ಆನ್‌ಲೈನ್ ವಹಿವಾಟಿಗಾಗಿ ಯುಪಿಐ ಬಳಕೆ ಹೆಚ್ಚಳವಾಗುತ್ತಿದೆ. ಆನ್‌ಲೈನ್ ಪಾವತಿ ಭಾರತದಲ್ಲಿ ಯುಪಿಐ ಮೂಲ ಆಧಾರವಾಗಿದೆ. ಪ್ರಸ್ತುತ ವಿದೇಶಗಳು ಕೂಡಾ ಯುಪಿಐ ಅಳವಡಿಕೆಗೆ ಮುಂದಾಗುತ್ತಿದೆ. ಜನರು ಆನ್‌ಲೈನ್ ಪಾವತಿ ಅಧಿಕಗೊಳಿಸಿದಂತೆ ಡೆಬಿಟ್ ಕಾರ್ಡ್ ಬಳಕೆ ಕಡಿಮೆಯಾಗುತ್ತಿದೆ. ಆದರೂ ವಂಚಕರು ಆನ್‌ಲೈನ್ ಪಾವತಿಯನ್ನು ವಂಚನೆ ಮಾಡಲು ಬಳಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಎಗರಿಸಲು ವಂಚಕರು ಕಾಯುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ.
ಸ್ಕ್ರೀನ್ ಲಾಕ್: ಪ್ರಮುಖವಾಗಿ ನೀವು ಸ್ಕ್ರೀನ್ ಲಾಕ್ ಎಂದಿಗೂ ಹಾಕಿರಬೇಕಾಗುತ್ತದೆ. ಅತೀ ಕಠಿಣವಾದ ಪಾಸ್‌ವರ್ಡ್, ಪಿನ್ ಅನ್ನು ಹಾಕಿಕೊಳ್ಳಿ. ಅದನ್ನು ಯಾರೊಂದಿಗೂ ಕೂಡಾ ನೀವು ಹಂಚಿಕೊಳ್ಳಬೇಡಿ. ಎಲ್ಲಿಯೂ ಬರೆದಿಟ್ಟುಕೊಳ್ಳಬೇಡಿ. ಯಾಕೆಂದರೆ ಅದರಲ್ಲಿ ನಿಮ್ಮ ಎಲ್ಲ ಸಂಪೂರ್ಣ ಡೇಟಾ ಇರಲಿದೆ. ಇದನ್ನು ಬಳಸಿಕೊಂಡು ಹ್ಯಾಕರ್‌ಗಳು ನಿಮಗೆ ವಂಚನೆ ಮಾಡಬಹುದು. ನಿಮ್ಮ ಹೆಸರು, ಜನನ ದಿನಾಂಕ, ಮೊಬೈಲ್ ಸಂಖ್ಯೆಯಂತಹ ಸರಳವಾದ ಪಾಸ್‌ವರ್ಡ್ ಎಂದಿಗೂ ಹಾಕಬೇಡಿ.

ನಿಮ್ಮ ಪಿನ್ ಎಂದಿಗೂ ಹಂಚದಿರಿ: ನಿಮ್ಮ ಯುಪಿಐ ಪಿನ್ ಅನ್ನು ಎಂದಿಗೂ ಕೂಡಾ ನೀವು ಬೇರೆಯವಿರಿಗೆ ತಿಳಿಸಬೇಡಿ. ನಿಮ್ಮ ಪಿನ್ ತಿಳಿದಿದ್ದರೆ ಯಾವುದೇ ವ್ಯಕ್ತಿ ನಿಮ್ಮ ಮೊಬೈಲ್‌ನಲ್ಲಿ ಯುಪಿಐ ಆಪ್‌ಗಳನ್ನು ತೆರೆಯಲು ಸಾಧ್ಯವಾಗುತ್ತದೆ. ಹಾಗೆಯೇ ಅಕ್ರಮ ವಹಿವಾಟುಗಳನ್ನು ಕೂಡಾ ನಡೆಸಬಹುದು. ಅಂದರೆ ನಿಮಗೆ ತಿಳಿಯದೆಯೇ ನಿಮ್ಮ ಪಿನ್ ಬಳಸಿ ಯುಪಿಐ ಪಾವತಿ ಮಾಡಬಹುದು. ಯಾರಿಗಾದರೂ ನಿಮ್ಮ ಯುಪಿಐ ಪಿನ್ ತಿಳಿದಿದ್ದರೆ, ಪಿನ್ ಅನ್ನು ಬದಲಾವಣೆ ಮಾಡಿಕೊಳ್ಳಿ.
ಯಾವುದೇ ಎಸ್‌ಎಂಎಸ್ ಲಿಂಕ್ ಕ್ಲಿಕ್ ಮಾಡದಿರಿ: ಯಾವುದೇ ಅನಧಿಕೃತ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ವಂಚಕರು ನಿಮ್ಮ ಒಂದೇ ಕ್ಲಿಕ್‌ನಲ್ಲಿ ನಿಮ್ಮ ಖಾತೆಯಲ್ಲಿನ ಎಲ್ಲ ಹಣವನ್ನು ಎಗರಿಸಬಹುದು. ವಂಚಕರು ವಾಟ್ಸಾಪ್, ಎಸ್‌ಎಂಎಸ್, ಇಮೇಲ್ ಮೂಲಕ ಲಿಂಕ್ ಕಳುಹಿಸಬಹುದು. ಬ್ಯಾಂಕ್‌ನ ಪ್ರತಿನಿಧಿಗಳಂತೆ ನಿಮಗೆ ಕರೆ, ಮೆಸೇಜ್ ಮಾಡಿ ಲಿಂಕ್ ಕ್ಲಿಕ್ ಮಾಡಲು ಹೇಳಬಹುದು. ನಿಮ್ಮ ಆಧಾರ್, ಪ್ಯಾನ್ ಮಾಹಿತಿಯನ್ನು ಯಾರಿಗೂ ನೀಡಬೇಡಿ. ಈ ಮೂಲಕವೇ ವಂಚಕರಿಗೆ ವಂಚನೆಗೆ ಹಾದಿಯಾಗುತ್ತದೆ.
ಯುಪಿಐ ಆಪ್ ಅಪ್‌ಡೇಟ್: ಎಂದಿಗೂ ನೂತನ ವರ್ಜನ್‌ನ ಯುಪಿಐ ಆಪ್ ಅನ್ನು ಬಳಸಿಕೊಳ್ಳಿ. ನೂತನ ವರ್ಜನ್ ಎಂದಿಗೂ ಕೂಡಾ ಸುರಕ್ಷಿತ ಫೀಚರ್ ಅನ್ನು ಹೊಂದಿರುತ್ತದೆ. ಇದು ನಿಮ್ಮನ್ನು ಆನ್‌ಲೈನ್ ಹ್ಯಾಕರ್‌ನಿಂದ ಸುರಕ್ಷಿತವಾಗಿರಿಸಲಿದೆ. ಹಾಗೆಯೇ ಮೊಬೈಲ್‌ನಲ್ಲಿ ಹಲವಾರು ಯುಪಿಐ ಆಪ್‌ಗಳನ್ನು ಬಳಸಬೇಡಿ. 1-2 ಯುಪಿಐ ಆಪ್‌ಗಳು ಅತೀ ಮುಖ್ಯವಾಗುತ್ತದೆ. ಮೊಬೈಲ್ ಅಪ್ಲಿಕೇಷನ್ ಅನ್ನು ಇನ್‌ಸ್ಟಾಲ್ ಮಾಡುವಾಗ ಆಪ್ ಅಧಿಕೃತವೇ ಎಂದು ಕೂಡಾ ಪರಿಶೀಲನೆ ಮಾಡಿಕೊಳ್ಳಿ.


Click it and Unblock the Notifications