ಗಮನಿಸಿ: ಹೂಡಿಕೆ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ

ನಾವು ನಮ್ಮ ಜೀವನದ ಮುಂದಿನ ದಿನಗಳಲ್ಲಿ ಯಾವುದಾದರೂ ತೊಂದರೆ ಉಂಟಾದರೆ ನಮ್ಮ ಸಹಾಯಕ್ಕೆ ಬರಲಿದೆ ಎಂಬ ನಿಟ್ಟಿನಲ್ಲಿ ಉಳಿತಾಯ ಮಾಡುವುದು ಎಷ್ಟು ಉತ್ತಮವೋ ಅಷ್ಟೇ ಹೂಡಿಕೆ ಮಾಡುವುದು ಕೂಡಾ ಉತ್ತಮ. ಆದರೆ ಅದೆಷ್ಟ್ರೋ ಮಂದಿಗೆ ಹೂಡಿಕೆ ಮಾಡುವ ಸಂದರ್ಭದಲ್ಲಿ ಯಾವ ಕ್ಷೇತ್ರದಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬ ಲೆಕ್ಕಾಚಾರವೇ ಇರುವುದಿಲ್ಲ. ಹೆಚ್ಚಿನ ಜನರಿಗೆ ಈ ಬಗ್ಗೆ ಯಾವುದೇ ಮಾಹಿತಿಯೂ ಇರುವುದಿಲ್ಲ.

ಈ ಹೂಡಿಕೆ ಎಂಬುವುದು ನಮ್ಮ ಆರ್ಥಿಕ ಸುರಕ್ಷೆ ಎಂದೇ ನಾವು ಹೇಳಬಹುದು. ನಿಮ್ಮ ಭವಿಷ್ಯದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಅಥವಾ ಆರೋಗ್ಯ ಸಂಬಂಧಿತ ವಿಷಯಕ್ಕಾಗಿ ಅಥವಾ ನಿವೃತ್ತಿ ಸಂದರ್ಭದಲ್ಲಿ ಹಣಕಾಸು ಬೇಕಾಗುತ್ತದೆ. ಈ ಕಾರಣದಿಂದಾಗಿ ನೀವು ಹಣವನ್ನು ಸರಿಯಾದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅತೀ ಮುಖ್ಯ. ನೀವು ಹೂಡಿಕೆ ಮಾಡಿದ ನಂತರ ನಿಮ್ಮ ಕಷ್ಟ ಕಾಲದಲ್ಲಿ ಆ ಹೂಡಿಕೆಯು ನಿಮ್ಮ ಸಹಾಯಕ್ಕೆ ಬರಲಿದೆಯೇ ಎಂಬುವುದನ್ನು ನೀವು ಈಗಲೇ ಖಚಿತ ಪಡಿಸಿಕೊಳ್ಳಬೇಕು.

ಹಲವಾರು ಮಂದಿ ಹೂಡಿಕೆ ಮಾಡಿ ಸುಮ್ಮನಿರುತ್ತಾರೆ. ಆದರೆ ನಾವು ಮಾಡಿದ ಹೂಡಿಕೆಗಳ ಬಗ್ಗೆ ನಾವು ಗಮನ ವಹಿಸುವುದು ಅತೀ ಮುಖ್ಯ. ನಾವು ಯಶಸ್ವಿ ಹೂಡಿಕೆದಾರರು ಆಗಬೇಕಾದರೆ ನಾವು ಚಲಿಸುವ ದಾರಿಯಲ್ಲಿ ಸಾಮಾನ್ಯವಾಗಿ ತಪ್ಪುಗಳು ನಡೆಯುತ್ತದೆ. ಆ ಪೈಕಿ ನಾವಿಲ್ಲಿ, ಸಾಮಾನ್ಯವಾಗಿ ಹೂಡಿಕೆದಾರರು ಮಾಡುವ ತಪ್ಪುಗಳನ್ನು ಪಟ್ಟಿ ಮಾಡಿದ್ದೇವೆ. ಮುಂದೆ ಓದಿ..

