ಭಾರತದ ಐಕಾನಿಕ್ ಬೈಕ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಕೂಡಾ ಒಂದಾಗಿದೆ. ಸದ್ದಿನ ಮೂಲಕವೇ ಸುದ್ದಿಯಾಗಿರುವ ಈ ಬೈಕ್ ಕೊಂಚ ದುಬಾರಿಯಾಗಿರುವ ಬೈಕ್‌ಗಳಲ್ಲಿ ಒಂದಾಗಿದೆ. ಆದರೆ ಇದರ ಸೈಟ್ ಮಾತ್ರ ಸಕ್ಕಾತ್ತಾಗಿದೆ. ಯುವಕರಂತೂ ಈ ಬೈಕಿಗೆ ಈಗಲೂ ಮಾರುಹೋಗುತ್ತಾರೆ. ಹಾಗಿರಬೇಕಾದರೆ ಈ ಬೈಕ್‌ಗೆ ಬರೀ 18,700 ರೂಪಾಯಿ ಎಂದರೆ ನೀವು ನಂಬುತ್ತೀರಾ?
ಹೌದು ರಾಯಲ್ ಎನ್‌ಫೀಲ್ಡ್ ಬುಲೆಟ್ 350ಗೆ 18,700 ರೂಪಾಯಿ. ಆದರೆ ಈಗ ಅಲ್ಲ, ಈ ಬೆಲೆ ಸುಮಾರು ವರ್ಷಗಳ ಹಿಂದೆ ಈ ಬೈಕ್‌ಗೆ ಇದ್ದ ಬೆಲೆ. 1986ರಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 18,700 ರೂಪಾಯಿ ಆಗಿತ್ತು. ಆ ಸಂದರ್ಭದ ಬಿಲ್ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಕಳೆದ ಕೆಲವು ದಶಕಗಳಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ 350ಯಲ್ಲಿ ಹಲವಾರು ಬದಲಾವಣೆಗಳು ಆಗಿದೆ. ಕೆಲವು ಸಣ್ಣ ಪುಟ್ಟ, ಮೆಕಾನಿಕಲ್ ಬದಲಾವಣೆಗಳು ಆಗಿದೆ. ಆದರೆ ಈಗ ಅದರ ಬೆಲೆ ಮಾತ್ರ ಹೆಚ್ಚಾಗಿದೆ. ಪ್ರಸ್ತುತ 1,50,795 ರೂಪಾಯಿಯಿಂದ ಆರಂಭವಾಗುತ್ತದೆ. ಆದರೆ ಈ ಹಿಂದೆ ಅಂದರೆ 1986ರಲ್ಲಿ 18,700 ರೂಪಾಯಿ ಆಗಿತ್ತು.
ಹಳೆ ಬಿಲ್ ವೈರಲ್
ರಾಯಲ್ ಎನ್‌ಫೀಲ್ಡ್ ಬುಲೆಟ್ 350ರ ಹಳೆ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಿಲ್ ಅನ್ನು ನೋಡಿ ನೆಟ್ಟಿಗರು ಹಾಗೂ ರಾಯಲ್ ಎನ್‌ಫೀಲ್ಡ್ ಬುಲೆಟ್ 350ರ ಫಾನ್ಸ್‌ಗಳು ಶಾಕ್ ಆಗಿದ್ದಾರೆ. ಬಿಲ್‌ನಲ್ಲಿ 18,700 ರೂಪಾಯಿ ಎಂದು ಉಲ್ಲೇಖ ಮಾಡಲಾಗಿದೆ. ಇದು ಸುಮಾರು 36 ವರ್ಷಗಳ ಹಳೆಯ ಬಿಲ್ ಆಗಿದೆ. ಜಾರ್ಖಾಂಡ್‌ನ ಸಂದೀಪ್ ಆಟೋ ಕಂಪನಿಯ ಬಿಲ್ ಇದಾಗಿದೆ. ವೈರಲ್ ಫೋಟೋದಲ್ಲಿ ಇಸವಿಯನ್ನು ಕೂಡಾ ಉಲ್ಲೇಖಿಸಲಾಗಿದೆ.
ಇನ್ನು 1986ರಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಬರೀ ಎನ್‌ಫೀಲ್ಡ್ ಬುಲೆಟ್ ಎಂದು ಕರೆಯಲಾಗುತ್ತಿತ್ತು. ಇದನ್ನು ಸಂಚಾರಕ್ಕೆ ಅತೀ ಉತ್ತಮ ಬೈಕ್ ಎಂದು ಆ ಸಂದರ್ಭದಲ್ಲಿ ಪರಿಗಣಿಸಲಾಗಿತ್ತು. ಅತೀ ಹೆಚ್ಚಾಗಿ ಭಾರತೀಯ ಸೇನೆ ಪಟ್ರೋಲಿಂಗ್ ಮಾಡಲು ಬಳಸುತ್ತಿತ್ತು. ಸಂಸ್ಥೆಯ ಪ್ರಕಾರ ರಾಯಲ್ ಎನ್‌ಫೀಲ್ಡ್ ಬುಲೆಟ್ ಅತೀ ಹಳೆಯ ಬೈಕ್ ಆಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications