ಕಳೆದ ಒಂದು ವಾರದ ಅವಧಿಯಲ್ಲಿಯೇ ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ಕೆಜಿ ಟೊಮೆಟೊ ದರವು 100 ಗಡಿಯನ್ನು ಈಗಾಗಲೇ ದಾಟಿದೆ. ಹಲವಾರು ಪ್ರದೇಶಗಳಲ್ಲಿ ಟೊಮೆಟೊ ದರವು 120 ರೂಪಾಯಿಗೂ ಅಧಿಕವಾಗಿದೆ. ಒಟ್ಟಾರೆಯಾಗಿ ಬಹುತೇಕ ಎಲ್ಲ ಅಡುಗೆಗಳಿಗೂ ಬೇಕಾಗುವ ಈ ಟೊಮೆಟೊವು ಈಗ ಜನರ ಜೇಬಿಗೆ ಕತ್ತರಿ ಹಾಕಿದೆ. ಈ ನಡುವೆ ಮೀಮ್ಸ್‌ಗಳು ಕೂಡಾ ಹರಿದಾಡುತ್ತಿದೆ.
ಕಳೆದ 15 ದಿನಗಳ ಅವಧಿಯನ್ನು ನಾವು ನೋಡಿದಾಗ ಟೊಮೆಟೊದ ರಿಟೇಲ್ ದರವು ಹೆಚ್ಚಳವಾಗುತ್ತಾ ಸಾಗುತ್ತಿದೆ. ಕೇಂದ್ರ ಸರ್ಕಾರವು ಈ ಬೆಲೆ ಏರಿಕೆಯು ತಾತ್ಕಾಲಿಕವಾಗಿದೆ. ಈ ಮಾನ್ಸೂನ್‌ನಿಂದ ಆದ ನಷ್ಟದಿಂದಾಗಿ ಸ್ಥಿತಿ ಹೀಗಾಗಿದೆ. ಶೀಘ್ರವೇ ದರ ಇಳಿಕೆಯಾಗಲಿದೆ ಎಂದು ಭರವಸೆಯನ್ನು ನೀಡಿದೆ. ಆದರೆ ವ್ಯಾಪಾರಿಗಳು ಹಾಗೂ ಟೊಮೆಟೊ ಕೃಷಿ ಮಾಡುವವರ ಪ್ರಕಾರ ಈ ಬೆಲೆ ಏರಿಕೆಯೂ ಶೀಘ್ರವೇ ನಿಲ್ಲದು, ಬೆಲೆ ಶೀಘ್ರ ಇಳಿಕೆಯಾಗದು ಎಂದು ಹೇಳುತ್ತಾರೆ, ಯಾಕೆ, ಕಾರಣವೇನು ತಿಳಿಯೋಣ ಮುಂದೆ ಓದಿ.....

ಟೊಮೆಟೊ ತೀರಾ ದುಬಾರಿಯಾಗಿದ್ದು ಯಾಕೆ?
ಟೊಮೆಟೊ ದರವು ತೀರಾ ದುಬಾರಿಯಾಗಲು ಪ್ರಮುಖ ಕಾರಣ ನಮಗೆ ಎರಡು ತಿಂಗಳ ಅವಧಿಯಲ್ಲಿ ನಡೆದ ವಿದ್ಯಮಾನವಾಗಿದೆ. ಏಪ್ರಿಲ್ ಮೇ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಟೊಮೆಟೊ ದರವು ಭಾರೀ ಇಳಿಕೆಯಾಗಿದೆ. ಇದರಿಂದಾಗಿ ರೈತರುಗಳು ಸಿಟ್ಟಿನಲ್ಲಿ ಬೆಳೆಯನ್ನೇ ನಾಶ ಮಾಡಿದ್ದಾರೆ. ಇನ್ನು ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕಾಣಿಸಿಕೊಂಡ ಅಸಾಮಾನ್ಯ ಶಾಖದಿಂದಾಗಿ ಕೀಟದ ದಾಳಿಗಳು ಹೆಚ್ಚಳವಾಗಿ ಬೆಳೆ ನಾಶವಾಗಿದೆ.
ಭಾರತದಲ್ಲಿ ಎರಡು ಪ್ರಮುಖ ಟೊಮೆಟೊ ಬೆಳೆಗಳ ಕೃಷಿಯನ್ನು ಮಾಡಲಾಗುತ್ತದೆ. ಅದರಲ್ಲಿ ಒಂದು ರಾಬಿ ಬೆಳೆಯಾಗಿದೆ. ಇದನ್ನು ಪ್ರಮುಖವಾಗಿ ಮಹಾರಾಷ್ಟ್ರದ ಜುನ್ನಾರ್ ತಾಲೂಕಿನಲ್ಲಿ, ಕರ್ನಾಟಕದ ಕೆಲವು ಪ್ರದೇಶಗಳಲ್ಲಿ, ಆಂಧ್ರಪ್ರದೇಶದಲ್ಲಿ ಮಾರ್ಚ್ ಮತ್ತು ಆಗಸ್ಟ್ ನಡುವೆ ಬೆಳೆಯಲಾಗುತ್ತದೆ. ಆಗಸ್ಟ್ ಬಳಿಕ ಮಾರುಕಟ್ಟೆಯಲ್ಲಿ ಖಾರೀಫ್‌ನ ಬೆಲೆಯು ಉತ್ತರ ಪ್ರದೇಶ, ಮಹಾರಾಷ್ಟ್ರದ ನಾಸೀಕ್, ಇತರೆ ಪ್ರದೇಶಗಳಿಂದ ಲಭ್ಯವಾಗುತ್ತದೆ. ಸುಮಾರು 5 ಲಕ್ಷ ಹೆಕ್ಟೇರ್ ಕೃಷಿಭೂಮಿಯು ರಾಬಿ ಟೊಮೆಟೊ, ಸರಾಸರಿ 8-9 ಲಕ್ಷ ಹೆಕ್ಟೇರ್ ಖಾರಿಫ್ ಬೆಳೆ ಮಾಡಲಾಗುತ್ತದೆ.
ಆದರೆ ತಪ್ಪಾಗಿದ್ದು ಎಲ್ಲಿ?
3-4-ಇಂಚಿನ ಎತ್ತರದ ಸಸಿಗಳನ್ನು ಡಿಸೆಂಬರ್-ಜನವರಿ ಅಥವಾ ಫೆಬ್ರವರಿ-ಮಾರ್ಚ್‌ನಲ್ಲಿ ಕೃಷಿ ಆರಂಭಿಸಲಾಗುತ್ತದೆ. ಮೊದಲ ಬ್ಯಾಚ್ ಏಪ್ರಿಲ್ ವರೆಗೆ ಸರಬರಾಜಿಗೆ ಲಭ್ಯವಾಗುತ್ತದೆ. ಎರಡನೆಯದು ಆಗಸ್ಟ್ ವರೆಗೆ ಲಭ್ಯವಾಗುತ್ತದೆ. ಮೂರು ತಿಂಗಳಲ್ಲಿ ಬೆಳೆ ಸಿದ್ಧವಾಗುತ್ತದೆ ಮತ್ತು 45 ದಿನಗಳವರೆಗೆ ಕೊಯ್ಲು ಮುಂದುವರಿಯುತ್ತದೆ. ಆಗಸ್ಟ್ ವೇಳೆಗೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಳೆಯು ಲಭ್ಯವಾಗುತ್ತದೆ. ಅದರಲ್ಲೂ ಈ ರಾಬಿ ಬೆಳೆಯು ರೈತರಿಗೆ ಉತ್ತಮ ಆದಾಯವನ್ನು ನೀಡುತ್ತದೆ.
ಆದರೆ ಈ ವರ್ಷ ರೈತರಿಗೆ ದರ ಕೇಳಿ ಆಘಾತವಾಗಿದೆ. ಮಾರ್ಚ್ ಏಪ್ರಿಲ್‌ನಲ್ಲಿ ರೈತರು ಅತೀ ಕಡಿಮೆ ಬೆಲೆಗೆ ತಾವು ಕಷ್ಟ ಪಟ್ಟು ದುಡಿದ ಬೆಳೆಯನ್ನು, ನಷ್ಟದಲ್ಲೇ ನೀಡಬೇಕಾದ ಸ್ಥಿತಿ ಉಂಟಾಗಿದೆ. ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನ ನಾರಾಯಣಗಾಂವ್ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳ ಸರಾಸರಿ ಬೆಲೆ ಕೆಜಿಗೆ 5-10 ರೂಪಾಯಿ ಆಗಿದೆ, ಏಪ್ರಿಲ್ ನಲ್ಲಿ 5-15 ರೂಪಾಯಿ ಆಗಿದೆ. ಮೇ ತಿಂಗಳಲ್ಲಿ ಪ್ರತಿ ಕೆಜಿಗೆ 2.50-5 ರೂಪಾಯಿ ಆಗಿದೆ.