 ಹೂಡಿಕೆ ಮಾಡಿದರೂ ಸ್ಪಷ್ಟತೆ ಇಲ್ಲ

ಹೂಡಿಕೆ ಮಾಡಿದರೂ ಸ್ಪಷ್ಟತೆ ಇಲ್ಲ

ನೀವು ಇಷ್ಟೊಂದು ಹೂಡಿಕೆಯ ಆಯ್ಕೆಗಳು ಇರುವಾಗ ಈ ನಿರ್ದಿಷ್ಟ ವಿಭಾಗದಲ್ಲಿ ಹೂಡಿಕೆ ಮಾಡಿದ್ದು ಏಕೆ?. ಈ ಪ್ರಶ್ನೆಯನ್ನು ನಾವು ಕೇಳಿದಾಗ ಅಧಿಕ ಮಂದಿಗೆ ಈ ಬಗ್ಗೆ ಯಾವುದೇ ಒಂದು ಸ್ಪಷ್ಟತೆ ಇರುವುದಿಲ್ಲ. ನಿಮಗೆ ಯಾವುದಾದರೂ ಹೂಡಿಕೆಯ ಗುರಿ ಇದೆಯೇ? ಎಂದು ಕೇಳಿದರೂ ಈ ಬಗ್ಗೆ ಯಾವುದೇ ಸರಿಯಾದ ಮುನ್ನೋಟ ಇರುವುದಿಲ್ಲ. ನೀವು ಹೂಡಿಕೆ ಮಾಡಿದ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಹಣವನ್ನು ನೀವು ಪಡೆಯಲು ಬಯಸುತ್ತೀರಿ?, ನೀವು ಹೂಡಿಕೆ ಮಾಡುವ ಮುನ್ನ ನಿಮ್ಮ ಹೂಡಿಕೆಯ ಅವಧಿಯು ಲಾಂಗ್‌ ಟರ್ಮ್ ಅಥವಾ ಮಿಡ್‌ ಟರ್ಮ್ ಅಥವಾ ಶಾರ್ಟ್ ಟರ್ಮ್ ಈ ಪೈಕಿ ಯಾವುದು ಆಗಿರುತ್ತದೆ ಎಂದು ನಿರ್ಧಾರ ಮಾಡಿದ್ದೀರಿ?. ಈ ನಾಲ್ಕು ಪ್ರಶ್ನೆಗಳಿಗೆ ನಾವು ಹೂಡಿಕೆ ಮಾಡುವ ಮುನ್ನವೇ ಉತ್ತರ ಕಂಡು ಕೊಳ್ಳುವುದು ಅತೀ ಮುಖ್ಯ. ನಮಗೆ ಈ ನಾಲ್ಕು ಪ್ರಶ್ನೆಗಳಿಗೆ ಸರಿಯಾದ, ಸ್ಪಷ್ಟವಾದ ಉತ್ತರ ಹೂಡಿಕೆ ಮಾಡುವ ಮುನ್ನ ಅಥವಾ ನಂತರ ಇರುವುದಿಲ್ಲವೋ ಆಗ ನಮ್ಮ ಹೂಡಿಕೆಯ ನಿರ್ಧಾರ ಸರಿಯಾಗಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ.

 ಈ ಹಿಂದಿನ ಹೂಡಿಕೆಯಲ್ಲಿ ಪಡೆದ ರಿಟರ್ನ್ ಪರಿಶೀಲಿಸಿ ಹೂಡಿಕೆ ಮಾಡುವುದು

ಈ ಹಿಂದಿನ ಹೂಡಿಕೆಯಲ್ಲಿ ಪಡೆದ ರಿಟರ್ನ್ ಪರಿಶೀಲಿಸಿ ಹೂಡಿಕೆ ಮಾಡುವುದು

ನಿಮ್ಮ ಭವಿಷ್ಯದ ಯಾವುದೇ ನಿರ್ಧಾರಕ್ಕೆ ಈ ಹಿಂದಿನ ಅಂಶಗಳು ಪ್ರಭಾವ ಬೀರಬಹುದು. ಆದರೆ ನಮ್ಮ ಈ ಹಿಂದಿನ ಅನುಭವವೇ ಮುಂದಿನ ನಿರ್ಧಾರಕ್ಕೆ ಕಾರಣವಾಗುವುದಿಲ್ಲ. ನಾವು ಯಾವುದೇ ನಿರ್ಧಾರವನ್ನು ಮಾಡುವ ಸಂದರ್ಭದಲ್ಲಿ ಈ ಹಿಂದೆ ಏನು ನಡೆದಿದೆ ಎಂಬುವುದನ್ನು ಪರಿಶೀಲಿಸಿ ನಿರ್ಧಾರವನ್ನು ಕೈಗೊಳ್ಳುವುದು ಎಲ್ಲಾ ಸಂದರ್ಭಗಳಲ್ಲಿ ಸರಿಯಲ್ಲ. ಹಲವಾರು ಮಂದಿ ಸ್ಟಾಕ್‌ ಅಥವಾ ಫಂಡ್‌ಗಳನ್ನು ಖರೀದಿ ಮಾಡುವಾಗ ಈ ಹಿಂದಿನ ರಿಟರ್ನ್ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಆದರೆ ಈ ಸ್ಟಾಕ್‌ ಹೂಡಿಕೆ ಅಥವಾ ಯಾವುದೇ ಹೂಡಿಕೆ ಮಾಡುವ ಸಂದರ್ಭದಲ್ಲಿ ನಾವು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿಕೊಳ್ಳುವುದು ಅತೀ ಮುಖ್ಯ. ಪ್ರಸ್ತುತ ಯಾವ ಹೂಡಿಕೆ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ? ಈಗ ಹೂಡಿಕೆ ಮಾಡಿದರೆ ಎಷ್ಟು ಲಾಭ ದೊರೆಯಲಿದೆ? ಇವೆಲ್ಲವೂ ಲೆಕ್ಕಾಚಾರ ಹಾಕಿಕೊಳ್ಳಬೇಕು. ಹೊರತಾಗಿ ಈ ಹಿಂದೆ ಎಷ್ಟು ರಿಟರ್ನ್ಸ್ ದೊರೆತಿದೆ ಎಂಬುವುದನ್ನು ಅಲ್ಲ. ಹಾಗೆಯೇ ಮುಂದಿನ ಭವಿಷ್ಯದ ಆರ್ಥಿಕ ಸ್ಥಿತಿಯ ಬಗ್ಗೆಯೂ ನಾವು ಹೂಡಿಕೆ ಮಾಡುವ ಸಂದರ್ಭದಲ್ಲಿ ಅವಲೋಕನ ಮಾಡಬೇಕು. ಇದಕ್ಕಾಗಿ ನೀವು ಬೇಕಾದರೆ ತಜ್ಞರ ಬಳಿ ಮಾತುಕತೆ ನಡೆಸಿದರೆ ಉತ್ತಮ. ಹೂಡಿಕೆಯ ರಿಟರ್ನ್ ಎಂದಿಗೂ ಪ್ರಸ್ತುತ ಹಣಕಾಸು ಪರಿಸ್ಥಿತಿ ಹಾಗೂ ಹಣದುಬ್ಬರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗೆಯೇ ನೀವು ಹೂಡಿಕೆ ಮಾಡುವ ಸಂದರ್ಭದಲ್ಲಿ ಈ ಹಿಂದಿನಗಿಂತ ಕೊಂಚ ಹೂಡಿಕೆ ಮೊತ್ತ ಏರಿಳಿತವಾಗಿರಬಹುದು.

 ಹೂಡಿಕೆ ಮಾಡಿ ಆಗಿದೆ, ಇನ್ನು ಉತ್ತಮ ರಿಟರ್ನ್‌ನ ಅಧಿಕ ನಿರೀಕ್ಷೆ!

ಹೂಡಿಕೆ ಮಾಡಿ ಆಗಿದೆ, ಇನ್ನು ಉತ್ತಮ ರಿಟರ್ನ್‌ನ ಅಧಿಕ ನಿರೀಕ್ಷೆ!

ನಾವು ಸರಿಯಾದ ಸಮಯಕ್ಕೆ ಹಾಗೂ ನಿಯಮಿತವಾಗಿ ಹೂಡಿಕೆಯನ್ನು ಮಾಡುತ್ತಿದ್ದರೆ ನಮಗೆ ಉತ್ತಮ ರಿಟರ್ನ್ಸ್ ದೊರೆಯುತ್ತದೆ. ಆದರೆ ಹಲವಾರು ಮಂದಿ ಮೊದಲ ಬಾರಿಗೆ ಹೂಡಿಕೆ ಮಾಡಿದ್ದರೂ ಒಂದು ವರ್ಷದೊಳಗೆಯೇ ಭಾರೀ ರಿಟರ್ನ್ಸ್‌ನ ನಿರೀಕ್ಷೆಯನ್ನು ಹೊಂದಿರುತ್ತಾರೆ. ನಾವು ಹೂಡಿಕೆಯ ಹಣದಿಂದಲ್ಲೇ ಜೀವನ ಸಾಗಿಸಬಹುದು, ಶ್ರೀಮಂತರಾಗುತ್ತೇವೆ ಎಂಬಂತಹ ನಿರೀಕ್ಷೆಗಳನ್ನು ಕೆಲವರು ಇಟ್ಟುಕೊಂಡಿದ್ದು ಇದೆ. ನೀವು ಸರಿಯಾಗಿ ಅವಲೋಕನೆ ಮಾಡಿ ಹಾಗೂ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಮಾಡಿ ಹೂಡಿಕೆಯನ್ನು ಮಾಡಿರುವಾಗ ಅದರಲ್ಲಿ ರಿಟರ್ನ್ಸ್ ಬರುವ ಸಂದರ್ಭದಲ್ಲಿ ಯಾವುದೇ ಆರ್ಥಿಕ ದುಸ್ಥಿತಿ ಉಂಟಾಗಬಹುದು ಎಂಬುವುದನ್ನು ಮಾತ್ರ ನೆನಪಲ್ಲಿ ಇಟ್ಟುಕೊಳ್ಳಬೇಕು. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಅಧಿಕ ರಿಟರ್ನ್ಸ್ ಬರದೆ ಕೂಡಾ ಇರಬಹುದು ಎಂದು ಕೂಡಾ ಮಾನಸಿಕವಾಗಿ ಸಿದ್ದವಾಗಿರಿ. ಅತಿಯಾಗಿ ನೀವು ನಿರೀಕ್ಷೆಯನ್ನು ಹೊಂದಿದ್ದರೆ ಅದು ನಿಮಗೆ ಮುಂದಿನ ಹೂಡಿಕೆಗೆ ಹೆಚ್ಚಿನ ನೆಗೆಟಿವ್‌ ಪರಿಣಾಮವನ್ನು ಬೀರಬಹುದು.

