ಪ್ರಸ್ತುತ ಕ್ರೆಡಿಟ್ ಕಾರ್ಡ್‌ನ ಫೀಚರ್‌ಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪ್ರಸ್ತುತ ನೀವು ಕ್ರೆಡಿಟ್ ಕಾರ್ಡ್ ಮೂಲಕವೇ ವಿಮಾನ ನಿಲ್ದಾಣಕ್ಕೆ ಉಚಿತವಾಗಿ ಪ್ರವೇಶ ಮಾಡುವ ಅವಕಾಶವನ್ನು ಪಡೆಯಬಹುದಾಗಿದೆ. ಇದಕ್ಕೆ ಉತ್ತಮ ಸಾಕ್ಷಿಯನ್ನು ವಿಮಾನ ನಿಲ್ದಾಣ ಸೇವೆಗಳಲ್ಲಿ ಪ್ರಮುಖ ಸಂಸ್ಥೆಯಾದ ಡ್ರೀಮ್‌ಫೋಕ್ಸ್‌ನ ಇತ್ತೀಚಿನ ವರದಿಯಾಗಿದೆ.
ಜುಲೈ ಮತ್ತು ಸೆಪ್ಟೆಂಬರ್ 2023 ರ ನಡುವೆ, 2.73 ಮಿಲಿಯನ್ ಜನರು ಕ್ರೆಡಿಟ್ ಕಾರ್ಡ್ ಬಳಿಸಿಕೊಂಡು ವಿಮಾನ ನಿಲ್ದಾಣದ ಲಾಂಜ್ ಸೇವೆಯನ್ನು ಪಡೆದಿದ್ದಾರೆ. ಹಿಂದಿನ ತ್ರೈಮಾಸಿಕದಲ್ಲಿ 2.63 ಮಿಲಿಯನ್ ಜನರು ಇಲ್ಲಿಗೆ ಪ್ರವೇಶ ಮಾಡಿದ್ದಾರೆ. ಈ ಸೌಲಭ್ಯದಲ ಬಳಕೆ ಏರಿಕೆಯಾಗುತ್ತದೆ. ಇಂತಹ ಸೇವೆಯನ್ನು ನೀಡುವ ಟಾಪ್ 5 ಕ್ರೆಡಿಟ್ ಕಾರ್ಡ್‌ಗಳ ಶುಲ್ಕ, ಪ್ರಯೋಜನಗಳ ಬಗ್ಗೆ ತಿಳಿಯೋಣ ಮುಂದೆ ಓದಿ....

ಎಸ್‌ಬಿಐ ಎಲೈಟ್ ಕ್ರೆಡಿಟ್ ಕಾರ್ಡ್
ವಾರ್ಷಿಕ ಶುಲ್ಕ: 4,999 ರೂಪಾಯಿ
ಲೌಂಜ್ ಪ್ರವೇಶ: ವಾರ್ಷಿಕವಾಗಿ ಆರು ಅಂತರರಾಷ್ಟ್ರೀಯ ಮತ್ತು ಎಂಟು ದೇಶೀಯ ಲೌಂಜ್ ಪ್ರವೇಶ ಅವಕಾಶವಿದೆ.
ಹೆಚ್ಚುವರಿ ಪ್ರಯೋಜನಗಳು: 5,000 ರೂಪಾಯಿ ಸ್ವಾಗತ ಉಡುಗೊರೆ ವೋಚರ್ ಇರಲಿದೆ. ಊಟ, ದಿನಸಿ ಮತ್ತು ಡಿಪಾರ್ಟ್‌ಮೆಂಟ್ ಸ್ಟೋರ್ ಖರ್ಚುಗಳ ಮೇಲೆ 5 ಬಾರಿ ಬಹುಮಾನಗಳು ಲಭ್ಯ. ವಾರ್ಷಿಕವಾಗಿ 6,000 ರೂಪಾಯಿ ಮೌಲ್ಯದ ಉಚಿತ ಚಲನಚಿತ್ರ ಟಿಕೆಟ್‌ಗಳು.
ಎಚ್‌ಡಿಎಫ್‌ಸಿ ಡೈನರ್ಸ್ ಕ್ಲಬ್ ಪ್ರಿವಿಲೇಜ್ ಕ್ರೆಡಿಟ್ ಕಾರ್ಡ್
ವಾರ್ಷಿಕ ಶುಲ್ಕ: 2,500 ರೂಪಾಯಿ (ಹಿಂದಿನ ವರ್ಷದಲ್ಲಿ 3 ಲಕ್ಷ ರೂಪಾಯಿ ಖರ್ಚು ಮಾಡಿದ್ದರೆ ವಾರ್ಷಿಕ ಶುಲ್ಕ ಈ ವರ್ಷ ಮನ್ನಾ)
ಲೌಂಜ್ ಪ್ರವೇಶ: ಭಾರತ ಮತ್ತು ವಿದೇಶಗಳಲ್ಲಿನ ವಿಮಾನ ನಿಲ್ದಾಣಗಳಲ್ಲಿ 12 ಬಾರಿ ಲೌಂಜ್ ಪ್ರವೇಶ ಅವಕಾಶವಿದೆ.
ಹೆಚ್ಚುವರಿ ಪ್ರಯೋಜನಗಳು: ಅಮೆಜಾನ್ ಪ್ರೈಮ್, ಎಂಎಂಟಿ ಬ್ಲಾಕ್, ಟೈಮ್ಸ್ ಪ್ರೈಮ್, ಡೈನ್‌ಔಟ್ ಪಾಸ್‌ಪೋರ್ಟ್ ಮತ್ತು ಇತರವುಗಳಿಗೆ ವಾರ್ಷಿಕ ಸದಸ್ಯತ್ವ ಲಭ್ಯ.
ಆಕ್ಸಿಸ್ ಬ್ಯಾಂಕ್ ಸೆಲೆಕ್ಟ್ ಕ್ರೆಡಿಟ್ ಕಾರ್ಡ್
ವಾರ್ಷಿಕ ಶುಲ್ಕ: 3,000 ರೂಪಾಯಿ
ಲೌಂಜ್ ಪ್ರವೇಶ: ವಾರ್ಷಿಕವಾಗಿ ಆರು ಅಂತರರಾಷ್ಟ್ರೀಯ ಮತ್ತು ಎಂಟು ದೇಶೀಯ ಲೌಂಜ್ ಪ್ರವೇಶ ಅವಕಾಶವಿದೆ.
ಹೆಚ್ಚುವರಿ ಪ್ರಯೋಜನಗಳು: ಬಿಗ್‌ಬಾಸ್ಕೆಟ್‌ನಲ್ಲಿ ಶೇಕಡ 20 ರಷ್ಟು ರಿಯಾಯಿತಿ, ಸ್ವಿಗ್ಗಿಯಲ್ಲಿ ಶೇಕಡ 40 ರಷ್ಟು ರಿಯಾಯಿತಿ, ವಾರ್ಷಿಕ ಆರು ಸುತ್ತಿನ ಗಾಲ್ಫ್ ಪ್ರವೇಶ ಅವಕಾಶ.
ಎಸ್‌ಬಿಐ ಪ್ರೈಮ್ ಕ್ರೆಡಿಟ್ ಕಾರ್ಡ್
ವಾರ್ಷಿಕ ಶುಲ್ಕ: 2,999 ರೂಪಾಯಿ (ಒಂದು ವರ್ಷದಲ್ಲಿ 3 ಲಕ್ಷ ರೂಪಾಯಿ ಬಳಸಿದರೆ ಶುಲ್ಕ ಮನ್ನಾ)
ಲೌಂಜ್ ಪ್ರವೇಶ: ವಾರ್ಷಿಕವಾಗಿ ನಾಲ್ಕು ಅಂತರರಾಷ್ಟ್ರೀಯ ಮತ್ತು ಎಂಟು ದೇಶೀಯ ಲೌಂಜ್ ಪ್ರವೇಶ ಅವಕಾಶವಿದೆ.
ಹೆಚ್ಚುವರಿ ಪ್ರಯೋಜನಗಳು: ಇ-ಗಿಫ್ಟ್ ವೋಚರ್‌ಗಳು, ಬೋನಸ್ ರಿವಾರ್ಡ್ ಪಾಯಿಂಟ್‌ಗಳು ಮತ್ತು ನಿರ್ದಿಷ್ಟ ಖರ್ಚು ಮಿತಿ ಸಾಧಿಸಿದರೆ ಹೆಚ್ಚುವರಿ ವೋಚರ್‌ಗಳು.
ಯೆಸ್ ಫಸ್ಟ್ ಪ್ರಿಫೆರ್ಡ್ ಕ್ರೆಡಿಟ್ ಕಾರ್ಡ್
ವಾರ್ಷಿಕ ಶುಲ್ಕ: 999 ರೂಪಾಯಿ (ಒಂದು ವರ್ಷದಲ್ಲಿ 2.5 ಲಕ್ಷ ರೂಪಾಯಿ ಬಳಸಿದರೆ ಶುಲ್ಕ ಮನ್ನಾ)
ಲೌಂಜ್ ಪ್ರವೇಶ: ವಾರ್ಷಿಕವಾಗಿ ನಾಲ್ಕು ಅಂತರರಾಷ್ಟ್ರೀಯ ಮತ್ತು ಎಂಟು ದೇಶೀಯ ಲೌಂಜ್ ಪ್ರವೇಶ ಅವಕಾಶವಿದೆ.
ಹೆಚ್ಚುವರಿ ಪ್ರಯೋಜನಗಳು: ಹೆಚ್ಚಿನ ವಿಭಾಗಗಳಲ್ಲಿ 100 ರೂಪಾಯಿ ಬಳಕೆಗೆ ಎಂಟು ರಿವಾರ್ಡ್ ಪಾಯಿಂಟ್‌ಗಳು ಲಭ್ಯ. ಪ್ರಯಾಣ ಮತ್ತು ಊಟದ ಮೇಲೆ 2x ಬಹುಮಾನಗಳು ಲಭ್ಯ. ವಾರ್ಷಿಕವಾಗಿ ನಾಲ್ಕು ಬಾರಿ ಗಾಲ್ಫ್ ಪ್ರವೇಶ ಅವಕಾಶ.
ಏನಿದು ಲೌಂಜ್ ಪ್ರವೇಶ?
ಏರ್‌ಪೋರ್ಟ್ ಲಾಂಜ್‌ಗಳು ಅನೇಕ ವಿಮಾನ ನಿಲ್ದಾಣಗಳಲ್ಲಿವೆ. ಏರ್‌ಪೋರ್ಟ್ ಟರ್ಮಿನಲ್‌ಗಿಂತ ಹೆಚ್ಚಿನ ಸೌಕರ್ಯವನ್ನು ಹೊಂದಿರುವ ಸ್ಥಳ ಇದಾಗಿದೆ. ಆರಾಮದಾಯಕ ಕುರ್ಚಿಗಳು ಇಲ್ಲಿರುತ್ತದೆ. ಕೆಲವೆಡೆ 5 ಸ್ಟಾರ್ ಹೊಟೇಲ್‌ಗಳು ಇದ್ದರೆ, ಕೆಲವೆಡೆ ಉಚಿತ ಆಹಾರ, ಪಾನೀಯ ಲಭ್ಯವಾಗುತ್ತದೆ. ಸ್ಪಾ ಚಿಕಿತ್ಸೆಗಳು ಕೂಡಾ ಇಲ್ಲಿರುತ್ತದೆ.


Click it and Unblock the Notifications