ಭಾರತದಲ್ಲಿ ಎರಡು ರೀತಿಯ ಬ್ಯಾಂಕ್ ಖಾತೆಗಳು ಇದೆ. ವೇತನ ಹಾಗೂ ಉಳಿತಾಯ ಖಾತೆ ಎಂಬ ಎರಡು ವಿಧದ ಖಾತೆಗಳನ್ನು ಭಾರತದಲ್ಲಿ ಬಳಕೆ ಮಾಡಲಾಗುತ್ತದೆ. ಬೇರೆ ಬೇರೆ ಉದ್ದೇಶಗಳಿಗಾಗಿ ಭಾರತದಲ್ಲಿ ಈ ವೇತನ ಅಥವಾ ಸ್ಯಾಲರಿ ಖಾತೆ, ಉಳಿತಾಯ ಅಥವಾ ಸೇವಿಂಗ್ಸ್ ಖಾತೆಯನ್ನು ಬಳಕೆ ಮಾಡಲಾಗುತ್ತದೆ. ಈ ಖಾತೆಯ ಬಗ್ಗೆ ಅದರ ಹೆಸರೇ ಹೇಳುತ್ತದೆ.
ಒಂದು ಸಂಸ್ಥೆಯ ಅಡಿಯಲ್ಲಿ ಉದ್ಯೋಗ ಮಾಡುವಾಗ ಮಾತ್ರ ನಾವು ಸ್ಯಾಲರಿ ಅಕೌಂಟ್ ಅನ್ನು ತೆರೆಯುವ ಅವಕಾಶವಿರುತ್ತದೆ. ಉಳಿತಾಯ ಖಾತೆಯಂತೆ ಈ ವೇತನ ಖಾತೆಯಲ್ಲಿ ನಾವು ಕನಿಷ್ಠ ಠೇವಣಿಯನ್ನು ಇಟ್ಟುಕೊಳ್ಳಬೇಕಾಗಿಲ್ಲ. ಇದು ಜಿರೋ ಬ್ಯಾಲೆನ್ಸ್‌ನ ಖಾತೆಯಾಗಿದೆ. ಸೇವಿಂಗ್ಸ್ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ, ಆದರೆ ಸ್ಯಾಲರಿ ಖಾತೆಯಲ್ಲಿ ಹೀಗೆ ದಂಡ ಇಲ್ಲ. ವೇತನ ಖಾತೆಯಿಂದ ನಮಗೆ ಹಲವಾರು ಪ್ರಯೋಜನಗಳಿದೆ. ಈ ಬಗ್ಗೆ ಇಲ್ಲಿದೆ ವಿವರ.

ವೇತನ ಖಾತೆಯ ಪ್ರಯೋಜನಗಳು
ಉಚಿತ ಎಟಿಎಂ ವಹಿವಾಟು ವ್ಯವಸ್ಥೆ: ತಮ್ಮೊಂದಿಗೆ ಸಂಬಳ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಬ್ಯಾಂಕ್‌ಗಳು ಸಾಮಾನ್ಯವಾಗಿ ಉಚಿತ ಎಟಿಎಂ ವಹಿವಾಟು ಸೌಲಭ್ಯಗಳನ್ನು ನೀಡುತ್ತವೆ. ಈ ಸೌಲಭ್ಯದ ಅಡಿಯಲ್ಲಿ, ನೀವು ತಿಂಗಳಿಗೆ ಎಷ್ಟು ಬಾರಿ ಎಟಿಎಂ ವಹಿವಾಟುಗಳನ್ನು ಮಾಡಿಕೊಳ್ಳಬಹುದಾಗಿದೆ. ಯಾವುದೇ ಚಿಂತೆ ಇರುವುದಿಲ್ಲ. ಬ್ಯಾಂಕ್‌ಗಳು ಸಾಮಾನ್ಯವಾಗಿ ವೇತನ ಖಾತೆಗಳಲ್ಲಿ ಎಟಿಎಂ ಬಳಕೆಗೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡುತ್ತವೆ.
ಸಾಲ ಸೌಲಭ್ಯ ಲಭ್ಯ: ವೇತನ ಖಾತೆ ಹೊಂದಿರುವವರಿಗೆ ವಿಶೇಷ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. ಹಾಗೆಯೇ ಪ್ರಿ ಅಪ್ರೋವ್ಡ್ ಸಾಲವು ಕೂಡಾ ಲಭ್ಯವಾಗುತ್ತದೆ. ಮನೆ ಹಾಗೂ ಕಾರು ಸಾಲಗಳಿಗೂ ಕೂಡಾ ವಿಶೇಷ ಆಫರ್‌ಗಳನ್ನು ನೀಡಲಾಗುತ್ತದೆ.
ಓವರ್‌ಡ್ರಾಫ್ಟ್ ಸೌಲಭ್ಯ: ಓವರ್‌ಡ್ರಾಫ್ಟ್ ಸೌಲಭ್ಯ ಕೂಡಾ ಇರುತ್ತದೆ. ಆದರೆ ಕೆಲವು ಷರತ್ತು ಹಾಗೂ ನಿಯಮಗಳಡಿಯಲ್ಲಿ ಈ ಸೌಲಭ್ಯಗಳು ನೀಡಲಾಗುತ್ತದೆ. ಅದಕ್ಕೆ ನಿಗದಿತ ಅವಧಿಯ ಮಿತಿ ಕೂಡಾ ಇರುತ್ತದೆ. ಓವರ್‌ಡ್ರಾಫ್ಟ್ ಅಂದರೆ ನಿಮ್ಮ ಖಾತೆಯಲ್ಲಿರುವ ಮೊತ್ತಕ್ಕಿಂತ ಇನ್ನು ಅಧಿಕ ಮೊತ್ತವನ್ನು ವಿತ್‌ಡ್ರಾ ಮಾಡುವುದು ಆಗಿದೆ.
ಉಚಿತ ಪಾಸ್‌ಬುಕ್, ಚೆಕ್ ಸೌಲಭ್ಯ: ಹಲವಾರು ಬ್ಯಾಂಕುಗಳು ವೇತನ ಖಾತೆ ಹೊಂದಿರುವವರಿಗೆ ಚೆಕ್‌ಬುಕ್, ಪಾಸ್‌ಬುಕ್‌ಗಳನ್ನು ಉಚಿತವಾಗಿ ನೀಡುತ್ತದೆ. ಹಾಗೆಯೇ ಇ ಸ್ಟೇಟ್‌ಮೆಂಟ್ ಫೆಸಿಲಿಟಿ ಕೂಡಾ ಇದೆ. ಇದರಿಂದಾಗಿ ನೀವು ನಿಮ್ಮ ವೇತನ ಖಾತೆಯ ವಿವರವನ್ನು ಪಡೆಯಲು ಸಾಧ್ಯವಾಗುತ್ತದೆ. ಆನ್‌ಲೈನ್ ಆಫ್‌ಲೈನ್ ಎರಡು ವಿಧಾನದಲ್ಲೂ ಖಾತೆ ಪರಿಶೀಲಿಸಬಹುದು.
ಉಚಿತ ವಿಮಾ ಸೌಲಭ್ಯ: ಸಂಬಳದ ಖಾತೆದಾರರು 20 ಲಕ್ಷ ರೂಪಾಯಿವರೆಗಿನ ವೈಯಕ್ತಿಕ ಅಪಘಾತ ವಿಮೆ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ.
ಉಚಿತ ಆನ್‌ಲೈನ್ ವಹಿವಾಟು
ಕೆಲವು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸಂಬಳ ಖಾತೆಗಳಲ್ಲಿ ಉಚಿತ ಆನ್‌ಲೈನ್ ವಹಿವಾಟು ಸೌಲಭ್ಯಗಳನ್ನು ಒದಗಿಸುತ್ತವೆ. ಅಂದರೆ ನೆಫ್ಟ್ ಮತ್ತು ಆರ್‌ಟಿಜಿಎಸ್ ಸೇವೆಗಳು ಸಾಮಾನ್ಯವಾಗಿ ಉಚಿತ. ಅನೇಕ ಬ್ಯಾಂಕುಗಳು ಸಂಬಳದ ಖಾತೆಗಳಲ್ಲಿ ತಕ್ಷಣದ ಪಾವತಿ ಸೇವೆ (ಐಎಂಪಿಎಸ್) ಸೌಲಭ್ಯವನ್ನು ಸಹ ನೀಡುತ್ತವೆ.
ವೇತನ ಖಾತೆ, ಉಳಿತಾಯ ಖಾತೆಗಿಂತ ಹೇಗೆ ಭಿನ್ನವಾಗಿದೆ?
ಯಾವುದೇ ವ್ಯಕ್ತಿಯಾದರೂ ಕೂಡಾ ವೇತನ ಖಾತೆಯನ್ನು ತೆರಯಬಹುದಾಗಿದೆ. ಆದರೆ ಸ್ಯಾಲರಿ ಖಾತೆಯನ್ನು ಎಲ್ಲರೂ ಕೂಡಾ ತೆರೆಯಲು ಸಾಧ್ಯವಿಲ್ಲ. ಒಂದು ಸಂಸ್ಥೆಯ ಮೂಲಕವೇ ಸ್ಯಾಲರಿ ಖಾತೆಯನ್ನು ತೆರೆಯುವ ಅವಕಾಶವಿದೆ. ಆ ಸಂಸ್ಥೆಯ ಅನುಮೋದನೆ ಇದ್ದರೆ ಮಾತ್ರ ಸ್ಯಾಲರಿ ಖಾತೆ ತೆರೆಯಲಾಗುತ್ತದೆ. ಉಳಿತಾಯ ಖಾತೆಯನ್ನು ತೆರೆಯುವ ಮುಖ್ಯ ಉದ್ದೇಶವೆಂದರೆ ಉಳಿತಾಯಕ್ಕೆ ಉತ್ತೇಜನ ನೀಡುವುದು ಆಗಿದೆ. ಆದರೆ ವೇತನ ಖಾತೆಯನ್ನು ಒಂದು ಸಂಸ್ಥೆಯಿಂದ ಸಂಬಳ ಪಡೆಯುವ ನಿಟ್ಟಿನಲ್ಲಿ ತೆರೆಯಲಾಗುತ್ತದೆ.


Click it and Unblock the Notifications