 ಹೂಡಿಕೆಯಲ್ಲೂ ಬೇಕು ವೈವಿಧ್ಯತೆ

ಹೂಡಿಕೆಯಲ್ಲೂ ಬೇಕು ವೈವಿಧ್ಯತೆ

ನಾವು ಹೂಡಿಕೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ಅಪಾಯವನ್ನು ತಪ್ಪಿಸಲು ಹೂಡಿಕೆಯಲ್ಲಿ ವೈವಿಧ್ಯತೆಯೂ ಅತೀ ಮುಖ್ಯ. ನಾವು ವಿವಿಧ ವಿಭಾಗಗಲ್ಲಿ ಹೂಡಿಕೆಯನ್ನು ಮಾಡುವುದರಿಂದಾಗಿ ಹೂಡಿಕೆಯಲ್ಲಿನ ಅಪಾಯವನ್ನು ನಾವು ಕಡಿಮೆ ಮಾಡಬಹುದು. ನಾವು ಹೂಡಿಕೆ ಮಾಡಿದ ಒಂದು ಕ್ಷೇತ್ರದಲ್ಲಿ ಉತ್ತಮ ಲಾಭ ದೊರೆಯದಿದ್ದರೆ, ನಾವು ಹೂಡಿಕೆಯನ್ನು ಮಾಡಿದ ಇನ್ನೊಂದು ಕ್ಷೇತ್ರದಲ್ಲಿ ಉತ್ತಮ ಲಾಭ ದೊರೆಯಬಹುದು. ನಿರ್ದಿಷ್ಟ ರಿಟರ್ನ್ಸ್ ಅನ್ನು ಪಡೆಯುವ ಹೂಡಿಕೆಯನ್ನು ಹಲವು ಮಂದಿ ಮಾಡಲು ಹೆಚ್ಚಾಗಿ ಇಷ್ಟಪಡುವುದಿಲ್ಲ. ಆದರೆ ನಿಜವಾಗಿ ಈ ನಿರ್ದಿಷ್ಟ ಹೂಡಿಕೆಯನ್ನು ಗಳಿಸಬಹುದಾದ ಈ ಹೂಡಿಕೆಯು ಜನರನ್ನು ನಷ್ಟದಿಂದ ತಪ್ಪಿಸುತ್ತದೆ.

 ಅವಧಿ ಹಾಗೂ ಖಾತೆಯ ಬಗ್ಗೆ ಗಮನವೇ ಹರಿಸದಿರುವುದು

ಅವಧಿ ಹಾಗೂ ಖಾತೆಯ ಬಗ್ಗೆ ಗಮನವೇ ಹರಿಸದಿರುವುದು

ಸಾಮಾನ್ಯವಾದ ಹಾಗೂ ಜನರು ಮುಖ್ಯವಾಗಿ ಮಾಡಬಾರದಂತಹ ತಪ್ಪು ಏನೆಂದರೆ ತಾವು ಹೂಡಿಕೆ ಮಾಡಿದ ನಂತರ ಆ ಖಾತೆಯನ್ನು ಸರಿಯಾಗಿ ಪರಿಶೀಲನೆ ಮಾಡದಿರುವುದು. ನೀವು ಹೂಡಿಕೆ ಮಾಡಿದ ನಂತರ ಎಲ್ಲಾ ಬೆಳವಣಿಗೆಯನ್ನು ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ನೀವು ಹಲವಾರು ಕಡೆಗಳಲ್ಲಿ ಹೂಡಿಕೆ ಮಾಡಿರುವ ಸಂದರ್ಭದಲ್ಲಿ ಯಾವ ಕ್ಷೇತ್ರದಲ್ಲಿ ಹೇಗಿದೆ ಪರಿಸ್ಥಿತಿ ಎಂಬುವುದನ್ನು ನೀವು ನೋಡಿಕೊಳ್ಳಬೇಕು. ನೀವು ಹೂಡಿಕೆ ಮಾಡಿದ ನಂತರ ಅದರ ಬಗ್ಗೆ ಗಮನ ವಹಿಸುವುದರಿಂದ ನಿಮಗೆ ಹೂಡಿಕೆಯಲ್ಲಿ ಹೆಚ್ಚಿನ ತಿಳುವಳಿಕೆ ಬರಲು ಸಾಧ್ಯವಾಗುತ್ತದೆ. ಇಲ್ಲವಾದರೆ ನೀವು ಅಂದಾಜಿನಲ್ಲಿ ಹೂಡಿಕೆ ಮಾಡಿ ನಷ್ಟವನ್ನು ಅನುಭವಿಸಬೇಕಾದೀತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+