ನಾವು ಮನೆಯನ್ನು ಖರೀದಿ ಮಾಡುವಾಗ ಅಥವಾ ಒಂದು ಆಸ್ತಿಯನ್ನು ಖರೀದಿ ಮಾಡುವಾಗ ಎಲ್ಲ ಸಿದ್ಧತೆಯನ್ನು ನಡೆಸಿ, ಪ್ಲ್ಯಾನ್ ಮಾಡಿ ಖರೀದಿಸುವುದು ಮುಖ್ಯವಾಗುತ್ತದೆ. ನಾವು ನಿರ್ಮಾಣ ಹಂತದಲ್ಲಿರುವ ಆಸ್ತಿ ಖರೀದಿಸಬೇಕೇ ಅಥವಾ ಸಿದ್ಧವಾಗಿರುವ ಮನೆಯನ್ನು ಖರೀದಿ ಮಾಡಬೇಕೇ ಎಂಬುವುದನ್ನು ಮೊದಲೇ ನಿರ್ಧಾರ ಮಾಡಬೇಕು ಎಂದು ರಿಯಲ್ ಎಸ್ಟೇಟ್ ವಲಯದ ವೃತ್ತಿಪರರು ಹೇಳುತ್ತಾರೆ. ನಿರ್ಮಾಣ ಹಂತದ, ಸಿದ್ಧವಾಗಿರುವ ಆಸ್ತಿ ಖರೀದಿಯ ಲಾಭ, ನಷ್ಟವನ್ನು ಲೆಕ್ಕಹಾಕಬೇಕು ಎಂದು ತಜ್ಞರ ಹೇಳುತ್ತಾರೆ.
ಯಾರು ಕಾಯಲು ಸಿದ್ಧರಾಗಿರುತ್ತಾರೋ ಮತ್ತು ದೀರ್ಘಾವಧಿಯ ಹೂಡಿಕೆಯನ್ನು ಮಾಡಲು ನಿರ್ಧಾರ ಮಾಡಿರುತ್ತಾರೋ ಅವರು ನಿರ್ಮಾಣ ಹಂತದಲ್ಲಿರುವ ಆಸ್ತಿಯನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ದೇವಿಕಾ ಗ್ರೂಪ್‌ನ ಎಂಡಿ ಅಂಕಿತ್ ಅಗರ್ವಾಲ್, "ನಿರ್ಮಾಣ ಹಂತದ ಆಸ್ತಿಯು ಕಡಿಮೆ ದರದಲ್ಲಿ ಲಭ್ಯವಾಗುತ್ತದೆ. ಇದು ಖರೀದಿದಾರರಿಗೆ ಲಾಭವಾಗಲಿದೆ. ಆದರೆ ನಾವು ಎಂದಿಗೂ ನಿರ್ಮಾಣದ ಗುಣಮಟ್ಟ, ಆಸ್ತಿಯಿರುವ ಸ್ಥಳ ಪರಿಶೀಲಿಸಬೇಕು," ಎಂದು ತಿಳಿಸಿದ್ದಾರೆ.

ನಿರ್ಮಾಣ ಹಂತದ ಆಸ್ತಿ ಖರೀದಿ ವೇಳೆ ನೆನಪಿಡಬೇಕಾದ ಅಂಶ
ನಿರ್ಮಾಣ ಹಂತದ ಕಟ್ಟಡದಲ್ಲಿನ ಇತರೆ ಖರ್ಚುಗಳ ಬಗ್ಗೆಯೂ ತಿಳಿದಿರಬೇಕಾಗುತ್ತದೆ. ನಿರ್ಮಾಣ ಹಂತದಲ್ಲಿ ಇರುವಾಗಲೇ ನಿರ್ವಹಣಾ ಶುಲ್ಕ, ಆಸ್ತಿ ತೆರಿಗೆ, ಸಾಲದ ಬಡ್ಡಿದರ ಪಾವತಿಯ ಬಗ್ಗೆ ಲೆಕ್ಕಹಾಕಿಕೊಳ್ಳಬೇಕು ಎಂದು ಅಂಕಿತ್ ಅಗರ್ವಾಲ್ ಸಲಹೆಯಾಗಿದೆ. ಭಾರತದಲ್ಲಿ ನಿರ್ಮಾಣ ಹಂತದಲ್ಲಿರುವ ಆಸ್ತಿಯನ್ನು ನೀವು ಖರೀದಿ ಮಾಡುವಾಗ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಯಾಕೆಂದರೆ ಆ ಸಂದರ್ಭದಲ್ಲಿ ಆಸ್ತಿಯ ಬೆಲೆಯು ಕಡಿಮೆಯಾಗಿರುತ್ತದೆ. ಕೆಲವು ಬಿಲ್ಡರ್‌ಗಳು ಕಡಿಮೆ ದರ ಆಫರ್‌ಗಳನ್ನು ಕೂಡಾ ನೀಡುತ್ತಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಆರ್‌ಪಿಎಸ್ ಗ್ರೂಪ್‌ನ ಪಾಲುದಾರ ಸುರೇನ್ ಗೋಯಲ್, "ತಮ್ಮ ರಿಟರ್ನ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ ಡೆವಲಾಪರ್‌ಗಳು ನೀಡುವ ಫ್ಲೆಕ್ಸಿಬಲ್ ಪಾವತಿ ಆಯ್ಕೆಯ ಪ್ರಯೋಜನವನ್ನು ಹೂಡಿಕೆದಾರರು ಪಡೆಯಬಹುದು. ನಿರ್ಮಾಣ ಹಂತದಲ್ಲಿರುವ ಆಸ್ತಿ ಮತ್ತು ನಿರ್ಮಾಣವಾಗಿರುವ ಆಸ್ತಿಯ ಬೆಲೆಯನ್ನು ಹೋಲಿಕೆ ಮಾಡಿದ ವ್ಯತ್ಯಾಸಗಳು ಇದೆ. ಇದರ ಪ್ರಯೋಜನವನ್ನು ಹೂಡಿಕೆದಾರರು ಪಡೆಯಬಹುದು," ಎಂದು ಹೇಳಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಆಸ್ತಿ ಮೇಲೆ ಹೂಡಿಕೆ ಮಾಡುವುದರಿಂದ ಹೂಡಿಕೆದಾರರು ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಸ್ಥಳವನ್ನು, ಮಹಡಿಯನ್ನು, ಸೌಕರ್ಯಗಳನ್ನು ನಾವು ಆಯ್ಕೆ ಮಾಡುವ ಅವಕಾಶ ಇರುತ್ತದೆ. ಇದು ನಮಗೆ ಬೇಕಾದಂತೆ ಮನೆ ನಿರ್ಮಿಸಲು ಸಹಕಾರಿ. ಇನ್ನು ಇಂಡಿಯನ್ ಪ್ಲಬಿಂಗ್ ಅಸೋಸಿಯೇಷನ್‌ನ ರಾಷ್ಟ್ರೀಯ ಅಧಕ್ಷ ಗುರ್ಮಿತ್ ಸಿಂಗ್ ಅರೋರಾ ಪ್ರಕಾರ ನಿರ್ಮಾಣ ಹಂತದಲ್ಲಿರುವ ಆಸ್ತಿ ಮೇಲೆ ಹೂಡಿಕೆ ಮಾಡುವುದರಿಂದ ತಮ್ಮ ಆಸ್ತಿಯನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ನಿರ್ಮಾಣವಾಗಿ, ಸಿದ್ಧವಾಗಿರುವ ಆಸ್ತಿ
ಸಂಪೂರ್ಣವಾಗಿ ನಿರ್ಮಾಣವಾಗಿ ನಾವು ವಾಸ ಮಾಡಲು ಸಿದ್ಧವಾಗಿರುವ ಆಸ್ತಿ ಖರೀದಿಯಿಂದಲೂ ಕೂಡಾ ಲಾಭವಿದೆ. ನಿರ್ಮಾಣ ಹಂತದಲ್ಲಿನ ಆಸ್ತಿ ಖರೀದಿಸಿದರೆ ನಿರ್ಮಾಣದಲ್ಲಿ ವಿಳಂಬವಾದಾಗ ನಮ್ಮ ಪ್ಲ್ಯಾನ್‌ಗೆ ತೊಂದರೆಯಾಗಬಹುದು. ಆದರೆ ನಿರ್ಮಾಣವಾಗಿರುವ ಆಸ್ತಿ ಖರೀದಿಯಲ್ಲಿ ಯಾವುದೇ ವಿಳಂಬ ಇರುವುದಿಲ್ಲ ಎಂದು ಇಂಡಿಯನ್ ಪ್ಲಬಿಂಗ್ ಅಸೋಸಿಯೇಷನ್‌ನ ರಾಷ್ಟ್ರೀಯ ಅಧಕ್ಷ ಗುರ್ಮಿತ್ ಸಿಂಗ್ ಅರೋರಾ ಹೇಳಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications