ಅಕ್ಟೋಬರ್‌ನಲ್ಲಿ 12 ಟ್ರಿಲಿಯನ್ ರೂ. ಯುಪಿಐ ವಹಿವಾಟು, ದಾಖಲೆ ಸೃಷ್ಟಿ!

ದೇಶದಲ್ಲಿ ಯುಪಿಐ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಪ್ರತಿ ತಿಂಗಳು ಕೂಡಾ ಯುಪಿಐ ವಹಿವಾಟು ಹೆಚ್ಚಳವಾಗುತ್ತಿದೆ. ಇನ್ನು ವಹಿವಾಟಿನ ಮೊತ್ತವು ಕೂಡಾ ಅಧಿಕವಾಗುತ್ತಿದೆ. ಭಾರತದಲ್ಲಿ ಯುಪಿಐ ಆರಂಭವಾದ ಬಳಿಕ ಮೊದಲ ಬಾರಿಗೆ ಅಕ್ಟೋಬರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಯುಪಿಐ ವಹಿವಾಟು ನಡೆದಿದೆ.

ಅಕ್ಟೋಬರ್‌ನಲ್ಲಿ ಭಾರತದಲ್ಲಿ 7 ಬಿಲಿಯನ್ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ವಹಿವಾಟು ನಡೆದಿದೆ. ಯುಪಿಐ ಆರಂಭವಾದ ಬಳಿಕ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ವಹಿವಾಟು ನಡೆದಿದೆ. ಅದು ಕೂಡಾ ಮುಖ್ಯವಾಗಿ ಹಬ್ಬದ ಸೀಸನ್‌ನಲ್ಲಿ ಅಧಿಕವಾಗಿ ಯುಪಿಐ ವಹಿವಾಟು ನಡೆದಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಕ್ಟೋಬರ್‌ನ ಯುಪಿಐ ವಹಿವಾಟಿನ ಡೇಟಾವನ್ನು ಬಿಡುಗಡೆ ಮಾಡಿದೆ. ಈ ಡೇಟಾ ಪ್ರಕಾರ ಅಕ್ಟೋಬರ್‌ನಲ್ಲಿ 7.3 ಬಿಲಿಯನ್ ಯುಪಿಐ ವಹಿವಾಟು ನಡೆಸಿದೆ. ಒಟ್ಟು ಸುಮಾರು 12.11 ಟ್ರಿಲಿಯನ್ ರೂಪಾಯಿ ವಹಿವಾಟು ಅಕ್ಟೋಬರ್ ತಿಂಗಳಿನಲ್ಲೇ ನಡೆದಿದೆ!, ಆರಂಭದಿಂದ ಯುಪಿಐ ವಹಿವಾಟು ಯಾವ ರೀತಿ ಏರಿಕೆಯಾಗುತ್ತಾ ಹೋಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ವರ್ಷದಿಂದ ವರ್ಷಕ್ಕೆ ಎಷ್ಟು ವಹಿವಾಟು ಹೆಚ್ಚಳ?

ವರ್ಷದಿಂದ ವರ್ಷಕ್ಕೆ ಎಷ್ಟು ವಹಿವಾಟು ಹೆಚ್ಚಳ?

ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರ ಹಾಕಿದಾಗ ಅಕ್ಟೋಬರ್‌ನಲ್ಲಿ ಯುಪಿಐ ವಹಿವಾಟು ಸುಮಾರು ಶೇಕಡ 73ರಷ್ಟು ಹೆಚ್ಚಳವಾಗಿದೆ. ಇನ್ನು ಮೊತ್ತದ ಲೆಕ್ಕಾಚಾರದಲ್ಲಿ ನೋಡಿದಾಗ ವರ್ಷದಿಂದ ವರ್ಷಕ್ಕೆ ಈ ಅಕ್ಟೋಬರ್‌ನಲ್ಲಿ ಯುಪಿಐ ವಹಿವಾಟು ಮೌಲ್ಯ ಶೇಕಡ 57ರಷ್ಟು ಅಧಿಕವಾಗಿದೆ. ಕಳೆದ ಎರಡು ವರ್ಷದಿಂದ ಯುಪಿಐ ವಹಿವಾಟಿನ ಪರಿಮಾಣ ಹಾಗೂ ಮೌಲ್ಯವು ಹೆಚ್ಚಳವಾಗುತ್ತಲೇ ಇದೆ. ಕೆಲವು ತಿಂಗಳುಗಳಲ್ಲಿ ಮಾತ್ರ ಕೊಂಚ ಏರಿಳಿತವಾಗಿದೆ. ಮುಖ್ಯವಾಗಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೊಂಚ ಏರಿಳಿತ ಕಂಡು ಬಂದಿದೆ. ಇನ್ನು ಕೋವಿಡ್ ಬಳಿಕ ಹೆಚ್ಚಾಗಿ ಜನರು ಯುಪಿಐ ವಹಿವಾಟನ್ನು ನಡೆಸುತ್ತಿದ್ದಾರೆ. ಪ್ರತಿನಿತ್ಯದ ವಹಿವಾಟು ಕೂಡಾ ಯುಪಿಐ ಮೂಲಕ ನಡೆಸುತ್ತಿದ್ದಾರೆ.

