ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಮತ್ತು ಅವರ ಕುಟುಂಬ ಮುಂಬೈನ ಪೆದ್ದಾರ್ ರಸ್ತೆಯಲ್ಲಿರುವ ಐಷಾರಾಮಿ ಟವರ್‌ನಲ್ಲಿ 98 ಕೋಟಿ ರೂಪಾಯಿಗಳ ಐಷಾರಾಮಿ ಮನೆಯನ್ನು ಖರೀದಿ ಮಾಡಿದ್ದಾರೆ. 28 ಅಂತಸ್ತಿನ ಎತ್ತರದ, ಈ ಮನೆಯು ದಕ್ಷಿಣ ಮುಂಬೈನ ಜಸ್ಲೋಕ್ ಆಸ್ಪತ್ರೆಯ ಬಳಿ ಇದೆ. ಎನ್ ಚಂದ್ರಶೇಖರನ್ ಕುಟುಂಬ ಕಳೆದ 5 ವರ್ಷಗಳಿಂದ ಡ್ಯೂಪ್ಲೆಕ್ಸ್‌ನಲ್ಲಿ ಬಾಡಿಗೆಗೆ ವಾಸವಿತ್ತು.
ಮಾರುಕಟ್ಟೆ ವಿಶ್ಲೇಷಕರು ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಇಷ್ಟು ಐಷಾರಾಮಿ ಮನೆಯನ್ನು ಖರೀದಿ ಮಾಡಿರುವುದನ್ನು "ಉನ್ನತ" ವಹಿವಾಟು ಎಂದು ವಿವರಿಸಿದ್ದಾರೆ. ಈ ಹೊಸ ನಿವಾಸವು ಕಟ್ಟಡದ 11 ಮತ್ತು 12 ನೇ ಮಹಡಿಗಳಲ್ಲಿದೆ. ಸರಿಸುಮಾರು 6,000 ಚದರ ಅಡಿ ಪ್ರದೇಶವನ್ನು ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಟಾಟಾ ಸಂಸ್ಥೆಯ ಮೂಲವು, "ಎನ್ ಚಂದ್ರಶೇಖರನ್ ಈಗಾಗಲೇ ಕೆಲವು ವರ್ಷಗಳಿಂದ ಮಾಸಿಕ 20 ಲಕ್ಷ ರೂಪಾಯಿ ಬಾಡಿಗೆಗೆ ಇಲ್ಲಿ ವಾಸಿಸುತ್ತಿದ್ದರು. ಚಂದ್ರಶೇಖರನ್ ಅವರು ಫೆಬ್ರವರಿ 21, 2017 ರಂದು ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ 33 ಸೌತ್ ಕಾಂಡೋಮಿನಿಯಂಗೆ ತೆರಳಿದರು," ಎಂದು ತಿಳಿಸಿದ್ದಾರೆ.

ಪ್ರತಿ ಚದರ ಅಡಿಗೆ ಸುಮಾರು 1.6 ಲಕ್ಷ ರೂಪಾಯಿ!
58 ವರ್ಷದ ಟಾಟಾ ಮುಖ್ಯಸ್ಥ ಪ್ರತಿ ಚದರ ಅಡಿಗೆ ಸುಮಾರು 1.6 ಲಕ್ಷ ರೂಪಾಯಿಗಳ ವಹಿವಾಟನ್ನು 3 ದಿನಗಳ ಹಿಂದೆ ಮಾಡಿದ್ದು, ಈ ಐಷಾರಾಮಿ ಮನೆಯನ್ನು ತನ್ನ ಹೆಸರಲ್ಲಿ, ತನ್ನ ಪತ್ನಿ ಲಲಿತಾ ಮತ್ತು ಮಗ ಪ್ರಣವ್ ಹೆಸರಿನಲ್ಲಿ ನೋಂದಾಯಿಸಿದ್ದಾರೆ. ಬಿಲ್ಡರ್ ಸಮೀರ್ ಭೋಜ್ವಾನಿ ನಿಯಂತ್ರಿಸುವ ಕಂಪನಿಯಾದ ಜೀವೇಶ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಇದನ್ನು ಮಾರಾಟ ಮಾಡಿದ್ದಾರೆ.
ಫೆಬ್ರವರಿ 20, 2027 ರವರೆಗೆ ಇನ್ನೂ 5 ವರ್ಷಗಳ ಕಾಲ ಅಧ್ಯಕ್ಷರಾಗಿ ಅವರನ್ನು ಮರುನೇಮಕ ಮಾಡುವುದಾಗಿ ಟಾಟಾ ಗ್ರೂಪ್ ಘೋಷಿಸಿದ ಸುಮಾರು 3 ತಿಂಗಳ ನಂತರ ಎನ್ ಚಂದ್ರಶೇಖರನ್ ಅವರು ಮನೆಯನ್ನು ಖರೀದಿ ಮಾಡಿದ್ದಾರೆ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಪೊರೇಟ್ ಬಾಸ್‌ಗಳಲ್ಲಿ ಒಬ್ಬರು ಚಂದ್ರಶೇಖರನ್ ಆಗಿದ್ದಾರೆ. 2021 ರ ಆರ್ಥಿಕ ವರ್ಷದಲ್ಲಿ 91 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದಾರೆ.
ಈ ನಡುವೆ ಏಪ್ರಿಲ್ ಅಂತ್ಯದಲ್ಲಿ, ಟಾಟಾ ಸನ್ಸ್ ಚಂದ್ರಶೇಖರನ್ ಅವರ ಮರುನೇಮಕಕ್ಕೆ ಮತ ಹಾಕಲು ಷೇರುದಾರರ ಸಭೆಯನ್ನು ನಡೆಸಿತು. ಆದರೆ, ಟಾಟಾ ಸನ್ಸ್‌ನಲ್ಲಿ ಶೇ.18.4ರಷ್ಟು ಪಾಲು ಹೊಂದಿರುವ ಶಾಪೂರ್ಜಿ ಪಲ್ಲೊಂಜಿ (ಎಸ್‌ಪಿ) ಕುಟುಂಬ ಮತದಾನದಿಂದ ದೂರ ಉಳಿದಿದೆ. ಮಿಸ್ತ್ರಿ ಕೂಡಾ ಮತದಾನದಿಂದ ದೂರ ಉಳಿದಿದ್ದರೂ, ಟಾಟಾ ಸನ್ಸ್ ಪ್ರಮುಖವಾಗಿ ಟಾಟಾ ಟ್ರಸ್ಟ್‌ಗಳು (ಶೇ 66) ಮತ್ತು ಹಲವಾರು ಪಟ್ಟಿಮಾಡಿದ ಟಾಟಾ ಕಂಪನಿಗಳ ಒಡೆತನದಲ್ಲಿರುವುದರಿಂದ ಎರಡನೇ ಅವಧಿಗೆ ಚಂದ್ರಶೇಖರನ್ ಅವರ ನೇಮಕಕ್ಕೆ ಮತವನ್ನು ಪಡೆದಿದೆ.


Click it and Unblock the Notifications