ಯುಪಿಐ ವಹಿವಾಟು ತಿಂಗಳು ಕಳೆದಂತೆ ಅಧಿಕವಾಗುತ್ತಲಿದೆ. ಕಳೆದ ತಿಂಗಳಿಗಿಂತ ಶೇಕಡ 3ರಷ್ಟು ಅಧಿಕ ಯುಪಿಐ ವಹಿವಾಟು ನಡೆದಿದೆ. ಸೆಪ್ಟೆಂಬರ್‌ನಲ್ಲಿ 6.78 ಬಿಲಿಯನ್‌ರಷ್ಟು ಯುಪಿಐ ವಹಿವಾಟು ನಡೆದಿದೆ ಎಂದು ಎನ್‌ಪಿಸಿಐ ಉಲ್ಲೇಖ ಮಾಡಿದೆ.
ಆಗಸ್ಟ್ 2020 ರಲ್ಲಿ, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತ ಡಿಜಿಟಲ್ ಹಣಕಾಸು ವಹಿವಾಟುಗಳ ಒಟ್ಟು ಸಂಖ್ಯೆ 6.57 ಶತಕೋಟಿ (657 ಕೋಟಿ) ಆಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ದತ್ತಾಂಶದ ಪ್ರಕಾರ, ಕಳೆದ ತಿಂಗಳು 6.78 ಶತಕೋಟಿ (678 ಕೋಟಿ) ವಹಿವಾಟುಗಳು ನಡೆದಿದೆ. ಅಂದರೆ ಸುಮಾರು 11.16 ಲಕ್ಷ ಕೋಟಿ ಮೌಲ್ಯದ ವಹಿವಾಟುಗಳಿಗೆ ನಡೆದಿದೆ.
ಇನ್ನು ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಅಥವಾ ಯುಪಿಐನಲ್ಲಿ ಆಗಸ್ಟ್‌ನಲ್ಲಿಯೂ ದಾಖಲೆ ಪ್ರಮಾಣದಲ್ಲಿ ವಹಿವಾಟು ನಡೆಸಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಆಗಸ್ಟ್ ತಿಂಗಳಿನಲ್ಲಿ 6.57 ಬಿಲಿಯನ್ ಅಥವಾ 657 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಒಟ್ಟಾಗಿ ಈವರೆಗೆ 10.73 ಟ್ರಿಲಿಯನ್ ರೂಪಾಯಿ ಯುಪಿಐ ವಹಿವಾಟು ನಡೆದಿದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಕಳೆದ ತಿಂಗಳು ಮಾಹಿತಿ ನೀಡಿದೆ.
ಜುಲೈನಲ್ಲಿ ಭಾರತದಲ್ಲಿ 10.62 ಲಕ್ಷ ಕೋಟಿ ಮೌಲ್ಯದ 6.28 ಬಿಲಿಯನ್ ಯುಪಿಐ ವಹಿವಾಟು ನಡೆಸಲಾಗಿದೆ. ದೇಶದಲ್ಲಿ ಸದ್ಯ ಯುಪಿಐ ವಹಿವಾಟು ಜನಪ್ರಿಯ ವಹಿವಾಟು ವಿಧಾನವಾಗಿದೆ. ಇದಕ್ಕೆ ಮುಖ್ಯ ಕಾರಣ ಸರಳ ಬಳಕೆಯಾಗಿದೆ.

ತಿಂಗಳು ಕಳೆದಂತೆ ಯುಪಿಐ ಬಳಕೆ ಏರಿಕೆ
"ಮುಂದಿನ ಕೆಲವು ತಿಂಗಳುಗಳಲ್ಲಿ ಯುಪಿಐ ಮೇಲಿನ ಕ್ರೆಡಿಟ್ ಕಾರ್ಡ್ ಕೂಡಾ ಅಧಿಕವಾಗಲಿದೆ. ಇವೆಲ್ಲದರಿಂದಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗಲಿದೆ. ಇದು ಆರ್ಥಿಕ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಲಿದೆ," ಎಂದು ಹೇಳಿದ್ದಾರೆ.
2022ರ ಹಣಕಾಸು ವರ್ಷದಲ್ಲಿ ಯುಪಿಐ ಮೂಲಕ ಸುಮಾರು 77.94 ಟ್ರಿಲಿಯನ್ ಮೌಲ್ಯದ 45 ಬಿಲಿಯನ್ ವಹಿವಾಟು ನಡೆದಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 51.74 ಟ್ರಿಲಿಯನ್ ಮೌಲ್ಯದ 30 ಬಿಲಿಯನ್ ವಹಿವಾಟು ನಡೆದಿದೆ. ಮುಂದಿನ 4-5 ವರ್ಷದಲ್ಲಿ ಪ್ರತಿ ದಿನಕ್ಕೆ ಬಿಲಿಯನ್ ವಹಿವಾಟು ನಡೆಸುವುದು ಗುರಿಯಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಮೊದಲ ಮಹಿಳೆಯರಿಗಾಗಿ ಸ್ಥಾಪನೆ ಮಾಡಲಾಗಿರುವ ಡಿಜಿಟಲ್ ಬ್ಯಾಂಕ್ ಎಲ್‌ಎಕ್ಸ್‌ಎಂಇಯ ಸಿಇಒ ಜಾಸ್ಮಿನ್ ಬಿ ಗುಪ್ತಾ, "ಓವರ್‌ಸೀಸ್ ಮಾರುಕಟ್ಟೆಯಲ್ಲಿಯೂ ಯುಪಿಐ ವಹಿವಾಟು ಅಧಿಕ ಮಾಡುವ ಯೋಜನೆಯನ್ನು ಎನ್‌ಪಿಸಿಐ ಹೊಂದಲಾಗಿರುವಾಗ ಈ ಯುಪಿಐ ವಹಿವಾಟಿನ ಪ್ರಮಾಣವು ಇನ್ನಷ್ಟು ಹೆಚ್ಚಾಗುತ್ತಲೇ ಹೋಗಲಿದೆ. ಯುಪಿಐ ಇನ್ನು ಮುಂದೆ ಎಲ್ಲ ಮನೆಯಲ್ಲೂ ಚಿರಪರಿಚಿತವಾಗಲಿದೆ," ಎಂದು ತಿಳಿಸಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications