ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದ್ದು ಇದರ ಪರಿಣಾಮ ತರಕಾರಿಗಳ ಬೆಲೆಯ ಮೇಲೆ ಬಿದ್ದಿದೆ. ನಗರದಲ್ಲಿ ಒಟ್ಟಾರೆಯಾಗಿ ಕರ್ನಾಟಕದಲ್ಲೇ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಸೊಪ್ಪುಗಳ ಬೆಲೆಯು ಕೂಡಾ ಅಧಿಕವಾಗಿದೆ.
ಮಳೆಯಿಂದ ಕೆರೆ, ಕುಂಟೆ ತುಂಬಿ ಹರಿಯುತ್ತಿದೆ. ಹೊಲ-ಗದ್ದೆಗಳು ಕೂಡಾ ನೀರಿನಿಂದ ಆವೃತವಾಗಿದೆ. ಬೆಳೆಗಳು ನಾಶವಾಗಿದೆ. ರೈತರಿಗೆ ನಷ್ಟವಾಗಿದ್ದು, ತರಕಾರಿ, ಸೊಪ್ಪುಗಳ ಬೆಲೆ ಹೆಚ್ಚಳವಾಗಿದೆ.
ಇನ್ನು ತರಕಾರಿ ಕೀಳುವುದೂ ಸೇರಿ ಕೃಷಿ ಕಾರ್ಯಗಳಿಗೆ ಕೂಲಿಕಾರರು ಕೂಡಾ ಸಿಗುತ್ತಿಲ್ಲ. ಮುಂಗಾರು ಬಿತ್ತನೆ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕೃಷಿ ಕೂಲಿಕಾರ್ಮಿಕರಿಗೆ ಬೇಡಿಕೆ ಅಧಿಕವಾಗಿದೆ. ಇದರಿಂದ ತರಕಾರಿ ಮಾರಾಟ ಮಾಡುವ ರೈತರಿಗೆ ಸಂಕಷ್ಟ ಉಂಟಾಗಿದೆ. ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ಇಳಿಕೆಯಾಗಿದ್ದು, ಇದರಿಂದಾಗಿ ಬೆಲೆ ಏರಿಕೆಯಾಗಿದೆ.

ಕ್ಯಾರೆಟ್ ದರವಂತು ತೀವ್ರ ಹೆಚ್ಚಳವಾಗಿದೆ. ಕೆಜಿಗೆ ನೂರು ರೂಪಾಯಿಯಷ್ಟು ಏರಿದೆ. ಟೊಮ್ಯಾಟೊ ಬೆಲೆಯು ಭಾರಿ ಏರಿಕೆಯಾಗಿದೆ. ನಗರದಲ್ಲಿ ಒಂದು ಕೆಜಿ ಟೊಮ್ಯಾಟೊ ಬೆಲೆ 40-50 ರೂಪಾಯಿಗೆ ತಲುಪಿದೆ. ಇದಲ್ಲದೆ ಕೆಲವು ಬೆಲೆಗಳು ಬೇರೆ ರಾಜ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಸೊಪ್ಪಿನ ಬೆಲೆ ಏರಿಕೆ
ಮಳೆ ಇನ್ನು ಕೂಡಾ ಈ ರೀತಿಯಲ್ಲೇ ಮುಂದುವರಿದರೆ ತರಕಾರಿ ಬೆಲೆಯು ಇನ್ನಷ್ಟು ಅಧಿಕವಾಗಲಿದೆ. ಪ್ರಮುಖವಾಗಿ ಮಳೆ ಬಂದ ಕಾರಣ ಸೊಪ್ಪು ಬೆಲೆಯು ಕೊಳೆದು ಹೋಗುತ್ತಿದೆ. ನೀರು ತುಂಬಿಕೊಂಡ ಕಾರಣ ಬೇಗನೆ ಹಾಳಾಗುತ್ತಿದೆ. ಇದರಿಂದಾಗಿ ಸೊಪ್ಪಿನ ಬೆಲೆಯು ಕೂಡಾ ಹೆಚ್ಚಾಗಿದೆ. ಇನ್ನು ಬೆಂಡೆಕಾಯಿ ಸೇರಿ ಕೆಲವು ತರಕಾರಿಗಳನ್ನು ತಮಿಳುನಾಡು, ಆಂಧ್ರಪ್ರದೇಶದಿಂದ ಸರಬರಾಜು ಮಾಡಲಾಗುತ್ತಿದೆ. ಇನ್ನು ದರಗಳು ನಗರದಿಂದ ನಗರಕ್ಕೆ ಬದಲಾವಣೆಯಾಗುತ್ತದೆ ಎಂದು ಗಮನಾರ್ಹ.
ತರಕಾರಿ ದರ (ರಿಟೇಲ್ ಮಾರುಕಟ್ಟೆಯಲ್ಲಿ ಕೆಜಿ ಲೆಕ್ಕಾಚಾರ)
ಕ್ಯಾರಟ್ 100 ರೂಪಾಯಿ
ಬೀನ್ಸ್ 55 ರೂಪಾಯಿ
ಟೊಮ್ಯಾಟೊ 40-55 ಟೊಮ್ಯಾಟೊ
ಬಿಳಿ ಬದನೆ 50 ರೂಪಾಯಿ
ಹಾಗಲಕಾಯಿ 45 ರೂಪಾಯಿ
ಸೀಮೆ ಬದನೆ 40 ರೂಪಾಯಿ
ಹೂಕೋಸು (ಒಂದಕ್ಕೆ) 35-40 ರೂಪಾಯಿ
ಎಲೆ ಕೋಸು 30 ರೂಪಾಯಿ
ಬೆಂಡೆಕಾಯಿ 30 ರೂಪಾಯಿ
ಹರಿವೆ ಸೊಪ್ಪು 12-13 ರೂಪಾಯಿ


Click it and Unblock the Notifications