ದೇಶದಲ್ಲಿ ಈಗ ಹಣದುಬ್ಬರ ಹೆಚ್ಚಳವಾಗಿದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇಂಧನ, ಆಹಾರ, ಸಾಲದ ಹೊರೆ ಎಲ್ಲವು ಹೆಚ್ಚಾಗಿದೆ. ಜನರ ಜೇಬಿಗೆ ನಿರಂತರ ಕತ್ತರಿ ಬೀಳುತ್ತಿದೆ. ಈ ನಡುವೆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ಅವರ ಶಿಕ್ಷಣಕ್ಕಾಗಿ ಹೇಗೆ ಉಳಿತಾಯ ಮಾಡುವುದು, ಮಕ್ಕಳಿನ ಮುಂದಿನ ಭವಿಷ್ಯವನ್ನು ಹೇಗೆ ರೂಪಿಸುವುದು ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ.
ಪ್ರಸ್ತುತ ಕೊರೊನಾ ವೈರಸ್‌ನ ಹೊಸ ಅಲೆಯ ಆತಂಕ, ಉಕ್ರೇನ್ ಹಾಗೂ ರಷ್ಯಾ ಯುದ್ಧದ ಪ್ರಭಾವವು ಜನರ ಮೇಲೆ ಬೀರಿದೆ. ರಫ್ತು, ಆಮದು ಸ್ಥಗಿತವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಜನರ ತಿಂಗಳ ಬಜೆಟ್ ಬುಡಮೇಲಾಗಿದೆ. ಉಳಿತಾಯ ಬಿಡಿ, ಬರುವಷ್ಟು ಸಂಬಳದಲ್ಲಿ ಪೂರ್ತಿ ತಿಂಗಳು ಖರ್ಚು ನಿಭಾಯಿಸುವುದು ಕೂಡಾ ಕಷ್ಟವಾಗಿದೆ. ಈ ನಡುವೆ ಈ ಸ್ಪರ್ಧಾತಕ ಜಗತ್ತಿನಲ್ಲಿ ಯಾವ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡುವುದು ಎಂಬುವುದು ಕೂಡಾ ಚರ್ಚಿಸಿ ಕೈಗೊಳ್ಳಬೇಕಾದ ನಿರ್ಧಾರವಾಗಿದೆ.
ಈ ಸಂದರ್ಭದಲ್ಲಿ ಹಲವಾರು ಮಂದಿಗೆ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಗುಲುವ ಖರ್ಚನ್ನು ಹೇಗೆ ನಿಭಾಯಿಸುವುದು ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ. ಶಿಕ್ಷಣಕ್ಕಾಗಿ ಸಾಲವು ಲಭ್ಯವಾಗುತ್ತದೆ. ಆದರೆ ಅದರ ಬಡ್ಡಿದರವು ತೀರಾ ಅಧಿಕವಾದ ಕಾರಣ ಜನರು ಸಾಲದ ಸುಳಿಗೆ ಬೀಳುವುದಕ್ಕೆ ಇಚ್ಛಿಸುವುದಿಲ್ಲ. ಈ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ, ಶಿಕ್ಷಣಕ್ಕಾಗಿ ನೀವು ಹೇಗೆ ಉಳಿತಾಯ ಮಾಡುವುದು, ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಹೇಗೆ ವಿವರಿಸುವುದು, ಭವಿಷ್ಯದ ನಿರ್ಧಾರ ಹೇಗೆ ಕೈಗೊಳ್ಳುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಶಿಕ್ಷಣದ ಮಹತ್ವವನ್ನು ಮಕ್ಕಳಿಗೆ ಒತ್ತಿ ಹೇಳಿ, ಹೂಡಿಕೆ ಮಾಡಿ
ನೀವು ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಮಾಡುವ ಮುನ್ನ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ನಿರ್ಧಾರ ಮಾಡಿ. ದುಬಾರಿ ಶಿಕ್ಷಣದ ಕಡೆಗೆ ವಾಲುವಾಗ ನೀವು ಹೂಡಿಕೆಯ ವಿಚಾರದಲ್ಲಿ ತಂತ್ರಗಾರಿಕೆ ಮಾಡುವುದು ಮುಖ್ಯವಾಗುತ್ತದೆ. ಪ್ರಪಂಚದ ಆರ್ಥಿಕ ಆಗುಹೋಗುಗಳತ್ತವು ಗಮನವಿರಲಿ. ಹಣದ ಅಪಾಯಗಳು ಸೇರಿದಂತೆ ವಿವಿಧ ಅಪಾಯಗಳನ್ನು ಸರಿದೂಗಿಸಲು ಭೌಗೋಳಿಕೆ ಘಟನೆಗಳ ಬಗ್ಗೆ ತಿಳಿದಿರಿ.
ನಿಮ್ಮ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುತ್ತಾರ?
