ರಿಯಲ್ ಎಸ್ಟೇಟ್ ವಲಯವು ಭಾರತದಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಹಣದುಬ್ಬರ ಹಾಗೂ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ರಿಯಲ್ ಎಸ್ಟೇಟ್ ವಲಯ ಬೆಳವಣಿಗೆಯನ್ನು ಕಾಣುತ್ತಿದೆ. ಈ ನಡುವೆ ಎರಡನೇ ಮನೆ ಖರೀದಿ, ನಿರ್ಮಾಣ ಮಾರುಕಟ್ಟೆಯು ಕೂಡಾ ವೇಗವಾದ ಬೆಳವಣಿಗೆಯನ್ನು ಕಾಣುತ್ತಿದೆ. ನೀವು ಹೊಸದಾಗಿ ಎರಡನೇ ಮನೆಯನ್ನು ಖರೀದಿ ಮಾಡಲು ಅಥವಾ ನಿರ್ಮಾಣ ಮಾಡಲು ಬಯಸುವುದಾದರೆ ಇಲ್ಲಿ ನಾವು ಡೆಸ್ಟಿನೇಷನ್ ಬಗ್ಗೆ ತಿಳಿಸಿದ್ದೇವೆ.
ಯಾವುದೇ ವ್ಯಕ್ತಿಯಾದರೂ ತಮ್ಮದೇ ಆದ ಮನೆಯನ್ನು ಹೊಂದುವುದು ಅತೀ ಮುಖ್ಯವೆಂದು ಪರಿಗಣಿಸುತ್ತಾರೆ. ನಾವು ಎಂದಿಗೂ ಕೂಡಾ ನಮ್ಮದೇ ಆದ ಸ್ವಂತ ಮನೆಯನ್ನು ಹೊಂದುವ ಆಸೆಯನ್ನು ಹೊಂದಿರುತ್ತೇವೆ. ಅದಕ್ಕಾಗಿ ಸಾಕಷ್ಟು ಶ್ರಮವನ್ನು ಕೂಡಾ ಪಡುತ್ತೇವೆ. ಗೃಹ ಸಾಲ ಪಡೆದು, ಆದಾಯ ಹೆಚ್ಚಿಸಿಕೊಂಡು ಮನೆಯನ್ನು ಖರೀದಿ ಅಥವಾ ನಿರ್ಮಾಣ ಮಾಡಿ, ಈಗ ಎಲ್ಲ ಸಾಲದಿಂದ ಹೊರಬಂದಾಗ ಮತ್ತೊಂದು ಮನೆಯನ್ನು ನಿರ್ಮಾಣ ಮಾಡುವ ಬಯಕೆ ನಿಮ್ಮಲ್ಲಿದ್ದರೆ, ಇಲ್ಲಿದೆ ಟಾಪ್ 10 ಡೆಸ್ಟಿನೇಷನ್.

ಎರಡನೇ ಮನೆ ನಿರ್ಮಾಣಕ್ಕೆ ಟಾಪ್ ಡೆಸ್ಟಿನೇಷನ್ ಯಾವುದು?
ಆಕ್ಸಾನ್ ಡೆವಲಪರ್ಸ್ ಸಂಸ್ಥೆಯ ಪ್ರಕಾರ ಶಿಮ್ಲಾ, ಸಿಂಧುದುರ್ಗ, ಕೊಡಗು ಎರಡನೇ ಮನೆ ಖರೀದಿ ಮಾಡಲು ಬಯಸುವವರು ಟಾಪ್ 10 ಡೆಸ್ಟಿನೇಷನ್‌ಗಳಲ್ಲಿ ಇದೆ. 2026ರ ವೇಳೆಗೆ ಎರಡನೇ ಮನೆ ಖರೀದಿ ಅಥವಾ ನಿರ್ಮಾಣ ಮಾರುಕಟ್ಟೆಯು 4 ಬಿಲಿಯನ್ ಡಾಲರ್ ಮೌಲ್ಯಕ್ಕೆ ಏರಿಕೆಯಾಗಲಿದೆ. ಇನ್ನು ಈ ಎರಡನೇ ಮನೆ ಡೆಸ್ಟಿನೇಷನ್ ಪಟ್ಟಿಯಲ್ಲಿ ಡೆಹ್ರಾಡೂನ್ ಸೇರಿದಂತೆ ಇನ್ನು ಹಲವು ಜನಪ್ರಿಯ ಪ್ರವಾಸಿ ತಾಣಗಳಿದೆ.
ಮಸ್ಸೂರಿ, ಸಿಲಿಗುರಿ ಮತ್ತು ಡಾರ್ಜಿಲಿಂಗ್, ನಂದಿ ಹಿಲ್ಸ್, ಪಾಂಡಿಚೇರಿ, ಚಂಬಾ ಮತ್ತು ತೆಹ್ರಿ ಬೆಲ್ಟ್, ರಿಷಿಕೇಶ್ ಮತ್ತು ಹರಿದ್ವಾರ ಬೆಲ್ಟ್, ಲೋನಾವಾಲಾ ಮತ್ತು ಮಹಾಬಲೇಶ್ವರವೂ ಕೂಡಾ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಆಕ್ಸಾನ್ ಡೆವಲಪರ್ಸ್‌ನ ನಿರ್ವಾಹಕ ಅಂಕಿತ್ ಕನ್ಸಾಲ್, "ಎರಡನೇ ಮನೆ ಖರೀದಿ, ನಿರ್ಮಾಣ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಮಾಹಿತಿಗಳು ಲಭ್ಯವಾಗುತ್ತದೆ. ಬೆಳವಣಿಗೆ ಹೇಗೆ ಕಾಣುತ್ತಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ," ಎಂದು ತಿಳಿಸಿದ್ದಾರೆ.
