ಸವರನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯನ್ನು ಪ್ರತಿ ಗ್ರಾಮ್ ಗೆ 5,177 ರುಪಾಯಿ ಎಂದು ನಿಗದಿ ಮಾಡಲಾಗಿದೆ ಎಂದು ಶುಕ್ರವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ತಿಳಿಸಿದೆ. ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2020- 21 ಸಿರೀಸ್ VIIIರ ಸಬ್ ಸ್ಕ್ರಿಪ್ಷನ್ ನವೆಂಬರ್ 9ರಿಂದ 13, 2020ರ ಮಧ್ಯೆ ಲಭ್ಯವಾಗಲಿದೆ.
ಬಾಂಡ್ ಬೆಲೆಯನ್ನು ನಿರ್ಧರಿಸುವುದು ಹೇಗೆಂದರೆ, ಸಬ್ ಸ್ಕ್ರಿಪ್ಷನ್ ಅವಧಿಯ ಹಿಂದಿನ ವಾರದಲ್ಲಿ ಚಿನಿವಾರ ಪೇಟೆ ಕಾರ್ಯಾಚರಣೆ ಮಾಡುತ್ತಿರುವಾಗಿನ (ರಜಾದಿನಗಳನ್ನು ಬಿಟ್ಟು) ಕೊನೆಯ ಮೂರು ದಿನಗಳ 999 ಶುದ್ಧತೆಯ ಚಿನ್ನದ ಸರಾಸರಿ ಬೆಲೆಯನ್ನು ನಿಗದಿ ಮಾಡಲಾಗುವುದು. ಅದು 5,177 ರುಪಾಯಿ ಆಗುತ್ತದೆ ಎಂದು ಆರ್ ಬಿಐ ಹೇಳಿದೆ.
ಯಾವ ಹೂಡಿಕೆದಾರರು ಆನ್ ಲೈನ್ ಮೂಲಕ ಅಪ್ಲೈ ಮಾಡುತ್ತಾರೋ ಹಾಗೂ ಡಿಜಿಟಲ್ ಪಾವತಿ ಮಾಡುತ್ತಾರೋ ಅಂಥವರಿಗೆ ಪ್ರತಿ ಗ್ರಾಮ್ ಗೆ ಐವತ್ತು ರುಪಾಯಿ ರಿಯಾಯಿತಿ ನೀಡುತ್ತದೆ. ಅಂಥ ಹೂಡಿಕೆದಾರರಿಗೆ ಪ್ರತಿ ಗ್ರಾಮ್ ಗೆ 5127 ರುಪಾಯಿಯಂತೆ ದೊರೆಯುತ್ತದೆ ಎಂದು ಆರ್ ಬಿಐ ತಿಳಿಸಿದೆ.

ವಾಣಿಜ್ಯ ಬ್ಯಾಂಕ್‌ಗಳು, ಅಂಚೆ ಕಚೇರಿ, ಬಿಎಸ್ ಇ, ಎನ್‌ಎಸ್ ಇ ಮತ್ತು ನ್ಯಾಷನಲ್ ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ನಲ್ಲಿ ಎಸ್ ಜಿಬಿಗಳನ್ನು ಖರೀದಿಸಬಹುದು. ವ್ಯಕ್ತಿಗತವಾಗಿ, ಟ್ರಸ್ಟ್ ಗಳು, ಸಾಮಾಜಿಕ ಸಂಘಟನೆಗಳು, ಹಿಂದೂ ಅವಿಭಕ್ತ ಕುಟುಂಬಗಳು, ವಿಶ್ವವಿದ್ಯಾಲಯಗಳಿಗೆ ಸವರನ್ ಗೋಲ್ಡ್ ಬಾಂಡ್ ಖರೀದಿಸುವ ಅವಕಾಶವಿದೆ.
ಕನಿಷ್ಠ 1 ಬಾಂಡ್ ಆದರೂ ಖರೀದಿಸಬೇಕು. ಇದು 8 ವರ್ಷದ ನಂತರ ಕೈಗೆ ಸಿಗುತ್ತದೆ. ಬಯಸಿದರೆ ಈ ಯೋಜನೆಯನ್ನು 5 ವರ್ಷಕ್ಕೆ ಮುಕ್ತಾಯಗೊಳಿಸಬಹುದು. ಇನ್ನು ಗರಿಷ್ಠ ಅಂದರೆ 4 ಕೇಜಿ ಮೌಲ್ಯದ ಎಸ್ ಜಿಬಿಯನ್ನು ವ್ಯಕ್ತಿಗತವಾಗಿ ಅಥವಾ ಹಿಂದೂ ಅವಿಭಕ್ತ ಕುಟುಂಬಗಳು ಖರೀದಿಸಬಹುದು. ಇನ್ನು ಟ್ರಸ್ಟ್ ಗಳು, ಇದಕ್ಕೆ ಸರಿಸಮಾನವಾದ ಸಂಸ್ಥೆಗಳು ಒಂದು ವಿತ್ತೀಯ ವರ್ಷದಲ್ಲಿ ಗರಿಷ್ಠ 20 ಕೇಜಿ ಮೌಲ್ಯದ ಎಸ್ ಜಿಬಿ ಖರೀದಿಸಬಹುದು.


Click it and Unblock the Notifications