ಭಾರತ ಸೇರಿದಂತೆ ಜಾಗತಿಕವಾಗಿ ಉನ್ನತ ಸಿಇಒಗಳ 2022 ರಲ್ಲಿ ಶೇಕಡ 9ರಷ್ಟು ವೇತನ ಏರಿಕೆಯನ್ನು ಪಡೆದಿದ್ದಾರೆ. ಆದರೆ ಅದೇ ಅವಧಿಯಲ್ಲಿ ವಿಶ್ವದಾದ್ಯಂತ ಕಾರ್ಮಿಕರು ಶೇಕಡ 3ರಷ್ಟು ವೇತನ ಕಡಿತಕ್ಕೆ ಒಳಗಾಗಿದ್ದಾರೆ ಎಂದು ಸೋಮವಾರ ವರದಿಯನ್ನು ಉಲ್ಲೇಖಿಸಿದೆ. ಭಾರತದಲ್ಲಿ ಸುಮಾರು 150ರಷ್ಟು ಸಂಸ್ಥೆಗಳ ಸಿಇಒಗಳು ಕಳೆದ ವರ್ಷ ಸರಾಸರಿ 1 ಮಿಲಿಯನ್ ಪಡೆದಿದ್ದಾರೆ.
2021ಕ್ಕೆ ನಾವು ಹೋಲಿಕೆ ಮಾಡಿದಾಗ 2022ರಲ್ಲಿ ವೇತನವು ಸುಮಾರು ಶೇಕಡ 2ರಷ್ಟು ಏರಿಕೆಯನ್ನು ಕಂಡಿದೆ. ಭಾರತದಲ್ಲಿ ಸಿಇಒಗಳು ಓರ್ವ ಉದ್ಯೋಗಿಯಿ ಒಂದು ವರ್ಷದಲ್ಲಿ ಗಳಿಸುವ ವೇತನವನ್ನು ಕೆಲವೇ ಗಂಟೆಗಳಲ್ಲಿ ಗಳಿಸುತ್ತಿದ್ದಾರೆ. ವೇತನ ಕಡಿತದ ನಡುವೆಯೂ ಉದ್ಯೋಗಿಗಳು ಕಳೆದ ವರ್ಷ "ಉಚಿತವಾಗಿ" ಆರು ದಿನ ಕೆಲಸ ಮಾಡಿದ್ದಾರೆ. ಆದರೆ ಭಾರತ, ಯುಕೆ, ಯುಎಸ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಿಇಒಗಳ ವೇತನ ಶೇಕಡ 9ರಷ್ಟು ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಕಾರ್ಮಿಕರ ದಿನದಂದು ಬಿಡುಗಡೆಯಾದ ಆಕ್ಸ್‌ಫ್ಯಾಮ್‌ನಿಂದ ಹೊಸ ವಿಶ್ಲೇಷಣೆಯು ಈ ವಿವರವನ್ನು ಬಿಡುಗಡೆ ಮಾಡಿದೆ. 50 ದೇಶಗಳಲ್ಲಿನ ಒಂದು ಶತಕೋಟಿ ಕಾರ್ಮಿಕರು 2022 ರಲ್ಲಿ ಸರಾಸರಿ 685 ಡಾಲರ್ ವೇತನ ಕಡಿತಕ್ಕೆ ಒಳಗಾಗಿದ್ದಾರೆ. ರಿಯಲ್ ವೇಜಸ್‌ನಿಂದ (ನೈಜ ವೇತನ) 746 ಬಿಲಿಯನ್ ಡಾಲರ್ ಸಾಮೂಹಿಕ ನಷ್ಟ ಉಂಟಾಗಿದೆ.
ವೇತನವಿಲ್ಲದೆ ಅಧಿಕ ಕೆಲಸ ಮಾಡುತ್ತಿರುವ ಮಹಿಳೆಯರು/ ಯುವತಿಯರು
ವರದಿಯ ಪ್ರಕಾರ, ಮಹಿಳೆಯರು ಮತ್ತು ಹುಡುಗಿಯರು ಪ್ರತಿ ತಿಂಗಳು ಕನಿಷ್ಠ 380 ಶತಕೋಟಿ ಗಂಟೆಗಳವರೆಗೆ ಪಾವತಿ ಇಲ್ಲದೆಯೇ ಅಧಿಕ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಕಾರ್ಮಿಕರು ಸಾಮಾನ್ಯವಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ ಮತ್ತು ವೇತನವಿಲ್ಲದೆಯೇ ದುಡಿಯುವಂತಾಗಿದೆ. ವೇತನ ನೀಡದ ಕಾರಣ ಕೆಲಸ ಬಿಡುವಂತಾಗಿದೆ. ಇನ್ನು ಸಂಶೋಧನೆಯಲ್ಲಿ ಹಲವಾರು ಅಂಶಗಳು ತಿಳಿದುಬಂದಿದೆ.
ಲಿಂಗ ಆಧಾರಿತ ತಾರತಮ್ಯ, ಕಿರುಕುಳ ನಡೆಸಲಾಗುತ್ತದೆ. ಪುರುಷರು ಎಷ್ಟು ಗಂಟೆ ಕೆಲಸ ಮಾಡುತ್ತಾರೋ, ಮತ್ತು ಯಾವೆಲ್ಲ ಕೆಲಸವನ್ನು ಮಾಡುತ್ತಾರೋ ಅದೇ ಕೆಲಸವನ್ನು ಮಾಡುವ ಮಹಿಳೆಗೆ ಕಡಿಮೆ ವೇತನವನ್ನು ನೀಡಲಾಗುತ್ತಿದೆ ಎಂಬುವುದು ಸಂಶೋಧನೆಗಳು ತೋರಿಸಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಕ್ಸ್‌ಫ್ಯಾಮ್ ಇಂಟರ್‌ನ್ಯಾಶನಲ್‌ನ ಹಂಗಾಮಿ ಕಾರ್ಯನಿರ್ವಾಹಕ ನಿರ್ದೇಶಕ ಅಮಿತಾಬ್ ಬೆಹರ್, "ನಾವು ವೇತನವನ್ನು ಕಡಿಮೆ ಮಾಡಬೇಕೆಂದು ಕಾರ್ಪೊರೇಟ್ ಮುಖ್ಯಸ್ಥರು ನಮಗೆ ಹೇಳುತ್ತಿದ್ದಾರೆ, ಆದರೆ ಅವರು ತಮಗೆ ಮತ್ತು ತಮ್ಮ ಷೇರುದಾರರಿಗೆ ಅಧಿಕ ಪಾವತಿಯನ್ನು ನೀಡುತ್ತಿದ್ದಾರೆ. ಹೆಚ್ಚಿನ ಜನರು ಕಡಿಮೆ ವೆಚ್ಚದಲ್ಲಿ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದಾರೆ. ಜೀವನ ವೆಚ್ಚವನ್ನು ಸರಿದೂಗಿಸುವಷ್ಟು ವೇತನ ಕೂಡಾ ಇಲ್ಲ," ಎಂದು ತಿಳಿಸಿದ್ದಾರೆ.
"ಕಾರ್ಮಿಕರು ಕಂಡ ಏಕೈಕ ಏರಿಕೆ ಎಂದರೆ ವೇತನವಿಲ್ಲದ ಅಧಿಕ ಕೆಲಸದಲ್ಲಿ ಹೆಚ್ಚಳ, ಅದರಲ್ಲೂ ಮುಖ್ಯವಾಗಿ ಮಹಿಳೆಯರ ಮೇಲೆ ಅಧಿಕ ಜವಾಬ್ದಾರಿ, ಹೊರೆಯನ್ನು ಹೇರಲಾಗುತ್ತಿದೆ. ನಾವು ನಂಬಲು ಸಾಧ್ಯವಾಗದಷ್ಟು, ಕಠಿಣವಾದ ಕೆಲಸವನ್ನು ನೀಡಲಾಗುತ್ತಿದೆ," ಎಂದು ಹೇಳಿದ್ದಾರೆ. ಇನ್ನು 2022ರಲ್ಲಿ ಷೇರುದಾರರ ಡಿವಿಡೆಂಟ್ 1.56 ಟ್ರಿಲಿಯನ್ ಡಾಲರ್‌ಗೆ ಅಂದರೆ 2021ಕ್ಕಿಂತ ಶೇಕಡ 10ರಷ್ಟು ಏರಿಕೆಯನ್ನು ಕಂಡಿದೆ.
"ಪ್ರತಿ ಬಾರಿ ಬಿಕ್ಕಟ್ಟು ಬಂದಾಗ ಬಲಿ ನೀಡುವ ಕುರಿಮರಿಗಳಂತೆ ಕೆಲಸ ಮಾಡಿ ಕಾರ್ಮಿಕರು ಉದ್ಯೋಗವೆಂದ ಕೂಡಲೇ ಆಯಾಸಗೊಳ್ಳುವಷ್ಟು ನಿರಾಶರಾಗಿದ್ದಾರೆ. ಸಂಸ್ಥೆಗಳು ಲಾಭದ ಹತಾಶೆಯಲ್ಲಿ ಉದ್ಯೋಗಿಗಳನ್ನು ಬಲಿಕೊಡುತ್ತಿದೆ," ಎಂದು ಕೂಡಾ ಇದೇ ಸಂದರ್ಭದಲ್ಲಿ ಬೆಹರ್ ಹೇಳಿದ್ದಾರೆ. ಸರ್ಕಾರದ ಬಡ್ಡಿದರ ಹೆಚ್ಚಳದ ಕ್ರಮ, ವಿಶೇಷವಾಗಿ ಬಡತನದಲ್ಲಿ ವಾಸಿಸುವವರಿಗೆ ನೋವುಂಟುಮಾಡುತ್ತಿದೆ, ಸರ್ಕಾರವು ಪರ್ಯಾಯ ಕ್ರಮವನ್ನು ಕೈಗೊಳ್ಳುವುದು ಅಗತ್ಯ ಎಂದು ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications