ರಾಜ್ಯದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ, ಶಿವಮೊಗ್ಗ ಮೊದಲಾದ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯ ಪರಿಣಾಮ ತರಕಾರಿಗಳ ಬೆಲೆಯ ಮೇಲೆಯೂ ಬಿದ್ದಿದೆ. ಕರ್ನಾಟಕದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ. ಸೊಪ್ಪುಗಳ ಬೆಲೆಯು ಕೂಡಾ ಹೆಚ್ಚಳವಾಗಿದೆ.
ಮಳೆಯಿಂದ ಕೆರೆ, ಕುಂಟೆ ತುಂಬಿ ಹರಿಯುತ್ತಿದೆ. ಹೊಲ-ಗದ್ದೆಗಳು ಕೂಡಾ ನೀರಿನಿಂದ ಆವೃತವಾಗಿದೆ. ಬೆಳೆಗಳು ನಾಶವಾಗಿದೆ. ರೈತರಿಗೆ ನಷ್ಟವಾಗಿದ್ದು, ತರಕಾರಿ, ಸೊಪ್ಪುಗಳ ಬೆಲೆ ಅಧಿಕವಾಗಿದೆ. ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಇನ್ನುಳಿದಂತೆ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗಿದೆ.
ಇನ್ನು ತರಕಾರಿ ಕೀಳುವುದೂ ಸೇರಿ ಕೃಷಿ ಕಾರ್ಯಗಳಿಗೆ ಕೂಲಿಕಾರರು ಕೂಡಾ ಸಿಗುತ್ತಿಲ್ಲ. ಮುಂಗಾರು ಬಿತ್ತನೆ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕೃಷಿ ಕೂಲಿಕಾರ್ಮಿಕರಿಗೆ ಬೇಡಿಕೆ ಅಧಿಕವಾಗಿದೆ. ಇದರಿಂದ ತರಕಾರಿ ಮಾರಾಟ ಮಾಡುವ ರೈತರಿಗೆ ಸಂಕಷ್ಟ ಉಂಟಾಗಿದೆ. ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ಇಳಿಕೆಯಾಗಿದ್ದು, ಇದರಿಂದಾಗಿ ಬೆಲೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ 12ರಂದು ತರಕಾರಿ, ಸೊಪ್ಪುಗಳ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 25-28
ಈರುಳ್ಳಿ ಸಣ್ಣ 33-37
ಟೊಮೆಟೋ 47-52
ಮೆಣಸಿನಕಾಯಿ 46-51
ಬೀಟ್‌ರೂಟ್ 39-43
ಆಲೂಗಡ್ಡೆ 37-41
ಬಾಳೆ ಕಾಯಿ 13-14
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 26-29
ಜೋಳ (baby corn) 78-86
ಬಾಳೆ ಹೂವು 20-22
ದೊಡ್ಡ ಮೆಣಸಿನಕಾಯಿ 49-55
ಹಾಗಲಕಾಯಿ 37-41
ಸೋರೆಕಾಯಿ 23-25
ಅವರೆಕಾಳು 86-95
ಚಪ್ಪರೆಯ ಅವರೆಕಾಳು 37-41
ಎಲೆಕೋಸು 23-25
ಕ್ಯಾರೆಟ್ 72-80
ಹೂಕೋಸು 48-53
ಗೋರಿಕಾಯಿ 89-98
ತೆಂಗಿನ ಕಾಯಿ 38-42
ಕೆಸುವಿನ ಎಲೆ 14-15
ಕೆಸವು- 25-28
ಕೊತ್ತಂಬರಿ ಸೊಪ್ಪು 14-15
ಜೋಳ 32-36
ಮುಳ್ಳು ಸೌತೆ 28-30
ಕರಿಬೇವು 29-32
ನುಗ್ಗೆ ಕಾಯಿ 115-127
ಬದನೆ 22-24
ಸುವರ್ಣ ಗೆಡ್ಡೆ 33-37
ಬೆಳ್ಳುಳ್ಳಿ 62-69
ಶುಂಠಿ 46-51
ಬಟಾಣಿ 93-103
ತೊಂಡೆಕಾಯಿ 31-34
ನಿಂಬೆ ಹಣ್ಣು 59-65
ಮಾವಿನ ಕಾಯಿ 133-135
ಬೆಂಡೆಕಾಯಿ 21-23
ಕುಂಬಳಕಾಯಿ 28-30
ಮೂಲಂಗಿ 29-32
ಹೀರೆಕಾಯಿ 31-34
ಪಡುವಲಕಾಯಿ 30-33
ಬಸಳೆ 15-17
ಸೊಪ್ಪಿನ ಬೆಲೆ ಏರಿಕೆ
ಮಳೆ ಇನ್ನು ಕೂಡಾ ಈ ರೀತಿಯಲ್ಲೇ ಮುಂದುವರಿದರೆ ತರಕಾರಿ ಬೆಲೆಯು ಇನ್ನಷ್ಟು ಅಧಿಕವಾಗಲಿದೆ. ಪ್ರಮುಖವಾಗಿ ಮಳೆ ಬಂದ ಕಾರಣ ಸೊಪ್ಪು ಬೆಲೆಯು ಕೊಳೆದು ಹೋಗುತ್ತಿದೆ. ನೀರು ತುಂಬಿಕೊಂಡ ಕಾರಣ ಬೇಗನೆ ಹಾಳಾಗುತ್ತಿದೆ. ಇದರಿಂದಾಗಿ ಸೊಪ್ಪಿನ ಬೆಲೆಯು ಕೂಡಾ ಹೆಚ್ಚಾಗಿದೆ. ಇನ್ನು ಬೆಂಡೆಕಾಯಿ ಸೇರಿ ಕೆಲವು ತರಕಾರಿಗಳನ್ನು ತಮಿಳುನಾಡು, ಆಂಧ್ರಪ್ರದೇಶದಿಂದ ಸರಬರಾಜು ಮಾಡಲಾಗುತ್ತಿದೆ. ಇನ್ನು ದರಗಳು ನಗರದಿಂದ ನಗರಕ್ಕೆ ಬದಲಾವಣೆಯಾಗುತ್ತದೆ ಎಂಬುವುದು ಗಮನಾರ್ಹ.
ಕರ್ನಾಟಕದಲ್ಲಿ ಮಳೆ ಪ್ರಮಾಣ
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಮಳೆಯಾಗಿದೆ. ಕೊಟ್ಟಿಗೆಹಾರ, ಭಾಗಮಂಡಲ, ಜಯಪುರ ಮೊದಲಾದ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ರಾಯಚೂರು, ಕೊಡಗು, ಯಾದಗಿರಿ, ಚಿಕ್ಕಮಗಳೂರು, ಕಲಬುರ್ಗಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಶಿವಮೊಗ್ಗ, ಮೈಸೂರು, ಸಕಲೇಶಪುರದಲ್ಲಿ ಮಳೆಯಾಗಿದೆ. ಇನ್ನು ಎರಡು ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗ ಅಧಿಕವಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಮುನ್ಸೂಚನೆ ನೀಡಲಾಗಿದೆ. ಇದರಿಂದಾಗಿ ತರಕಾರಿ ಬೆಳೆಗೆ ಹಾನಿಯಾದರೆ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.


Click it and Unblock the Notifications