ನಾನ್- ರೆಸಿಡೆಂಟ್ ಇಂಡಿಯನ್ಸ್ ಅಥವಾ ಅನಿವಾಸಿ ಭಾರತೀಯರಿಂದ (ಎನ್‌ಆರ್‌ಐ) ನೀವು ಉಡುಗೊರೆಗಳನ್ನು ಪಡೆಯುವುದಾದರೆ ಭಾರತೀಯರು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಹೌದು, ಎನ್‌ಆರ್‌ಐಗಳಿಂದ ನೀವು ಯಾವುದೇ ಉಡುಗೊರೆಯನ್ನು ಪಡೆದರೆ ಅದಕ್ಕೆ ತೆರಿಗೆ ಪಾವತಿಸಬೇಕಾಗಬಹುದು.
ಎನ್‌ಆರ್‌ಐಗಳಿಂದ ಪಡೆದ ಉಡುಗೊರೆಗಳ ತೆರಿಗೆಯನ್ನು ನಿಯಂತ್ರಣ ಮಾಡಲು ಕಾನೂನುಗಳು ನಿಬಂಧನೆಗಳು ಇದೆ. ಈ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಅನಿವಾಸಿ ಭಾರತೀಯರಿಂದ ಪಡೆಯುವ ಉಡುಗೊರೆಗಳ ಮೇಲೆ ವಿಧಿಸಲಾಗುವ ತೆರಿಗೆಗಳ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಎನ್‌ಆರ್‌ಐ ಎಂದರೆ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಭಾರತದ ನಿವಾಸಿಯಾಗಿ ಅರ್ಹತೆ ಪಡೆದ ಆದರೆ ವಿದೇಶದಲ್ಲಿ ವಾಸ ಮಾಡುವ ವ್ಯಕ್ತಿಯಾಗಿದ್ದಾರೆ. ಎನ್‌ಆರ್‌ಐಗಳಿಗೆ ಕೆಲವು ಷರತ್ತುಗಳು ಕೂಡಾ ಇದೆ. ಈ ಷರತ್ತುಗಳಲ್ಲಿ ಉದ್ಯೋಗ ಅಥವಾ ವ್ಯಾಪಾರ ಉದ್ದೇಶಗಳಿಗಾಗಿ ಭಾರತದ ಹೊರಗೆ ಇರುವುದು ಅಥವಾ ಸಂಬಂಧಿತ ಹಣಕಾಸು ವರ್ಷದಲ್ಲಿ 182 ದಿನಗಳಿಗಿಂತ ಕಡಿಮೆ ಕಾಲ ಭಾರತದಲ್ಲಿ ಉಳಿಯುವುದು ಸೇರಿದೆ.
ಎಷ್ಟು ತೆರಿಗೆ, ಏನು ತೆರಿಗೆ ವಿಧಿಸಲಾಗುತ್ತದೆ?
ಭಾರತದಲ್ಲಿ, ಉಡುಗೊರೆ ತೆರಿಗೆಯನ್ನು 1998 ರಲ್ಲಿ ರದ್ದುಗೊಳಿಸಲಾಗಿದೆ. ಆದರೆ ಆರ್ಥಿಕ ವರ್ಷದಲ್ಲಿ ಸ್ವೀಕರಿಸಿದ ಉಡುಗೊರೆಗಳ ಒಟ್ಟು ಮೌಲ್ಯವು 50,000 ರೂಪಾಯಿಯನ್ನು ಮೀರಿದರೆ, ಎಆರ್‌ಐಗಳಿಂದ ಪಡೆದ ಉಡುಗೊರೆಗಳು ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ತೆರಿಗೆಗೆ ಒಳಪಟ್ಟಿರುತ್ತವೆ.
ಉಡುಗೊರೆಗಳ ತೆರಿಗೆಯು ಉಡುಗೊರೆಯ ಮೌಲ್ಯವನ್ನು ಅವಲಂಬಿಸಿರುತ್ತದೆ. ಎನ್‌ಆರ್‌ಐ ಭಾರತೀಯ ನಿವಾಸಿಗೆ ಹಣವನ್ನು ಉಡುಗೊರೆಯಾಗಿ ನೀಡಿದರೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 56(2)(x) ಅಡಿಯಲ್ಲಿ ಸಂಪೂರ್ಣ ಮೊತ್ತವನ್ನು 'ಇತರ ಮೂಲಗಳಿಂದ ಪಡೆದ ಆದಾಯ' ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ.
