ಮಹೀಂದ್ರಾ ಅಂಡ್ ಮಹೀಂದ್ರಾದಿಂದ ವಿಶೇಷ ವಾಹನ ಸಾಲ ಯೋಜನೆ

ಮಹೀಂದ್ರಾ ಅಂಡ್ ಮಹೀಂದ್ರಾ ವಾಹನ ತಯಾರಿಕೆ ಸಂಸ್ಥೆಯಿಂದ ಹೊಸ ಹಣಕಾಸು ಯೋಜನೆ ಪರಿಚಯಿಸಲಾಗಿದೆ. ಕೊರೊನಾ ವಾರಿಯರ್ಸ್ (ಸೇನಾನಿಗಳು) ಮತ್ತು ಮಹಿಳಾ ಖರೀದಿದಾರರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. 8 ವರ್ಷದ ಅವಧಿಗೆ ಸಾಲ, 90 ದಿನಗಳ ಕಾಲ ಇಎಂಐ ಪಾವತಿಯಿಂದ ವಿನಾಯಿತಿ, ಶೇಕಡಾ ನೂರರಷ್ಟು ಆನ್ ರೋಡ್ ಹಣಕಾಸು ಸಾಲ ಯೋಜನೆಗಳನ್ನು ಪರಿಚಯಿಸಲಾಗಿದೆ.

ಈ ಯೋಜನೆಗಳನ್ನು ಬಳಸಿಕೊಂಡು, ಗ್ರಾಹಕರು ಮಹೀಂದ್ರಾ ವಾಹನಗಳನ್ನು ಖರೀದಿ ಮಾಡಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು ಸಾಲ ಯೋಜನೆಗೆ ಅರ್ಜಿ ಹಾಕುವವರಿಗೆ ಪ್ರೊಸೆಸಿಂಗ್ ಶುಲ್ಕದಲ್ಲಿ 50 ಪರ್ಸೆಂಟ್ ರಿಯಾಯಿತಿ ದೊರೆಯುತ್ತದೆ. ಇನ್ನು "ಬೈ ನೌ, ಪೇ ಲೇಟರ್" (ಪಾವತಿಗೆ 90 ದಿನದ ವಿನಾಯಿತಿ) ಸೌಲಭ್ಯವನ್ನು ನೀಡಲಾಗುತ್ತಿದೆ. ವೈದ್ಯರಿಗೆ ಈ ಸೌಲಭ್ಯ ದೊರೆಯಲಿದೆ.

ಪೊಲೀಸರಿಗೆ ಹೆಚ್ಚಿನ ಮೊತ್ತದ ಹಣಕಾಸು ಸಾಲ ಸೌಲಭ್ಯ ದೊರೆಯುತ್ತದೆ. ಮಹಿಳೆಯರಿಗೆ ಸಾಲದ ವೆಚ್ಚದ ಮೇಲೆ ಹತ್ತು ಬೇಸಿಸ್ ಪಾಯಿಂಟ್ ರಿಯಾಯಿತಿ ದೊರೆಯುತ್ತದೆ ಎಂದು ಕಂಪೆನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದರ ಜತೆಗೆ ಬಿಎಸ್ 6 ವಾಹನವನ್ನು ಖರೀದಿಸಿ, ಬಿಎಸ್ 4 ವಾಹನಕ್ಕೆ ಎಷ್ಟು ಇಎಂಐ ಪಾವತಿಸಬೇಕಿತ್ತೋ ಅಷ್ಟನ್ನು ನೀಡಲು ಅವಕಾಶ ನೀಡಲಾಗಿದೆ. ಇನ್ನು SUV ಗ್ರಾಹಕರು ಈಗ ವಾಹನವನ್ನು ಖರೀದಿಸಿ, 2021ರಿಂದ ಇಎಂಐ ಕಟ್ಟಲು ಆರಂಭಿಸಬಹುದು.

ಮಹೀಂದ್ರಾ ಅಂಡ್ ಮಹೀಂದ್ರಾದಿಂದ ವಿಶೇಷ ವಾಹನ ಸಾಲ ಯೋಜನೆ

ಇನ್ನೊಂದು ಸ್ಕೀಮ್ ನಲ್ಲಿ ವಾಹನದ ಹಣಕಾಸು ಸಾಲ ಯೋಜನೆಯು ಒಂದು ಲಕ್ಷಕ್ಕೆ 1234 ರುಪಾಯಿ/ತಿಂಗಳಿಗೆ ಇಎಂಐ ಎಂಬಂತೆ ಆರಂಭವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+