ಲಾಕ್ ಡೌನ್ ಸಮಯಕ್ಕೆ ನಗದು ಅಗತ್ಯಗಳನ್ನು ಪೂರೈಸಿಕೊಳ್ಳಲು Faircent.comನಿಂದ ಅಲ್ಪಾವಧಿ ಸಾಲ ನೀಡುವ ಯೋಜನೆ ಬುಧವಾರದಿಂದ ಆರಂಭಿಸಲಾಗಿದೆ. ವ್ಯಾಪಾರದ ಸಲುವಾಗಿ, ವೈಯಕ್ತಿಕ ಅಗತ್ಯಗಳಿಗೆ ಈ ಸಾಲ ನೀಡಲಾಗುತ್ತದೆ. ಚಿಲ್ಲರೆ ಮಾರಾಟಗಾರರು, ಸಣ್ಣ ವ್ಯಾಪಾರ ಮಾಡುವವರು ಹಾಗೂ ವೇತನದಾರರನ್ನು ಗುರಿ ಮಾಡಿಕೊಂಡು ಈ ಯೋಜನೆ ರೂಪಿಸಲಾಗಿದೆ.
ಈ ಸಾಲ ಪಡೆದುಕೊಂಡವರಿಗೆ ಮೂರು ತಿಂಗಳ ಇಎಂಐ ವಿನಾಯಿತಿ ನೀಡಲಾಗುತ್ತದೆ. ಆ ನಂತರ ಸುಲಭ ಕಂತುಗಳಲ್ಲಿ ಮರುಪಾವತಿಗೆ ಅವಕಾಶ ಇದೆ. ಸಾಲದ ಬಗ್ಗೆ ಪ್ರಮುಖ ಮಾಹಿತಿಗಳು ಹೀಗಿವೆ.

* ಸಾಲದ ಗರಿಷ್ಠ ಮೊತ್ತ: ರು. 75,000
* ಮೊದಲ ಮೂರು ತಿಂಗಳು ಇಎಂಐ ಕಟ್ಟುವ ಅಗತ್ಯ ಇಲ್ಲ.
* ಅಸಲು ಮತ್ತು ಬಡ್ಡಿ ಎರಡೂ ಸೇರಿ 3 ತಿಂಗಳ ನಂತರ ಪಾವತಿಸಲು ಆತಂಭಿಸಬಹುದು. ಯಾವುದೇ ದಂಡ ಶುಲ್ಕ ಇಲ್ಲದೆ
* ಇನ್ನು ಅಸಲು- ಬಡ್ಡಿ ಪಾವತಿಗೆ ಮೂರು ಆಯ್ಕೆಗಳನ್ನು ನೀಡಲಾಗುವುದು. ಆ ಬಗೆಗಿನ ವಿವರ ಹೀಗಿದೆ.
ಬುಲೆಟ್ ಪಾವತಿ ಯೋಜನೆ: ಮೂರು ತಿಂಗಳ ಆರಂಭದ ವಿನಾಯಿತಿ ಮುಗಿದ ಮೇಲೆ ಒಂದೇ ಸಲಕ್ಕೆ ಮರುಪಾವತಿ ಮಾಡುವುದು.
* 3 ಇಎಂಐ ಯೋಜನೆ: ಮೊದಲ ಮೂರು ತಿಂಗಳ ವಿನಾಯಿತಿ ಅವಧಿ ಮುಗಿದ ಮೇಲೆ ಅದರ ಮುಂದಿನ ಮೂರು ತಿಂಗಳಲ್ಲಿ ಹಣ ಪಾವತಿಸಬಹುದು. ಒಟ್ಟು ಸಮಯ ಆರು ತಿಂಗಳು ಸಿಕ್ಕಂತಾಗುತ್ತದೆ. ಭಾಗಶಃ ಮರುಪಾವತಿ 5 ಸಾವಿರದಿಂದ ಶುರು ಆಗುತ್ತದೆ. ಅದರ ಮೇಲೆ ಮೊತ್ತ ಐದು ಸಾವಿರದಂತೆ ಹೆಚ್ಚುತ್ತಾ ಹೋಗುತ್ತದೆ.
* 6 ಇಎಂಐ ಯೋಜನೆ: ಮೂರು ತಿಂಗಳ ವಿನಾಯಿತಿ ಅವಧಿ ಮುಗಿದ ಮೇಲೆ ಮುಂದಿನ ಆರು ತಿಂಗಳಲ್ಲಿ ಪಾವತಿಸಬಹುದು. ಆಗ ಒಟ್ಟು 9 ತಿಂಗಳು ಸಮಯ ಸಿಗುತ್ತದೆ. ಭಾಗಶಃ ಮರುಪಾವತಿ ಐದು ಸಾವಿರದ ಗುಣಕದಲ್ಲಿ ಮಾಡಬಹುದು.


Click it and Unblock the Notifications