ನಗದು ರಹಿತ ಉಡುಗೊರೆಗಳಾದ ಆಸ್ತಿ, ಜ್ಯುವೆಲ್ಲರಿ, ಕಲಾ ವಸ್ತು ಮೊದಲಾದವುಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ತೆರಿಗೆಯನ್ನು ವಿಧಿಸಲಾಗುತ್ತದೆ. ಉಡುಗೊರೆಯನ್ನು ಸ್ವೀಕಾರ ಮಾಡಿರುವವರು ಉಡುಗೊರೆ ಪಡೆದ ದಿನಾಂಕದಂದು ಉಡುಗೊರೆಯ ನ್ಯಾಯೋಚಿತ ಮಾರುಕಟ್ಟೆ ಮೌಲ್ಯವನ್ನು (FMV) ನಿರ್ಧರಿಸುವ ಅಗತ್ಯವಿದೆ. ಹಣಕಾಸು ವರ್ಷದಲ್ಲಿ ಸ್ವೀಕರಿಸಿದ ಎಲ್ಲಾ ಉಡುಗೊರೆಗಳ FMV 50,000 ರೂಪಾಯಿಗೆ ಮೀರಿದರೆ, ಹೆಚ್ಚುವರಿ ಮೊತ್ತವನ್ನು 'ಇತರ ಮೂಲಗಳಿಂದ ಪಡೆದ ಆದಾಯ' ಎಂದು ತೆರಿಗೆ ವಿಧಿಸಲಾಗುತ್ತದೆ.
ಯಾವುದಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ?
ಕೆಲವೊಂದು ಉಡುಗೊರೆಗಳ ಮೌಲ್ಯ ಎಷ್ಟೇ ಹೆಚ್ಚಾಗಿದ್ದರೂ ಕೂಡಾ ಅದರ ಮೇಲೆ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ಮದುವೆಯಂತಹ ಸಂದರ್ಭಗಳಲ್ಲಿ ಪಡೆದ ಉಡುಗೊರೆಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ. ಪೋಷಕರು, ಸಹೋದರ/ ಸಹೋದರಿಯರು, ಸಂಗಾತಿಗಳಿಂದ ಪಡೆದ ಎಷ್ಟೇ ಮೌಲ್ಯದ ಉಡುಗೊರೆಯ ಮೇಲೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.
50,000 ರೂಪಾಯಿಗಿಂತ ಅಧಿಕ ಎನ್‌ಐಆರ್‌ಗಳಿಂದ ಉಡುಗೊರೆಗಳನ್ನು ಸ್ವೀಕರಿಸುವ ಭಾರತೀಯ ತೆರಿಗೆದಾರರು ಅಂತಹ ಉಡುಗೊರೆಗಳ ವಿವರಗಳನ್ನು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಉಲ್ಲೇಖ ಮಾಡಬೇಕಾಗುತ್ತದೆ. ತಮ್ಮ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಗಿಫ್ಟ್ ಮೌಲ್ಯ ಮತ್ತು ನೀಡಿದವರ ವಿವರಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
ಆದಾಯ ತೆರಿಗೆ ನಿಯಮವನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕಾದರೆ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಎನ್‌ಆರ್‌ಐಗಳಿಂದ ಪಡೆದ ಎಲ್ಲಾ ಉಡುಗೊರೆಗಳ ಬಗ್ಗೆ ಮಾಹಿತಿಯನ್ನು ಉಲ್ಲೇಖ ಮಾಡುವುದು ಅತೀ ಮುಖ್ಯವಾಗುತ್ತದೆ. ಇನ್ನು ನೀವಾಗಿಯೇ ಆದಾಯ ತೆರಿಗೆ ರಿಟರ್ನ್ ಫೈಲ್ನ ಮಾಡುವಾ ನಿರ್ದಿಷ್ಟ ತೆರಿಗೆಯ ಬಗ್ಗೆ ಅರ್ಥ ಮಾಡಿಕೊಳ್ಳಲು ವೃತ್ತಿಪರರ ಸಲಹೆಯನ್ನು ಪಡೆಯುವುದು ಉತ್ತಮವಾಗಿದೆ.


Click it and Unblock the Notifications