ಮಕ್ಕಳು ಹೆಚ್ಚಾಗಿ ನಾವು ಮುಂದೆ ಏನು ಮಾಡಬೇಕು ಎಂಬುವುದು ಅನಿಶ್ಚಿತವಾಗಿರುತ್ತದೆ. ಹಲವಾರು ಗೊಂದಲಗಳು ಇರುತ್ತದೆ. ಈ ಬಗ್ಗೆ ಮಕ್ಕಳೊಂದಿಗೆ ಕೂತು ನೀವು ಚರ್ಚಿಸಿ. ಮಕ್ಕಳ ಮೇಲೆ ನಿಮ್ಮ ನಿರ್ಧಾರವನ್ನು ಹೇರಬೇಡಿ. ಶಿಕ್ಷಣದ ಯೋಜನೆಯು ನಿರಂತರವಾಗಿ ಹೊಂದಿಕೊಳ್ಳುವ ಅಗತ್ಯವಿದೆ. ಮಕ್ಕಳು ಒಂದು ವೇಳೆ ವಿದೇಶದಲ್ಲಿ ಹೂಡಿಕೆ ಮಾಡುವುದಾದರೆ ಸರಿಯಾಗಿ ಯೋಜನೆ ರೂಪಿಸಿಕೊಳ್ಳಿ. ಸರ್ಕಾರದ ಯೋಜನೆಗಳ ಬಗ್ಗೆ ತಿಳಿಯಿರಿ. ಹಾಗೆಯೇ ಜಾಗತಿಕ ವಿಚಾರಗಳ ಬಗ್ಗೆ ತಿಳಿಯಿರಿ. ಒಂದು ವೇಳೆ ಅಂತಾರಾಷ್ಟ್ರೀಯವಾಗಿ ರೂಪಾಯಿ ಮೌಲ್ಯ ಕುಸಿತವಾದರೆ ವಿದೇಶಿ ಶಿಕ್ಷಣ ದುಬಾರಿಯಾಗಬಹುದು.
ತುರ್ತು ನಿಧಿಗಾಗಿ ಅಗ್ಗ ವಸ್ತು ಖರೀದಿ
ನೀವು ತುರ್ತು ನಿಧಿಯಾಗಿ ಹಣವನ್ನೇ ಹೊಂದಿರಲು ಸಾಧ್ಯವಾಗದು. ಅದಕ್ಕಾಗಿ ಬೇರೆ ದಾರಿಗಳು ಕೂಡಾ ಇದೆ. ನೀವು ಯಾವುದಾದರು ವಸ್ತು ಉದಾಹರಣೆ ಚಿನ್ನ ಅಗ್ಗವಾಗಿರುವಾಗ ಖರೀದಿ ಮಾಡಿ, ಬಳಿಕ ಹಣ ಹೆಚ್ಚಾದಾಗ ಮಾರಾಟ ಮಾಡಿ ಅದರ ಲಾಭವನ್ನು ಪಡೆಯಬಹುದು. ಈ ಮೂಲಕ ನಿಮ್ಮ ಮಕ್ಕಳ ಶಿಕ್ಷಣಕ್ಕೆ ನೀವು ಉಳಿತಾಯ ಮಾಡಬಹುದು. ಮಕ್ಕಳ ಶಿಕ್ಷಣಕ್ಕೆ ಹಣ ಬೇಕಾದಾಗ ನೀವು ಈ ಉಳಿತಾಯದ ಹಣವನ್ನು ಬಳಕೆ ಮಾಡಬಹುದು. ಹಾಗೆಯೇ ಯಾವಾಗಲೂ ಪ್ಲಾನ್ ಬಿ ಹೊಂದಿರುವುದು ಮುಖ್ಯವಾಗಿದೆ. ಬೇರೆಡೆ ದುಂದು ಖರ್ಚನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
ಹೆಚ್ಚು ಹೂಡಿಕೆ ಮಾಡಿ, ಎಚ್ಚರವಾಗಿರಿ
ಕೆಲವೊಮ್ಮೆ, ನಿಮ್ಮ ಯೋಜನೆಯನ್ನು ನೀವು ಸುಧಾರಿಸಬೇಕಾಗುತ್ತದೆ. ವೇತನ ಹೆಚ್ಚಳ/ಬೋನಸ್‌ಗಳಂತಹ ಸಂದರ್ಭದಲ್ಲಿ ನೀವು ಸುರಕ್ಷಿತ ಹೂಡಿಕೆ ಮಾಡಿ. ಈ ಹೂಡಿಕೆಯು ನಿಮ್ಮ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲಿದೆ. ಹಾಗೆಯೇ ಮಕ್ಕಳ ಶಿಕ್ಷಣಕ್ಕೆ ಎಷ್ಟು ಹಣ ಬೇಕಾಗಬಹುದು ಎಂದು ನೀವು ಮಕ್ಕಳು ಸಣ್ಣವರಾಗಿರುವಾಗಲೇ ನಿರ್ಧಾರ ಮಾಡುವುದು ಕಷ್ಟವಾದರೂ ಕೂಡಾ ಒಂದು ಅಂದಾಜು ನಿಮ್ಮಲ್ಲಿ ಇರಲಿ. ಶಿಕ್ಷಣ ಸಲಹೆಗಾರರು, ಆರ್ಥಿಕ ಸಲಹೆಗಾರರನ್ನು ನೀವು ಸಂಪರ್ಕ ಮಾಡಬಹುದು.


Click it and Unblock the Notifications