ್ಟಬಹುದು.

ಜೀವನ್ ಶಿರೋಮಣಿ ಪಾಲಿಸಿ ವಿವರ:

ಕನಿಷ್ಠ ರಿಟರ್ನ್: 1 ಕೋಟಿ ರೂ
ಗರಿಷ್ಠ ರಿಟರ್ನ್: ಅಸೀಮಿತ
ಕನಿಷ್ಠ ಪ್ರೀಮಿಯಂ: 10,97,500 ರೂ (ವರ್ಷಕ್ಕೆ)
ಪಾಲಿಸಿ ಅವಧಿ: 14, 16, 18, 20 ವರ್ಷ
ಪಾಲಿಸಿಗೆ ಕನಿಷ್ಠ ವಯಸ್ಸು: 18 ವರ್ಷ
ಪಾಲಿಸಿಗೆ ಗರಿಷ್ಠ ವಯಸ್ಸು: 55, 51, 48, 45 ವರ್ಷ
ಪಾಲಿಸಿ ಮೆಚ್ಯೂರ್ ಆದಾಗ ಇರಬೇಕಾದ ಗರಿಷ್ಠ ವಯಸ್ಸು: 69 ವರ್ಷ

ಸಾಲದ ಬಡ್ಡಿ ಕಡಿಮೆ ಮಾಡಿದ ಬ್ಯಾಂಕ್ ಆಫ್ ಬರೋಡಾ; ನೋಡಿ ಎಷ್ಟಿದೆ ಇಂಟರೆಸ್ಟ್ ರೇಟ್ಸಾಲದ ಬಡ್ಡಿ ಕಡಿಮೆ ಮಾಡಿದ ಬ್ಯಾಂಕ್ ಆಫ್ ಬರೋಡಾ; ನೋಡಿ ಎಷ್ಟಿದೆ ಇಂಟರೆಸ್ಟ್ ರೇಟ್

ಇಲ್ಲಿ ನೀವು 14 ವರ್ಷದ ಪಾಲಿಸಿ ತೆಗೆದುಕೊಂಡರೆ ನೀವು 10 ವರ್ಷ ಮಾತ್ರ ಪ್ರೀಮಿಯಂ ಕಟ್ಟಬೇಕು. 16 ವರ್ಷದ ಪಾಲಿಸಿಯಾದರೆ 12 ವರ್ಷ ಪ್ರೀಮಿಯಂ ಕಟ್ಟಬೇಕು.

ಕೇವಲ 4 ವರ್ಷದಲ್ಲಿ 1 ಕೋಟಿ ರಿಟರ್ನ್ ಕೊಡುತ್ತದೆ ಈ ಸ್ಕೀಮ್

ನೀವು ಪಾಲಿಸಿ ಮಾಡಿಸಿ ಒಂದು ವರ್ಷದ ಬಳಿಕ ಹಿಂಪಡೆಯಬಹುದು. ಅಲ್ಲಿಯವರೆಗೆ ನೀವು ಕಟ್ಟಿರುವ ಪ್ರೀಮಿಯಂ ವಾಪಸ್ ಬರುತ್ತದೆ. ಈ ವಿಚಾರದಲ್ಲ ಬೇರೆ ಎಲ್‌ಐಸಿ ಪಾಲಿಸಿಗಿಂತ ಇದು ವಿಶೇಷ ಫೀಚರ್ ಆಗಿದೆ.

ಎಲ್‌ಐಸಿ ಜೀವನ್ ಶಿರೋಮಣಿ ಪಾಲಿಸಿ ಮನಿ ಬ್ಯಾಕ್ ಸ್ಕೀಮ್ ಕೂಡ ಹೌದು. ಪಾಲಿಸಿ ಮಾಡಿಸಿ 10 ಮತ್ತು 12ನೇ ವರ್ಷದಲ್ಲಿ ಮೂಲ ಮೊತ್ತದ ಶೇ. 30ರಷ್ಟು ಹಣ ರಿಟರ್ನ್ ಸಿಗುತ್ತದೆ. ಇದು 14 ವರ್ಷದ ಪಾಲಿಸಿಯ ಅಂಶ.

ಇನ್ನು, 16 ವರ್ಷದ ಪಾಲಿಸಿಯಾದರೆ 12 ಮತ್ತು 14ನೇ ವರ್ಷದಲ್ಲಿ ಮೂಲ ಮೊತ್ತದ ಶೇ. 35ರಷ್ಟು ಹಣ ರಿಟರ್ನ್ ಸಿಗುತ್ತದೆ.

18 ವರ್ಷದ ಪಾಲಿಸಿಯಾದರೆ 14 ಮತ್ತು 16ನೇ ವರ್ಷದಲ್ಲಿ ಶೇ. 40ರಷ್ಟು ಮೂಲ ಮೊತ್ತ ಸಿಗುತ್ತದೆ. 20 ವರ್ಷದ ಪಾಲಿಸಿಯಾದರೆ 16 ಮತ್ತು 18ನೇ ವರ್ಷದಲ್ಲಿ ಶೇ. 40ರಷ್ಟು ಮೂಲ ಮೊತ್ತ ನಿಮ್ಮ ಕೈ ಸೇರುತ್ತದೆ.

ಜೀವನ್ ಶಿರೋಮಣಿ ಪಾಲಿಸಿಯಲ್ಲಿ ನಿರೀಕ್ಷಿತ ಮೂಲ ಮೊತ್ತದ ಜೊತೆಗೆ ಹೆಚ್ಚುವರಿ ಹಣವೂ ಕೈಸೇರುತ್ತದೆ. ಇದು ನೀವು ಕಟ್ಟುವ ಪ್ರತೀ ಸಾವಿರ ರೂಗೆ 50 ಮತ್ತು 55 ರೂನಂತೆ ಜಮೆಯಾಗುತ್ತಾ ಹೋಗುತ್ತದೆ. ಇದರ ಜೊತೆಗೆ ಲಾಯಲ್ಟಿ ಹಣವನ್ನೂ ಲಾಭವಾಗಿ ಕೊಡುತ್ತದೆ. ಈ ಲಾಯಲ್ಟಿ ಹಣವು ಎಲ್‌ಐಸಿ ಆಯಾ ಸಂದರ್ಭದಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ.

English summary

Shiromani Scheme Gives Returns of Rs 1 Crore In Few Years, Know More

LIC Jeevan Shiromani moneyback policy- This scheme has high premium and high return with minimum basic sum assured is Rs 1 crore. Policy period in minimum 14 years with premium payment for 10 years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X