2022-23ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ ಒಂದರನ್ನು ನಡೆಯಲಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಐದು ರಾಜ್ಯಗಳಲ್ಲಿ ಫೆಬ್ರವರಿ ತಿಂಗಳಿನಲ್ಲಿ ಚುನಾವಣೆ ನಡೆಯಲಿರುವ ಮುನ್ನ ಈ ಬಜೆಟ್ ಮಂಡನೆಯು ಬಹಳ ಕುತೂಹಲವನ್ನು ಸೃಷ್ಟಿ ಮಾಡಿದೆ. ಸಾಮಾನ್ಯವಾಗಿ ಕೇಂದ್ರ ಬಜೆಟ್ ಸಾಮಾನ್ಯ ಜನರಿಗೆ ಯಾವ ವಸ್ತುವಿನ ಬೆಲೆ ಕಡಿಮೆ ಆಗಲಿದೆ, ಯಾವುದು ದುಬಾರಿ ಆಗಲಿದೆ ಎಂದು ನಿರ್ಧಾರ ಮಾಡುವ ಕಸರತ್ತು ಆಗಿದೆ.
ಇನ್ನು ಕೇಂದ್ರ ಬಜೆಟ್ ಸ್ವಾಬ್‌ಗಳು ಅಥವಾ ಕಡಿತಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ತೆರಿಗೆ ಬದಲಾವಣೆಗಳನ್ನು ವಿಶೇಷವಾಗಿ ಸಂಬಳದಲ್ಲಿನ ಕಡಿತ ವಿಚಾರವಾಗಿಯೂ ಮೇಲ್ವಿಚಾರಣೆ ನಡೆಸುತ್ತದೆ. 2005 ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ರದ್ದು ಮಾಡಿದ್ದರು. ಆದರೆ ಈಗ ಅದನ್ನು ಮತ್ತೆ ಪರಿಚಯ ಮಾಡಲಾಗಿದೆ.
2005 ರಲ್ಲಿ ರದ್ದುಗೊಳಿಸಲಾದ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 2017-18 ರ ಬಜೆಟ್‌ನಲ್ಲಿ ಪುನಃ ಪರಿಚಯಿಸಲಾಯಿತು. ಇದನ್ನು 2019 ರ ಮಧ್ಯಂತರ ಬಜೆಟ್‌ನಲ್ಲಿ ಪಿಯೂಷ್ ಗೋಯಲ್ 40,000 ರೂ.ಗಳಿಂದ 50,000 ರೂ.ಗೆ ಹೆಚ್ಚಳ ಮಾಡಿ ಘೋಷಣೆ ಮಾಡಿದ್ದಾರೆ. ವೈದ್ಯಕೀಯ ಮತ್ತು ಸಾರಿಗೆ ವೆಚ್ಚಗಳಿಗೆ ಬದಲಾಗಿ ಈ ಕಡಿತವು ನಡೆಯಲಿದೆ. ಆದರೆ ಈ ಬಾರಿ ಸುಮಾರು 1,00,000ದ ಕಡಿತ ಸ್ಟಾಡರ್ಡ್ ಡಿಡಕ್ಷನ್ ಅಥವಾ ಪ್ರಮಾಣಿತ ಕಡಿತ ಆಗುವ ನಿರೀಕ್ಷೆ ಇದೆ. ಹಾಗಾದರೆ ಏನಿದು ಸ್ಟಾಡರ್ಡ್ ಡಿಡಕ್ಷನ್ ಎಂದು ತಿಳಿಯಲು ಮುಂದೆ ಓದಿ...
ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದರೇನು?
ಯಾವುದೇ ಆದಾಯ ತೆರಿಗೆ ಕಡಿತವು ಮೂಲತಃ ತೆರಿಗೆ ಇಲಾಖೆಯು ಆದಾಯವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದರ ಆಧಾರದ ಮೇಲೆ ತೆರಿಗೆದಾರರಿಂದ ಪರಿಹಾರವನ್ನು ಪಡೆಯಲು ನೀಡುವ ಪ್ರೋತ್ಸಾಹವಾಗಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುವುದು ವೈದ್ಯಕೀಯ ಮತ್ತು ಸಾರಿಗೆ ವೆಚ್ಚಗಳನ್ನು ಅನುಮತಿಸುವ ಸಂಬಳದ ಆದಾಯದಿಂದ ಮಾಡಲಾಗುವ ಕಡಿತವಾಗಿದೆ. ಇದನ್ನು ಉದ್ಯೋಗಿಗಳ ಒಟ್ಟು ಸಂಬಳದಿಂದ ಕಡಿತ ಮಾಡಲಾಗುತ್ತದೆ. ಹಾಗೆಯೇ ವೆಚ್ಚಗಳ ಯಾವುದೇ ಪುರಾವೆ ಇಲ್ಲದೆಯೇ ಈ ಹಣಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲಾ ಉದ್ಯೋಗಿಗಳಿಗೆ ತೆರಿಗೆ ಹೊರೆಯನ್ನು ಕಡಿತ ಮಾಡಲು ಸಹಾಯಕವಾಗಿದೆ.
2018-19ನೇ ಸಾಲಿನವರೆಗೆ, ಅಂದರೆ ಸ್ಟಾಡರ್ಡ್ ಡಿಡಕ್ಷನ್ ಆರಂಭ ಆಗುವುದಕ್ಕೂ ಮುನ್ನ ಸಾರಿಗೆ ಭತ್ಯೆ ಮತ್ತು ವೈದ್ಯಕೀಯ ಭತ್ಯೆ ರೂ 19,200 ಮತ್ತು ರೂ 15,000 ವೇತನದಾರರಿಗೆ ತಮ್ಮ ತೆರಿಗೆಯ ಆದಾಯದಿಂದ ಪರಿಹಾರವನ್ನು ಪಡೆಯಲು ಸಾಧ್ಯವಿತ್ತು. ಟ್ಟಾರೆಯಾಗಿ, ಇದರರ್ಥ 34,200 ರೂ ಕಡಿತಗೊಳಿಸಲಾಗುತ್ತಿತ್ತು. ಇದನ್ನು ಬಳಿಕ ಸ್ಟ್ಯಾಂಡರ್ಡ್ ಡಿಡಕ್ಷನ್ ಮೂಲಕ ರೂ 50,000 ಕ್ಕೆ ಹೆಚ್ಚಿಸಲಾಯಿತು. ಪ್ರಮುಖವಾಗಿ ಈ ಸ್ಟಾಡರ್ಡ್ ಡಿಡಕ್ಷನ್ ಸಂಬಳದ ಹೊರೆಯನ್ನು ಕಡಿಮೆ ಮಾಡುತ್ತದೆ.
ಕೇಂದ್ರ ಬಜೆಟ್‌ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಏಕೆ ಹೆಚ್ಚಳ ಸಾಧ್ಯತೆ?
ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆ ಹೆಚ್ಚಿದ ವೈದ್ಯಕೀಯ ಬಿಲ್‌ಗಳು ಮತ್ತು ಮನೆಯಿಂದ ಕೆಲಸ ಮಾಡುವುದರಿಂದ ಹೆಚ್ಚಿದ ವೆಚ್ಚಗಳಿಂದಾಗಿ ಉದ್ಯೋಗಿಗಳು ಸಂಕಷ್ಟದಲ್ಲಿದ್ದಾರೆ. ಹೆಚ್ಚಿನ ಉದ್ಯೋಗಿಗಳು ತಮ್ಮ ಕಛೇರಿಯ ಕೆಲಸವನ್ನು ಮಾಡಲು ತಾವಾಗಿಯೇ ಖರ್ಚು ಮಾಡಬೇಕಾಗಿ ಬರುತ್ತಿದೆ. ಅಲ್ಲದೆ, ಮನೆಯಿಂದಲೇ ಕೆಲಸ ಮಾಡುವುದು ವಿದ್ಯುತ್ ಮತ್ತು ಇಂಟರ್ನೆಟ್ ಬಿಲ್‌ಗಳನ್ನು ಹೆಚ್ಚಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳು ಕೆಲಸ ಮಾಡುವ ಮಾಡಬೇಕಾದ ಖರ್ಚು ಅಧಿಕವಾಗಿದೆ. ಆದ್ದರಿಂದ ಸಂಬಳ ಪಡೆಯುವ ಉದ್ಯೋಗಿಗಳು, ಇತರ ದೇಶಗಳು ನೀಡಿದ ರೀತಿಯಲ್ಲಿ ಸರ್ಕಾರದಿಂದ ಪ್ರಮಾಣಿತ ಕಡಿತದ ರೂಪದಲ್ಲಿ ಸ್ವಲ್ಪ ಪರಿಹಾರವನ್ನು ನಿರೀಕ್ಷಿಸುತ್ತಾರೆ.
ಖರ್ಚು ಹೆಚ್ಚಿಸಿದ ವರ್ಕ್ ಫ್ರಮ್ ಹೋ
ಡೆಲಾಯ್ಟ್ ಇಂಡಿಯಾದ ಪೂರ್ವ-ಬಜೆಟ್ ನಿರೀಕ್ಷೆಗಳು 2022ರ ಪ್ರಕಾರ "ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳು 'ವರ್ಕ್ ಫ್ರಮ್ ಹೋಮ್'ಗಾಗಿ ಅಧಿಕ ಖರ್ಚು ಮಾಡುತ್ತಿದ್ದಾರೆ. ಇಂಟರ್ನೆಟ್ ಶುಲ್ಕಗಳು, ಬಾಡಿಗೆ, ವಿದ್ಯುತ್, ಪೀಠೋಪಕರಣಗಳು ಇತ್ಯಾದಿಗಳಿಗೆ ಅಧಿಕ ಖರ್ಚನ್ನು ಉದ್ಯೋಗಿಗಳು ಮಾಡುತ್ತಿದ್ದಾರೆ. ಆದ್ದರಿಂದ, ಈ ವೆಚ್ಚಗಳನ್ನು ಪೂರೈಸಲು ಉದ್ಯೋಗದಾತರು ಭತ್ಯೆಗಳನ್ನು ಒದಗಿಸಬೇಕಾಗುತ್ತದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ 50,0000 ರೂ.ಗಳ ಹೆಚ್ಚುವರಿ 'ವರ್ಕ್ ಫ್ರಮ್ ಹೋಮ್' ಪ್ರಮಾಣಿತ ಕಡಿತವನ್ನು ಶಿಫಾರಸು ಮಾಡಲಾಗುತ್ತದೆ.
100,000 ರೂಪಾಯಿಗಳ ಪ್ರಮಾಣಿತ ಕಡಿತ
Deloitte ನಂತೆ, ICAI ಸಹ ಸಂಬಳದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್‌ಗಾಗಿ ಆಗುವ ಖರ್ಚಿಗಾಗಿ 100,000 ರೂಪಾಯಿಗಳ ಪ್ರಮಾಣಿತ ಕಡಿತವನ್ನು ಸೂಚಿಸುತ್ತದೆ. "ಈ ಹಣದುಬ್ಬರದ ಸಂದರ್ಭದಲ್ಲಿ ಉದ್ಯೋಗಿಗಳ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ಯೋಗಿಗಳ ಮಾಣಿತ ಕಡಿತವನ್ನು ಕನಿಷ್ಠ ರೂ. 100,000ಕ್ಕೆ ಹೆಚ್ಚಳ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ," ಎಂದು ಐಸಿಎಐ ಹೇಳಿದೆ.


Click it and Unblock the Notifications