ವಿಲ್ಲಾಗಳು, ಕಾಟೆಜ್‌ಗಳು, ಫಾರ್ಮ್ ಹೌಸ್, ಉತ್ತಮವಾದ ವಾತಾವರಣ ಮೊದಲಾದವುಗಳ ವಿಚಾರಗಳನ್ನು ನೋಡಿದಾಗ ಭಾರತದಲ್ಲಿ ಎರಡನೇ ಮನೆ ಮಾರುಕಟ್ಟೆಯು ಅತೀ ಉತ್ತಮ ಸ್ಥಿತಿಯಲ್ಲಿ ಇಲ್ಲ. ಸಾಮಾನ್ಯವಾಗಿ ಹೇಳಬೇಕಾದರೆ ಮಧ್ಯಮ ವರ್ಗವು ಒಂದು ಮನೆಯನ್ನು ನಿರ್ಮಾಣ ಮಾಡು ಪ್ರಯತ್ನವನ್ನು ಮಾಡುತ್ತದೆಯೇ ಹೊರತು ಎರಡನೇ ಮನೆ ನಿರ್ಮಾಣದೆಡೆ ವಾಲದು. ಕೊಂಚ ಆರ್ಥಿಕವಾಗಿ ಪ್ರಬಲರಾಗಿದ್ದರೆ ಮಾತ್ರ ಎರಡನೇ ಮನೆ ನಿರ್ಮಾಣ ಮಾಡಲು ಮುಂದಾಗುತ್ತಾರೆ. ಅದು ಕೂಡಾ ತಮ್ಮ ನೆಚ್ಚಿನ ಸ್ಥಳದಲ್ಲಿ.
ಪ್ರಮುಖವಾಗಿ ಶಿಮ್ಲಾದಲ್ಲಿ, ಮಸ್ಸೂರಿ, ಡೆಹ್ರಾಡೂನ್, ತೆಹ್ರಿಯಲ್ಲಿ ತಮ್ಮದೇ ಆದ ಮನೆಯನ್ನು ಹೊಂದಲು ಜನರು ಮುಂದಾಗುತ್ತಿದ್ದಾರೆ. ಇನ್ನು ಹಿಮಾಲಯದ ರಿಷಿಕೇಶ್, ನಾಗೇಂದ್ರ ನಗರ, ಹರಿದ್ವಾರದಲ್ಲಿಯೂ ಜನರು ತಮ್ಮದೇ ಆದ ಸ್ವಂತ ಮನೆ ಖರೀದಿ ಮಾಡುತ್ತಿದ್ದಾರೆ. ಹಾಗೆಯೇ ದೆಹಲಿಯಿಂದ ಬರೀ 4 ಗಂಟೆಗಳ ಪ್ರಯಾಣದಲ್ಲಿರುವ ಪ್ರದೇಶಗಳಲ್ಲಿ ಎರಡನೇ ಮನೆ ಖರೀದಿ ಮಾಡಲಾಗುತ್ತಿದೆ. ಗೋವಾ-ಮಹಾರಾಷ್ಟ್ರ ಗಡಿಯಲ್ಲಿಯೂ ಜನರು ತಮ್ಮ ಎರಡನೇ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಪ್ರಮುಖವಾಗಿ ಈ ಪ್ರದೇಶಗಳಲ್ಲಿ ಪ್ರವಾಸದ ವೇಳೆ ತಂಗಲು ಮನೆ ನಿರ್ಮಾಣ ಮಾಡಲಾಗುತ್ತಿದೆ.
ಪಾಂಡಿಚೇರಿಯಲ್ಲಿಯೂ ಜನರು ತಂಗಲು ಹೆಚ್ಚು ಬಯಸುತ್ತಿದ್ದಾರೆ. ಅತೀ ಸುಂದರವಾದ ಪ್ರವಾಸಿ ತಾಣವಾದ ಡಿಚೇರಿ ಜನರ ಆದ್ಯತೆಯ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಭೂಮಿಯ ಮೌಲ್ಯ ಒಂದು ವರ್ಷದಲ್ಲಿ ಶೇಕಡ 7.5ರಷ್ಟು ಏರಿಕೆ ಕಂಡಿದೆ. ಸಿಂಧುದುರ್ಗದಲ್ಲಿ ಕಳೆದ ಒಂದು ವರ್ಷದಲ್ಲಿ ಆಸ್ತಿ ಮೌಲ್ಯ ಶೇಕಡ 24-32ರಷ್ಟು ಏರಿಕೆಯಾಗಿದೆ. ಇನ್ನು ಬೆಂಗಳೂರಿಗರಿಗೆ ನಂದಿ ಹೀಲ್ಸ್ ಅತೀ ಇಷ್ಟವಾದ, ಸಮೀಪದ ಪ್ರವಾಸಿ ತಾಣವಾಗಿದ್ದು, ಇಲ್ಲಿಯೂ ಆಸ್ತಿ ಮೌಲ್ಯ ಹೆಚ್ಚಾಗಿದೆ.


Click it and Unblock the Notifications