ತೆರಿಗೆ ಉಳಿತಾಯ ನಿಶ್ಚಿತ ಠೇವಣಿ: 2023ರ ಹಣಕಾಸು ವರ್ಷ ಮುಕ್ತಾಯಕ್ಕೂ ಮೊದಲು ಯಾರಾದರೂ ತೆರಿಗೆ ಉಳಿತಾಯ ಮಾಡಲು ಬಯಸುತ್ತಿದ್ದರ ನಿಶ್ಚಿತ ಠೇವಣಿಯು ಉತ್ತಮ ಆಯ್ಕೆಯಾಗಿದೆ. ಐದು ವರ್ಷಗಳ ಅವಧಿ ಮೆಚ್ಯೂರಿಟಿಗೆ ಹಲವು ಬ್ಯಾಂಕ್‌ಗಳು ಹಾಗೂ ಅಂಚೆ ಕಚೇರಿಗಳು ತೆರಿಗೆ ಉಳಿತಾಯದ ನಿಶ್ಚಿತ ಠೇವಣಿಗಳನ್ನು ಹೊಂದಿವೆ. ಈ ಆಯ್ಕೆಯು ನಿಮಗೆ ಗರಿಷ್ಠ ತೆರಿಗೆ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ವಿಶೇಷವಾಗಿ ನೀವು ಅಂಚೆ ಕಚೇರಿ ಯೋಜನೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‌ಪಿಎಸ್), ಗೃಹ ಸಾಲಗಳು ಹಾಗೂ ಮ್ಯೂಚುವಲ್ ಫಂಡ್‌ನಂಥಹ ಆಯ್ಕೆಗಳನ್ನು ಮಾಡಿಕೊಂಡಿದ್ದರೆ ಇದು ಉತ್ತಮ ಆಯ್ಕೆ.
ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಡಿಸಿಬಿ ಬ್ಯಾಂಕ್ ಹಾಗೂ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ತೆರಿಗೆ ಉಳಿತಾಯ ನಿಶ್ಚಿತ ಠೇವಣಿಗಳ ಮೇಲೆ ಶೇ.6.50ರಿಂದ ಶೇ.7.60ರಷ್ಟು ಬಡ್ಡಿದರ ನೀಡುತ್ತವೆ. ತೆರಿಗೆ ಉಳಿತಾಯ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡುವುದರಿಂದ 1961ರ ತೆರಿಗೆ ಕಾಯ್ದೆ ಸೆಕ್ಷನ್ 80C ಪ್ರಕಾರ ತೆರಿಗೆ ಉಳಿತಾಯ ಮಾಡಬಹುದು. ಹೀಗಾಗಿ, ಹಳೇ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡವರು ಮಾತ್ರ ಅದರ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದು. ಹೊಸ ತೆರಿಗೆ ಪದ್ಧತಿಯಲ್ಲಿ ನಿಶ್ಚಿತ ಠೇವಣಿ ಮೂಲಕ ತೆರಿಗೆ ಉಳಿತಾಯ ಆಯ್ಕೆಯು ಲಭ್ಯವಿಲ್ಲ.

ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳಲ್ಲಿ ವ್ಯಕ್ತಿಗಳು ಹಾಗೂ ಹಿಂದೂ ಅವಿಭಜಿತ ಕುಟುಂಬಗಳು ಮಾತ್ರ ಹೂಡಿಕೆ ಮಾಡಬಹುದು ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ಅಪ್ರಾಪ್ತ ವಯಸ್ಸಿನವರು ತಮ್ಮ ಪೋಷಕರ ಸಹಾಯದಿಂದ ಹೂಡಿಕೆ ಮಾಡಬಹುದು. ತೆರಿಗೆ ಉಳಿಸುವ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತ 1.5 ಲಕ್ಷ ರೂ.
ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳು ಐದು ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿರುತ್ತವೆ ಹಾಗೂ ಅವಧಿ ಮುಗಿಯುವುದಕ್ಕಿಂತ ಮೊದಲು ಅಥವಾ ಸಾಲ ಪಡೆಯುವ ಅವಕಾಶಕ್ಕೆ ಅನುಮತಿ ಇರುವುದಿಲ್ಲ. ಹೀಗಾಗಿ, ತೆರಿಗೆ ಉಳಿತಾಯ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲೇ ಹಣಕಾಸಿನ ಲಭ್ಯತೆ ಹಾಗೂ ಗುರಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.
ಒಂದುವೇಳೆ ನೀವು 2023ರ ಹಣಕಾಸು ವರ್ಷ ಮುಕ್ತಾಯಗೊಳ್ಳುವ ಮೊದಲು ತೆರಿಗೆ ಉಳಿತಾಯ ಆಯ್ಕೆಯನ್ನು ಹುಡುಕುತ್ತಿದ್ದರೆ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ಉತ್ತಮ ಆಯ್ಕೆಯಾಗಿದೆ. ಹಲವು ಬ್ಯಾಂಕ್‌ಗಳು ಆಕರ್ಷಕ ಬಡ್ಡಿ ದರದೊಂದಿಗೆ ಈ ಆಯ್ಕೆಯನ್ನು ನೀಡುತ್ತಿದ್ದು, ಇದು 1961ರ ತೆರಿಗೆ ಕಾಯ್ದೆಯ ಸೆಕ್ಷನ್ 80Cಯಡಿ ತೆರಿಗೆ ಉಳಿತಾಯ ಮಾಡುವುದಕ್ಕೆ ನೆರವಾಗುತ್ತದೆ. ಹೀಗಿರುವಾಗ, ಹೂಡಿಕೆ ಮಾಡುವ ಮೊದಲು ಮೆಚ್ಯೂರಿಟಿ ಅವಧಿ ಹಾಗೂ ಹಣಕಾಸಿನ ಲಭ್ಯತೆ-ಅಗತ್ಯತೆಗಳನ್ನು ಪರಿಗಣಿಸುವುದು ಬಹಳ ಮುಖ್ಯ.


Click it and Unblock the Notifications