 ಯುಪಿಐ ವಹಿವಾಟು ಏರಿಕೆಯ ಮೈಲಿಗಲ್ಲು

ಯುಪಿಐ ವಹಿವಾಟು ಏರಿಕೆಯ ಮೈಲಿಗಲ್ಲು

ಅಕ್ಟೋಬರ್ 2019ರಲ್ಲಿ ಯುಪಿಐ ವಹಿವಾಟು 1 ಬಿಲಿಯನ್ ದಾಟಿದೆ. 2016ರಲ್ಲಿ ಯುಪಿಐ ವಹಿವಾಟು ಆರಂಭವಾದ ಸುಮಾರು ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ 1 ಬಿಲಿಯನ್ ವಹಿವಾಟು ದಾಟಿತ್ತು. ಬಳಿಕ 2020ರ ಅಕ್ಟೋಬರ್‌ನಲ್ಲಿ 2 ಬಿಲಿಯನ್ ವಹಿವಾಟು ನಡೆದಿತ್ತು. ಇದಾದ ಹತ್ತು ತಿಂಗಳ ನಂತರ ಒಂದು ತಿಂಗಳಿನಲ್ಲೇ 3 ಬಿಲಿಯನ್ ಯುಪಿಐ ವಹಿವಾಟು ನಡೆದಿತ್ತು. ಅದಾದ ಮೂರು ತಿಂಗಳ ಬಳಿಕ 4 ಮಿಲಿಯನ್ ಯುಪಿಐ ವಹಿವಾಟು ಮೈಲಿಗಲ್ಲನ್ನು ತಲುಪಿತು. ಆರು ತಿಂಗಳಿನಲ್ಲೇ ಮತ್ತೆ 1 ಬಿಲಿಯನ್ ವಹಿವಾಟು ಅಧಿಕವಾಗಿತ್ತು. 5 ಮಿಲಿಯನ್‌ ಯುಪಿಐ ವಹಿವಾಟಿನಿಂದ 6 ಮಿಲಿಯನ್ ವಹಿವಾಟು ತಲುಪಲು ನಾಲ್ಕು ತಿಂಗಳು ಬೇಕಾಯಿತು. ಅದಾದ ಮೂರು ತಿಂಗಳಿನಲ್ಲೇ 7 ಬಿಲಿಯನ್ ಯುಪಿಐ ವಹಿವಾಟು ದಾಖಲೆಯಾಗಿದೆ.

 ತಜ್ಞರು ಏನು ಹೇಳುತ್ತಾರೆ?

ತಜ್ಞರು ಏನು ಹೇಳುತ್ತಾರೆ?

ಈ ಬಗ್ಗೆ ಅಧಿಕ ಮಾಹಿತಿ ಹೊಂದಿರುವ ತಜ್ಞರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಪ್ರಮುಖವಾಗಿ ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಾಗಿ ಯುಪಿಐ ವಹಿವಾಟು ನಡೆಸಲಾಗಿದೆ. ಜನರು ನಗದುರಹಿತ ವಹಿವಾಟನ್ನು ಮಾಡಲು ಹೆಚ್ಚಾಗಿ ಆರಂಭ ಮಾಡಿದರು. ಕೋವಿಡ್ ಸಾಂಕ್ರಾಮಿದ ಬಳಿಕ ಯುಪಿಐ ವಹಿವಾಟು ಸುಮಾರು ಶೇಕಡ 488ರಷ್ಟು ಹೆಚ್ಚಳವಾಗಿದೆ ಎಂದು ಡೇಟಾ ತೋರಿಸುತ್ತದೆ.

 ಈ ಹಣಕಾಸು ವರ್ಷದಲ್ಲಿ ಎಷ್ಟಾಗಿದೆ ವಹಿವಾಟು?

ಈ ಹಣಕಾಸು ವರ್ಷದಲ್ಲಿ ಎಷ್ಟಾಗಿದೆ ವಹಿವಾಟು?

ಹಣಕಾಸು ವರ್ಷ 2023ರಲ್ಲಿ ಈವರೆಗೆ 44.32 ಬಿಲಿಯನ್ ಯುಪಿಐ ವಹಿವಾಟು ನಡೆದಿದೆ. ಒಟ್ಟಾಗಿ ಈ ಹಣಕಾಸು ವರ್ಷದಲ್ಲಿ ಈವರೆಗೆ 75 ಟ್ರಿಲಿಯನ್ ರೂಪಾಯಿ ಮೌಲ್ಯದ ವಹಿವಾಟು ನಡೆದಿದೆ. ಹಣಕಾಸು ವರ್ಷ 2022ರಲ್ಲಿ ಸುಮಾರು 46 ಬಿಲಿಯನ್‌ಗಿಂತ ಅಧಿಕ ಯುಪಿಐ ವಹಿವಾಟು ನಡೆದಿದೆ. 84.17 ಟ್ರಿಲಿಯನ್ ರೂಪಾಯಿ ಮೌಲ್ಯದ ವಹಿವಾಟು ನಡೆದಿದೆ. ಇನ್ನು ಹಣಕಾಸು ವರ್ಷ 2021ರಲ್ಲಿ 22.28 ಬಿಲಿಯನ್ ಯುಪಿಐ ವಹಿವಾಟು ನಡೆದಿದೆ. ಒಟ್ಟಾಗಿ 41.03 ಟ್ರಿಲಿಯನ್ ರೂಪಾಯಿ ಮೌಲ್ಯದ ವಹಿವಾಟು ನಡೆದಿದೆ. ಮುಂದಿನ 3-5 ವರ್ಷದಲ್ಲಿ ಬಿಲಿಯನ್ ವಹಿವಾಟು ದಾಟುವ ಗುರಿಯನ್ನು ಹೊಂದಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+