ಯಾವುದೇ ವ್ಯಕ್ತಿಯಾದರೂ ಕೂಡಾ ಹೂಡಿಕೆ ಅವರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಾವು ಸಂಪಾದನೆ ಮಾಡುವ ಹಣದಲ್ಲಿ ಕೊಂಚವಾದರೂ ನಾವು ಉಳಿತಾಯ ಮಾಡಬೇಕು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ. ಉದ್ಯೋಗಿಯಾಗಿರಲಿ ಅಥವಾ ಉದ್ಯಮಿಯಾಗಿರಲಿ ಇದು ಮುಖ್ಯವಾಗುತ್ತದೆ.
ಉಳಿತಾಯವು ಚಿಕ್ಕದಾಗಿರಬಹುದು ಅಥವಾ ದೊಡ್ಡದಾಗಿರಬಹುದು, ಆದರೆ ಉಳಿತಾಯ ಅವಶ್ಯಕ. ನಿಮ್ಮ ಆದಾಯಕ್ಕೆ ಅನುಗುಣವಾಗಿ ನೀವು ಸರಿಯಾದ ಸಮಯದಲ್ಲಿ ಉಳಿತಾಯವನ್ನು ಪ್ರಾರಂಭಿಸಬೇಕು. ಇಂದು ನಾವು ನಿಮಗೆ ಪೋಸ್ಟ್ ಆಫೀಸ್‌ನ (ಕಿಸಾನ್ ವಿಕಾಸ್ ಪತ್ರ ಯೋಜನೆ) ಬಗ್ಗೆ ಮಾಹಿತಿ ನೀಡುತ್ತೇವೆ. ಇಲ್ಲಿ ನೀವು ಮಾಡಿದ ಹೂಡಿಕೆ ಡಬಲ್ ಆಗುತ್ತದೆ.

ಕಿಸಾನ್ ವಿಕಾಸ್ ಪತ್ರ ಯೋಜನೆ ಹೂಡಿಕೆ ಸುರಕ್ಷಿತ
ನೀವು ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನೀವು ಮಾರುಕಟ್ಟೆಯ ಏರಿಳಿತಗಳಿಗೆ ಆತಂಕ ಪಡೆಬೇಕಾಗಿಲ್ಲ. ಎಲ್ಲಾ ವಯಸ್ಸಿನ ಜನರಿಗೆ ಅಂಚೆ ಕಚೇರಿಯಲ್ಲಿ ಹಲವಾರು ವಿಭಿನ್ನ ಯೋಜನೆಗಳು ಲಭ್ಯವಿದೆ.
ಅಂಚೆ ಕಚೇರಿಯು ಅತ್ಯುತ್ತಮ ಮತ್ತು ಸುರಕ್ಷಿತ ಆದಾಯವನ್ನು ನೀಡುವ ಹಲವಾರು ಯೋಜನೆಗಳನ್ನು ಹೊಂದಿದೆ ಎಂದು ನಾವು ತಿಳಿದಿರಬೇಕು. ಆ ಯೋಜನೆಗಳಲ್ಲಿ ಒಂದು ಜನಪ್ರಿಯ ಯೋಜನೆ ಕಿಸಾನ್ ವಿಕಾಸ್ ಪತ್ರ ಆಗಿದೆ. ಹಾಗೆಯೇ ಹಣವನ್ನು ಡಬಲ್ ಮಾಡುವ ಯೋಜನೆ ಎಂದು ಕೂಡಾ ಹೆಸರುವಾಸಿಯಾಗಿದೆ. ಇದರ ಬಡ್ಡಿ ದರವನ್ನೂ ಸರ್ಕಾರ ಹೆಚ್ಚಿಸಿದೆ.
ನಿಮಗೆ ಎಷ್ಟು ಬಡ್ಡಿ ಸಿಗುತ್ತದೆ?
ಈ ಹಿಂದೆ ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡುವವರಿಗೆ ಶೇಕಡ 7 ರಷ್ಟು ಬಡ್ಡಿದರ ಲಭ್ಯವಾಗುತ್ತದೆ. ಈ ವರ್ಷ ಜುಲೈ 1, 2023 ರಿಂದ ಶೇಕಡ 7.5 ಕ್ಕೆ ಹೆಚ್ಚಿಸಲಾಗಿದೆ. ಬಡ್ಡಿಯ ಹೆಚ್ಚಳದಿಂದಾಗಿ, ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರ ಹಣ ಡಬಲ್ ಆಗುತ್ತದೆ.
ಮೊದಲು ಹಣ 123 ತಿಂಗಳಲ್ಲಿ ಡಬಲ್ ಆಗುತ್ತದೆ. ನಂತರ ಈ ಅವಧಿ 120 ತಿಂಗಳಿಗೆ ಇಳಿಸಲಾಗಿದೆ. ಈಗ ಕೇವಲ 115 ತಿಂಗಳಲ್ಲಿ ನೀವು ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರದಲ್ಲಿ ಮಾಡಿದ ಹೂಡಿಕೆಯು ಡಬಲ್ ಆಗುತ್ತದೆ. ಕಿಸಾನ್ ವಿಕಾಸ್ ಪತ್ರದಲ್ಲಿ, ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ಮೇಲೆ ಹೆಚ್ಚುವರಿ ಲಾಭ ನೀಡಲಾಗುತ್ತದೆ. ಈ ಕಾರಣಕ್ಕಾಗಿ ಮೊತ್ತವು ಅಲ್ಪಾವಧಿಯಲ್ಲಿ ದ್ವಿಗುಣಗೊಳ್ಳುತ್ತದೆ.
ಎಷ್ಟು ಹೂಡಿಕೆ ಮಾಡಬಹುದು?
ನೀವು 1000 ರೂಪಾಯಿಗಳೊಂದಿಗೆ ಈ ಯೋಜನೆಯಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು. ಇದರಾಚೆಗೆ ನೀವು 200 ರೂಪಾಯಿಗಳ ಗುಣಾಕಾರದಲ್ಲಿ ಹೂಡಿಕೆ ಮಾಡಬೇಕು. ಇದರಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಅಂದರೆ, ನೀವು ಎಷ್ಟು ಹೆಚ್ಚು ಹೂಡಿಕೆ ಮಾಡುತ್ತೀರೋ ಅಷ್ಟು ಲಾಭವನ್ನು ಪಡೆಯುತ್ತೀರಿ.
ನೀವು ಬಯಸಿದರೆ, ನೀವು ಕಿಸಾನ್ ವಿಕಾಸ್ ಪತ್ರದಲ್ಲಿ ಸಿಂಗಲ್ ಅಕೌಂಟ್ ಅಥವಾ ಜಾಯಿಂಟ್ ಅಕೌಂಟ್ ಅನ್ನು ಸಹ ತೆರೆಯಬಹುದು. ವಿಶೇಷವೆಂದರೆ ಈ ಖಾತೆಯನ್ನು ಹತ್ತು ವರ್ಷದೊಳಗಿನ ಮಕ್ಕಳ ಹೆಸರಲ್ಲೂ ತೆರೆಯಬಹುದಾಗಿದೆ. ನಿಮ್ಮ ಸಮೀಪದ ಯಾವುದೇ ಅಂಚೆ ಕಚೇರಿಗೆ ಹೋಗಿ ಕಿಸಾನ್ ವಿಕಾಸ್ ಪತ್ರ ಡೆಪಾಸಿಟ್ ಖಾತೆಯನ್ನು ತೆರೆಯಬಹುದು.


Click it and Unblock the Notifications