ಜನವರಿ ತಿಂಗಳಿನಲ್ಲಿ ಭಾರತದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ 8 ಬಿಲಿಯನ್ ವಹಿವಾಟು ನಡೆದಿದೆ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾಪೋರೇಷನ್ ಆಫ್ ಇಂಡಿಯಾ ಬುಧವಾರ ಮಾಹಿತಿ ನೀಡಿದೆ. ಒಟ್ಟಾಗಿ ಜನವರಿ ತಿಂಗಳಿನಲ್ಲಿ 13 ಲಕ್ಷ ಕೋಟಿ ರೂಪಾಯಿಯ ಯುಪಿಐ ವಹಿವಾಟು ನಡೆದಿದೆ ಎಂದು ತಿಳಿಸಿದೆ.
ದೇಶದಲ್ಲಿ ಯುಪಿಐ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಪ್ರತಿ ತಿಂಗಳು ಕೂಡಾ ಯುಪಿಐ ವಹಿವಾಟು ಹೆಚ್ಚಳವಾಗುತ್ತಿದೆ. ಕಳೆದ ತಿಂಗಳು ಅಂದರೆ ಡಿಸೆಂಬರ್ 2022ರಲ್ಲಿ ದಾಖಲೆ ಪ್ರಮಾಣದಲ್ಲಿ ಯುಪಿಐ ವಹಿವಾಟು ನಡೆದಿದೆ. 2022ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ದಾಖಲೆಯ 7.82 ಬಿಲಿಯನ್ ವಹಿವಾಟು ನಡೆದಿದೆ. ಅಂದರೆ ಸುಮಾರು 12.82 ಟ್ರಿಲಿಯನ್ ರೂಪಾಯಿ ವಹಿವಾಟು ನಡೆದಿದೆ.
ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24 ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲೇ 2022ರಲ್ಲಿ ಒಟ್ಟಾಗಿ ಎಷ್ಟು ಯುಪಿಐ ವಹಿವಾಟು ನಡೆದಿದೆ. ವಹಿವಾಟು ಎಷ್ಟು ಹೆಚ್ಚಳವಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

2022ರಲ್ಲಿ ಒಟ್ಟು ಎಷ್ಟು ಯುಪಿಐ ವಹಿವಾಟು?
2022ರಲ್ಲಿ ಒಟ್ಟಾಗಿ ಯುಪಿಐ ವಹಿವಾಟು 1.24 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಬಜೆಟ್ ಈ ಹಿಂದಿನ ಬಜೆಟ್‌ನ ಅಡಿಪಾಯವನ್ನು ಹೊಂದಿದೆ ಎಂದು ಕೂಡಾ ಹೇಳಿದ್ದಾರೆ. ಭಾರತದಲ್ಲಿ ಪ್ರಸ್ತುತ ಫಿನ್‌ಟೆಕ್ ಮಾರುಕಟ್ಟೆ ಬೆಳೆಯುತ್ತಿದೆ. 2000ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು ಇದೆ. 2021ರಲ್ಲಿ ಫಿನ್‌ಟೆಕ್ ಸೆಕ್ಟರ್‌ಗಳು 50 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ, ಇದು 2025ಕ್ಕೆ ಮೂರು ಪಟ್ಟು ಅಧಿಕವಾಗುವ ನಿರೀಕ್ಷೆಯಿದೆ ಎಂದಿದ್ದಾರೆ.
ಕಳೆದ ಎರಡು ವರ್ಷದಿಂದ ಯುಪಿಐ ವಹಿವಾಟು ಏರುಗತಿಯಲ್ಲೇ ಸಾಗುತ್ತಿದೆ. ಆದರೆ ನಡುವೆ ಕೆಲವು ತಿಂಗಳು ಕೊಂಚ ವಹಿವಾಟು ಇಳಿದಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಇದ್ದ ನಿರ್ಬಂಧಗಳ ಸಂದರ್ಭದಲ್ಲಿ ಕೊಂಚ ವಹಿವಾಟು ಕುಗ್ಗಿತ್ತು. ಆದರೆ ಅದಾದ ಬಳಿಕ ಯುಪಿಐ ವಹಿವಾಟು ಅಧಿಕವಾಗುತ್ತಲೇ ಸಾಗಿದೆ. 2022ರಲ್ಲಿ 74 ಬಿಲಿಯನ್ ಯುಪಿಐ ವಹಿವಾಟು ನಡೆದಿದೆ. ಸುಮಾರು 125.94 ಟ್ರಿಲಿಯನ್ ರೂಪಾಯಿ ವಹಿವಾಟು ನಡೆದಿದೆ. 2021ರಲ್ಲಿ 71.54 ಟ್ರಿಲಿಯನ್ ರೂಪಾಯಿ ಮೌಲ್ಯದ 38 ಬಿಲಿಯನ್ ವಹಿವಾಟು ನಡೆದಿದೆ. ಒಂದು ವರ್ಷದಲ್ಲೇ ಯುಪಿಐ ವಹಿವಾಟು ಶೇಕಡ 90ರಷ್ಟು ಏರಿಕೆಯಾಗಿದೆ. ಹಾಗೆಯೇ ವಹಿವಾಟು ಮೌಲ್ಯವು ಶೇಕಡ 76ರಷ್ಟು ಹೆಚ್ಚಾಗಿದೆ.
ಮೊದಲ ಬಾರಿಗೆ ಬಿಲಿಯನ್ ವಹಿವಾಟು ಅಕ್ಟೋಬರ್ 2019ರಲ್ಲಿ ನಡೆದಿದೆ. 2016ರಲ್ಲಿ ಯುಪಿಐ ವಹಿವಾಟು ಆರಂಭವಾಗಿದ್ದು, ಇದಾದ ಮೂರು ವರ್ಷದ ಬಳಿಕ ಅಕ್ಟೋಬರ್ 2019ರಲ್ಲಿ ಯುಪಿಐ ವಹಿವಾಟು ಬಿಲಿಯನ್‌ಗೆ ತಲುಪಿದೆ. ಅದಾದ ಬಳಿಕ ನಿರಂತರವಾಗಿ ಬಿಲಿಯನ್ ವಹಿವಾಟು ನಡೆದಿದೆ. ಒಂದು ವರ್ಷದಲ್ಲೇ ಅಕ್ಟೋಬರ್ 2020ರಲ್ಲಿ 2 ಬಿಲಿಯನ್ ಯುಪಿಐ ವಹಿವಾಟು ನಡೆದಿದೆ. ಹಾಗೆಯೇ ಮುಂದಿನ 10 ತಿಂಗಳಿನಲ್ಲೇ 3 ಬಿಲಿಯನ್ ಯುಪಿಐ ವಹಿವಾಟು ನಡೆದಿದೆ. ಇದಾದ ಮೂರು ತಿಂಗಳಿನಲ್ಲಿಯೇ 4 ಬಿಲಿಯನ್ ವಹಿವಾಟು ನಡೆದಿದೆ. ಅದಾದ ಬಳಿಕ ಆರು ತಿಂಗಳಿನಲ್ಲಿಯೇ ಮತ್ತೆ ಒಂದು ಬಿಲಿಯನ್ ವಹಿವಾಟು ಏರಿಕೆಯಾಗಿದೆ. ಮುಂದಿನ ಮೂರು ತಿಂಗಳಿನಲ್ಲಿಯೇ 7 ಬಿಲಿಯನ್ ವಹಿವಾಟಿಗೆ ಹೆಚ್ಚಳವಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications