ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೂರು ಹಣಕಾಸು ನೀತಿ ಸಭೆಗಳಲ್ಲಿ ರೆಪೊ ದರವನ್ನು 100 ಬೇಸಿಸ್ ಪಾಯಿಂಟ್‌ಗಳಷ್ಟು ಕಡತಗೊಳಿಸಿದ ನಂತರ ಅನೇಕ ಬ್ಯಾಂಕುಗಳು ತಮ್ಮ ಸ್ಥಿರ ಠೇವಣಿಗಳ (ಎಫ್‌ಡಿ) ಬಡ್ಡಿದರಗಳನ್ನು ಕಡಿಮೆಯನ್ನು ಮಾಡಿವೆ.
ನೀವು ಬ್ಯಾಂಕ್ ಎಫ್‌ಡಿಗಳ ಮೇಲೆ ಹೂಡಿಕೆಯನ್ನು ಮಾಡಿದ್ದರೆ ಇವು ನಿಮ್ಮಗೆ ವರ್ಷಕ್ಕೆ ಶೇ 5.5 ರಿಂದ 6.5ರಷ್ಟು ಬಡ್ಡಿಯನ್ನು ನೀಡುತ್ತದೆ. ಇದು ಸಣ್ಣ ಉಳಿತಾಯ ಯೋಜನೆಗಳು ಹೂಡಿಕೆದಾರರಿಗೆ ಹೆಚ್ಚಿನ ಆದಾಯದ ಜೊತೆಗೆ ತೆರಿಗೆಯಿಂದಲೂ ವಿನಾಯಿತಿಯನ್ನು ನೀಡಲಾಗುತ್ತದೆ. ಹಾಗಿದ್ದರೆ ಯಾವೆಲ್ಲಾ ಸಣ್ಣ ಉಳಿತಾಯ ಯೋಜನೆಗಳು ನಿಮ್ಮ ಎಷ್ಟು ಆದಾಯವನ್ನು ತಂದುಕೊಂಡಬಹುದು ಎಂಬ ಹೆಚ್ಚಿನ ವಿವರ ಇಲ್ಲಿದೆ.

ಸ್ಥಿರ ಠೇವಣಿಗಳು ಹಾಗೂ ಅಂಚೆ ಕಚೇರಿ ಯೋಜನೆಗಳ ಬಡ್ಡಿದರಗಳ ನಡುವೆ ಅಲ್ಪ ವ್ಯತ್ಯಾಸವಿರುತ್ತದೆ. ಈ ಕುರಿತು ನೀವು ಒಂದು ಉದಾಹರಣೆಯನ್ನು ನೋಡುವುದಾದರೆ ಒಬ್ಬ ಠೇವಣಿದಾರ ಸ್ಥಿರ ಠೇವಣಿಯ ಮೇಲೆ ಶೇ 7ರಷ್ಟು ಬಡ್ಡಿಯನ್ನು ಪಡೆದುಕೊಂಡರೆ ಆತ ಶೇ 20ರಷ್ಟು ತೆರಿಗೆ ಕಟ್ಟಿದ್ದರೆ ತೆರಿಗೆ ಕಡಿತದ ನಂತರ ಆತನಿಗೆ ಸಿಗುವ ರಿಟರ್ನ್ ಹಣವು ಶೇ 5.6ಕ್ಕೆ ಇಳಿಕೆಯಾಗುತ್ತದೆ.
ನೀವು ಇದಕ್ಕೆ ಪ್ರತಿಯಾಗಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ಆದಾಯಕ್ಕೆ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇದಲ್ಲದೇ ಹೂಡಿಕೆ ಮಾಡಿದ ಮೊತ್ತದ ಮೇಲೆ ತೆರಿಗೆ ಕಡಿತವನ್ನೂ (ಸೆಕ್ಷನ್ 80ಸಿ ಅಡಿಯಲ್ಲಿ) ಸಹ ಪಡೆದುಕೊಳ್ಳಬಹುದು.
ವಿವಿಧ ಸಣ್ಣ ಉಳಿತಾಯ ಯೋಜನೆಗಳ ವಿವರ
ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ (RD)
ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ್ದರೆ ವರ್ಷಕ್ಕೆ ಶೇ 6.7ರಷ್ಟು ಬಡ್ಡಿಯನ್ನು ಪಡೆದುಕೊಲ್ಳಬಹುದು.ನಿಮ್ಮಗೆ ಇದಕ್ಕಾಗಿ ಗರಿಷ್ಠ ಠೇವಣಿ ಮಿತಿ ಸಹ ಇರುವುದಿಲ್ಲ. ಇವು ಇದರಲ್ಲಿ ಮಿನಿಮ್ಯಾಮ್ 100 ರೂಪಾಯಿ ಅದರೂ ಹೂಡಿಕೆಯನ್ನು ಮಾಡಬೇಕಾಗುತ್ತದೆ.
ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ
ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಯೋಜನೆಯಲ್ಲಿ ನೀವು 1,000 ರೂ ಗಳ ಕನಿಷ್ಠ ಮೊತ್ತದಿಂದ ಹೂಡಿಕೆಯನ್ನು ಆರಂಭ ಮಾಡಬಹುದು. ಈ ಠೇವಣಿಯಲ್ಲಿ ನೀವು ಹೂಡಿಕೆ ಮಾಡಲು ಯಾವುದೇ ಹಣದ ಮಿತಿ ಇರುವುದಿಲ್ಲ. ನೀವು ಈ ಯೋಜನೆಯ ಮೂಲಕ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಗೆಶೇ 6.9, ಶೇ 7, ಶೇ 7.1 ಮತ್ತು ಶೇ 7.5ರಷ್ಟು ಬಡ್ಡಿಯನ್ನು ಪಡೆದುಕೊಳ್ಳಬಹುದು. ಇದರಲ್ಲಿ 5 ವರ್ಷಗಳ ಠೇವಣಿಗಳು ಮಾತ್ರ 80C ವಿನಾಯಿತಿ ಇರುತ್ತದೆ.
ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆ (MIS)
ಈ ಯೋಜನೆಯು ಠೇವಣಿಗಳ ಮೇಲೆ ವಾರ್ಷಿಕ ಶೇ 7.4ರಷ್ಟು ಬಡ್ಡಿಯನ್ನು ನಿಮ್ಮಗೆ ಸಿಗುತ್ತದೆ. ನಿಮ್ಮಗೆ ಠೇವಣಿ ಮಿತಿ ವೈಯಕ್ತಿಕ ಖಾತೆಗೆ 9 ಲಕ್ಷ ಮತ್ತು ಜಂಟಿ ಖಾತೆಗೆ 15 ಲಕ್ಷ ಇರುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆ
ಈ ಯೋಜನೆಯು ಠೇವಣಿದಾರರಿಗೆ ವಾರ್ಷಿಕ ಶೇ 8.2ರಷ್ಟು ಬಡ್ಡಿಯನ್ಉ ನೀಡಲಾಗುತ್ತದೆ. ಆದಾಯ ತೆರಿಗೆ ವಿನಾಯಿತಿ ಕೂಡ ಯೋಜನೆಗೆ ಇರಉತ್ತದೆ ಅ
ಸಾರ್ವಜನಿಕ ಭವಿಷ್ಯ ನಿಧಿ (PPF)
ಸಣ್ಣ ಉಳಿತಾಯ ಯೋಜನೆಗಳಲ್ಲಿ ಇದು ಅತ್ಯಂತ ಜನಪ್ರಿಯವಾದ ಯೋಜನೆ. ವರ್ಷಕ್ಕೆ ಶೇ 7.1ರಷ್ಟು ಬಡ್ಡಿಯನ್ನು ಸಿಗುತ್ತದೆ. 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
ಈ ಯೋಜನೆಯು ಠೇವಣಿದಾರರಿಗೆ ವರ್ಷಕ್ಕೆ ಶೇ 7.7ರಷ್ಟು ಬಡ್ಡಿ ಸಿಗುತ್ತದೆ. ಹೂಡಿಕೆ ಮಾಡುವ ಹಣಕ್ಕೆ ಯಾವುದೇ ಮಿತಿ ಇಲ್ಲ ನೀವು ಎಷ್ಟು ಬೇಕಾದರೂ ಹೂಡಿಕೆಯನ್ನು ಮಾಡಬಹುದು.


Click it and Unblock the Notifications