ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ಕಾರಣ ಭಾನುವಾರ ಮೆಟ್ರೋ ರೈಲುಗಳು ಅವಧಿಯನ್ನು ವಿಸ್ತಾರ ಮಾಡಲಾಗಿದೆ. ಚಲ್ಲಘಟ್ಟ, ವೈಟ್‌ಫೀಲ್ಡ್ (ಕಾಡುಗೋಡಿ), ನಾಗಸಂದ್ರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಟರ್ಮಿನಲ್ ನಿಲ್ದಾಣಗಳಿಗೆ ಕೊನೆಯ ರೈಲು ರಾತ್ರಿ 11.45 ಕ್ಕೆ ಸಂಚಾರ ಮಾಡಲಿದೆ.
ಹೆಚ್ಚುವರಿಯಾಗಿ, ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ತಲಾ 50 ರೂಪಾಯಿಗಳ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು ಲಭ್ಯವಿರುತ್ತವೆ. ಈ ಕಾಗದದ ಟಿಕೆಟ್‌ಗಳು ಭಾನುವಾರದ ವಿಸ್ತೃತ ಗಂಟೆಗಳವರೆಗೆ ಒಂದು ಬಾರಿಯ ಪ್ರಯಾಣಕ್ಕೆ ಮಾತ್ರ ಲಭ್ಯವಿರುತ್ತದೆ.

ರಾತ್ರಿ 8 ಗಂಟೆಯಿಂದ ಕಬ್ಬನ್ ಪಾರ್ಕ್/ ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಿಂದ ಬೇರೆ ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಲು ಪ್ರಯಾಣಿಕರು ಈ ಟಿಕೆಟ್‌ಗಳನ್ನು ಬಳಕೆ ಮಾಡಬಹುದಾಗಿದೆ. ಈ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆಯ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....
ಶೇಕಡ 5 ರಷ್ಟು ರಿಯಾಯಿತಿ ಲಭ್ಯ
ನಮ್ಮ ಮೆಟ್ರೋ ಪ್ರಯಾಣಿಕರು ವಾಟ್ಸಾಪ್, ನಮ್ಮ ಮೆಟ್ರೋ ಅಪ್ಲಿಕೇಶನ್ ಮತ್ತು ಪೇಟಿಎಂನಲ್ಲಿ ಶೇಕಡ 5 ರಷ್ಟು ರಿಯಾಯಿತಿ ಪಡೆಯುವ ಅವಕಾಶವೂ ಕೂಡಾ ನಿಮಗಿದೆ. ಅದಕ್ಕಾಗಿ ನೀವು ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬಹುದು. ಇದನ್ನು ಪಂದ್ಯದ ದಿನದಲ್ಲಿ ಯಾವುದೇ ಸಮಯದಲ್ಲಿ ಪ್ರಯಾಣಿಸಲು ಬಳಸಬಹುದು.
ಕೊನೆಯದಾಗಿ, ಭಾನುವಾರದ ವಿಸ್ತೃತ ಸಮಯದಲ್ಲಿ ಎಂಜಿ ರೋಡ್ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಪ್ರಯಾಣಿಸಲು ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್‌ಕಾರ್ಡ್‌ಗಳು ಮತ್ತು ಪೇಪರ್ ಟಿಕೆಟ್‌ಗಳನ್ನು ಮಾತ್ರ ಬಳಸಬಹುದು. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪ್ರಕಾರ ಯಾವುದೇ ಟೋಕನ್‌ಗಳನ್ನು ನೀಡಲಾಗುವುದಿಲ್ಲ.
ಮೊಬೈಲ್ ಕ್ಯೂಆರ್ ಕೋಡ್
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಥವಾ ಬಿಎಂಆರ್‌ಸಿಎಲ್ ಕಳೆದ ತಿಂಗಳಿಂದ ಜಾರಿಗೆ ಬರುವಂತೆ ಈ ಗುಂಪುಗಳಿಗೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಜಾರಿ ಮಾಡಿದೆ. ಅಂದರೆ ನವೆಂಬರ್ 16ರಿಂದ 6 ಮಂದಿ ಇರುವ ಕುಟುಂಬ ಮತ್ತು ಗುಂಪುಗಳು ಒಟ್ಟಿಗೆ ಪ್ರಯಾಣಿಸಲು ಈ ಕ್ಯೂಆರ್ ಕೋಡ್ ಬಳಸಬಹುದು.
ಇದು ಪ್ರಮುಖವಾಗಿ ಜೊತೆಯಾಗಿ ಅಥವಾ ಗುಂಪಾಗಿ ಪ್ರಯಾಣಿಸುವವರಿಗೆ ಸಹಾಯವಾಗಲಿದೆ. ಈಗ ಮೆಟ್ರೋ ರೈಲುಗಳಲ್ಲಿ ಒಟ್ಟಿಗೆ ಪ್ರಯಾಣಿಸುವ ಕುಟುಂಬಗಳು ಮತ್ತು ಗುಂಪುಗಳು ಒಂದೇ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿಕೊಂಡು ಟಿಕೆಟ್ ಖರೀದಿ ಮಾಡಬಹುದಾಗಿದೆ.
ಮೊದಲು, ಮೊಬೈಲ್ ಕ್ಯೂಆರ್ ಟಿಕೆಟ್‌ಗಳು ಒಬ್ಬ ವ್ಯಕ್ತಿಯ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿತ್ತು. ಈ ಟಿಕೆಟ್ ಅನ್ನು ನಮ್ಮ ಮೆಟ್ರೋ, ಪೇಟಿಎಂ, ವಾಟ್ಸಾಪ್ ಮತ್ತು ಯಾತ್ರದಂತಹ ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪಡೆಯಬಹುದಾಗಿದೆ. ನೀವು ಈ ಕ್ರಿಕೆಟ್ ಸಂದರ್ಭದಲ್ಲಿಯೂ ಇದರ ಸದುಪಯೋಗ ಪಡೆಯಬಹುದಾಗಿದೆ.


Click it and Unblock the Notifications