ಮನೆಯನ್ನು ಖರೀದಿಸುವುದು ಜೀವನದ ಒಂದು ಮುಖ್ಯವಾದ ಮೈಲಿಗಲ್ಲಾಗಿದೆ. ಆದರೆ ಅದಕ್ಕೆ ಸಾಕಷ್ಟು ಸಮಸ್ಯೆಗಳು ಕೂಡಾ ಖಂಡಿತವಾಗಿ ಬಂದೇ ಬರುತ್ತದೆ. ಅದರಲ್ಲಿ ಮುಖ್ಯವಾಗಿರುವುದು ಹಣದ ಸಮಸ್ಯೆ ಆಗಿದೆ. ನಮ್ಮ ಬಜೆಟ್‌ಗೆ ತಕ್ಕುದಾದ ಮನೆ ಹುಡುಕಿ, ಅದಕ್ಕೆ ಹೆಚ್ಚುವರಿ ಹಣ ಬೇಕಾದಲ್ಲಿ ಹೊಂದಿಸುವುದು ದೊಡ್ಡ ತಲೆನೋವು.
ಹಾಗಿದ್ದಾಗ ನಮಗೆ ಸಹಾಯ ಮಾಡುವುದು ಗೃಹ ಸಾಲವಾಗಿದೆ. ಆದರೆ ನೀವು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಕೊಂಚ ಕಷ್ಟ ಎನಿಸುತ್ತದೆ. ಆದರೂ ಸರಿಯಾದ ಜ್ಞಾನ ಮತ್ತು ತಯಾರಿಯೊಂದಿಗೆ, ನೀವು ಯೋಚಿಸುವುದಕ್ಕಿಂತ ಹೆಚ್ಚು ಸರಳವಾಗಿರುತ್ತದೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ಹಂತಗಳು, ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ 25 ಬ್ಯಾಂಕ್‌ಗಳ ಮಾಹಿತಿ ಇಲ್ಲಿದೆ ಮುಂದೆ ಓದಿ....

ಕ್ರೆಡಿಟ್ ಸ್ಕೋರ್ ಬಗ್ಗೆ ತಿಳಿದಿರಿ
ನಿಮ್ಮ ಗೃಹ ಸಾಲದ ಬಡ್ಡಿ ದರ ಮತ್ತು ಷರತ್ತುಗಳನ್ನು ನಿರ್ಧರಿಸುವಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು, ನಿಮ್ಮ ಕ್ರೆಡಿಟ್ ವರದಿಯ ಪ್ರತಿಯನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಸ್ಕೋರ್ ಅನ್ನು ಪರಿಶೀಲಿಸಿ. ಸಾಲ ಕಡಿಮೆ ಬಡ್ಡಿದರದಲ್ಲಿ ಲಭ್ಯವಾಗಬೇಕಾದರೆ ನಿಮಗೆ 750 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಮುಖ್ಯವಾಗುತ್ತದೆ. ನಿಮ್ಮ ಸ್ಕೋರ್ ಕಡಿಮೆಯಿದ್ದರೆ, ಬಾಕಿ ಇರುವ ಸಾಲಗಳನ್ನು ಪಾವತಿಸುವ ಮೂಲಕ ಮತ್ತು ಸಕಾಲಿಕ ಪಾವತಿಗಳನ್ನು ಮಾಡುವ ಮೂಲಕ ಅದನ್ನು ಸುಧಾರಿಸಿ.
ನಿಮ್ಮ ಬಜೆಟ್ ಅನ್ನು ನಿರ್ಧರಿಸಿ
ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ಆರಂಭ ಮಾಡುವ ಮೊದಲು ನೀವು ಎಷ್ಟು ಸಾಲವನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಬಡ್ಡಿ ದರಗಳು, ಸಾಲದ ನಿಯಮಗಳು ಮತ್ತು ಡೌನ್ ಪೇಮೆಂಟ್ ಮೊತ್ತದಂತಹ ಅಂಶಗಳ ಆಧಾರದ ಮೇಲೆ ನಿಮ್ಮ ಮಾಸಿಕ ಇಎಂಐ ಪಾವತಿಗಳನ್ನು ಅಂದಾಜು ಮಾಡಲು ಆನ್‌ಲೈನ್ ಕ್ಯಾಲ್ಕುಲೇಟರ್‌ಗಳನ್ನು ಬಳಸಿ. ನಿಮ್ಮ ಬಜೆಟ್ ಬಗ್ಗೆ ವಾಸ್ತವಿಕವಾಗಿರಿ.
