ಭಾರತೀಯ ಷೇರುಮಾರುಕಟ್ಟೆ ಕಳೆದ ಮೂರು ತಿಂಗಳಿನಿಂದ ಕುಸಿತ ಕಾಣುತ್ತಿದೆ. ಷೇರು ಮಾರುಕಟ್ಟೆಯ ಸ್ಥಿತಿಗೆ ಬೇಸತ್ತು ಹೂಡಿಕೆದಾರು ಬೇರೆ ಕಡೆ ಸುರಕ್ಷಿತ ಹೂಡಿಕೆ ಮಾಡಬೇಕೆಂದು ಹಲವಾರು ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಅದೇ ಸಮಯದಲ್ಲಿ ಹೂಡಿಕೆದಾರರನ್ನು ತನ್ನ ಕಡೆ ಗಮನ ಸಳೆಯಲು ಕೆಲವು ಬ್ಯಾಂಕ್‌ಗಳು ನಿಶ್ಚಿತ ಠೇವಣಿ ಯೋಜನೆಗಳ ಮೇಲೆ ಭಾರಿ ಆದಾಯವನ್ನು ನೀಡುತ್ತಿವೆ. ಹಾಗಿದ್ರೆ ಯಾವೆಲ್ಲಾ ಬ್ಯಾಂಕ್‌ಗಳು ಹೆಚ್ಚಿನ ಆದಾರ ನೀಡುತ್ತಾವೆ ಎಷ್ಟು ಲಾಭ ಸಿಗುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ...
ಹೌದು ನೀವು ಸುರಕ್ಷಿತ ಹೂಡಿಕೆಯೊಂದಿಗೆ ಉತ್ತಮ ಆದಾಯವನ್ನು ಪಡೆಯಲು ಬಯತ್ತೀರುವ ಹೂಡಿಕೆದಾರರಿಗೆ ಇದು ಉತ್ತಮ ಅವಕಾಶ ಎಂದೇ ಹೇಳಬಹುದು. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ವಿಶೇಷ ಸ್ಥಿರ ಠೇವಣಿ ಯೋಜನೆಗಳನ್ನು ನೀಡುತ್ತಿದ್ದು, ಹೂಡಿಕೆದಾರರಿಗೆ ಶೇ.8.10 ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತಿದೆ. ಈ ನಿಶ್ಚಿತ ಠೇವಣಿ ಯೋಜನೆಗಳ ಮೇಲಿನ ಪೂರ್ವನಿರ್ಧರಿತ ಬಡ್ಡಿದರದಿಂದಾಗಿ, ಹೂಡಿಕೆದಾರರ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಆದರೆ ಈ ಬ್ಯಾಂಕ್‌ಗಳ ವಿಶೇಷ FD ಯೋಜನೆಯ ಲಾಭ ಪಡೆಯಲು, ನೀವು 31 ಡಿಸೆಂಬರ್ 2024 ರ ಮೊದಲು ಹೂಡಿಕೆ ಮಾಡಬೇಕು. ಆದರೆ ಈ ಆಫರ್ ಸೀಮಿತ ಅವಧಿಗೆ ಮಾತ್ರ ಇರುತ್ತದೆ.

IDBI ಬ್ಯಾಂಕ್ ವಿಶೇಷ FD ಗಡುವು
ಐಡಿಬಿಐ ಬ್ಯಾಂಕ್ ಉತ್ಸವ ಎಫ್‌ಡಿ ಯೋಜನೆಯಡಿಯಲ್ಲಿ, ಒಬ್ಬ ವ್ಯಕ್ತಿ ತನ್ನ ಹಣವನ್ನು 300 ದಿನಗಳು, 375 ದಿನಗಳು, 444 ದಿನಗಳು ಮತ್ತು 700 ದಿನಗಳವರೆಗೆ ಹೂಡಿಕೆ ಮಾಡಬಹುದು. ಅದರೆ ಕೊನೆಯ ದಿನಾಂಕ 31 ಡಿಸೆಂಬರ್ 2024ರ ಒಳಗೆ ಹೊಡೆಯನ್ನು ಮಾಡಬೇಕು.ಆಗ ಮಾತ್ರ ನೀವು ಈ ಯೋಜನೆ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
IDBI ಬ್ಯಾಂಕ್ ಬಡ್ಡಿ ದರ
IDBI ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 300 ದಿನಗಳ FD ಮೇಲೆ ಶೇ. 7.05ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಆದರೆ 375 ದಿನಗಳು ಶೇ.7.25 ರಷ್ಟು ವರ್ಷದ ಆದಾಯವನ್ನು ನೀಡುತ್ತಿದೆ. ಅದೇ ಸಮಯದಲ್ಲಿ ಶೇ. 7.35 ಮತ್ತು ಶೇ.7.20 ರ ಬಡ್ಡಿದರಗಳನ್ನು ಕ್ರಮವಾಗಿ 444 ದಿನಗಳು ಮತ್ತು 700 ದಿನಗಳ ಅವಧಿಗೆ ನೀಡಲಾಗುತ್ತಿದೆ. ಪ್ರತಿ FD ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗಿಂತ ಹಿರಿಯ ನಾಗರಿಕ ಗ್ರಾಹಕರಿಗೆ ಬ್ಯಾಂಕ್ ಶೇ.0.5 ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ FD ಬಡ್ಡಿ ದರ
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ವಿವಿಧ ಅವಧಿಗಳಿಗೆ ಹಲವಾರು ವಿಶೇಷ FD ಗಳಲ್ಲಿ ಹೂಡಿಕೆಯನ್ನು ನೀಡುತ್ತಿದೆ. ಹೌದು, ಪಂಜಾಬ್ & ಸಿಂಧ್ ಬ್ಯಾಂಕ್ 222 ದಿನಕ್ಕೆ ವಿಶೇಷ FD ಗಳಲ್ಲಿ ಶೇ. 6.30 ನಷ್ಟು ಲಾಭವನ್ನು ನೀಡುತ್ತಿದೆ. 333 ದಿನಗಳವರೆಗೆ ಇದು ಶೇ.7.20 ಬಡ್ಡಿದರವನ್ನು ನೀಡುತ್ತಿದೆ. ಇನ್ನೂ 444 ದಿನಗಳ FD ಗಳ ಮೇಲೆ ಶೇ.7.30ರಷ್ಟು ಬಡ್ಡಿಯನ್ನು ನೀಡಿದೆ. 555 ದಿನಗಳ ಸ್ಥಿರ ಠೇವಣಿಗಳ ಮೇಲೆ ಶೇ.7.45 ನಷ್ಟು ಲಾಭವನ್ನು ನೀಡುತ್ತಾವೆ. ಇದಲ್ಲದೆ 777 ದಿನಗಳ ವಿಶೇಷ ಎಫ್‌ಡಿಗಳಲ್ಲಿ ಗ್ರಾಹಕರಿಗೆ ಶೇ.7.25 ಬಡ್ಡಿದರವನ್ನು ಮತ್ತು 999 ದಿನಗಳ ಠೇವಣಿಗಳಿಗೆ ಬ್ಯಾಂಕ್ ಶೇ. 6.65 ಬಡ್ಡಿದರವನ್ನು ನೀಡುತ್ತಿದೆ. ಇನ್ನೂ ಹಿರಿಯ ನಾಗರಿಕರಿಗೆ ಶೇ. 8.10ರಷ್ಟು ಬಡ್ಡಿಯನ್ನು ಪಡೆದುಕೊಳ್ಳಬಹುದು.
ಸಿಂಡ್ ಬ್ಯಾಂಕ್ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ 180 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿಗಳಲ್ಲಿ ಶೇ.4 ರಿಂದ ಶೇ.7.95 ವರೆಗೆ ಬಡ್ಡಿಯನ್ನು ನೀಡುತ್ತಿದೆ. 555 ಅವಧಿಗೆ ಹಿರಿಯನಾಗರಿಕರಿಗೆ ಶೇ.8.10 ನಷ್ಟು ಲಾಭವನ್ನು ನೀಡುತ್ತಿದೆ. ಈ ಯೋಜನೆಗೆ ಹೊಡಿಕೆ ಮಾಡಲು ಕೊನೆಯ ದಿನಾಂಕ 31 ಡಿಸೆಂಬರ್ 2024 ಆಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications