ಕನಸಿನ ದ್ವಿಚಕ್ರ ವಾಹನವನ್ನು ಖರೀದಿಸಲು ಬಂದಾಗ ನಾವೆಲ್ಲರೂ ಮಾಡುವುದು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಒಂದೇ ಬಾರಿಗೆ ಖರ್ಚು ಮಾಡುವುದು ಅಥವಾ ನಮ್ಮ ಅರ್ಹತೆ ಮತ್ತು ಆದಾಯದ ಮಾನದಂಡಗಳನ್ನು ಅವಲಂಬಿಸಿ ಅಗ್ಗದ ದರಗಳನ್ನು ನೀಡುವ ಬ್ಯಾಂಕುಗಳಿಂದ ಸಾಲದ ಬಗ್ಗೆ ಯೋಚಿಸುವುದು.
ನಿಮ್ಮ ಅರ್ಹತಾ ಮಾನದಂಡಗಳನ್ನು ಪರಿಶೀಲಿಸುವುದು ಮೊದಲನೆಯದು ಮತ್ತು ನಂತರ ಲಭ್ಯವಿರುವ ಕಡಿಮೆ ಬಡ್ಡಿ ದರಗಳು, ಪೂರ್ವ ಅನುಮೋದಿತ ಕೊಡುಗೆಗಳು ಮತ್ತು ದ್ವಿಚಕ್ರ ವಾಹನ ಸಾಲಕ್ಕೆ ಅರ್ಜಿ ಸಲ್ಲಿಸಲು ಇಎಂಐ ಲೆಕ್ಕಾಚಾರದಂತಹ ಇತರ ಹಂತಗಳಿವೆ.
ದ್ವಿಚಕ್ರ ವಾಹನ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಪ್ರಮುಖ ಪಾತ್ರ ವಹಿಸುವ ಏಕೈಕ ಮತ್ತು ಪ್ರಮುಖ ಅಂಶವೆಂದರೆ ನಿಮ್ಮ ಸಿಐಬಿಐಎಲ್ ಸ್ಕೋರ್ ಅದು 750 ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ನೀವು ಸಾಲಕ್ಕೆ ಅರ್ಹರಾದ ನಂತರ ಮತ್ತು ನಿಮ್ಮ ಸಾಲದ ಅರ್ಜಿಯನ್ನು ಮಂಜೂರು ಮಾಡಿದ ನಂತರ ನಿಮ್ಮ ಆದ್ಯತೆಯ ಅಥವಾ ಕನಸಿನ ದ್ವಿಚಕ್ರ ವಾಹನವನ್ನು ನೀವು ಓಡಿಸಬಹುದು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಟಾಪ್ 10 ಬ್ಯಾಂಕುಗಳ ಪಟ್ಟಿಯನ್ನು ಮಾಡಿದ್ದೇವೆ. ಅದು ಪ್ರಸ್ತುತ ದ್ವಿಚಕ್ರ ವಾಹನ ಸಾಲಗಳಿಗೆ ಅಗ್ಗದ ಬಡ್ಡಿದರಗಳನ್ನು ನೀಡುತ್ತಿದೆ. ಆ ಬ್ಯಾಂಕುಗಳು ಯಾವುದು ಎಂದು ತಿಳಿಯಲು ಮಂದೆ ಓದಿ
ದ್ವಿಚಕ್ರ ವಾಹನ ಸಾಲಗಳ ಮೇಲೆ ತೆರಿಗೆ
ವಿದ್ಯುತ್-ವಾಹನ ವರ್ಗಕ್ಕೆ ಸೇರದ ಹೊರತು, ದೇಶೀಯ ಬಳಕೆಗಾಗಿ ಖರೀದಿಸಿದ ದ್ವಿಚಕ್ರ ವಾಹನಗಳು ತೆರಿಗೆ ಕಡಿತಕ್ಕೆ ಒಳಪಡುವುದಿಲ್ಲ. ಮಾಲೀಕರ ಅಥವಾ ಖರೀದಿದಾರರ ಹೆಸರಿನಲ್ಲಿ ನೋಂದಾಯಿಸಿದ ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ಬಳಸುವ ದ್ವಿಚಕ್ರ ವಾಹನಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಗ್ರಾಹಕರು ವ್ಯಾಪಾರದ ಮಾಲೀಕರಾಗಿದ್ದರೆ, ಸ್ವಯಂ ಉದ್ಯೋಗಿ ವ್ಯಕ್ತಿ ಅಥವಾ ವೃತ್ತಿಪರರಾಗಿದ್ದರೆ, ದ್ವಿಚಕ್ರ ವಾಹನಗಳ ಮೇಲೆ ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ಖರೀದಿಸಿದ ಬೈಕ್ ಅಥವಾ ದ್ವಿಚಕ್ರ ವಾಹನವನ್ನು ಖರೀದಿಸಿದಲ್ಲಿ ಮಾತ್ರ 1.5 ಲಕ್ಷದವರೆಗೆ ತೆರಿಗೆ ಪ್ರೋತ್ಸಾಹಧನ ಲಭ್ಯವಿದೆ. ಆದರೆ ವ್ಯಾಪಾರ ಉದ್ದೇಶಗಳು ಅಥವಾ ವಾಹನವು ವಿದ್ಯುತ್ ವಾಹನವಾಗಿದ್ದರೆ ಮಾತ್ರ 1.5 ಲಕ್ಷದವರೆಗೆ ತೆರಿಗೆ ಪ್ರೋತ್ಸಾಹಧನ ಲಭ್ಯವಿರುತ್ತದೆ.
ದ್ವಿಚಕ್ರ ವಾಹನ ಸಾಲಗಳ ಮೇಲೆ ತೆರಿಗೆ ವಿನಾಯತಿ ಪಡೆಯುವುದು ಹೇಗೆ
ನಿಮ್ಮ ದ್ವಿಚಕ್ರ ವಾಹನ ಸಾಲಕ್ಕೆ ತೆರಿಗೆ ವಿನಾಯಿತಿ ಪಡೆಯಲು ಐಟಿಆರ್ ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು ಮತ್ತು ಬ್ಯಾಂಕ್ ನೀಡುವ ಬಡ್ಡಿ ಪ್ರಮಾಣಪತ್ರಗಳನ್ನು ಲಗತ್ತಿಸಬೇಕು. ಆದಾಗ್ಯೂ, ಸಾಲಗಾರರು ತಮ್ಮ ವಾರ್ಷಿಕ ಬಡ್ಡಿ ಪಾವತಿಗಳು, ಸಾರಿಗೆ ವೆಚ್ಚ ಮತ್ತು ಕಡಿತ ವೆಚ್ಚದ ಮೇಲೆ ಮಾತ್ರ ತೆರಿಗೆ ಕಡಿತಗಳನ್ನು ಪಡೆಯಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಬೇಕಾದ ದಾಖಲೆಗಳು ಮತ್ತು ಅರ್ಹತಾ ಮಾನದಂಡಗಳು
ದ್ವಿಚಕ್ರ ವಾಹನ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕೆಲವೊಂದು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಮತ್ತು ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಸಾಲಗಾರನು ಸಂಬಳವನ್ನು ಪಡೆಯುತ್ತಿದ್ದರೆ 21 ರಿಂದ 58 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಸ್ವಯಂ ಉದ್ಯೋಗದಲ್ಲಿದ್ದರೆ 21 ರಿಂದ 65 ವರ್ಷಗಳು ಆಗಿರಬೇಕು. ಈ ಅರ್ಹತೆ ಇದ್ದರೆ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ. ಹಾಗೆಯೇ ಸಾಲಗಾರನು ತಿಂಗಳಿಗೆ ಕನಿಷ್ಠ 10,000 ರೂ. ಆದಾಯವನ್ನು ಹೊಂದಿರಬೇಕು. ಇನ್ನು ದ್ವಿಚಕ್ರ ವಾಹನ ಖರೀದಿಗೆ ಸಾಲ ಪಡೆಯುವವರು, ತನ್ನ ಗುರುತಿನ ಪುರಾವೆ, ವಿಳಾಸ ಪುರಾವೆ, ಆದಾಯ ಪುರಾವೆ, ವಯಸ್ಸಿನ ಪುರಾವೆ ಮತ್ತು ಕಳೆದ 3 ತಿಂಗಳ ಬ್ಯಾಂಕ್ ಖಾತೆ ಹೇಳಿಕೆಯನ್ನು ಹೊಂದಿರಬೇಕು.
2021ರ ಸಾಲಿನ ದ್ವಿಚಕ್ರ ಸಾಲದ ಬಡ್ಡಿ ದರಗಳು
ನಮ್ಮ ಸ್ವಂತವಾಗಿ ಆಯ್ಕೆ ಮಾಡಲಾದ ಟಾಪ್ 10 ಬ್ಯಾಂಕುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಅವುಗಳು ಪ್ರಸ್ತುತ ದ್ವಿಚಕ್ರ ವಾಹನ ಸಾಲಗಳ ಮೇಲೆ ಕಡಿಮೆ ಬಡ್ಡಿದರಗಳನ್ನು ನೀಡುತ್ತವೆ.
1. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ಗರಿಷ್ಟ ಹತ್ತು ಲಕ್ಷ ರೂಪಾಯಿ ಸಾಲವನ್ನು ಶೇಕಡ 7.25 ರಿಂದ ಶೇಕಡ 7.70 ಬಡ್ಡಿದರದಲ್ಲಿ ನೀಡುತ್ತದೆ.
2. ಬ್ಯಾಂಕ್ ಆಫ್ ಇಂಡಿಯಾವು ಗರಿಷ್ಟ ಐವತ್ತು ಲಕ್ಷ ರೂಪಾಯಿ ಸಾಲವನ್ನು ಶೇಕಡ 7.35 ರಿಂದ ಶೇಕಡ 8.55 ಬಡ್ಡಿದರದಲ್ಲಿ ನೀಡುತ್ತದೆ.
3. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗರಿಷ್ಟ ಹತ್ತು ಲಕ್ಷ ಸಾಲವನ್ನು ಶೇಕಡ 8.70 ರಿಂದ ಶೇಕಡ 10.05 ಬಡ್ಡಿದರದಲ್ಲಿ ನೀಡುತ್ತದೆ.
4. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಗರಿಷ್ಟ 2.5 ಲಕ್ಷ ಸಾಲವನ್ನು ಶೇಕಡ 8.70 ರಷ್ಟು ಅಥವಾ ಅದಕ್ಕಿಂದ ಅಧಿಕ ಬಡ್ಡಿದರದಲ್ಲಿ ನೀಡುತ್ತದೆ.
5. ಪಂಜಾಬ್ ಮತ್ತು ಸಿಂಧು ಬ್ಯಾಂಕ್ ಗರಿಷ್ಟ ಹತ್ತು ಲಕ್ಷ ಸಾಲವನ್ನು ಶೇ. 9 ರಷ್ಟು ಬಡ್ಡಿದರದಲ್ಲಿ ನೀಡುತ್ತದೆ.
6. ಕೆನರಾ ಬ್ಯಾಂಕ್ ಗರಿಷ್ಟ ಹತ್ತು ಲಕ್ಷ ರೂಪಾಯಿ ಸಾಲವನ್ನು ಶೇ. 9 ರಷ್ಟು ಬಡ್ಡಿದರದಲ್ಲಿ ನೀಡುತ್ತದೆ.
7. ಐಸಿಐಸಿಐ ಬ್ಯಾಂಕ್ ಗರಿಷ್ಟ ಮೂರು ಲಕ್ಷನ ಸಾಲವನ್ನು ಶೇಕಡ 9.50 ರಿಂದ ಶೇಕಡ 26 ರಷ್ಟು ಬಡ್ಡಿದರದಲ್ಲಿ ನೀಡುತ್ತದೆ.
8. ಐಡಿಬಿಐ ಬ್ಯಾಂಕ್ 1.20 ಲಕ್ಷದಿಂದ ಅಧಿಕ ಸಾಲವನ್ನು ನೀಡುತ್ತದೆ. ಈ ಬ್ಯಾಂಕ್ ಸಾಲಕ್ಕೆ ಶೇಕಡ 9.80 ರಿಂದ ಶೇಕಡ 6.90 ರಷ್ಟು ಬಡ್ಡಿದರವನ್ನು ವಿಧಿಸುತ್ತದೆ.
9. ಯೂನಿಯನ್ ಬ್ಯಾಂಕ್ ಗರಿಷ್ಟ ಹತ್ತು ಲಕ್ಷ ರೂಪಾಯಿ ಸಾಲವನ್ನು ಶೇಕಡ 9.90 ರಿಂದ ಶೇಕಡ 10.00 ಬಡ್ಡಿದರದಲ್ಲಿ ನೀಡುತ್ತದೆ.
10. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮೂರು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಅಧಿಕ ಸಾಲಕ್ಕೆ ಶೇಕಡ 9.99 ಕ್ಕಿಂತ ಅಧಿಕ ಬಡ್ಡಿ ದರವನ್ನು ವಿಧಿಸುತ್ತದೆ.


Click it and Unblock the Notifications