ಇದಾದ ಬೆನ್ನಲ್ಲೇ ಹಲವಾರು ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಾಯಿತು ಎಂದು ತಾವು ಬೆಳೆದ ಟೊಮೆಟೊವನ್ನು ಟ್ರಾಕ್ಟರ್ ಓಡಿಸಿ ನಾಶ ಮಾಡಿದ್ದಾರೆ. ಕೆಲವು ರೈತರು ವ್ಯವಸಾಯಕ್ಕೆ ಬಂದ ಬೆಳೆಯನ್ನು ಹಾಗೆಯೆ ಬಿಟ್ಟಿದ್ದಾರೆ. ಇನ್ನು ಕೆಲವರು 40 ಅಥವಾ 60 ಎಕರೆಗಳಲ್ಲಿ ಕೃಷಿ ಮಾಡುತ್ತಿದ್ದವರು ಈಗ 5 ಎಕರೆಯಲ್ಲಿ ಮಾತ್ರ ಕೃಷಿ ಮಾಡುತ್ತಿದ್ದಾರೆ. ಇನ್ನು ಕೆಲವರು 1.5 ಎಕರೆಯಲ್ಲಿ ಮಾತ್ರ ಬೆಳೆಯುತ್ತಿದ್ದಾರೆ ಎಂದು ರೈತ ಅಜಿತ್ ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆ ನೋಡಿದಾಗ ಟೊಮೆಟೊ ದರವು ಶೀಘ್ರ ಇಳಿಕೆಯಾಗದು ಎನ್ನುತ್ತಾರೆ ರೈತರು.
ದರ ಯಾವಾಗ ಇಳಿಕೆಯಾಗುತ್ತದೆ?
ಟೊಮೆಟೊ ದರವು ಶೀಘ್ರವೇ ಇಳಿಕೆಯಾದು ಎಂದು ರೈತರು, ವ್ಯಾಪಾರಿಗಳು ಹೇಳುತ್ತಾರೆ. ಆದರೆ ಸರ್ಕಾರ ಮಾತ್ರ ಇದು ತಾತ್ಕಾಲಿಕ, ಬೆಲೆ ಇಳಿಯುತ್ತದೆ ಎಂದಿದ್ದಾರೆ. ಸುಮಾರು 24,000-25,000 ಕ್ರೇಟ್‌ಗಳು (ಪ್ರತಿ ಕ್ರೇಟ್‌ನಲ್ಲಿ 20 ಕೆಜಿ) ಟೊಮೆಟೊ ಪ್ರಸ್ತುತ ನಾರಾಯಣಗೌನ್ ಸಗಟು ಮಾರುಕಟ್ಟೆಗೆ ತಲುಪಿದೆ. ಆದರೆ ಈ ವರ್ಷದಲ್ಲಿ ಪ್ರತಿ ದಿನ 40,000-45,000 ಕ್ರೇಟ್ ಟೊಮೆಟೊ ಲಭ್ಯವಾಗುವ ಅಂದಾಜು ಇತ್ತು.
ಮುಂದಿನ ಕೃಷಿ ಖಾರಿಫ್ ಬೆಲೆಯಾಗಿದೆ. ಅದು ಮಾನ್ಸೂನ್ ಮುಗಿದ ಬಳಿಕ ಮಾಡಲಾಗುವ ಕೃಷಿಯಾಗಿದೆ. ಆದರಿಂದಾಗಿ ಆಗಸ್ಟ್ ಬಳಿಕವೇ ಟೊಮೆಟೊ ದರವು ಇಳಿಕೆಯಾಗಲಿದೆ. ಅದಕ್ಕಿಂತ ಮೊದಲು ಇಳಿಕೆಯಾಗುವ ಸಾಧ್ಯತೆಯಿಲ್ಲ ಎಂದು ರೈತ ಅಜಿತ್ ಹೇಳಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications