ಚಿಂತೆಬೇಡ! ಇಪಿಎಫ್‌ಒ (EPFO) ಸದಸ್ಯರಿಗೆ ಒಳ್ಳೆಯ ಸುದ್ದಿ. ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ ಆಗಿರುವ ಇಪಿಎಫ್‌ಒ,ಉದ್ಯೋಗಿಗಳ ಲಿಂಕ್ಡ್ ಇನ್ಸೆಂಟೀವ್ ಯೋಜನೆಯಡಿಯಲ್ಲಿ (ELI) ಯುಎಎನ್ ಆಕ್ಟಿವೇಶನ್ (UAN) ಹಾಗೂ ಆಧಾರ್ ಲಿಂಕಿಂಗ್ (EPFO Aadhaar Linking) ಗಡುವನ್ನು ಮುಂದೂಡಿಕೆ ಮಾಡಿದೆ. ಏನಿದು ELI ಯೋಜನೆ? ಲಾಸ್ಟ್ ಡೇಟ್ ಯಾವಾಗ? ಎಂಬಿತ್ಯಾದಿ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಉದ್ಯೋಗ ಲಿಂಕ್ಡ್ ಇನ್ಸೆಂಟಿವ್ (ELI) ಯೋಜನೆಯಡಿಯಲ್ಲಿ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ ಆಗಿರುವ ಇಪಿಎಫ್‌ಒ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಆಕ್ಟೀವ್ ಮಾಡಲು ಮತ್ತು ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದಕ್ಕೆ ಕೊನೆಯ ದಿನಾಂಕವನ್ನು ಮುಂದೂಡಿಕೆಯನ್ನು ಮಾಡಿದೆ. ನೀವು ಕೊನೆಯ ದಿನ ಜೂನ್ 30, 2025ರವರೆಗೂ ನೀವು ಆಧಾರ್ ಅನ್ನು ಲಿಂಕ್ ಮಾಡಿಸಿಕೊಳ್ಳಬಹುದು.

ಇಪಿಎಫ್ಒ ಸುತ್ತೋಲೆಯಲ್ಲಿ ಏನಿದೆ..?
ಇಪಿಎಫ್ ತನ್ನಅಧಿಕೃತ ಸುತ್ತೋಲೆಯಲ್ಲಿ (Employees' Provident Fund Organisation) ಇತ್ತೀಚೆಗೆ ತನ್ನ Employment Linked Incentive (ELI) ಯೋಜನೆಯಡಿ Universal Account Number (UAN) ಸಕ್ರಿಯಗೊಳಿಸುವ ಹಾಗೂ ಅದನ್ನು ಆಧಾರ್ ಮತ್ತು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವ ಗಡುವನ್ನು ಜೂನ್ 30, 2025 ರವರೆಗೆ ವಿಸ್ತರಣೆಯನ್ನು ಮಾಡಲಾಗಿದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ.
ಈ ಯೋಜನೆಯಡಿ, ಹೊಸ ಉದ್ಯೋಗಿಗಳು ಯುಎನ್‌ಎ ಯನ್ನು ಸಕ್ರಿಯಗೊಳಿಸಬೇಕಾಗುತ್ತದೆ ಮತ್ತು ಅದನ್ನು ಆಧಾರ್ ಹಾಗೂ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಆವಾಗ ಮಾತ್ರ ಇಪಿಎಫ್ ಯೋಜನೆಯ ವಿವಿಧ ಪ್ರಯೋಜನಗಳನ್ನು ಪಡೆಯಲು ಅರ್ಹ ಆಗಿರುತ್ತೇವೆ.
ಹೆಚ್ಚು ಸಮಯದ ಅವಧಿಯನ್ನು ನೀಡುವುದರಿಂದ, ಇನ್ನೂ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ಉದ್ಯೋಗಿಗಳಿಗೆ ಸಹಾಯಕವಾಗಿರುತ್ತದೆ. ನೀವು ಹೆಚ್ಚಿನ ಮಾಹಿತಿಗಾಗಿ, EPFO ಅಧಿಕೃತ ವೆಬ್‌ಸೈಟ್ ಅಥವಾ ನಿಮ್ಮ ಉದ್ಯೋಗಿಯ HR ವಿಭಾಗವನ್ನು ಸಂಪರ್ಕಿಸುವುದು ಸೂಕ್ತವಾಗಿದೆ ಎಂದು ಹೇಳಿದ್ದಾರೆ.
ಈ ವಿಸ್ತರಣೆಯ ಉದ್ದೇಶವು ಈ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದ ಉದ್ಯೋಗಿಗಳಿಗೆ ಹೆಚ್ಚುವರಿ ಸಮಯವನ್ನು ನೀಡುವ ಉದ್ದೇಶವನ್ನು ಹೊಂದಿದೆ.
ELI ಅಥವಾ EDLI ಯೋಜನೆ ಎಂದರೇನು?
ಉದ್ಯೋಗಿ ಜೀವ ವಿಮಾ ಯೋಜನೆಯು ಅಧಿಕೃತವಾಗಿ Employees' Deposit Linked Insurance (EDLI) ಯೋಜನೆ ಎಂದು ಕರೆಯಲಾಗುತ್ತದೆ. ಇದನ್ನು ಕೆಲವೊಮ್ಮೆ ಅನೌಪಚಾರಿಕವಾಗಿ Employee Life Insurance (ELI) ಎಂದು ಅಧಿಕೃತವಾಗಿ ಕರೆಯಲಾಗುತ್ತದೆ. ಇಂದು ಇಪಿಎಫ್ ಸದಸ್ಯರಿಗೆ ಜೀವ ವಿಮಾ ರಕ್ಷಣೆಯಾಗಿದೆ.
ಉದ್ಯೋಗಿ ಜೀವ ವಿಮಾ ಯೋಜನೆಯು ಅಧಿಕೃತವಾಗಿ Employees' Deposit Linked Insurance (EDLI) ಯೋಜನೆ ಎಂದು ಕರೆಯಲಾಗುತ್ತದೆ. ಇದನ್ನು ಕೆಲವೊಮ್ಮೆ ಅನೌಪಚಾರಿಕವಾಗಿ Employee Life Insurance (ELI) ಎಂದು ಕರೆಯುತ್ತಾರೆ. ಉದ್ಯೋಗಿ ಕೆಲಸದ ಸಮಯದಲ್ಲಿ ಮರಣಹೊಂದಿದರೆ, ನಂತರ ಅವರ ನಾಮಿನಿಗೆ ಒಟ್ಟು ಮೊತ್ತದ ವಿಮಾ ಮೊತ್ತವನ್ನು ನೀಡಲಾಗಿದೆ. ಈ ವಿಮಾ ಮೊತ್ತವು ಗರಿಷ್ಟ 7 ಲಕ್ಷ ರೂಪಾಯಿಗಳವರೆಗೂ ಇದಬಹುದು. ಈ ಪ್ರಯೋಜನವು UAN ಸಕ್ರಿಯವಾಗಿರುವ ಮತ್ತು ಆಧಾರ್‌ಗೆ ಲಿಂಕ್ ಮಾಡಲಾದ ಉದ್ಯೋಗಿಗಳಿಗೆ ಮಾತ್ರ ಸಲ್ಲಿಸಲಾಗುತ್ತದೆ.
UAN ಸಕ್ರಿಯಗೊಳಿಸುವುದು ಯಾಕೆ ಮುಖ್ಯ..?
UAN (Universal Account Number) ಸಕ್ರಿಯವಾಗಿರಬೇಕು. ಯುಎಎನ್ ಇಪಿಎಫಒ ಸದಸ್ಯನಿಗೆ ನಿಗದಿಪಡಿಸಲಾಗುವ ವಿಶೇಷ ಗುರುತಿನ ಸಂಖ್ಯೆಯಾಗಿದೆ.ಇದು ನೌಕರನ EPF ಖಾತೆಯ ಎಲ್ಲಾ ಚಟುವಟಿಕೆಗಳನ್ನು ಹೊಂದಿರುತ್ತದೆ. (ಹಳೆಯ/ಹೊಸ ಕಂಪನಿಗಳ EPF ಖಾತೆಗಳನ್ನು ಕೂಡ) ಇರುತ್ತದೆ.
ಯುಎನ್‌ಈ ಅನ್ನು ಆಧಾರ್ ಗೆ ಲಿಂಕ್ ಮಾಡಬೇಕು
ಆಧಾರ್ ಲಿಂಕ್ ಮಾಡಿದರೆ ಇಪಿಎಫ್ ಕಚೇರಿಗೆ ನೌಕರನ ಗುರುತುಪಡಿಸಲು ಸೌಲಭ್ಯವಿರುತ್ತದೆ. ಇದು ಸ್ಪಷ್ಟವಾಗಿ ಆ ವ್ಯಕ್ತಿಯ ಖಾತೆಯಾಗಿರುತ್ತದೆ.
KYC ದಾಖಲೆಗಳು ನವೀಕರಿಸಬೇಕು
ಆಧಾರ್, ಬ್ಯಾಂಕ್ ಖಾತೆ ವಿವರ, ಪ್ಯಾನ್ (PAN) ಇತ್ಯಾದಿ ದಾಖಲೆಗಳನ್ನು ಯುಎನ್ ಅನ್ನು ನವೀಕರಿಸಬೇಕು. ನಿಮ್ಮಗೆ ಇವು ಲಭ್ಯವಿದ್ದರೆ ಕ್ಲೈಮ್ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತದೆ.
EPFO ಸೇವೆಗಳನ್ನು ಬಳಸಲು ಯುಎನ್‌ಎ ಸಕ್ರಿಯಗೊಳಿಸುವುದೇಕೆ ಅಗತ್ಯ?
ಯುಎನ್‌ಎ ಸಕ್ರಿಯಗೊಳಿಸುವುದು ಇಪಿಎಫ್‌ಒನಲ್ಲಿ ಪ್ರಮುಖ ಮುಖ್ಯ. ನೀವು ಇದನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಮಾಡುವುದು. ನೀವು ಅದಿಕೃತ ವೆಬ್ ಸೈಟ್ ಆದ ಇಪಿಎಫ್ಒ ಸದಸ್ಯ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಇಪಿಎಫ್ ಸೇವೆಗಳ ಲಾಭವನ್ನು ಪಡೆದುಕೊಳ್ಳಬಹುದು.
UAN ಸಕ್ರಿಯಗೊಳಿಸಲು ಈ ಕೆಳಗಿನ ಸರಳ ವಿಧಾನಗಳನ್ನು ಅನುಸರಿಸಿ
- ನೀವು ಮೊದಲು EPFO ಅಧಿಕೃತ ವೆಬ್ ಸೈಟ್ ಆದ https://unifiedportal-mem.epfindia.gov.inಗೆ ಮೊದಲು ಭೇಟಿ ನೀಡಬೇಕು.
- ಯುಎನ್‌ಎ ಸಕ್ರಿಯಗೊಳಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಹೋಮ್‌ಪೇಜ್‌ನಲ್ಲಿ Activate UAN ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಸಂಪೂರ್ಣ ವಿವರಗಳನ್ನುಗಳಾದ UAN (ಯುನಿವರ್ಸಲ್ ಅಕೌಂಟ್ ನಂಬರ್),ಪೂರ್ಣ ಹೆಸರು (AADHAAR/KYC ನಂತೆ), ಜನ್ಮ ದಿನಾಂಕ,ಆಧಾರ್ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆ ಅಥವಾ ಮೆಂಬರ್ ಐಡಿ,ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ಭರ್ತಿ ಮಾಡಿ.
- ಒಟಿಪಿ ಪರಿಶೀಲನೆ; ನೀವು ನೀಡಿದ ಮೊಬೈಲ್‌ಗೆ ಸಂಖ್ಯೆಗೆ ಒಟಿಪಿ ಬರುತ್ತದೆ ಅದನ್ನು ನಮೂದಿಸಿ ಪರಿಶೀಲಿಸುತ್ತದೆ.
ಆಧಾರ್ ಸಕ್ರಿಯಗೊಳಿಸಿದ ನಂತರ, ಪಾಸ್ವರ್ಡ್ ಸೆಟ್ ಮಾಡಿ. ಇಪಿಎಫ್ ಪೋರ್ಟಲ್‌ಗೆ ಲಾಗಿನ್ ಮಾಡಬಹುದು. ಸಕ್ರಿಯಗೊಳಿಸುವಿಕೆ ಪೂರ್ಣಗೊಂಡ ನಂತರ, ಉದ್ಯೋಗಿಗಳು ತಮ್ಮ ಪಿಎಫ್ ಬ್ಯಾಲೆನ್ಸ್, ಕ್ಲೈಮ್ ಸ್ಥಿತಿ ಮತ್ತು ಕೆವೈಸಿ ನವೀಕರಣದಂತಹ ಕಾರ್ಯಗಳನ್ನು ಆನ್‌ಲೈನ್ ಮೂಲಕ ಮಾಡಬಹುದು.


Click it and Unblock the Notifications