For Quick Alerts
ALLOW NOTIFICATIONS  
For Daily Alerts

ಸಾರ್ವಜನಿಕ ಬ್ಯಾಂಕ್ ಕಾರು ಸಾಲದ ಟಾಪ್ ಟೆನ್ ಅಗ್ಗದ ಬಡ್ಡಿ ದರ ಎಷ್ಟು ಗೊತ್ತಾ?

|

ಕೊರೊನಾ ಬಿಕ್ಕಟ್ಟು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆಗಿಂತ ವೈಯಕ್ತಿಕ ವಾಹನಗಳ ಬಳಕೆಗೆ ಆದ್ಯತೆ ಹೆಚ್ಚಾಗಿದೆ. ಇನ್ನು ಬ್ಯಾಂಕ್ ಗಳು ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಕಾರು ಸಾಲ ನೀಡುತ್ತಿವೆ. ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಕೂಡ ಮಾಡಲಾಗಿದೆ. ಒಂದು ವೇಳೆ ವೈಯಕ್ತಿಕವಾಗಿ ಅಥವಾ ಕುಟುಂಬದ ಬಳಕೆಗೆ ಕಾರು ಖರೀದಿಸಬೇಕಿದ್ದರೆ ಈ ಹಬ್ಬದ ಸೀಸನ್ ಸೂಕ್ತವಾಗಿದೆ.

2017ರ ಡಿಸೆಂಬರ್ ಗೆ ಮುಂಚಿನ ವಾಹನಗಳಿಗೆ FASTag ಕಡ್ಡಾಯ2017ರ ಡಿಸೆಂಬರ್ ಗೆ ಮುಂಚಿನ ವಾಹನಗಳಿಗೆ FASTag ಕಡ್ಡಾಯ

ಇಲ್ಲಿ ಕೆಲವು ಬ್ಯಾಂಕ್ ಗಳ ಹೆಸರನ್ನು ನೀಡಲಾಗಿದೆ. ಒಳ್ಳೆ ಸಾಲ ಮರುಪಾವತಿ ಇತಿಹಾಸವಿದ್ದಲ್ಲಿ ಹಾಗೂ ಇತರ ನಿಯಮಗಳನ್ನು ಪೂರ್ಣಗೊಳಿಸಿದಲ್ಲಿ ಇವುಗಳು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಕಾರಿನ ಸಾಲ ನೀಡುತ್ತಿವೆ.

* ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 7.1- 7.9% (ಕ್ರೆಡಿಟ್ ಸ್ಕೋರ್ ಆಧಾರದಲ್ಲಿ)

* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 7.25- 7.45% (ಏಳು ವರ್ಷಕ್ಕೆ)

* ಕೆನರಾ ಬ್ಯಾಂಕ್ 7.3- 9.9%

* ಬ್ಯಾಂಕ್ ಆಫ್ ಇಂಡಿಯಾ 7.35- 7.95%

* ಬ್ಯಾಂಕ್ ಆಫ್ ಬರೋಡಾ 7.35- 10.1%

* ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ 7.3- 7.75%

* ಯೂನಿಯನ್ ಬ್ಯಾಂಕ್ 7.4- 7.5%

* ಯುಕೋ ಬ್ಯಾಂಕ್ 7.70%

* ಪಂಜಾಬ್ ನ್ಯಾಷನಲ್ ಬ್ಯಾಂಕ್ 7.55- 8.8%

* ಬ್ಯಾಂಕ್ ಆಫ್ ಮಹಾರಾಷ್ಟ್ರ 7.7- 8.45%

ಸಾರ್ವಜನಿಕ ಬ್ಯಾಂಕ್ ಕಾರು ಸಾಲದ ಟಾಪ್ ಟೆನ್ ಅಗ್ಗದ ಬಡ್ಡಿ ದರ ಎಷ್ಟು?

ಈ ಮೇಲ್ಕಂಡ ಬಡ್ಡಿ ದರಗಳು ಆಯಾ ಬ್ಯಾಂಕ್ ವೆಬ್ ಸೈಟ್ ಗಳಲ್ಲಿ ನ. 7ಕ್ಕೆ ಅನ್ವಯ ಆಗುವಂತೆ ಪ್ರಕಟವಾಗಿವೆ. ಹೊಸ ಕಾರು ಖರೀದಿ ಮಾಡಿದಲ್ಲಿ ಗರಿಷ್ಠ ಮರುಪಾವತಿ ಅವಧಿ 7 ವರ್ಷದ ತನಕ ದೊರೆಯುತ್ತದೆ. ಇನ್ನು ಇಲ್ಲಿನ ಬಡ್ಡಿ ದರಗಳು ಸಾಲ ಪಡೆಯುವ ವ್ಯಕ್ತಿಗಳ ಕ್ರೆಡಿಟ್ ಸ್ಕೋರ್, ಮಹಿಳೆಯಾ ಹಾಗೂ ಸಶಸ್ತ್ರ ಮೀಸಲು ಪಡೆಗೆ ಸೇರಿದವರಾ ಇತ್ಯಾದಿ ಅಂಶಗಳ ಮೇಲೆ ಅವಲಂಬನೆ ಆಗಿರುತ್ತದೆ.

English summary

Top 10 Cheapest Car Loan Rate By Public Sector Banks

Here is the list of top 10 cheapest car loan rate by public sector banks.
Story first published: Sunday, November 8, 2020, 10:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X