ಈ ಎರಡು ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ ಈಗಲೂ 7%

ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆ ಬರುತ್ತಿದ್ದ ಬಡ್ಡಿಯಲ್ಲೇ ಜೀವನ ನಡೆಸುತ್ತಿದ್ದ ಕಾಲವೊಂದಿತ್ತು. ಈಗ ಅದೆಲ್ಲ ನೆನಪಷ್ಟೇ ಎನ್ನುವ ಹಾಗೆ ಆಗಿದೆ. ಈ ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಿಗುವ ಗರಿಷ್ಠ ಬಡ್ಡಿ ದರ ಅಂದರೆ ಅದು 5.4%. ಅದು ಕೂಡ ಮಾಮೂಲಿ ಠೇವಣಿಗಳಿಗೆ.

ಇನ್ನು ಇಂಥದ್ದೇ ಮಾಮೂಲಿ ಡೆಪಾಸಿಟ್ ಗೆ ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ಗರಿಷ್ಠ ದರ 5.5% ಇದೆ. ಐಸಿಐಸಿಐ ಬ್ಯಾಂಕ್ ನಲ್ಲೂ ಗರಿಷ್ಠ ಪ್ರಮಾಣದ ದರ ಇಷ್ಟೇ ಇದೆ. ಹಾಗಿದ್ದರೆ ಯಾವ ಬ್ಯಾಂಕ್ ನಲ್ಲಿ ಗರಿಷ್ಠ ಬಡ್ಡಿ ದರ ಎಷ್ಟಿದೆ ಎಂಬ ಮಾಹಿತಿ ಹೀಗಿದೆ: ಐಸಿಐಸಿಐ ಬ್ಯಾಂಕ್- ಗರಿಷ್ಠ 5.5%, ಎಸ್ ಬಿಐ- ಗರಿಷ್ಠ 5.4%, ಎಚ್ ಡಿಎಫ್ ಸಿ ಬ್ಯಾಂಕ್- ಗರಿಷ್ಠ 5.5%, ಇಂಡಸ್ ಇಂಡ್ ಬ್ಯಾಂಕ್- 7%, ಯೆಸ್ ಬ್ಯಾಂಕ್- 7%.

ಇವು ಪ್ರಮುಖ ವಾಣಿಜ್ಯ ಬ್ಯಾಂಕ್ ಗಳು

ಇವು ಪ್ರಮುಖ ವಾಣಿಜ್ಯ ಬ್ಯಾಂಕ್ ಗಳು

ಇಲ್ಲಿ ಸಣ್ಣ ಹಣಕಾಸು ಬ್ಯಾಂಕ್ ಗಳ ಬಡ್ಡಿ ದರವನ್ನು ಹೋಲಿಸಿಲ್ಲ. ದೇಶದಲ್ಲಿನ ಪೂರ್ಣ ಪ್ರಮಾಣದ ವಾಣಿಜ್ಯ ಬ್ಯಾಂಕ್ ಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ನೋಡಿದರೆ ಸ್ಪಷ್ಟವಾಗುತ್ತದೆ; ಅತಿ ಹೆಚ್ಚು ಬಡ್ಡಿ ನೀಡುತ್ತಿರುವ ಆ ಎರಡು ಬ್ಯಾಂಕ್ ಗಳೆಂದರೆ, ಇಂಡಸ್ ಇಂಡ್ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್. ಇನ್ನು ಹಿರಿಯ ನಾಗರಿಕ ಹೆಸರಿನಲ್ಲಿ ಠೇವಣಿ ಮಾಡಿದರೆ ವಾರ್ಷಿಕವಾಗಿ 7.5% ಬಡ್ಡಿ ದೊರೆಯುತ್ತದೆ.

1ರಿಂದ 3 ವರ್ಷದ ಅವಧಿಗೆ 7% ಬಡ್ಡಿ

1ರಿಂದ 3 ವರ್ಷದ ಅವಧಿಗೆ 7% ಬಡ್ಡಿ

ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ವಿವಿಧ ಅವಧಿಗೆ ಠೇವಣಿ ಮಾಡಬಹುದು. 1ರಿಂದ 3 ವರ್ಷದ ಅವಧಿಗೆ ಮಾಮೂಲಿ ಠೇವಣಿಗೆ ವಾರ್ಷಿಕ 7 ಪರ್ಸೆಂಟ್ ಬಡ್ಡಿ ದರ ದೊರೆಯುತ್ತದೆ. ಅದೇ ರೀತಿ ಯೆಸ್ ಬ್ಯಾಂಕ್ ನಲ್ಲೂ 1ರಿಂದ 3 ವರ್ಷಗಳ ಅವಧಿಗೆ ವಾರ್ಷಿಕವಾಗಿ 7% ಬಡ್ಡಿ ದರ ದೊರೆಯುತ್ತದೆ.

5 ಲಕ್ಷ ರುಪಾಯಿಯೊಳಗಿನ ಬ್ಯಾಂಕ್ ಡೆಪಾಸಿಟ್ ಗೆ ಇನ್ಷೂರೆನ್ಸ್

5 ಲಕ್ಷ ರುಪಾಯಿಯೊಳಗಿನ ಬ್ಯಾಂಕ್ ಡೆಪಾಸಿಟ್ ಗೆ ಇನ್ಷೂರೆನ್ಸ್

ಅಂದ ಹಾಗೆ 5 ಲಕ್ಷ ರುಪಾಯಿಯೊಳಗಿನ ಬ್ಯಾಂಕ್ ಡೆಪಾಸಿಟ್ ಗೆ ಇನ್ಷೂರೆನ್ಸ್ ಇದೆ. ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಈ ಇನ್ಷೂರೆನ್ಸ್ ದೊರೆಯಲಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಸಂಸ್ಥೆ ಇದು. ನೀವು ಐದು ಲಕ್ಷ ರುಪಾಯಿಯೊಳಗೆ ಮಾಡಿರುವ ಡೆಪಾಸಿಟ್ ಸುರಕ್ಷಿತ. ಇನ್ಷೂರೆನ್ಸ್ ಕ್ಲೇಮ್ ಗಳಿಗೆ ಸಂಬಂಧಿಸಿದಂತೆ ಯಾವ್ಯಾವ ವಿಚಾರಗಳು ಒಳಗೊಂಡಿರುತ್ತವೆ ಎಂಬುದು ನಮಗೆ ಗೊತ್ತಿರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+