ಹಿರಿಯ ನಾಗರಿಕರು ತಮ್ಮ ಉಳಿತಾಯದ ಒಂದು ಭಾಗವನ್ನು ಫಿಕ್ಸಿಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಕಷ್ಟಪಟ್ಟು ಹಣ ಉಳಿತಾಯ ಮಾಡಿ, ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು ಎಂದು ಹಣವನ್ನು ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡುವುದು ಸಾಮಾನ್ಯ. ಅದರಲ್ಲೂ ಹಿರಿಯ ನಾಗರೀಕರು ತಮ್ಮ ಹಣವನ್ನು ಸುರಕ್ಷಿತವಾಗಿ ಆದಾಯ ಬರುವಂತೆ ಹೂಡಿಕೆ ಮಾಡುವುದು ನಿಶ್ಚಿತ ಠೇವಣಿಗಳಲ್ಲಿ.
ಭಾರತದ ಬಹುತೇಕ ಎಲ್ಲಾ ಬ್ಯಾಂಕುಗಳು ನಿಶ್ಚಿತ ಠೇವಣಿ ಮೇಲೆ ನೀಡುವ ಬಡ್ಡಿ ದರವು ಸಾಮಾನ್ಯ ಗ್ರಾಹಕರಿಗಿಂತ ಸ್ವಲ್ಪ ಹೆಚ್ಚು ಎಂಬಂತೆ ಹಿರಿಯ ನಾಗರೀಕರಿಗೆ ಹೆಚ್ಚುವರಿ 0.50 ಪರ್ಸೆಂಡ್ ಬಡ್ಡಿ ದರವನ್ನು ಹೊಂದಿವೆ. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇತರೆ ಬ್ಯಾಂಕುಗಳು ಹಿರಿಯ ನಾಗರೀಕರಿಗೆ 0.50 ಪರ್ಸೆಂಟ್ ಹೆಚ್ಚುವರಿ ಬಡ್ಡಿ ಕೊಡುವುದು ಸಾಮಾನ್ಯ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಮುಖ ರೆಪೊ ದರವನ್ನು ಈಗ ಒಂದೂವರೆ ವರ್ಷದಿಂದ ಶೇಕಡಾ 4 ರಷ್ಟು ಕಡಿಮೆ ಮಟ್ಟದಲ್ಲಿ ಇರಿಸಿದೆ. ಹೆಚ್ಚಿನ ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಕಡಿಮೆ ಬಡ್ಡಿದರಗಳನ್ನು ಹೊಂದಿವೆ. ಆದರೆ ಬ್ಯಾಂಕ್‌ಬಜಾರ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಎಫ್‌ಡಿ ಮೇಲೆ 7 ಪ್ರತಿಶತದಷ್ಟು ಬಡ್ಡಿದರಗಳನ್ನು ಸಣ್ಣ ಖಾಸಗಿ ಬ್ಯಾಂಕ್‌ಗಳು ನೀಡುತ್ತವೆ. ಈ ಖಾಸಗಿ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಎಫ್‌ಡಿ ಮೇಲೆ ಉತ್ತಮ ಬಡ್ಡಿ ದರವನ್ನು ನೀಡುತ್ತದೆ. ಹಾಗಾದರೆ ಆ ಬ್ಯಾಂಕುಗಳು ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

ಅಧಿಕ ಬಡ್ಡಿದರವನ್ನು ನೀಡುವ ಬ್ಯಾಂಕ್‌ಗಳು ಯಾವುದು?
ಬಂಧನ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ 7 ಪ್ರತಿಶತ ಬಡ್ಡಿಯನ್ನು ನೀಡುತ್ತವೆ. 1 ಲಕ್ಷ ಹೂಡಿಕೆಯ ಮೊತ್ತವು ಮೂರು ವರ್ಷಗಳಲ್ಲಿ 1.23 ಲಕ್ಷಕ್ಕೆ ಏರಿಕೆ ಆಗುತ್ತದೆ. ಆರ್‌ಬಿಎಲ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ .80 ಶೇಕಡಾ ಬಡ್ಡಿಯನ್ನು ನೀಡುತ್ತದೆ. 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ 1.22 ಲಕ್ಷಕ್ಕೆ ಹೆಚ್ಚಳ ಹೊಂದುತ್ತದೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು IndusInd ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ 6.50 ಪ್ರತಿಶತ ಬಡ್ಡಿಯನ್ನು ನೀಡುತ್ತದೆ. ರೂ 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ ರೂ 1.21 ಲಕ್ಷಕ್ಕೆ ಏರಿಕೆ ಹೊಂದುತ್ತದೆ. ಡಿಸಿಬಿ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ 6.45 ಪ್ರತಿಶತ ಬಡ್ಡಿದರವನ್ನು ನೀಡುತ್ತದೆ. ರೂ 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ ರೂ 1.21 ಲಕ್ಷಕ್ಕೆ ಏರಿಕೆ ಹೊಂದುತ್ತದೆ.
ಆಕ್ಸಿಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಫಿಕ್ಸಿಡ್ ಡೆಪಾಸಿಟ್‌ಗಳಲ್ಲಿ 6.05 ಪ್ರತಿಶತ ಬಡ್ಡಿದರವನ್ನು ನೀಡುತ್ತದೆ. ರೂ 1 ಲಕ್ಷ ಹೂಡಿಕೆ ಮೂರು ವರ್ಷಗಳಲ್ಲಿ ರೂ 1.19 ಲಕ್ಷಕ್ಕೆ ಏರಿಕೆ ಆಗುತ್ತದೆ. ಸಣ್ಣ ಖಾಸಗಿ ಬ್ಯಾಂಕ್‌ಗಳು ಹೊಸ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ), ಆರ್‌ಬಿಐನ ಅಂಗಸಂಸ್ಥೆ, ರೂ 5 ಲಕ್ಷದವರೆಗಿನ ಸ್ಥಿರ ಠೇವಣಿಗಳಲ್ಲಿ ಹೂಡಿಕೆಗೆ ಖಾತರಿ ನೀಡುತ್ತದೆ.
ಈ ಮೇಲಿನ ಎಲ್ಲಾ ಫಿಕ್ಸಿಡ್ ಡೆಪಾಸಿಟ್‌ಗಳ ಡೇಟಾವು 9 ಫೆಬ್ರವರಿ 2022 ರಂತೆ, ಆಯಾ ವೆಬ್‌ಸೈಟ್‌ಗಳಲ್ಲಿ ನೀಡಲಾಗಿದೆ. 60-80 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ನೀಡಲಾದ ಬಡ್ಡಿ ದರಗಳು (1 ಕೋಟಿಗಿಂತ ಕಡಿಮೆ ಠೇವಣಿ ಮೊತ್ತ) ಇದಾಗಿದೆ.


Click it and Unblock the Notifications