ನಮಗೆ ತೀರಾ ತುರ್ತು ಆರ್ಥಿಕ ಸ್ಥಿತಿ ಉಂಟಾದಾಗ ಸಾಲವನ್ನು ಪಡೆಯುವುದು ಸಾಮಾನ್ಯವಾಗಿದೆ. ಪ್ರಸ್ತುತ ಆಪ್‌ಗಳ ಮೂಲಕ, ಬ್ಯಾಂಕ್‌ಗಳ ಮೂಲಕ ನಾವು ಸಾಲವನ್ನು ಪಡೆಯಲಾಗುತ್ತದೆ. ಆದರೆ ಅದಕ್ಕೆ ಕ್ರೆಡಿಟ್ ಸ್ಕೋರ್ ಮುಖ್ಯವಾಗುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಮಾತ್ರ ನಾವು ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದ್ದು ಸಾಲ ಲಭ್ಯವಾಗದಿದ್ದರೂ ಕೂಡಾ ನಾವು ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲೆ ಸಾಲವನ್ನು ಪಡೆಯಲು ಅವಕಾಶವಿದೆ.
ಫಿಕ್ಸಿಡ್ ಡೆಪಾಸಿಟ್ ಮೇಲೆ ನಾವು ಪಡೆಯುವ ಸಾಲದ ಮೇಲೆ ಅಧಿಕ ಬಡ್ಡಿದರ ಇರಲಾರದು. ಸಾಮಾನ್ಯವಾಗಿ ಶೇಕಡ 1-2 ನಿಮಿಷದಷ್ಟು ಬಡ್ಡಿದರ ಮಾತ್ರ ಇರುತ್ತದೆ. ಗರಿಷ್ಠವಾಗಿ 60 ತಿಂಗಳ ಅವಧಿಯಲ್ಲಿ ನಾವು ಎಫ್‌ಡಿ ಮೇಲಿನ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ. ಸಾಮಾನ್ಯವಾಗಿ, ಅಂತಹ ಸಾಲಗಳು ಓವರ್‌ಡ್ರಾಫ್ಟ್‌ಗಳು ಅಥವಾ ಬೇಡಿಕೆಯ ಸಾಲಗಳ ರೂಪದಲ್ಲಿ ಲಭ್ಯವಿದೆ. ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡದೆಯೇ ಆನ್‌ಲೈನ್‌ನಲ್ಲಿ ಎಫ್‌ಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಆಕ್ಸಿಸ್ ಬ್ಯಾಂಕ್ ಮತ್ತು ಡಾಯ್ಚ್ ಬ್ಯಾಂಕ್‌ಗಳನ್ನು ತಮ್ಮ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಎಫ್‌ಡಿ ಮೇಲೆ ಸಾಲವನ್ನು ಅರ್ಜಿ ಸಲ್ಲಿಸಲು ನಿಮಗೆ ಅವಕಾಶ ನೀಡುತ್ತದೆ. ಆದರೆ ಫೆಡರಲ್ ಬ್ಯಾಂಕ್ ವಿಚಾರಕ್ಕೆ ನಾವು ಬಂದಾಗ ಈ ಬ್ಯಾಂಕ್‌ನಲ್ಲಿ ಎಫ್‌ಡಿ ಮೇಲೆ ಸಾಲಕ್ಕೆ ಅರ್ಜಿ ಸಲ್ಲಿಸಲು ನೀವು ಹತ್ತಿರದ ಶಾಖೆಗೆ ಭೇಟಿ ನೀಡಬೇಕಾಗುತ್ತದೆ.
ಎಫ್‌ಡಿ ಮೇಲೆ ಸಾಲ ಪಡೆಯಲು ಬೇಕಾದ ಅರ್ಹತೆ
ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸುವ ವ್ಯಕ್ತಿಗಳು/ಸಂಸ್ಥೆಗಳು ಬ್ಯಾಂಕ್‌ನಲ್ಲಿ ತಮ್ಮ ಫಿಕ್ಸಿಡ್ ಡೆಪಾಸಿಟ್ ಮೇಲೆ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
* ಭಾರತೀಯ ನಿವಾಸಿಗಳು
* ಹಿಂದೂ ಅವಿಭಜಿತ ಕುಟುಂಬ (HUF)
* ಕ್ಲಬ್‌ಗಳು, ಸೊಸೈಟಿಗಳು ಮತ್ತು ಅಸೋಸಿಯೇಷನ್‌ಗಳು
* ಕುಟುಂಬ ಟ್ರಸ್ಟ್‌ಗಳು
* ಗ್ರೂಪ್ ಕಂಪನಿ, ಏಕ ಮಾಲೀಕತ್ವದ ಸಂಸ್ಥೆ, ಪಾಲುದಾರಿಕೆ ಸಂಸ್ಥೆಗಳು
ಎಫ್‌ಡಿ ಮೇಲೆ ಸಾಲ ಪಡೆಯುವುದರಿಂದಾಗುವ ಪ್ರಯೋಜನಗಳು
ಕಡಿಮೆ ಬಡ್ಡಿದರ: ನೀವು ಫಿಕ್ಸಿಡ್ ಡೆಪಾಸಿಟ್ ಮೇಲೆ ಸಾಲವನ್ನು ಪಡೆಯುವುದಾದರೆ ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ. ಮೇಲಾಧಾರವಾಗಿ ಫಿಕ್ಸಿಡ್ ಡೆಪಾಸಿಟ್ ಇರುವ ಕಾರಣದಿಂದಾಗಿ ಬಡ್ಡಿದರವು ಕಡಿಮೆಯಾಗಿರುತ್ತದೆ. ಸಾಮಾನ್ಯವಾಗಿ ವೈಯಕ್ತಿಕ ಸಾಲಕ್ಕೆ ಇರುವ ಬಡ್ಡಿದರಕ್ಕಿಂತ ಕಡಿಮೆ ಬಡ್ಡಿದರ ಎಫ್‌ಡಿ ಸಾಲದ ಮೇಲೆ ಇರಲಿದೆ. ಎಫ್‌ಡಿ ಮೇಲಿನ ಸಾಲಕ್ಕೆ ಶೇಕಡ 2ರಿಂದ ಶೇಕಡ 2.5ರಷ್ಟು ಬಡ್ಡಿದರ ಇರಲಿದೆ. ಇದರಿಂದಾಗಿ ಇಎಂಐ ಕಡಿಮೆಯಾಗಿರಲಿದೆ.
ಕ್ರೆಡಿಟ್ ಸ್ಕೋರ್ ಚೆಕ್: ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ನಿಮ್ಮ ಅರ್ಹತೆಯನ್ನು ನಿರ್ಧರಿಸಲು ಸಾಲ ನೀಡುವ ಸಂಸ್ಥೆಯು ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲನೆ ಮಾಡುತ್ತದೆ. ಆದರೂ ಎಫ್‌ಡಿ ಮೇಲಿನ ಸಾಲದ ವಿಚಾರಕ್ಕೆ ಬಂದಾಗ, ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಕಡಿಮೆ ಅಥವಾ ಯಾವುದೇ ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿರುವ ಜನರು ಅಂತಹ ಸಾಲಗಳಿಂದ ಪ್ರಯೋಜನ ಪಡೆಯಬಹುದು. ಯಾಕೆಂದರೆ ಅರ್ಹತೆ ಪಡೆಯಲು ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರಬೇಕಾಗಿಲ್ಲ.
ಮರುಪಾವತಿ ದಂಡವಿಲ್ಲ: ನೀವು ಸಾಲವನ್ನು ಪೂರ್ವ ಪಾವತಿ ಮಾಡುವುದರಿಂದ ಬ್ಯಾಂಕ್‌ಗಳು ಸಾಮಾನ್ಯವಾಗಿ ಬಡ್ಡಿಯ ಮೊತ್ತವನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ದಂಡವನ್ನು ವಿಧಿಸುತ್ತದೆ. ಆದರೂ ನೀವು ಎಫ್‌ಡಿ ಮೇಲೆ ಸಾಲವನ್ನು ಪಡೆಯುವುದಾದರೆ ಬ್ಯಾಂಕ್‌ಗಳು ಬಡ್ಡಿಯ ಮೊತ್ತವನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದಾಗಿ ದಂಡವನ್ನು ವಿಧಿಸುವುದಿಲ್ಲ. ಸಾಲದ ಮೊತ್ತದ ಮೇಲೆ ನೀವು ಯಾವುದೇ ಬಡ್ಡಿದರವನ್ನು ಪಾವತಿ ಮಾಡಬೇಕಾಗಿಲ್ಲ. ಆದ್ದರಿಂದಾಗಿ ಬ್ಯಾಂಕ್‌ಗಳಿಗೆ ಸಹಾಯವಾಗಲಿದೆ. ಆದ್ದರಿಂದ ದಂಡ ಇರುವುದಿಲ್ಲ.
ಎಫ್‌ಡಿ ಮೊತ್ದ ಮೇಲೆ ಸಾಲದ ಮೊತ್ತ ನಿರ್ಧಾರ: ನಿಮ್ಮ ಗರಿಷ್ಠ ಸಾಲದ ಮೊತ್ತವು ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ, ಅವಧಿ, ಇತರೆ ಮಾನದಂಡಗಳ ಮೇಲೆ ನಿರ್ಧರಿತವಾಗಿರುತ್ತದೆ. ಮತ್ತೊಂದೆಡೆ, ಎಫ್‌ಡಿ ಮೇಲಿನ ಸಾಲಕ್ಕಾಗಿ, ನಿಮ್ಮ ಎಫ್‌ಡಿ ಖಾತೆಯಲ್ಲಿ ನೀವು ಹೂಡಿಕೆ ಮಾಡಿದ ಮೊತ್ತದಿಂದ ಗರಿಷ್ಠ ಸಾಲದ ಮೊತ್ತವನ್ನು ನಿರ್ಧಾರ ಮಾಡಲಾಗುತ್ತದೆ. ನಿಮ್ಮ ಎಫ್‌ಡಿ ಖಾತೆಯಲ್ಲಿ ಹೆಚ್ಚಿನ ಮೊತ್ತ ಇದ್ದರೆ, ಅಧಿಕ ಸಾಲವನ್ನು ಪಡೆಯಲು ನೀವು ಅರ್ಹರಾಗಿರುತ್ತೀರಿ.


Click it and Unblock the Notifications