25 ಬ್ಯಾಂಕ್‌ಗಳ ಬಡ್ಡಿದರ (30-75 ಲಕ್ಷ ರೂಪಾಯಿ ಸಾಲ)
1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 8.40-9.75 ಬಡ್ಡಿದರ
2. ಬ್ಯಾಂಕ್ ಆಫ್ ಬರೋಡಾ: 8.40-10.60 ಬಡ್ಡಿದರ
3. ಬ್ಯಾಂಕ್ ಆಫ್ ಇಂಡಿಯಾ: 8.30-10.75 ಬಡ್ಡಿದರ
4. ಬ್ಯಾಂಕ್ ಆಫ್ ಮಹಾರಾಷ್ಟ್ರ: 8.35-10.90 ಬಡ್ಡಿದರ
5. ಕೆನರಾ ಬ್ಯಾಂಕ್: 8.45-11.25 ಬಡ್ಡಿದರ
6. ಸೆಂಟ್ರಲ್ ಬ್ಯಾಂಕ್: 8.35-9.50 ಬಡ್ಡಿದರ
7. ಡಿಬಿಎಸ್ ಬ್ಯಾಂಕ್: 9.40ಗಿಂತ ಅಧಿಕ ಬಡ್ಡಿದರ
8. ಫೆಡರಲ್ ಬ್ಯಾಂಕ್: 8.80 ಗಿಂತ ಕಡಿಮೆ ಬಡ್ಡಿದರ
9. ಎಚ್‌ಡಿಎಫ್‌ಸಿ ಬ್ಯಾಂಕ್: 8.55-9.60 ಬಡ್ಡಿದರ
10. ಐಸಿಐಸಿಐ ಬ್ಯಾಂಕ್: 9-9.95 ಬಡ್ಡಿದರ
11. ಇಂಡಿಯನ್ ಬ್ಯಾಂಕ್: 8.40-9.80 ಬಡ್ಡಿದರ
12. ಐಬಿಒ: 8.40 ಬಡ್ಡಿದರಕ್ಕಿಂತ ಮೇಲೆ
13. ಐಡಿಬಿಐ ಬ್ಯಾಂಕ್: 8.45-12.25 ಬಡ್ಡಿದರ
14. ಜೆ&ಕೆ ಬ್ಯಾಂಕ್: 8.75-9.85 ಬಡ್ಡಿದರ
15. ಕರ್ನಾಟಕ ಬ್ಯಾಂಕ್: 8.60-10.60 ಬಡ್ಡಿದರ
16. ಕರೂರ್ ವ್ಯಾಸ ಬ್ಯಾಂಕ್: 8.95-11 ಬಡ್ಡಿದರ
17. ಕೋಟಕ್ ಮಹೀಂದ್ರಾ ಬ್ಯಾಂಕ್: 8.70-8.75 ಬಡ್ಡಿದರ
18. ಪಂಜಾಬ್ ನ್ಯಾಷನಲ್ ಬ್ಯಾಂಕ್: 8.40-10.10 ಬಡ್ಡಿದರ
19. ಪಂಜಾಬ್ & ಸಿಂಧ್ ಬ್ಯಾಂಕ್: 8.50-10.0 ಬಡ್ಡಿದರ
20. ಆರ್‌ಬಿಎಲ್ ಬ್ಯಾಂಕ್: 9.10-11.55 ಬಡ್ಡಿದರ
21. ಆಕ್ಸಿಸ್ ಬ್ಯಾಂಕ್: 8.7-9.1 ಬಡ್ಡಿದರ
22. ಸೌತ್ ಇಂಡಿಯನ್ ಬ್ಯಾಂಕ್: 9.84-11.24 ಬಡ್ಡಿದರ
23. ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್: 9.45-9.95 ಬಡ್ಡಿದರ
24. ಯುಸಿಒ ಬ್ಯಾಂಕ್: 8.45-10.30 ಬಡ್ಡಿದರ
25. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 8.35-10.75 ಬಡ್ಡಿದರ
ಗಮನಿಸಿ: ಹೋಮ್ ಲೋನ್ ಬಡ್ಡಿ ದರಗಳು ಅವಧಿಯೊಂದಿಗೆ ಬದಲಾಗುತ್ತವೆ ಅಥವಾ ನಿರ್ದಿಷ್ಟಪಡಿಸಿದ ಲೋನ್ ಮೊತ್ತದೊಳಗೆ ಕ್ರೆಡಿಟ್ ಸ್ಕೋರ್ ಅನ್ನು ಶ್ರೇಣಿಯಾಗಿ ಸೂಚಿಸಲಾಗುತ್ತದೆ. ಫೆಬ್ರುವರಿ 09, 2024 ರಂತೆ ಆಯಾ ಬ್ಯಾಂಕಿನ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾದ ಡೇಟಾ. ಸಾಲಗಳು ಮತ್ತು ವಿಮಾ ಉತ್ಪನ್ನಗಳನ್ನು ಹೋಲಿಸಲು ಆನ್‌ಲೈನ್ ಮಾರುಕಟ್ಟೆಯಾದ BankBazaar.com ನಿಂದ ಕೊಡುಗೆ ನೀಡಲಾಗಿದೆ.


Click it and Unblock the Notifications